ಕೋವಿಡ್-19 ಲಸಿಕಾ ಮುಕ್ತ ಗ್ರಾಮ ಅಭಿಯಾನ, ಘೋಷಣ ಕಾರ್ಯಕ್ರಮ;
ಮಂಗಳವಾರ, ಜೂನ್ 29, 2021
ಗುರುವಾರ, ಜೂನ್ 24, 2021
ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಯಾದಗಿರಿ,ಜೂನ್೨೫(ಕರ್ನಾಟಕ ವಾರ್ತಾ):- ಕೊಂಕಲ್ ೧೧೦ಕೆವಿ ಕೇಂದ್ರದಿAದ ಹೊರಹೋಗುವ ಎಲ್ಲಾ ೧೧ಕೆವಿ ಹಾಗೂ ೩೩ಕೆವಿ ಮಾರ್ಗಗಳಿಗೆ ನಿರಂತರ ವಿದ್ಯುತ್ ಪೂರೈಸಲು ಮತ್ತು ವಿದ್ಯುತ್ ಅವಘಡಯಾಗದಂತೆ ತಡೆಯಲು ೧೧೦ಕೆವಿ ವಿದ್ಯುತ್ ವಿತರಣಾ ಕೇಂದ್ರ ಕೊಂಕಲ್ನಲ್ಲಿ ಮುಂಜಾಗೃತ ಮಾನ್ಸೂನ್ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸಿತ್ತಿರುವ ಪ್ರಯುಕ್ತ ಶುಕ್ರವಾರ ಜೂನ್ ೨೫ರಂದು ಬೆಳಗ್ಗೆ ೧೦ ರಿಂದ ಸಾಯಂಕಾಲ ೪ ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿAದ ಸಾರ್ವಜನಿಕರು ಜೆಸ್ಕಾಂಗೆ ಸಹಕರಿಸುವಂತೆ ಗು.ವಿ.ಸ.ಕಂ.ನಿ (ವಿ) ಕಾರ್ಯ ಮತ್ತು ಪಾಲನೆ ವಿಭಾಗ ಯಾದಗಿರಿಯ ಕಾರ್ಯನಿರ್ವಾಹಕ ಅಭಿಯಂತರರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ಯಾದಗಿರಿ;ಜೂನ್.೨೪(ಕರ್ನಾಟಕ ವಾರ್ತಾ) ೨೦೨೧-೨೨ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ನ್ಯಾಯವಾದಿ ವೃತ್ತಿಯ ತರಬೇತಿಗಾಗಿ ಸಹಾಯಧನ ಮಂಜೂರಿಸಲು ಅರ್ಹರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕಾನೂನು ಪದವಿ ಪಡೆದ ಪರಿಶಿಷ್ಟ ಜನಾಂಗಕ್ಕೆ ಸೇರಿರುವ, ೪೦ವರ್ಷದೊಳಗಿನ, ೨ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದ ಅರ್ಹ ಅಭ್ಯರ್ಥಿಗಳು ಜುಲೈ ೦೧ರಿಂದ ೧೪ರೊಳಗಾಗಿ ತಿತಿತಿ.sತಿ.ಞಚಿಡಿ.iಟಿಛಿ ವೈಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ ನಂತರ ಅರ್ಜಿ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ,ಶಹಾಪೂರ,ಸುರಪೂರ ಕಚೇರಿಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಧವಾರ, ಜೂನ್ 23, 2021
ಯಾದಗಿರಿ ಜಿಲ್ಲೆ ಸಂಚಾರಿ ವ್ಯವಸ್ಥೆ; ಕರಡು ಅಧಿಸೂಚನೆ ಪ್ರಕಟ
ಯಾದಗಿರಿ;ಜೂನ್23 (ಕರ್ನಾಟಕ ವಾರ್ತಾ): ಜಿಲ್ಲೆಯ ಯಾದಗಿರಿ ನಗರ, ಶಹಾಪುರ ನಗರ, ಸುರಪುರ ನಗರ, ಗುರುಮಠಕಲ್ ಪಟ್ಟಣ, ಹುಣಸಗಿ ಪಟ್ಟಣ ಹಾಗೂ ಸೈದಾಪುರ ಪಟ್ಟಣಗಳಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಬಾರಿ ಸರಕು ವಾಹನ ಸಂಚಾರ ನಿಷೇಧ, ಏಕ ಮುಖ ಸಂಚಾರ ವ್ಯವಸ್ಥೆ, ಪಾರ್ಕಿಂಗ್ ಸ್ಥಳ ಕುರಿತು ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಇತ್ತೀಚಿನ ಕೆಲ ದಿನಗಳಲ್ಲಿ ವಾಹನಗಳ ನಿಗಧಿತ ವೇಗಕ್ಕಿಂತ ಅತಿ ವೇಗದಿಂದ ಸಂಚರಿಸಿ ಮಾರಣಾಂತಿಕ ಅಪಘಾತಗಳು ಸಂಭವಿಸಿದ ಹಿನ್ನಲೆಯಲ್ಲಿ ಯಾದಗಿರಿ ನಗರ ವ್ಯಾಪ್ತಿಯಲ್ಲಿ ಮತ್ತು ರಿಂಗ್ ರಸ್ತೆಯ ವಾಹನಗಳ ನಿಗದಿತ ವೇಗಕ್ಕಿಂತ ಅತಿಹೆಚ್ಚು ವೇಗದಿಂದ ಸಂಚರಿಸಿ ಮಾರಣಾಂತಿಕ ಅಪಘಗಳು ಸಂಭವಿಸಿದ ಹಿನ್ನಲೆಯಲ್ಲಿ ಯಾದಗಿರಿ ನಗರ ವ್ಯಾಪ್ತಿಯಲ್ಲಿ ಮತ್ತು ರಿಂಗ್ ರಸ್ತೆಯ ವಾಹನಗಳ ವೇಗವನ್ನು 50ಕಿ,ಮೀ ಪ್ರತಿ ಗಂಟೆಗೆ ನಿರ್ಬಂಧಿಸಿ ಮೋಟಾರು ವಾಹನ ಕಾಯ್ದೆ 1988 ರ ನಿಯಮ 112, ಕರ್ನಾಟಕ ಮೋಟಾರು ವಾಹನ ಕಾಯ್ದೆ 1989 ನಿಯಮ 221(ಎ)ರ ಅನುಸಾರ ಅಧಿಕಾರ ಚಲಾಯಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿದೆ.
** ಕರಡು ಅಧಿಸೂಚನೆಯ ವಿವರ ಈ ರೀತಿ ಇದೆ **
ಯಾದಗಿರಿ ನಗರದ ಈ ಕೆಳಕಂಡ ಸ್ಥಳಗಳಲ್ಲಿ ಬೆಳಗ್ಗೆ 8 ಗಂಟೆಯಿAದ 12 ಗಂಟೆಯ ವರೆಗೆ ಹಾಗೂ ಸಾಯಂಕಾಲ 4 ಗಂಟೆಯಿAದ ರಾತ್ರಿ 8 ಗಂಟೆಯ ವರೆಗೆ ಭಾರಿ ವಾಹನಗಳನ್ನು ಕಡ್ಡಾಯವಾಗಿ ಪ್ರವೇಶ ನಿರ್ಬಂಧಿಸಲಾಗಿದೆ.
1. ಹೈದ್ರಾಬಾದ್ ರಾಷ್ಟಿçÃಯ ರಸ್ತೆಯ ಂPಒಅ ಗಂಜ್ ವೃತ್ತದಿಂದ ಮೈಲಾಪೂರ ದಿಂದ ಬೇಸ್ದಿಂದ ಚಕ್ರಕಟ್ಟಾದಿಂದ ಗಾಂಧಿ ಚೌಕ್ದಿಂದ ಹತ್ತಿಕುಣಿ ರಸ್ತೆ, ಹಿಮ್ಮುಖವಾಗಿ ಅದೇ ಮಾರ್ಗ
2. ಜಿಲ್ಲಾಧಿಕಾರಿಗಳ ಕಚೇರಿ ಮತ್ತು ರೇಲ್ವೆಸ್ಟೇಷನ್ ರಸ್ತೆಯ ವರ್ತುಲ ರಸ್ತೆ ದಿಂದ ಜಿಲ್ಲಾ ಪಂಚಾಯತ್, ಸಪ್ನಾ ಟಾಕೀಸ್ ಮತ್ತು ಗಾಂಧಿಚೌಕ್ ಹಿಮ್ಮುಖವಾಗಿ ಅದೇ ಮಾರ್ಗ
3. ಚಿತ್ತಾಪೂರ ವಾಡಿ ರಸ್ತೆಯ ಡಿಡಿಪಿಐ ಕಛೇರಿ ಯಿಂದ ಸಪ್ನಾಟಾಕೀಸ್ ಗಾಂಧಿ ಚೌಕ್ ಹಿಮ್ಮುಖವಾಗಿ ಅದೇ ಮಾರ್ಗ.
ಯಾದಗಿರಿಯಲ್ಲಿ ವಾಹನಗಳು ನಿಲುಗಡೆ ನಿಷೇಧ ಸ್ಥಳಗಳು
ನತ್ತು ಹೊಟೇಲ್ ಮುಂದಿನ ರಸ್ತೆಯ ಬದಿಯಲ್ಲಿ ಹಾಗೂ ಯಾದಗಿರಿ ನಗರದ ಗಾಂಧಿ ಚೌಕ್ ಮೂರ್ತಿಯ ಹತ್ತಿರದ ಸುತ್ತಮುತ್ತಲಿನ ಸ್ಥಳ
ಶಹಾಪೂರದಲ್ಲಿ ವಾಹನಗಳು ನಿಲುಗಡೆ ನಿಷೇಧ ಸ್ಥಳ
ಶಹಾಪೂರ ನಗರದ ಹಳೆ ಬಸ್ ನಿಲ್ದಾಣ ಎರಡು ಬದಿಗೆ 50 ಮೀಟರ ಅಂತರದಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ.
ಬಸವೇಶ್ವರ ವೃತ್ತದಿಂದ ಯಾದಗಿರಿ ರಸ್ತೆಯಲ್ಲಿ 100 ಮೀಟರ್ ಅಂತರದಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ.
ಬಸವೇಶ್ವರ ವೃತ್ತದಿಂದ ಸುರಪುರ ರಸ್ತೆಯ 50 ಮೀಟರ್ ಅಂತರದವರೆಗೆ ಸ್ವಾಮಿ ಪೆಟ್ರೋಲ್ ಬಂಕ ವರೆಗೆ ನೋ ಪಾರ್ಕಿಂಗ್ ವ್ಯವಸ್ಥೆ.
ಸುರಪೂರ
ಗಾಂಧಿ ವೃತ್ತದಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ
ಏಕ ಮುಖ ಸಂಚಾರ ವ್ಯವಸ್ಥೆ
ಯಾದಗಿರಿ ಹಳೆ ಎಸ್,ಬಿ,ಐ,ಬ್ಯಾಂಕ್ ಯಿಂದ ಗಾಂಧಿ ಚೌಕ್ವರೆಗೆ
ಗುರುಮಿಠಕಲ್ ಕಾಕಲವಾರ ಕ್ರಾಸ್ ಯಿಂದ ಕೆ.ಜಿ.ಬಿ.ಬ್ಯಾಂಕ್ವರೆಗೆ
ಸೈದಾಪೂರ ಕನಕದಾಸ ವೃತ್ತದಿಂದ ಬಸವೇಶ್ವರ ವೃತ್ತವರೆಗೆ
ಸಮ ಮತ್ತು ಬೆಸ್ ದಿನಗಳಂತೆ ವಾಹನ ನಿಲುಗಡೆ ಸ್ಥಳ
ಯಾದಗಿರಿ ಸುಭಾಷ ಸರ್ಕಲ್ ಯಿಂದ ಸರ್ಕಾರಿ ಡಿಗ್ರಿ ಕಾಲೇಜ್
ಸುಭಾಷ ಸರ್ಕಲ್ ಯಿಂದ ಶಾಸ್ತಿç ಚೌಕ್ ಮತ್ತು ಸುಭಾಷ ಸರ್ಕಲ್ ಶಹಾಪೂರ ರಸ್ತೆ ಬ್ರಿಡ್ಜ್
ಗುರಮಿಠಕಲ್ ಬಸವೇಶ್ವರ ಸರ್ಕಲ್ ಯಿಂದ ನಗರೇಶ್ವರ ಮಂದಿರ ವರಿಗೆ
ಸೈದಾಪೂರ ಬಸವೇಶ್ವರ ಸರ್ಕಲ್ ಯಿಂದ ರೇಲ್ವೆ ಸ್ಟೇಷನ್ವರಿಗೆ
ಶಹಾಪೂರ ಬಸವೇಶ್ವರ ಸರ್ಕಲ್ ಯಿಂದ ಮಾಚಗಾರಗಡ್ಡಿ ವರಿಗೆ
ಸುರಪೂರ ಗಾಂಧಿ ಸರ್ಕಲ್ ಯಿಂದ ಮೂರ್ತಿಕಟ್ಟಾವರಿಗೆ
ಹುಣಸಗಿ ಕರ್ನಾಟಕ ಬ್ಯಾಂಕ್ ಯಿಂದ ವಾಲ್ಮೀಕಿ ಸರ್ಕಲ್ ವರೆಗೆ
ವಾಹನ ನಿಲುಗಡೆ ಸ್ಥಳಗಳು-:
ದ್ವಿಚಕ್ರ ವಾಹನ : ಯಾದಗಿರಿ ನಗರದ ಎಸ್.ಎಸ್. ಪ್ಯಾರಸಾಬಾದಿ ಅಂಗಡಿಯಿAದ ಚಕ್ರಕಟ್ಟಾ ಕ್ರಾಸ್ ವರಿಗೆ ಮತ್ತು ನಾಹರ ಬಟ್ಟೆ ಅಂಗಡಿಯಿAದ ಚಕ್ರಕಟ್ಟಾ ಕ್ರಾಸ್ವರಿಗೆ ಮಾತ್ರ ದ್ವಿಚಕ್ರ ವಾಹನ ನಿಲುಗಡೆ ಸ್ಥಳವಾಗಿದೆ.
ಆಟೋ ನಿಲುಗಡೆ : ಯಾದಗಿರಿ ನಗರದ ನಗರ ಪೊಲೀಸ್ ಠಾಣೆಯ ಪಂಪ ಮಹಾಕವಿಯ ಮುಂದಿನ ಸ್ಥಳದಲ್ಲಿ ಹಾಗೂ ಗಂಜ್ ವೃತ್ತದಿಂದ ಮೈಲಾಪೂರ ಬೇಸ್ಗೆ ಹೋಗುವ ರಸ್ತೆಯ ಎಡ ಭಾಗಕ್ಕೆ ಆಟೋ ನಿಲುಗಡೆ ಸ್ಥಳ ಗುರುತಿಸಲಾಗಿದೆ.
ಈ ಕರಡು ಅಧಿಸೂಚನೆಯ ಕುರಿತು ಆಕ್ಷೇಪಣೆ, ಸಲಹೆ ಮತ್ತು ಸೂಚನೆಗಳು ಏನಾದರೂ ಇದ್ದಲ್ಲಿ ಸದಸ್ಯ ಕಾರ್ಯದರ್ಶಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಯಾದಗಿರಿ ಇವರಿಗೆ ಸಲ್ಲಸಬಹುದಾಗಿದೆ. ಎಂದು ಯಾದಗಿರಿ ಆರ್ಟಿಓ ಪ್ರಕಟಣೆ ತಿಳಿಸಿದೆ.
ಬಿತ್ತುವ ಮುನ್ನ ಬೀಜೋಪಚಾರ ಮಾಡಬೇಕು
ಡಾ. ವೈ.ಎಸ್,ಅಮರೇಶ
ಯಾದಗಿರಿ,ಜೂ.23(ಕ.ವಾ): ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ರೋಗಗಳಿಗೆ ಕಾರಣವಾದ ರೋಗಾಣುಗಳು ಬೀಜ, ಮಣ್ಣು, ಕೀಟ, ನೀರು ಮತ್ತು ಗಾಳಿಯ ಮೂಲಕ ಪಸರಿಸುವದರಿಂದ ರೈತರು ಬಿತ್ತುವ ಮುನ್ನ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕೆಂದು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ, ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ. ವೈ.ಎಸ್ ಅಮರೇಶ ಅವರು ತಿಳಿಸಿದರು.
ಸುರುಪುರ ತಾಲೂಕಿನ ಕವಡಿಮಟ್ಟಿಯಲ್ಲಿರುವ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಂತರಜಾಲದ ಮೂಲಕ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆರೋಗಗಳನ್ನು ನಿಯಂತ್ರಿಸಲು ಅನೇಕ ರಸಾಯನಿಕ, ಜೈವಿಕ ಹಾಗೂ ಇತರೆ ರೋಗನಾಶಕ ವಸ್ತುಗಳನ್ನು ಬಳಸುವದು ಸರ್ವೆ ಸಾಮಾನ್ಯ, ಆದರೆ ರೈತರು ಅತಿಯಾದ ಮತ್ತು ಅಸಮರ್ಪಕವಾದ ರಸಾಯನಿಕ ರೋಗನಾಶಕಗಳನ್ನು ಬಳಸುವುದರಿಂದ ಪರಿಸರ, ಜಲ ಮತ್ತು ವಾಯು ಮಾಲಿನ್ಯ ಹೆಚ್ಚಾಗಿ ತಿನ್ನುವ ಆಹಾರವು ಸಹ ವಿಷವಾಗುವುದು, ಇದಲ್ಲದೇ ಶಿಲೀಂದ್ರಗಳಲ್ಲಿ ಶಿಲೀಂದ್ರನಾಶಕ ನಿರೋಧಕ ಶಕ್ತಿ ಕಂಡುಬರುವುದು ಇಂತಹ ದುಷ್ಟಪರಿಣಾಮದಿಂದ ಜೈವಿಕನಾಶಕಗಳ ಬಳಕೆ ಹೆಚ್ಚಾಗುತ್ತದೆ ಎಂದರು.
ಜೈವಿಕ ನಿಯಂತ್ರಣ ವಿಭಾಗದ ಮುಖ್ಯಸ್ಥರು ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅರುಣಕುಮಾರ ಹೊಸಮನಿ ಮಾತನಾಡಿ, ಕೀಟ ಮತ್ತು ರೋಗಗಳನ್ನು ನಿಯಂತ್ರಿಸುವಲ್ಲಿ ಜೈವಿಕ ವಿಧಾನಗಳ ಅಳವಡಿಕೆಯು ಶತಮಾನಗಳ ಇತಿಹಾಸವನ್ನು ಹೊಂದಿದೆ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಇಂದು ನೈಸರ್ಗಿಕವಾಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ತೀವ್ರವಾಗಿ ಏರುತ್ತಿರುವ ಹಿನ್ನಲೆಯಲ್ಲಿ, ಜೈವಿಕ ವಿಧಾನಗಳನ್ನು ಕ್ರಮಬದ್ದವಾಗಿ ಅಳವಡಿಸಿ, ಕೀಟ ನಿರ್ವಹಿಸಿ ಬೆಳೆಯುವುದರಿಂದ ಉತ್ತಮ ಫಸಲನ್ನು ಪಡೆಯಬಹುದು ಮತ್ತು ರೋಗಕಾರದ ಶಿಲೀಂದ್ರಗಳಾವು ಎಂದರೆ, ಬೆವೆರಿಯಾ, ಮೆಟಾರೈಜಿಯಂ, ನೊಮುರಿಯಾ, ವರ್ಟಿಸಿಲಿಯೊ, ಹಿರ್ಸುಟಿಲ್ಲಾ ಮತ್ತು ಪೆಸಿಲೋಮೈಸಿಸ್ ಪ್ರಚಲಿತಿಯಲ್ಲಿ ಇರುವ ಜೈವಿಕ ಶಿಲೀಂದ್ರನಾಶಕಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ತರಬೇತಿಯ ಆಯೋಜಕರಾದ. ಡಾ. ಗುರುಪ್ರಸಾದ ಅವರು ನಿರೂಪಿಸಿ,ವಂದಿಸಿದರು ಕಾರ್ಯಕ್ರಮದಲ್ಲಿ ಜಿಲ್ಲೆ ಸುಮಾರು 29ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ಸೋಮವಾರ, ಜೂನ್ 21, 2021
ಶಾಸಕರಿಂದ ಯಂತ್ರಚಾಲಿತ ತ್ರಿಚಕ್ರವಾಹನ ವಿತರಣೆ
ಸರಿಯಾದ ಮಾರ್ಗದರ್ಶನವಿದ್ದರೇ ವಿಕಲಚೇತನರು ಸಾಧನೆ ಮಾಡಬಲ್ಲರು
: ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ
ಯಾದಗಿರಿ;ಜೂನ್.21(ಕರ್ನಾಟಕ ವಾರ್ತಾ) ಅಂಗವೈಕಲ್ಯ ಶರೀರಕ್ಕೆ ಹೊರತು ಮನಸ್ಸಿಗಲ್ಲ, ಎಲ್ಲರಂತೆ ಅಂಗವಿಕಲರು ಸರಿಸಮಾನರು, ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದರೆ ಅಂಗವಿಕಲರು ಉತ್ತಮ ಸಾಧನೆ ಮಾಡಬಲ್ಲರು ಎಂದು ಯಾದಗಿರಿ ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ ಅಭಿಪ್ರಾಯಪಟ್ಟರು.
ನಗರದ ಶಾಸಕರ ಕಚೇರಿಯಲ್ಲಿ ಸೋಮವಾರ ಅಂಗವಿಕಲರಿಗೆ ಸ್ಥಳಿಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ 53 ಯಂತ್ರಚಾಲಿತ ತ್ರಿಚಕ್ರವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ತ್ರಿಚಕ್ರವಾಹನ ಸರಿಯಾಗಿ ಸದ್ಬಳಕೆಯಾಗಲಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವಿಕಲಚೇತನರ ಫಲಾನುಭವಿಗಳಿಗೆ ಅವರು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬಿ.ವಿ ದೀಪಿಕಾ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು.
ಬೀಜ,ಗೊಬ್ಬರ ಬೇರೆ ಜಿಲ್ಲೆಗೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು
ಮಂಗಳವಾರ, ಜೂನ್ 15, 2021
ಅಸಂಘಟಿತ ವಲಯದ ಕಾರ್ಮಿಕರ ಪರಿಹಾರ ಧನ ಪಡೆಯಲು ಅರ್ಜಿ ಆಹ್ವಾನ
ಯಾದಗಿರಿ ಜೂನ್15(ಕ.ವಾ): ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಸಂಘಟಿತ ಕಾರ್ಮಿಕರಿಗೆ ಕೊವಿಡ್-19 ಪ್ರಯುಕ್ತ ಸರಕಾರ ಘೋಷಿಸಿರುವ ರೂ.2000/-ಗಳ ಪರಿಹಾರ ಧನ ಪಡೆಯಲು ಜುಲೈ 20ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಂತೆ ಯಾದಗಿರಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರಾದ ಕ್ಷೌರಿಕರು, ಅಗಸರು, ಟೈಲರಗಳು, ಹಮಾಲರು, ಚಿಂದಿ ಆಯುವರು, ಕುಂಬಾರರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್ರು, ಕಮ್ಮಾರರು ಮತ್ತು ಗೃಹಕಾರ್ಮಿಕರು ಈ ವರ್ಗದ ಅರ್ಹ ಫಲಾನುಭವಿಗಳು ಪರಿಹಾರ ಧನ ಪಡೆಯಲು ಸೇವಾ ಸಿಂಧು ಪೋರ್ಟಲ್(ಛಿsಛಿ) ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಬಿ.ಪಿ.ಎಲ್ ಕಾರ್ಡ ಹೊಂದಿರುವ ಒಂದು ಕುಟುಂಬಕ್ಕೆ ಒಬ್ಬರೆ ಅರ್ಜಿ ಸಲ್ಲಿಸಬೇಕು.
ಬೇರೆ ರಾಜ್ಯದವರು ಈ ವೃತ್ತಿಗಳು ನಿರ್ವಹಿಸುತ್ತಿದ್ದರೆ, ಸಂಭAದಪಟ್ಟ ಅಧಿಕಾರಿಗಳಿಂದ ದೃಡೀಕರಣ ಪ್ರಮಾಣ ಪತ್ರ ಪಡೆದಿರಬೇಕು,ಆಧಾರ ಕಾರ್ಡ ಜೋಡಣೆಯಾಗಿರುವ ಬ್ಯಾಂಕ ಖಾತೆ ಹೊಂದಿರುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೇರವಾಗಿ ಕಾರ್ಮಿಕ ಸಹಾಯವಾಣಿ 155214 ಗೆ ಅಥವಾ ಮತ್ತು ಕಾರ್ಮಿಕ ಅಧಿಕಾರಿಯವರ ಕಚೇರಿ ಯಾದಗಿರಿ ಜಿಲ್ಲೆ ಯಾದಗಿರಿ ಸಂಪರ್ಕಿಸಿಲು ಅವರು ಕೋರಿದ್ದಾರೆ.
ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಉತ್ಪಾದಿಸಿದ ಕಸಿ/ಸಸಿಗಳು ಮಾರಾಟಕ್ಕೆ ಲಭ್ಯ
ಯಾದಗಿರಿ ಜೂನ್15(ಕ.ವಾ): ಜಿಲ್ಲೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಉತ್ಪಾದಿಸಿದ ಕಸಿ/ಸಸಿಗಳು ಮಾರಾಟಕ್ಕೆ ಲಭ್ಯವಿದ್ದು ತೋಟಗಾರಿಕಾ ಬೆಳೆ ಬೆಳೆಯುವ ರೈತಬಾಂಧವರಿಗಾಗಿ, ಸಾರ್ವಜನಿಕರಿಗೆ ಇಲಾಖೆ ನಿಗಧಿಪಡಿಸಿದ, ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಸಕ್ತ ರೈತಬಾಂಧವರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ
ನಾರಾಯಣಪೂರ ತೋಟಗಾರಿಕೆ ಕ್ಷೇತ್ರದಲ್ಲಿಈ ಕೆಳಗಿನಂತೆ ಕಸಿ/ಸಸಿಗಳ ಲಭ್ಯತೆ ಇರುತ್ತದೆ, ಮಾವು, ನಿಂಬೆ, ಕರಿಬೇವು, ಮತ್ತು ತೆಂಗು. ಸಂಪರ್ಕಿಸಬೇಕಾದ ಅಧಿಕಾರಿಗಳು : ಶ್ರೀ. ಬಸನಗೌಡ ಪಾಟೀಲ್, ಸಹಾಯಕ ತೋಟಗಾರಿಕೆ ನಿರ್ದೇಶಕರು 9620578551, ಶ್ರೀ. ಶ್ರೀಧರ್, ಸಹಾಯಕ ತೋಟಗಾರಿಕೆ ಅಧಿಕಾರಿ 9611001067, ಶಿವರಾಮ್, ತೋಟಗಾರಿಕೆ ಸಹಾಯಕರು 9880139467.
ಹತ್ತಿಕುಣಿ ತೋಟಗಾರಿಕೆ ಕ್ಷೇತ್ರದಲ್ಲಿ ಈ ಕೆಳಗಿನಂತೆ ಕಸಿ/ಸಸಿಗಳ ಲಭ್ಯತೆ ಇರುತ್ತದೆ, ಮಾವು, ನಿಂಬೆ, ಕರಿಬೇವು ಮತ್ತು ತೆಂಗು. ಸಂಪರ್ಕಿಸಬೇಕಾದ ಅಧಿಕಾರಿಗಳು .ಎಂ.ಡಿ. ಸಮಿಯೂದ್ದೀನ್ ಸಹಾಯಕ ತೋಟಗಾರಿಕೆ ನಿರ್ದೇಶಕರು, 9986516251, ನಿಸಾರ್ ಅಹ್ಮದ್ ಸಹಾಯಕ ತೋಟಗಾರಿಕೆ ಅಧಿಕಾರಿ, 9738416930, ಗೀತಾ ತೋಟಗಾರಿಕೆ ಸಹಾಯಕರು 9110484899.
ಯಾದಗಿರಿ ಜಿಲ್ಲಾ ನರ್ಸರಿಯಲ್ಲಿ ಈ ಕೆಳಗಿನಂತೆ ಕಸಿ/ಸಸಿಗಳ ಲಭ್ಯತೆ ಇರುತ್ತದೆ, ನಿಂಬೆ, ಕರಿಬೇವು ಮತ್ತು ಅಲಂಕಾರಿಕ ಸಸಿಗಳು ಮತ್ತು ಅಲಂಕಾರಿಕ ಕುಂಡಗಳು ಸಂಪರ್ಕಿಸಬೇಕಾದದ್ದು : ಕುಮಾರಿ.ಕುಶಲತಾ ತೋಟಗಾರಿಕೆ ಸಹಾಯಕರು, 9731625405.
ಸುರಪುರ ಕಛೇರಿ ನರ್ಸರಿಯಲ್ಲಿ ಈ ಕೆಳಗಿನಂತೆ ಕಸಿ/ಸಸಿಗಳ ಲಭ್ಯತೆ ಇರುತ್ತದೆ, ನಿಂಬೆ, ಕರಿಬೇವು ಮತ್ತು ಅಲಂಕಾರಿಕ ಸಸಿಗಳು, ಸಂಪರ್ಕಿಸಬೇಕಾದದ್ದು : ಕುಮಾರಿ.ಬಸ್ಸಮ್ಮ ತೋಟಗಾರಿಕೆ ಸಹಾಯಕರು, 9900393447.
ಈ ಮೇಲಿನ ಸಂಖ್ಯೆಗಳಿಗೆ ಕರೆ ಮಾಡಿ ಸಸಿ/ಕಸಿಗಳನ್ನು ಪಡೆದುಕೊಳ್ಳಬಹುದಾಗಿದೆ.
ಪ್ರಧಾನಮಂತ್ರಿ ಮತ್ಸö್ಯಸಂಪದ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ
ಯಾದಗಿರಿ ಜೂನ್15(ಕ.ವಾ):ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನಿಂದ 2024-25ನೇ ಸಾಲಿನವರಗೆ ಪ್ರಧಾನಮಂತ್ರಿ ಮತ್ಸö್ಯಸಂಪದ ಯೋಜನೆಯಡಿಯಲ್ಲಿ 2021-22ನೇ ಸಾಲಿಗೆ ಒಳನಾಡು ಮೀನುಗಾರಿಕೆಗೆ ಸಂಬAದಿಸಿದ ಯೋಜನೆಗಳಾದ ಮೀನುಕೃಷಿ ಕೊಳಗಳ ನಿರ್ಮಾಣ, ಬಯೋಫ್ಲಾಕ್ ಕೊಳ ನಿರ್ಮಾಣ, ಮೀನುಮರಿ ಉತ್ಪಾದನೆ ಹಾಗೂ ಪಾಲನಾ ಕೇಂದ್ರಗಳ ಸ್ಥಾಪನೆ, ಶೈತೀಕರಿಸಿದ ಶಾಖ ನಿರೋಧಕ ವಾಹನ ಖರೀದಿ, ಶೈತ್ಯಾಗಾರ/ಮಂಜುಗಡೆ ಸ್ಥಾವರ ನಿರ್ಮಾಣ ಮತ್ತು ಇತರೆ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 40ರಷ್ಟು ಸಹಾಯಧನ ಮತ್ತು ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 60ರಷ್ಟು ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನ ಮಂತ್ರಿ ಮತ್ಸö್ಯ ಸಂಪದ ಯೋಜನೆಯಲ್ಲಿ ಮೇಲಿನ ಯೋಜನೆಗಳ ಪ್ರಯೋಜನ ಪಡೆಯಲಿಚ್ಚಿಸುವ ಅರ್ಹರು 2021ರ ಜುಲೈ 15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಲ್ಲದೇ ಮೀನುಗಾರಿಕೆ ಇಲಾಖೆಯ ಕೇಂದ್ರವಲಯ/ರಾಜ್ಯವಲಯ/ಜಿಲ್ಲಾ ವಲಯದ ವಿವಿಧ ಯೋಜನೆಗಳಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ಖರೀದಿ, ಮೀನುಮರಿ ಖರೀದಿಗೆ ಸಹಾಯ ಹಾಗೂ ಇತ್ಯಾದಿ ಯೋಜನೆಗಳಿಗೆ ಸಹಾಯಧನ ಪಡೆಯಲು ಆಸಕ್ತ ಮೀನುಗಾರರು, ಮೀನುಕೃಷಿಕ ಫಲಾನುಭವಿಗಳು ಸಂಬAದಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಅರ್ಜಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬAದಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.
ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...
-
ಅಸಂಘಟಿತ ವಲಯದ ಕಾರ್ಮಿಕರ ಪರಿಹಾರ ಧನ ಪಡೆಯಲು ಅರ್ಜಿ ಆಹ್ವಾನ ಯಾದಗಿರಿ ಜೂನ್15(ಕ.ವಾ): ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಸಂಘಟಿತ ಕಾರ್ಮಿಕರಿಗೆ ಕೊವಿಡ್-19 ಪ...
-
ಮೊಬೈಲ್, ವಾಹನ ಹರಾಜು ಮುಂದೂಡಿಕೆ ಯಾದಗಿರಿ, ಮಾರ್ಚ್ 19 (ಕರ್ನಾಟಕ ವಾರ್ತೆ): ಸುರಪುರದ ಸಿವಿಲ್ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳವರ ನ್ಯ...
-
ಕೊರೋನಾ ವೈರಸ್ ಭಯ ಬೇಡ; ಮುನ್ನೆಚ್ಚರಿಕೆ ಇರಲಿ ಜಿಲ್ಲೆಯಲ್ಲಿ 27 ಐಸೊಲೇಷÀನ್ ಬೆಡ್ ವ್ಯವಸ್ಥೆ - ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಯಾದಗಿರಿ, ಮಾರ್ಚ್ 16 (ಕರ್...