ಮಂಗಳವಾರ, ಜೂನ್ 29, 2021

 ಕೋವಿಡ್-19 ಲಸಿಕಾ ಮುಕ್ತ ಗ್ರಾಮ ಅಭಿಯಾನ, ಘೋಷಣ ಕಾರ್ಯಕ್ರಮ; 


* ಸರ್ಕಾರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪ್ರತಿ ಗ್ರಾಮಕ್ಕೆ ಲಸಿಕೆ ಕಳಿಸಿದ ಮೊದಲ ಅಧಿಕಾರಿ ಅಂದ್ರೆ ಯಾದಗಿರಿ ಜಿಲ್ಲಾಧಿಕಾರಿ ; ರಾಜುಗೌಡ ಶ್ಲಾಘನೆ

*ಲಸಿಕಾ ಮುಕ್ತ  ತಿಂಥಿಣಿ ಗ್ರಾಮ ಪಂಚಾಯತಿಗೆ  25 ಲಕ್ಷ ರೂಪಾಯಿ ವಿಶೇಷ ಅನುದಾನ ಘೋಷಣೆ : ಶಾಸಕ ರಾಜುಗೌಡ





ಯಾದಗಿರಿ: ಜೂನ್, 28, ( ಕರ್ನಾಟಕ ವಾರ್ತಾ);

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್ ಲಸಿಕೆ ಶೇಕಡಾ ನೂರರಷ್ಟು ಪ್ರತಿಶತ ಸಾಧನೆಗೈದು, ಜಿಲ್ಲೆಯಲ್ಲಿಯೇ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಿದ ತಿಂಥಣಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಗರಿಕರಿಗೆ ಅಭಿನಂದನಾ ಕಾರ್ಯಕ್ರಮವು  ತಿಂಥಣಿ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿ ,  ಯಾದಗಿರಿ ಜಿಲ್ಲೆಯಲ್ಲಿ ಈಡೀ ರಾಜ್ಯದಲ್ಲಿಯೇ ತಿಂಥಣಿ ಗ್ರಾಮ ಪಂಚಾಯತಿಯನ್ನು ಕೋವಿಡ್ ಲಸಿಕಾ ಮುಕ್ತ ಗ್ರಾಮ ಪಂಚಾಯತಿಯನ್ನಾಗಿ ಮಾಡಿದ್ದೇವೆ.
 ಕಳೆದ ಎರಡು ವಾರದ ಹಿಂದೆ ಶಾಸಕರು ಮತ್ತು ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಜಿಲ್ಲೆಯ ತಾಲೂಕಿನ ಗ್ರಾಮ ಪಂಚಾಯತಿಗಳನ್ನು ಆಯ್ಕೆಮಾಡಿ ಅಲ್ಲಿ ಶೇಕಡಾ ನೂರರಷ್ಟು ಲಸಿಕಾಕರಣ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಅದರಲ್ಲಿ ಸುರುಪುರ ತಾಲೂಕಿನ ತಿಂಥಣಿ ಗ್ರಾಮ ಪಂಚಾಯತಿ  ಆಯ್ಕೆ ಮಾಡಿ ಗುರಿ ತಲುಪಿದ್ದೇವೆ ಎಂದರು. ನಾಗರಿಕರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂದೆಯು ಹೀಗೆ ಸಹಕಾರ ನೀಡಬೇಕೆಂದರು. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯು ಶೇಕಡಾ ನೂರರಷ್ಟು ಸುರಕ್ಷಿತವಾಗಿದೆ. ನಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಜನ ಲಸಿಕೆ ಪಡೆದಿದ್ದಾರೆ. ಯಾರಿಗೂ ಕೂಡ ಅಡ್ಡ ಪರಿಣಾಮಗಳಾಗಿಲ್ಲ. ಜೂನ್ 21 ರಂದು ಲಸಿಕಾ ಮೇಳ ಆರಂಭಿಸಿ ಅವತ್ತಿನ ದಿನ 18 ಸಾವಿರ ಜನಕ್ಕೆ ಲಸಿಕೆ ನೀಡಿ ಗುರಿ ತಲುಪಿದ್ದೇವೆ ಎಂದರು. ನಮ್ಮ ಜಿಲ್ಲೆಯಲ್ಲಿ 8 ಲಕ್ಷದ 50 ಸಾವಿರ ಜನರು ಅರ್ಹ ಫಲಾನುಭವಿಗಳು ಇದ್ದಾರೆ‌. ಅವರೆಲ್ಲರಿಗೂ ಲಸಿಕೆ ನೀಡಲು ಪ್ರಯತ್ನಿಸೋಣ ಎಂದರು.

 ಸುರಪುರ ಶಾಸಕ ನರಸಿಂಹ ನಾಯಕ( ರಾಜುಗೌಡ) ಮಾತನಾಡಿ, ತಿಂಥಣಿ ಗ್ರಾಮ ಪಂಚಾಯತಿಯು ಭಾರತ ದೇಶವಿದ್ದಂತೆ. ನಮ್ಮ ದೇಶದ ಎಲ್ಲಾ ಕಡೆ ಎಲ್ಲಾ ಧರ್ಮ, ಜಾತಿ, ಪಂಗಡದವರು ಇದ್ದಾರೆ. ನಮ್ಮ ತಿಂಥಣಿಯಲ್ಲಿ ಅವರೆಲ್ಲರೂ ಇದ್ದು, ಜಾತಿ ಭೇದ ಮರೆತು ಎಲ್ಲಾರೂ ಒಂದಾಗಿ ಬಾಳುತ್ತಿದ್ದಾರೆ ಎಂದರು. ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಕೊರೋನಾ ಜಾಗೃತಿ ಮೂಡಿಸಿದ್ದಾರೆ. ತಿಂಥಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾದುದು ಎಂದರು. ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಆದೇಶವಾದ ತಕ್ಷಣದಲ್ಲಿಯೇ, ಜಿಲ್ಲೆಯಲ್ಲಿ ಕ್ವಾರಂಟೇನ್ ಮಾಡಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದ, ಲಸಿಕಾವನ್ನು ಪ್ರತಿಗ್ರಾಮಕ್ಕೆ ಕಳಿಸಿದ ಮೊದಲ  ಅಧಿಕಾರಿಗಳು ಅಂದ್ರೆ ಯಾದಗಿರಿ ಜಿಲ್ಲಾಧಿಕಾರಿಗಳು ಎಂದು ಶ್ಲಾಘಿಸಿದರು.  ಜಿಲ್ಲಾಡಳಿತದ ಪರಿಶ್ರಮದಿಂದ ಕೊರೋನಾ ಪಾಸಿಟಿವ್ ಪ್ರಮಾಣ ಕಡಿಮೆಯಾಗಿದೆ. ತಿಂಥಿಣಿ ಗ್ರಾಮ ಪಂಚಾಯಿತಿಯು ಲಸಿಕಾ ಮುಕ್ತ ಗ್ರಾಮ ಪಂಚಾಯನ್ನಾಗಿ ಮಾಡಿದ್ದರಿಂದ ಶಾಸಕರ ಅನುದಾನದಲ್ಲಿ 25 ಲಕ್ಷ ರೂಪಾಯಿಗಳನ್ನು ವಿಶೇಷ ಅನುದಾನ  ಕೊಡುವುದಾಗಿ ಶಾಸಕರು ಘೋಷಿಸಿದರು. ಇದು ಎಲ್ಲಾ ಗ್ರಾಮ ಪಂಚಾಯತಿಗಳು   ಲಸಿಕಾ ಮುಕ್ತ ಮಾಡಿದರೆ ಆ ಪಂಚಾಯತಿಗೂ, ನಗರಸಭೆಗೂ ಅನುದಾನ ಘೋಷಿಸಲಾಗುತ್ತದೆ ಎಂದರು. ಕೊರೊನಾ ಸಂಪೂರ್ಣ ನಾಶವಾಗುತನಕ ನಾವೇಲ್ಲರೂ ಮಾಸ್ಕ್ ಧರಿಸ, ಸಾಮಾಜಿಕ ಅಂತರ ಕಾಪಾಡಿಕೊಂಡು ಜಾಗೃತರಾಗಿರೋಣ ಎಂದರು.

":- ಅಲೆಮಾರಿ ಜನಾಂಗದವರ ಲಸಿಕಾಕರಣಕ್ಕೆ ಚಾಲನೆ; 
ಸುರಪುರ ತಾಲೂಕಿನ ಸತ್ಯಂ ಪೇಟ,  ವಣಕಿಹಾಳದಲ್ಲಿ ವಾರ್ಡ್ 31 ಮತ್ತು 32 ವಾರ್ಡಿನ  ಸುಮಾರು 600 ಅರ್ಹ ಫಲಾನುಭವಿ ಅಲೆಮಾರಿ ಜನಾಂಗದವರು ಕೋವಿಡ್ ಲಸಿಕೆಯನ್ನು ತಿರಸ್ಕರಿಸಿದ್ದರು. ಅಧಿಕಾರಿಗಳು ಕೊರೊನಾ ಜಾಗೃತಿ ಮೂಡಿಸಿ  ಮನವೊಲಿಸಿದ್ದಾರೆ. ಅವರಿಗೆ  ಲಸಿಕಾಕರಣಕ್ಕೆ ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಮತ್ತು ಸುರಪುರ ಶಾಸಕ ನರಸಿಂಹ ನಾಯಕ ( ರಾಜುಗೌಡ) ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಸುರಪುರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಸುರಪುರ ತಾಲೂಕು ವೈದ್ಯಾಧಿಕಾರಿ ರಾಜಾ ವೆಂಕಪ್ಪ ನಾಯಕ, ಆಯುಷ್ ವೈದ್ಯಾಧಿಕಾರಿ ವೀಣಾ ಇನ್ನಿತರರು ಉಪಸ್ಥಿತರಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...