ಶಾಸಕರಿಂದ ಯಂತ್ರಚಾಲಿತ ತ್ರಿಚಕ್ರವಾಹನ ವಿತರಣೆ
ಸರಿಯಾದ ಮಾರ್ಗದರ್ಶನವಿದ್ದರೇ ವಿಕಲಚೇತನರು ಸಾಧನೆ ಮಾಡಬಲ್ಲರು
: ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ
ಯಾದಗಿರಿ;ಜೂನ್.21(ಕರ್ನಾಟಕ ವಾರ್ತಾ) ಅಂಗವೈಕಲ್ಯ ಶರೀರಕ್ಕೆ ಹೊರತು ಮನಸ್ಸಿಗಲ್ಲ, ಎಲ್ಲರಂತೆ ಅಂಗವಿಕಲರು ಸರಿಸಮಾನರು, ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದರೆ ಅಂಗವಿಕಲರು ಉತ್ತಮ ಸಾಧನೆ ಮಾಡಬಲ್ಲರು ಎಂದು ಯಾದಗಿರಿ ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ ಅಭಿಪ್ರಾಯಪಟ್ಟರು.
ನಗರದ ಶಾಸಕರ ಕಚೇರಿಯಲ್ಲಿ ಸೋಮವಾರ ಅಂಗವಿಕಲರಿಗೆ ಸ್ಥಳಿಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ 53 ಯಂತ್ರಚಾಲಿತ ತ್ರಿಚಕ್ರವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ತ್ರಿಚಕ್ರವಾಹನ ಸರಿಯಾಗಿ ಸದ್ಬಳಕೆಯಾಗಲಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವಿಕಲಚೇತನರ ಫಲಾನುಭವಿಗಳಿಗೆ ಅವರು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬಿ.ವಿ ದೀಪಿಕಾ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ