ಗುರುವಾರ, ಜುಲೈ 15, 2021

 ಆನ್‌ಲೈನ್ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಯಾದಗಿರಿ:ಜುಲೈ-15(ಕ.ವಾ) ಅಕಾಂಕ್ಷಾ ಸಿ.ಎಸ್.ಆರ್ ಕಾರ್ಯಕ್ರಮದಡಿಯಲ್ಲಿ ಅಪೊಲೊ ಮೆಡ್ ಸ್ಕಿಲ್ಸ್ ಸಂಸ್ಥೆಯ ವತಿಯಿಂದ ಆರೋಗ್ಯ ವಲಯದಲ್ಲಿ 12 ಸಾವಿರ ಅಭ್ಯರ್ಥಿಗಳಿಗೆ 10 ರಿಂದ 20 ದಿನದ ಆನ್ ಲೈನ್ ಕೌಶಲ್ಯ ತರಬೇತಿ ನೀಡುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

10 ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಅಥವಾ ಶಾಲೆ ಬಿಟ್ಟಿರುವ ಮಕ್ಕಳು ಈ ತರಬೇತಿಗೆ ಅರ್ಹರಿರುತ್ತಾರೆ. ಯುವ ಸಂಘಗಳು ಮತ್ತು ರಾಷ್ಟಿçÃಯ ಸೇವಾ ಸಂಸ್ಥೆಯ ಸ್ವಯಂ ಸೇವಕರುಗಳು ಸಹ ಅರ್ಜಿ ಸಲ್ಲಸಬಹುದಾಗಿದ್ದು, ವೆಬ್ ಸೈಟ್ hಣಣಠಿs://ಜಿoಡಿms.gಟe/6ಥಿ ಃಒಙeಚಿmಞಛಿಖಠಿg4ಜಿಛಿಡಿ ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. 

ತರಬೇತಿ ಪಡೆದ ಅಭ್ಯರ್ಥಿಗಳಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ನೀಡಿ ತಿಂಗಳಿಗೆ ರೂ, 13000-25000ರವರೆಗೆ ಹಾಗೂ ಇತರ ಭತ್ಯಗಳ ಸಮೇತ ನೀಡಲಿದ್ದಾರೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಅಲ್ಪಸಂಖ್ಯಾತರ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಯಾದಗಿರಿ.ಜುಲೈ.15(ಕ.ವಾ): 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಯಾದಗಿರಿ ಜಿಲ್ಲೆ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ (ನವೋದಯ) ಮತ್ತು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ, ಊಟ, ಸಮವಸ್ತç, ಶೂ, ಸಾಕ್ಸ್, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಹಾಸಿಗೆ ಹೊದಿಕೆ, ಸೋಪು ಸೇರಿದಂತೆ  ಇತರೆ ಅವಶ್ಯಕ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ನುರಿತ ಶಿಕ್ಷಕರಿಂದ ಉತ್ತಮವಾದ ವಿದ್ಯಾಭ್ಯಾಸ ನೀಡಲಾಗುತ್ತದೆ. ವಸತಿ ಶಾಲೆಗಳಲ್ಲಿ ಶೇ. 50% ರಷ್ಟು ಸೀಟುಗಳು ವಿದ್ಯಾರ್ಥಿನಿಯರಿಗೆ ಲಭ್ಯವಿರುತ್ತವೆ. ಒಂದು ಸಲ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪ್ರವೇಶ ಪಡೆದರೆ, 10ನೇ ತರಗತಿ ವರೆಗೆ ಉಚಿತ ಶಿಕ್ಷಣ ಹಾಗೂ ಮಾದರಿ ವಸತಿ ಶಾಲೆಗೆ ಪ್ರವೇಶ ಪಡೆದರೆ ದ್ವೀತಿಯ ಪಿ.ಯು.ಸಿ ವರೆಗೆ ಉಚಿತವಾಗಿ ವಿದ್ಯಾಭ್ಯಾಸ ಮಾಡಬಹುದಾಗಿದೆ.

ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಶಾಲೆಗಳಲ್ಲಿ ಪ್ರವೇಶ ಲಭ್ಯವಿದ್ದು, ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಅಲ್ಪಸಂಖ್ಯಾತರ ಶೇ. 75% ರಷ್ಟು ಸ್ಥಾನಗಳನ್ನು (ಮುಸ್ಲಿಂ-77%, ಕ್ರಿಶ್ಚಿಯನ್-14%, ಜೈನ್-6%, ಬೌದ್ಧ-2%, ಸಿಖ್-1%) ಕಲ್ಪಿಸಲಾಗಿರುತ್ತದೆ. ಶೇ. 25% ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿರುತ್ತದೆ. 

ಪ್ರಸ್ತುತ ಕರ್ನಾಟಕ ಸರ್ಕಾರದ/ ಅಂಗೀಕೃತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸ್ವೀಕೃತವಾದ ಅರ್ಹ ಅರ್ಜಿಗಳಲ್ಲಿ ಪೋಷಕರ ವಾರ್ಷಿಕ ವರಮಾನ ಹಾಗು ಇನ್ನಿತರಗಳನ್ನು ಪರಿಗಣಿಸಿ ಅನುಪಾತವಾರು ಜಿಲ್ಲಾ ಮಟ್ಟದಲ್ಲಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇಕಡವಾರು ಅಂಕಗಳಿಗೆ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿ 6ನೇ ತರಗತಿಗೆ ಅಗತ್ಯ ದಾಖಲೆಗಳನ್ನು ಪಡೆದು ಪ್ರವೇಶ ನೀಡಲಾಗುವುದು. 

ಪ್ರವೇಶಕ್ಕೆ ಬೇಕಾದ ಅರ್ಜಿಗಳನ್ನು  ಈ ಮೇಲಿನ ವಸತಿ ಶಾಲೆಗಳಲ್ಲಿ, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಯಾದಗಿರಿ, ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಶಹಾಪುರ ಮತ್ತು ಸುರಪುರಗಳಿಂದ ಉಚಿತವಾಗಿ ಪಡೆದು ಜುಲೈ 30ರೊಳಗೆ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಯಾದಗಿರಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿಗೆ ದೂ. 08473-253235 ಸಂಪರ್ಕಿಸಬಹುದಾಗಿದೆ.





ತAಬಾಕು ಉತ್ಪನ್ನ ಮಾರಾಟ ದಾಳಿ: ದಂಡ ವಸೂಲಿ

ಯಾದಗಿರಿ.ಜುಲೈ.15(ಕ.ವಾ): ಜಿಲ್ಲೆಯ ಶಹಾಪೂರ, ಸುರಪುರ, ಕೆಂಭಾವಿ ಸೇರಿದಂತೆ ವಿವಿಧ ಕಡೆಯ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣಕೋಶ ಅಧಿಕಾರಿಗಳು ದಾಳಿ ನಡೆಸಿ ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ಎಚ್ಚರಿಕೆ ನೀಡಿ, ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳಿಗೆ  ಸೆಕ್ಸನ್ 4 ಮತ್ತು 6 ಎ ನಾಮಫಲಕಗಳನ್ನು ವಿತರಿಸಲಾಯಿತು.

ಯಾದಗಿರಿ  ಜಿಲ್ಲೆಯನ್ನು ಕೋಟ್ಪಾ 2003 ರ ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ತಂಬಾಕು ದಾಳಿಯನ್ನು ಹಮ್ಮಿಕೊಂಡಿದ್ದು ಅದರಂತೆ  ಜುಲೈ 12, 13, 14 ರಂದು ಕ್ರಮವಾಗಿ ಶಹಾಪೂರ, ಸುರಪೂರ, ಕೆಂಭಾವಿ ಪಟ್ಟಣಗಳಲ್ಲಿ ಕೋಟ್ಪಾ 2003 ರ ದಾಳಿಯನ್ನು ಕೈಗೊಂಡು ಸಾರ್ವಜನಿಕರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ತಂಬಾಕು ಮುಕ್ತ ಯುವ ಪೀಳಿಗೆ ಕುರಿತು ಮಾಹಿತಿ ನೀಡಲಾಯಿತು. 

  ಕೋಟ್ಪಾ 2003 ರ ಸೆಕ್ಷನ್ 4 ಉಲ್ಲಂಘಸಿದವರ ವಿರುದ್ಧ 197 ಪ್ರಕರಣಗಳನ್ನು ದಾಖಲಿಸಿ ರೂ.14600/- ದಂಡ ವಸೂಲಿ ಮಾಡಲಾಯಿತು. ಹಾಗೂ ಸೆಕ್ಸನ್ 6ಎ ಅಡಿಯಲ್ಲಿ 81 ಪ್ರಕರಣಗಳನ್ನು ದಾಖಲಿಸಿ ರೂ 7950/- ದಂಡ ವಸೂಲಿ ಮಾಡಲಾಯಿತು. ಹಾಗೂ ಸೆಕ್ಷನ್ ಬಿ ಅಡಿಯಲ್ಲಿ 30 ಪ್ರಕರಣ ದಾಖಲಿಸಿ ರೂ 3000/- ದಂಡ ವಸೂಲಿ ಮಾಡಲಾಯಿತ್ತು. ಒಟ್ಟಾರೆಯಾಗಿ 308 ಪ್ರಕರಣ ದಾಖಲಿಸಿ ರೂ 25550/- ದಂಡ ವಸೂಲಿ ಮಾಡಿಲಾಗಿದೆ ಎಂದು ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗಿಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ ತಿಳಿಸಿದ್ದಾರೆ.

  ಜಿಲ್ಲಾ ಸಲಹೆಗಾರಾರದ ಮಹಾಲಕ್ಷಿö್ಮÃ ಸಜ್ಜನ್ ಸೇರಿದಂತೆ ಕಂದಾಯ ಇಲಾಖೆ, ಆರೊಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.  

 ಕೃತಕ ಅಂಗಾಗಳ ಜೋಡಣೆಗೆ ಅರ್ಜಿ ಆಹ್ವಾನ

ಯಾದಗಿರಿ.ಜುಲೈ.15(ಕ.ವಾ): 2020-21ನೇ ಸಾಲಿನ ಶೇ.24.10%, 7.25% ಮತ್ತು 5%ರ ಯೋಜನೆಯಡಿಯಲ್ಲಿ ಎಸ್.ಎಫ್.ಸಿ ಹಾಗೂ ನಗರಸಭೆ ಅನುದಾನದ ಅಡಿಯಲ್ಲಿ ವಿಕಲಚೇತನ ಹೊಂದಿರುವ ಫಲಾನುಭವಿಗಳಿಗೆ ಕೃತಕ ಅಂಗಾಗಳ ಜೋಡಣೆ ಸಲುವಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಸಲಾಗಿದೆ.

ಅರ್ಜಿ ಸಲ್ಲಿಸುವ ಫಲಾನುಭವಿಗಳು ಸ್ಥಳೀಯ ನಿವಾಸಿಯಾಗಿರಬೇಕು, ಅಂಗವಿಕಲರ ಪ್ರಮಾಣ ಪತ್ರ, ಜಾತಿ & ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಬಿ.ಪಿ.ಎಲ್ ಕಾರ್ಡ & ಐಡಿ ಕಾರ್ಡ,  2 ಫೋಟೋ ಅರ್ಜಿಯನ್ನು  ಜುಲೈ 13 ರಿಂದ ಜುಲೈ 31ರೊಳಗೆ ನಗರಸಭೆ ಕಾರ್ಯಲಯಕ್ಕೆ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾನೂನು ಬಾಹಿರವಾಗಿ ಪ್ರಾಣಿ ವಧೆ ಮಾಡಿದರೆ ಕಠಿಣ ಕ್ರಮ

ಯಾದಗಿರಿ.ಜುಲೈ.15(ಕ.ವಾ): ಬಕ್ರೀದ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಜಾನುವಾರುಗಳಾದ ಎಲ್ಲ ವಯಸ್ಸಿನ ಆಕಳು, ಆಕಳ ಕರು, ಹೋರಿ, ಎತ್ತು, ಒಂಟೆ, ಅಲ್ಲದೆ 13 ವರ್ಷದೊಳಗಿನ ಎಮ್ಮೆ, ಕೋಣಗಳ ಹತ್ಯೆಮಾಡುವಂತಿಲ್ಲ, ಈ ಕುರಿತು ಸಂಬAದಿಸಿದ ತಂಡಗಳು ಸೂಕ್ತ ನಿಗಾವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

 ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಸಂಭಾAಗಣದಲ್ಲಿ ಬುಧವಾರ ನಡೆದ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ಹತ್ಯೆ ಹಾಗೂ ಜಾನುವಾರುಗಳ ಸಾಗಾಣಿಕೆ ತಡೆಗಟ್ಟುವ  ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು 

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರAಕ್ಷಣಾ ಖಾಯ್ದೆ 2020 ರನ್ವಯ ಯಾವುದೇ ರೀತಿಯ ಜಾನುವಾರುಗಳ ಹತ್ಯೆ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಜುಲೈ-21 ರಂದು ಜರಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆ ಯಾಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವು ಹಾಗೂ ಒಂಟೆಗಳ ಅಕ್ರಮ ಸಾಗಾಣಿಕೆ ಹಾಗೂ ವಧೆಯ ಜಾನುವಾರು ಸಾಗಾಣಿಕೆ ಮಾಡುವಾಗ ದಾಖಲಾತಿ ಇಲ್ಲದೆ ಸಾಗಾಣಿಕೆ ಮಾಡುವುದು ಕಾನೂನು ಬಾಹಿರವಾಗಿರುತ್ತದೆ.  ಈ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಅಥವಾ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸುವಂತೆ ಅರಿವು ಮೂಡಿಸುವ ಹಾಗೂ ಪೊಲೀಸ್ ಇಲಾಖೆಯಿಂದ ಚಕ್-ಪೋಸ್ಟ್ ಸ್ಥಾಪಿಸಿ ಅಕ್ರಮ ಸಾಗಾಣಿಕೆ ಯಾಗದಂತೆ ಕ್ರಮ ಕೈಗೊಳ್ಳಲು ತಿಳಿಸಿದರು.

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...