ಶುಕ್ರವಾರ, ಜುಲೈ 2, 2021

 ವಿದ್ಯಾರ್ಥಿ ವೇತನ:ಬ್ಯಾಂಕ್‌ನಲ್ಲಿ ಆಧಾರ ಜೋಡಣೆಗಾಗಿ ಮನವಿ

*****************************
ಯಾದಗಿರಿ: ಜುಲೈ 02(ಕ.ವಾ):2019-20 ಮತ್ತು 2020-21 ನೇ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಎನ್.ಪಿ.ಸಿ.ಐ ನಲ್ಲಿ ಆಧಾರ್ ಜೋಡಣೆ ಮಾಡಿಕೊಳ್ಳಲು ಯಾದಗಿರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಆಧಾರ್ ಜೋಡಣೆ ಆದರೆ ಮಾತ್ರ ಡಿ.ಬಿ.ಟಿ ಮುಖಾಂತರ ವಿದ್ಯಾರ್ಥಿವೇತನ ಮಂಜೂರು ಮಾಡಲು ಆಗುವುದು. ಮೆಟ್ರಿಕ್ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ತಮ್ಮ ಆಧಾರ್‌ನ್ನು ಸಂಬAಧಿಸಿದ ಬ್ಯಾಂಕ್ ಹೋಗಿ ಆಧಾರ ಜೋಡಣೆ ಮಾಡಲು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಂದ ಶಿಶಿಕ್ಷÄ ತರಬೇತಿಗಾಗಿ ಅರ್ಜಿ ಆಹ್ವಾನ
**********************
ಯಾದಗಿರಿ: ಜುಲೈ 02(ಕ.ವಾ): ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವ್ಯಾಪ್ತಿಯ ಟೆಕ್ನಿಕಲ್ ಟ್ರೆöÊನಿಂಗ್ ಇನ್‌ಸ್ಟಿಟ್ಯೂಟ್ ಕೆಳಕಂಡ ವಿವಿಧ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್‌ತರಬೇತಿಗಾಗಿ ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಂದ ಶಿಶಿಕ್ಷÄ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ.

ಟ್ರೇಡ್ ಹೆಸರು ಹಾಗೂ ಖಾಲಿ ಹುದ್ದೆಗಳ ವಿವರ: ಫಿಟ್ಟರ್,  ಟರ್ನರ್,  ಮಶಿನಿಸ್ಟ್, ಎಲೆಕ್ಟಿçÃಷನ್,  ವೆಲ್ಡರ್,  ಪಾಸಾ/ಕೊಪಾ,  ಫೌಂಡ್ರಿಮನ್, ಶೀಟ್ ಮೆಟಲ್ ವರ್ಕ್ಅರ್ಹ  ಆಸಕ್ತಿಯುಳ್ಳ  ಅಭ್ಯರ್ಥಿಗಳು  ಎಸ್.ಎಸ್.ಎಲ್.ಸಿ, ಐ.ಟಿ.ಐ  ಪಾಸಾದಅಂಕಪಟ್ಟಿ, ಅಧಾರಕಾರ್ಡ್ಜಾತಿ ಪ್ರಮಾಣ ಪತ್ರ  (ಮೀಸಲಾತಿ  ಬಯಸಿದ್ದಲ್ಲಿ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಂಗವಿಕಲ, ಪ್ರಮಾಣಪತ್ರಹೊಂದಿದ್ದಲ್ಲಿ ), NIC MIS portal Registration Number (www.apprenticeship.gov.in)     ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಇದೇ 2021 ಜುಲೈ 22 ರೊಳಗೆ  ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ  ವಿನಿಮಯ ಕಛೇರಿ, ಯಾದಗಿರಿ ಕಛೇರಿಗೆ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ  ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...