ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಯಾದಗಿರಿ,ಜೂನ್೨೫(ಕರ್ನಾಟಕ ವಾರ್ತಾ):- ಕೊಂಕಲ್ ೧೧೦ಕೆವಿ ಕೇಂದ್ರದಿAದ ಹೊರಹೋಗುವ ಎಲ್ಲಾ ೧೧ಕೆವಿ ಹಾಗೂ ೩೩ಕೆವಿ ಮಾರ್ಗಗಳಿಗೆ ನಿರಂತರ ವಿದ್ಯುತ್ ಪೂರೈಸಲು ಮತ್ತು ವಿದ್ಯುತ್ ಅವಘಡಯಾಗದಂತೆ ತಡೆಯಲು ೧೧೦ಕೆವಿ ವಿದ್ಯುತ್ ವಿತರಣಾ ಕೇಂದ್ರ ಕೊಂಕಲ್‌ನಲ್ಲಿ ಮುಂಜಾಗೃತ ಮಾನ್ಸೂನ್ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸಿತ್ತಿರುವ ಪ್ರಯುಕ್ತ ಶುಕ್ರವಾರ ಜೂನ್ ೨೫ರಂದು ಬೆಳಗ್ಗೆ ೧೦ ರಿಂದ ಸಾಯಂಕಾಲ ೪ ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿAದ ಸಾರ್ವಜನಿಕರು ಜೆಸ್ಕಾಂಗೆ ಸಹಕರಿಸುವಂತೆ ಗು.ವಿ.ಸ.ಕಂ.ನಿ (ವಿ) ಕಾರ್ಯ ಮತ್ತು ಪಾಲನೆ ವಿಭಾಗ ಯಾದಗಿರಿಯ ಕಾರ್ಯನಿರ್ವಾಹಕ ಅಭಿಯಂತರರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ಯಾದಗಿರಿ;ಜೂನ್.೨೪(ಕರ್ನಾಟಕ ವಾರ್ತಾ) ೨೦೨೧-೨೨ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ನ್ಯಾಯವಾದಿ ವೃತ್ತಿಯ ತರಬೇತಿಗಾಗಿ ಸಹಾಯಧನ ಮಂಜೂರಿಸಲು ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕಾನೂನು ಪದವಿ ಪಡೆದ ಪರಿಶಿಷ್ಟ ಜನಾಂಗಕ್ಕೆ ಸೇರಿರುವ, ೪೦ವರ್ಷದೊಳಗಿನ, ೨ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದ ಅರ್ಹ ಅಭ್ಯರ್ಥಿಗಳು ಜುಲೈ ೦೧ರಿಂದ ೧೪ರೊಳಗಾಗಿ ತಿತಿತಿ.sತಿ.ಞಚಿಡಿ.iಟಿಛಿ ವೈಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ ನಂತರ ಅರ್ಜಿ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ,ಶಹಾಪೂರ,ಸುರಪೂರ ಕಚೇರಿಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ