ಶನಿವಾರ, ಜುಲೈ 3, 2021

 ರೈತರ ಅಂಗೈನಲ್ಲಿಯೇ ಬೆಳೆ ಸಮೀಕ್ಷೆ ಮಾಹಿತಿ 

ಯಾದಗಿರಿ,ಜುಲೈ03(ಕ.ವಾ):- 2021-22ನೇ  ರೈತರಿಗೆ ನೇರವಾಗಲೆಂದು ಅಭಿವೃದ್ದಿ ಪಡಿಸಿರುವ ಬೆಳೆ ಸಮೀಕ್ಷೆ ಆ್ಯಪ್ ರೈತರಿಗೆ ಸಾಕಷ್ಟು ಸಹಕಾರಿಯಾಗಿದ್ದು, ಕೃಷಿ ಇಲಾಖೆಯೂ ರೈತರಿಗೆ ಸಮಗ್ರ ಮಾಹಿತಿ ಒದಗಿಸಿದ ಪರಿಣಾಮ ಸಾಕಷ್ಟು ರೈತರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

ರೈತರೆ ಸ್ವತಃ ಬೆಳೆ ಸಮೀಕ್ಷೆ ನಡೆಸಿ ತಾವೇ ಪ್ರಮಾಣ ಪತ್ರ ನೀಡುವ ರೈತ ಬೆಳೆ ಸಮೀಕ್ಷೆ ಆ್ಯಪ್ ಇದಾಗಿದ್ದು,  ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಛಾಯ ಚಿತ್ರ ಸಹಿತ 2021ರ ಮುಂಗಾರು ಬೆಳೆ ಸಮೀಕ್ಷೆ ಮೋಬೈಲ್ ಆ್ಯಪ್ ಮೂಲಕ ಸ್ವತಃ, ರೈತರ ಬೆಳೆ ಸಮೀಕ್ಷೆಗಾಗಿ ಸಿದ್ದಪಡಿಸಿರುವ ಆ್ಯಪ್ ನಿಂದ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ನಿಖರವಾಗಿ ದಾಖಲಿಸಬಹುದು. ರೈತರೆ ತಮ್ಮಲ್ಲಿ ಇರುವ ಸ್ಮಾರ್ಟ್ ಮೋಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಾವು ಬೆಳೆದಿರುವ ಮಾಹಿತಿಯನ್ನು ಆಪ್‌ಲೋಡ್ ಮಾಡಬೇಕು.

ಬೆಳೆ ಸಮೀಕ್ಷೆಯ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ   ಯೋಜನೆಗಳಡಿ ವಿವಿಧ ಸವಲತ್ತುಗಳನ್ನು ಒದಗಿಸಲು ಮತ್ತು ಆರ್.ಟಿ.ಸಿ ಯಲ್ಲಿ ಅಳವಡಿಸಲು ಬಳಸಲಾಗುತ್ತದೆ.

2021 ಮುಂಗಾರು ರೈತರ ಬೆಳೆ ಸಮೀಕ್ಷೆ ಅಪ್ಲಿಕೇಷನ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು ಞhಚಿಡಿiಜಿ seಚಿsoಟಿ ಜಿಚಿಡಿmeಡಿ ಛಿಡಿoಠಿ suಡಿveಥಿ 2021-22 ಂಠಿಠಿಟiಛಿಚಿಣioಟಿ ಅನ್ನು ಠಿಟಚಿಥಿ sಣoಡಿe ನಿಂದ ಡೌನ್‌ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆಯನ್ನು ಮಾಡಬಹುದು.

ರೈತರ ಆಧಾರ ಸಂಖ್ಯೆ, ಪೂರ್ಣ ವಿಳಾಸ ಹಾಗೂ ಮೊಬೈಲ್ ನಂಬರ್ ವಿವರವನ್ನು ನಮೂದಿಸಿ ತಮ್ಮ ಜಮೀನಿನ ಸರ್ವೇ ನಂಬರ್ ನಲ್ಲಿ ಬಿತ್ತನೇ/ ನಾಟಿ ಮಾಡಿದ ಬೆಳೆಯ ವಿವರ ಹಾಗೂ ವಿಸ್ತಿರ್ಣವನ್ನು ಹಿಸ್ಸಾವಾರು ಮುಂಗಾರು ರೈತರ ಬೆಳೆ ಸಮೀಕ್ಷೆ 2021 ಆ್ಯಪ್ ನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕು.

ರೈತರ ಬೆಳೆ ಸಮೀಕ್ಷೆ ಅಪ್ಲಿಕೇಷನ್ ಬಳಸುವ ಬಗ್ಗೆ ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಲು (ಪಿ.ಆರ್) ಅಥವಾ ಗ್ರಾಮ ಲೇಕ್ಕಾಧಿಕಾರಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ಹೋಬಳಿ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಕೊರಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...