ಶುಕ್ರವಾರ, ಜನವರಿ 15, 2021





ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

 ಯಾದಗಿರಿ,ಜ 15 (ಕ.ವಾ);-  ಕೋವಿಡ್-19 ಹಿನ್ನೆಲೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು   ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.

  

 ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್ ಅವರು ಶಿವಯೋಗಿ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.


ಈ ಸಂದರ್ಭದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೋಟ್ರೇಶ ಹಾಗೂ ಸಮಾಜದ ಮುಖಂಡರಾದ   ನಾಗಪ್ಪ ಬೆನಕಲ್, ಶರಣಪ್ಪ ಸಾತೂರಕರ, ಹಣಮಂತ, ಜಯಪ್ರಕಾಶ್, ಹಳ್ಳೆಪ್ಪ ಧೋತ್ರೆ, ಬಾಲಪ್ಪ ಮಂಜಲಕರ್, ಅಂಜಪ್ಪ ಯತ್ತರಕರ್, ಮಲ್ಲಿಕಾರ್ಜುನ ಚಿನ್ನಾಕಾರ್, ಲಘಮಣ್ಣ ಮುಂಡರಗಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 


ಅಕ್ರಮವಾಗಿ ಮರಳು ಸಾಗಣೆ: ಶಿಕ್ಷೆ

ಯಾದಗಿರಿ,ಜ 15 (ಕ.ವಾ);-ಅಕ್ರಮವಾಗಿ ಮರಳು ಸಾಗಣೆ ಮಾಡಿದ ಅರೋಪ ಸಾಬೀತಾಗಿದ್ದರಿಂದ ಅಪಾರಾಧಿಗೆ 10 ಸಾವಿರ ರೂಪಾಯಿ ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಕಾಡಪ್ಪ ಹುಕ್ಕೇರಿ ಅವರು ಆದೇಶ ನೀಡಿದ್ದಾರೆ.

2017 ರ ಮಾರ್ಚ್ 10 ರಂದು ಟ್ರಾö್ಯಕ್ಟರ್ ಚಾಲಕ ನಾಗಪ್ಪ ಗೋಗಿ ಶಹಾಪುರ ತಾಲೂಕಿನ ಹೈಯ್ಯಾಳ ಗ್ರಾಮದ ಹತ್ತಿರದ ಕೃಷ್ಣಾ ನದಿಯಿಂದ ಸರ್ಕಾಕ್ಕೆ ರಾಜಧನ ತುಂಬದೆ ಟ್ರಾö್ಯಕ್ಟರ್ ನಲ್ಲಿ ಮರಳು ಕಳವು ಮಾಡಿಕೊಂಡು ತೆರಳುತ್ತಿದ್ದಾಗ ಶಹಾಪುರ ತಾಲೂಕಿನ ಭೀಗುಡಿ- ಗೋಗಿ ರಸ್ತೆಯ ಬಳಿ ಪೊಲೀಸ್ರು ದಾಳಿ ಮಾಡಿ ಟ್ರಾö್ಯಕ್ಟರ್ ಜಪ್ತಿ ಮಾಡಿಕೊಂಡಿದ್ದರು. ಈ ಬಗ್ಗೆ ದೂರು ಸಹ ದಾಖಲಾಗಿತ್ತು. ಗೋಗಿ ಪೊಲೀಸ್ ಠಾಣೆಯ ಅಂದಿನ ಪಿ.ಎಸ್.ಐ ಕೃಷ್ಣಾ ಸುಬೇದಾರ ನ್ಯಾಯಾಲಯಕ್ಕೆ ಅರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಸಹಾಯಕ ವಕೀಲ ವಿನಾಯಕ ಕೋಡ್ಲಾ ಕಲಬುರ್ಗಿ ವಾದ ಮಂಡಿಸಿದರು.


ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ.

 ಯಾದಗಿರಿ,ಜ 15 (ಕ.ವಾ);-  ಕೋವಿಡ್-19 ಹಿನ್ನೆಲೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು   ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.

  

 ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್ ಅವರು ಶಿವಯೋಗಿ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.


ಈ ಸಂದರ್ಭದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೋಟ್ರೇಶ ಹಾಗೂ ಸಮಾಜದ ಮುಖಂಡರಾದ   ನಾಗಪ್ಪ ಬೆನಕಲ್, ಶರಣಪ್ಪ ಸಾತೂರಕರ, ಹಣಮಂತ, ಜಯಪ್ರಕಾಶ್, ಹಳ್ಳೆಪ್ಪ ಧೋತ್ರೆ, ಬಾಲಪ್ಪ ಮಂಜಲಕರ್, ಅಂಜಪ್ಪ ಯತ್ತರಕರ್, ಮಲ್ಲಿಕಾರ್ಜುನ ಚಿನ್ನಾಕಾರ್, ಲಘಮಣ್ಣ ಮುಂಡರಗಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸಹಾಯ ಧನಕ್ಕೆ ಅರ್ಜಿ: ಅವಧಿ ವಿಸ್ತರಣೆ

ಯಾದಗಿರಿ,ಜ 15 (ಕ.ವಾ);-  ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನ ಬೈಕ್ ಖರೀದಿಗೆ ಸಹಾಯ ಧನ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜನವರಿ.23 ರವರೆಗೆ ವಿಸ್ತರಿಸಲಾಗಿದೆ.

ಇ- ವಾಣಿಜ್ಯ ಸಂಸ್ಥೆಗಳಾದ Zomಚಿಣo, Sತಿiggಥಿ, Ubeಡಿ eಣs, ಂmಚಿzoಟಿ¸ ಸೇರಿದಂತೆ ಮೊದಲಾದ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು, ಮನೆಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, ಪ್ರವರ್ಗ-2ಎ, 3ಎ ಮತ್ತು 3ಬಿ ಸೇರಿದ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಸವಿತಾ, ಅಲೆಮಾರಿ/ಅರೆ ಅಲೆಮಾರಿಜನಾಂಗದವರು ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತು ಪಡಿಸಿ) ಯುವಕರಿಗೆ ಬೈಕ್ ಕೊಂಡುಕೊಳ್ಳಲು ನಿಗಮದಿಂದ ರೂ.25,000/-ಗಳ ಸಹಾಯ ಧನವನ್ನು  ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ಪಡೆಯುವುದು. ಈ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಅರ್ಜಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಜ.23 ರ ಸಂಜೆ 5.00 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್:ತಿತಿತಿ.ಜbಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಿ ಎಂದು ನಿಗಮದ ಜಿಲ್ಲಾ  ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪಡಿತರ ಚೀಟಿಗಳಿಗೆ ಅಕ್ಕಿ ಸೇರಿದಂತೆ 2 ಕೆ.ಜಿ. ಗೋಧಿ ಉಚಿತ ವಿತರಣೆ

ಯಾದಗಿರಿ,ಜ 15 (ಕ.ವಾ);- ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆಯ 29,354 ಪಡಿತರ ಚೀಟಿಗಳಿಗೆ ಎನ್.ಎಫ್.ಎಸ್.ಎ ಅಡಿಯಲ್ಲಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಮತ್ತು 2,35,318 ಬಿಪಿಎಲ್ ಪಡಿತರ ಚೀಟಿಗಳ 8,48,991 ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ ಓ.ಎಮ್.ಎಸ್.ಎಸ್.(ಡಿ) ಅಡಿಯಲ್ಲಿ ಬಿ.ಪಿ.ಎಲ್. ಪಡಿತರ ಚೀಟಿಗಳಿಗೆ 2 ಕೆ.ಜಿ. ಗೋಧಿಯನ್ನು ಉಚಿತವಾಗಿ ವಿತರಿಸಲು ಬಿಡುಗಡೆ ಮಾಡಲಾಗಿದೆ.

ಡಿಸೆಂಬರ್-2020 ಆಹಾರಧಾನ್ಯ ಪಡೆಯಲು ಇಚ್ಛೆಯನ್ನು ವ್ಯಕ್ತಪಡಿಸಿದ ಆದ್ಯತೇತರ ಪಡಿತರ ಚೀಟಿ ಹೊಂದಿದವರಿಗೆ ಏಕ ಸದಸ್ಯರಿಗೆ ಅಕ್ಕಿ 5 ಕೆಜಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆಜಿ ಅಕ್ಕಿ ಯನ್ನು ಪ್ರತಿ ಕೆಜಿಗೆ ರೂ,15/- ರಂತೆ ನೀಡಿ ಆಹಾರಧಾನ್ಯವನ್ನು ಪಡೆಯಬಹುದಾಗಿದೆ.

 ಜಿಲ್ಲೆಯ ಆಯ್ದ 399 ನ್ಯಾಯಬೆಲೆ ಅಂಗಡಿಗಳಲ್ಲಿ ಬಿ.ಪಿ.ಎಲ್. ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರ ಓ.ಟಿ.ಪಿ. ಮುಖಾಂತರ ಅಥವಾ ಬೆರಳಚ್ಚನ್ನು/ಬಯೋಮೆಟ್ರಿಕ್ ಪಡೆದು ಪಡಿತರ ವಿತರಿಸಲು (Poiಟಿಣ oಜಿ Sಚಿಟe – PಔS Shoಠಿ ಒoಜuಟe) ವ್ಯವಸ್ಥೆ ಮಾಡಲಾಗಿದೆ. ಕುಟುಂಬದ ಸದಸ್ಯರಿಗೆ ಲಭ್ಯವಾಗಿರುವ ಅರ್ಹತಾ ಪ್ರಮಾಣವನ್ನು ತಿಳಿದುಕೊಂಡು ಅಕ್ಕಿಯನ್ನು ಪಡೆದುಕೊಳ್ಳಲು ಸೂಚಿಸಿಲಾಗಿದೆ. 

ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆದುಕೊಳ್ಳಲು ಯಾವುದೇ ದೂರು ಇದ್ದಲ್ಲಿ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಗೆ, ಆಯಾ ತಾಲೂಕಿನ ತಹಸೀಲ್ದಾರ ಅಥವಾ ಸಹಾಯವಾಣಿ 1967 ಸಂಖ್ಯೆಗೆ ದೂರನ್ನು ದಾಖಲು ಮಾಡಬಹುದು.

ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ನ್ಯಾಯಬೆಲೆ ಅಂಗಡಿಯಿAದ ಆಹಾರಧಾನ್ಯವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಜ.29ರಂದು ವಾಹನಗಳ ಬಹಿರಂಗ ಹರಾಜು

ಯಾದಗಿರಿ,ಜ 15 (ಕ.ವಾ);- ಮೋಟಾರು ವಾಹನ ತೆರಿಗೆ ಕಾಯ್ದೆಯಡಿ ತೆರಿಗೆ ಸಂದಾಯ ಮಾಡದ 

ಕಾರಣ ಸ್ವಾಧೀನಪಡಿಸಿಕೊಂಡಿರುವ ವಾಹನಗಳನ್ನು ಹಾಲಿ ಇರುವ ಸ್ಥಿತಿಯಲ್ಲಿಯೇ ಬಹಿರಂಗ 

ಹರಾಜು ಹಾಕಿ ಸರ್ಕಾರಕ್ಕೆ ಬರಬೇಕಾದ ಬಾಕಿ ತೆರಿಗೆಯನ್ನು ಸಂಗ್ರಹಿಸಲು ಜ.29 ರಂದು ಬೆಳಗ್ಗೆ 10 

ಗಂಟೆಯಿAದ ಮಧ್ಯಾಹ್ನ 02:00 ರ ಸಮಯದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ 

ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.


 ತೆರಿಗೆ ಸಂದಾಯ ಮಾಡಿ ವಾಹನವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಂಬAಧಪಟ್ಟ 

ವಾಹನಗಳ ಮಾಲೀಕರಿಗೂ ಹಾಗೂ ಹಣಕಾಸು ಸಂಸ್ಥೆಯವರಿಗೆ ನೋಟಿಸು ಮುಖಾಂತರ 

ತಿಳಿಸಿದ್ದರೂ ಸಹ ತೆರಿಗೆ ಮತ್ತು ದಂಡ ಸಂದಾಯ ಮಾಡಿ ವಾಹನವನ್ನು ಮರಳಿ ಪಡೆಯಲು 

ಮುಂದೆ ಬಂದಿರುವದಿಲ್ಲ. ಆದ್ದರಿಂದ ಕರ್ನಾಟಕ ಮೋಟಾರು ವಾಹನ ತೆರಿಗೆ 27 ಬಿ ಮತ್ತು  

19.02.1997 ರ ಸಾರಿಗೆ ಆಯುಕ್ತರ ಸುತ್ತೋಲೆಯ ಪ್ರಕಾರ ವಾಹನಗಳನ್ನು ಹರಾಜು ಹಾಕಲಾಗುತ್ತಿದೆ    

ಎಂದರು. 


ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಕಡ್ಡಾಯವಾಗಿ ಜಿಎಸ್‌ಟಿ ಟೀನ್ ನಂಬರ್ ಹೊಂದಿರಬೇಕು ಹಾಗೂ ಸರ್ವೋಚ್ಛ ನ್ಯಾಯಾಲಯ ವಾಹನಗಳ ಮಾಹಿತಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ 

ಅಳವಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಅಧೀಕ್ಷಕರಾದ ಮೌನೇಶ ಅವರ ದೂರವಾಣಿ ಸಂಖ್ಯೆ 9886435781 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಹನಿ ನೀರಾವರಿ ವ್ಯವಸ್ಥೆ ಅಳವಡಿಕೆಗೆ ಅರ್ಜಿ ಆಹ್ವಾನ

ಯಾದಗಿರಿ. ಜ.15 (ಕರ್ನಾಟಕ ವಾರ್ತೆ) 2020-21ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯ ಯೋಜನೆ ಸೂಕ್ಷö್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತಬಳಕೆಗಾಗಿ ಹನಿ ನೀರಾವರಿ ಅಳವಡಿಕೆಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.  


ಸಾಮಾನ್ಯ, ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಈ ಸಹಾಯಧನ ಲಭ್ಯವಿದ್ದು, ಈ ವರ್ಗಗಳ ಆಸಕ್ತ ರೈತರು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ  ಸಂಬAಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.






ಮಂಗಳವಾರ, ಜನವರಿ 12, 2021

 ಮಹಿಳಾ ಕಾಯಕೋತ್ಸವ ಅಭಿಯಾನದ ಯಶಸ್ವಿಗೆ ಸೂಚನೆ

ಯಾದಗಿರಿ,ಜ 12 (ಕ.ವಾ);- ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳ್ಳುತ್ತಿರು ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವ ಸಲುವಾಗಿ ಜಿಲ್ಲೆಯಲ್ಲಿ ಜನವರಿ 15ರಿಂದ ಮಾರ್ಚ್ 15ರವರೆಗೆ ನಡೆಯುವ ಮಹಿಳಾ ಕಾಯಕೋತ್ಸವ ಯಶಸ್ವಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪವಾರ ಅವರು ಸೂಚಿಸಿದರು.
ಅವರು ಮಂಗಳವಾರ ಗುರುಮಿಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರು ವಿಡಿಯೋ ಸಂವಾದದ ಮೂಲಕ ನೀಡಿದ ನಿರ್ದೇಶನದಂತೆ ಜನವರಿ 15ರಿಂದ ಮಾರ್ಚ್ 15ರವರೆಗೆ ಜಿಲ್ಲೆಯಲ್ಲಿ ನಡೆಯುವ ಮಹಿಳಾ ಕಾಯಕೋತ್ಸವ ಅಭಿಯಾನ ಆಯೋಜಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನರೇಗಾ ಯೋಜನೆಯಡಿ ಮಹಿಳೆಯರು ಭಾಗವಹಿಸುವಿಕೆ ಕನಿಷ್ಠ ಶೇ.5ರಷ್ಟು ಹೆಚ್ಚಿಸಿ, ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸಬೇಕು. ಕಾಮಗಾರಿ ಸ್ಥಳಗಳನ್ನು ಮಹಿಳೆ ಹಾಗೂ ಮಕ್ಕಳ ಸ್ನೇಹಿಯಾಗಿ ಮಾಡಬೇಕು. ನರೇಗಾ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳು ಭಾಗವಹಿಸುವಿಕೆಗೆ ಉತ್ತೇಜನ ನೀಡಿ, ಮಹಿಳೆಯರು ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ, ಮಹಿಳಾ ಕಾಯಕೋತ್ಸವ ಬಂಧುಗಳಿಗೆ ತರಬೇತಿ ನೀಡಬೇಕು ಎಂದು ಅವರು ಹೇಳಿದರು.

ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ದನ, ಕುರಿ, ಮೇಕೆ, ಹಂದಿ ಹಾಗೂ ಕೋಳಿ ಸಾಕಾಣಿಕೆ ಶೆಡ್ ನಿರ್ಮಿಸಿಕೊಳ್ಳಲು, ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಭೂ ಅಭಿವೃದ್ಧಿ (ಸಮ ಬದು), ಕೃಷಿ ಹೊಂಡ, ತಡೆಗೋಡೆ, ಚೆಕ್ ಡ್ಯಾಮ್, ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಹಾಗೂ ತೋಟಗಾರಿಕೆ ಬೆಳೆಗಳ ನಾಟಿ ಮಾಡಲು ಸಹ ಅವಕಾಶವಿದ್ದು ಮಹಿಳೆಯರು ಇದರ ಸದುಪಯೋಗ ಪಡೆಯುವಂತೆ ಅರಿವು ನೀಡಬೇಕೆಂದು ಅವರು ತಿಳಿಸಿದರು.
ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಐದು ವರ್ಷದೊಳಗಿನ ಮಕ್ಕಳ ಪಾಲನೆ, ಕೂಲಿ ಕಾರ್ಮಿಕರಿಗೆ ಕೆಲಸ ನಿರ್ವಸುವ ಸ್ಥಳದಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಗುರುಮಿಠಕಲ್ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಬಸವರಾಜ, ಯಾದಗಿರಿ ತಾಲ್ಲೂಕು ಪಂಚಾಯತಿ ಟಿಸಿ ಶರಣಪ್ಪ, ಚಿನ್ನಾಕಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರಭದ್ರಪ್ಪ, ಕಾರ್ಯದರ್ಶಿ ಶರಣಪ್ಪ, ಬಿಲ್ ಕಲೆಕ್ಟರ್ ಮಂಜುನಾಥ, ಡಿಇಒ ಜಗನ್, ಟಿಐಇಸಿ ಬಸಪ್ಪ ಹಾಗೂ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.









ಶ್ರೀಮೈಲಾರಲಿಂಗೇಶ್ವರ, ಶ್ರೀಬಲಭೀಮೇಶ್ವರ, ಶ್ರೀಹೈಯಾಳಲಿಂಗೇಶ್ವರ ಸೇರಿದಂತೆ ಇತರೆ ಜಾತ್ರೆಗಳು ರದ್ದು

ಯಾದಗಿರಿ, ಜ.12 (ಕರ್ನಾಟಕ ವಾರ್ತೆ):- ಕೋವಿಡ್-19 ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿರುವ ನಿಟ್ಟಿನಲ್ಲಿ 2021ನೇ ಸಾಲಿನ ಜನವರಿಯಲ್ಲಿ ನಡೆಯಬೇಕಿದ್ದ ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ, ಶಹಾಪೂರ ತಾಲೂಕಿನ ಬಿ-ಗುಡಿ ಗ್ರಾಮದ ಶ್ರೀಬಲಭೀಮೇಶ್ವರ, ದಿಗ್ಗಿ ಗ್ರಾಮದ ಶ್ರೀ ಸಂಗಮೇಶ್ವರ, ಹಾಗೂ ವಡಗೇರಾ ತಾಲೂಕಿನ ಹೈಯಾಳ ಗ್ರಾಮದ ಶ್ರೀಹೈಯಾಳಲಿಂಗೇಶ್ವರ ದೇವಸ್ಥಾನಗಳಲ್ಲಿ ಜರುಗಲಿರುವ ಜಾತ್ರಾ ಉತ್ಸವಗಳು ರದ್ದುಪಡಿಸಲಾಗಿದ್ದು, ಭಕ್ತಾಧಿಗಳು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಜಾತ್ರಾ ಉತ್ಸವಗಳಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳು ಹಾಗೂ ಅಂತರಾಜ್ಯಗಳಿAದಲ್ಲೂ ಭಕ್ತಾಧಿಗಳು ಆಗಮಿಸುವರು, ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು 2021ರ ಜನವರಿ ನಡೆಯಬೇಕಿದ್ದ ವಿವಿಧ ದೇವಸ್ಥಾನಗಳ ಜಾತ್ರಾ ಉತ್ಸವವನ್ನು ರದ್ದುಪಡಿಸಲಾಗಿದೆ, ಆದ ಕಾರಣ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ಯಾದಗಿರಿ, ಜ.12 (ಕರ್ನಾಟಕ ವಾರ್ತೆ):- ತುಮಕೂರ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಸಂಸ್ಕೃತ ಪಾಠಶಾಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ತರಗತಿಗಳು ಜ.3 ರಿಂದ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ, ವಸತಿ ಮತ್ತು ಊಟದ ವ್ಯವಸ್ಥೆಯಿದ್ದು ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 9449926809 ಕರೆ ಮಾಡಬಹುದಾಗಿದೆ. ಎಂದು ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕ್ರೀಡಾಶಾಲೆ ಹಾಗೂ ಕ್ರೀಡಾ ನಿಲಯಗಳ ಆಯ್ಕೆಗೆ ದೈಹಿಕ ಪರೀಕ್ಷೆ

ಯಾದಗಿರಿ.ಜ12 (ಕ.ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ 2021-22ನೇ ಸಾಲಿನಲ್ಲಿ ಕ್ರೀಡಾ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರತಿಭಾವಂತ ಕ್ರೀಡಾಪಟುಗಳ ದೈಹಿಕ ಪರೀಕ್ಷೆಯನ್ನು 2021ರ ಜನವರಿ 15 ರಂದು ಏರ್ಪಡಿಸಲಾಗಿದೆ ಎಂದು ಯಾದಗಿರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಅವರು ತಿಳಿಸಿದ್ದಾರೆ.
ಅಥ್ಲ್ರೇಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಕುಸ್ತಿ ಹಾಗೂ ಫುಟಬಾಲ್ ಕ್ರೀಡೆಗಳ ಆಯ್ಕೆಗಾಗಿ 15 ರಂದು ಬೆಳಿಗ್ಗೆ 9 ಗಂಟೆಯಿAದ ಜಿಲ್ಲಾ ಕ್ರೀಡಾಗಂಣದಲ್ಲಿ ನಿಗದಿಪಡಿಸಲಾಗಿದೆ.ಕಿರಿಯರ ವಿಭಾಗದ ಅಥ್ರ‍್ಲೇಟಿಕ್ಸ್ ಹಾಗೂ ಹಾಕಿ ಕ್ರೀಡೆಗಳ ಆಯ್ಕೆಗಾಗಿ ಪ್ರಸ್ತುತ 7ನೇ ತರಗತಿಯಲ್ಲಿ ಓದುತ್ತಿರುವ ಹಾಗೂ ದಿನಾಂಕ: 01-06-2007ರ ನಂತರ ಜನಿಸಿದ ಬಾಲಕ, ಬಾಲಕಿಯರು ಭಾಗವಹಿಸಬಹುದಾಗಿದೆ. ಪ್ರಥಮ ಹಂತದಲ್ಲಿ ಆಯ್ಕೆಯಾದ ಕ್ರೀಡಾ ಪಟುಗಳು ದ್ವಿತೀಯ ಹಂತದ ದೈಹಿಕ ಪರೀಕ್ಷೆ ಜ 16 ರಂದು ಶನಿವಾರ ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ.

ಹಿರಿಯರ ವಿಭಾಗದ ಅಥ್ಲ್ರೇಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಕುಸ್ತಿ ಹಾಗೂ ಫುಟಬಾಲ್ ಕ್ರೀಡೆಗಳ ಆಯ್ಕೆಗಾಗಿ ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ ಹಾಗೂ ದಿನಾಂಕ: 01-06-2003ರ ನಂತರ ಜನಿಸಿದ ಯುವಕ, ಯುವತಿಯರು ನೇರವಾಗಿ 2021ರ ಜನವರಿ 17 ರಂದು ಬೆಳಿಗ್ಗೆ 9 ಗಂಟೆಯಿAದ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುವ ನೇರವಾಗಿ ವಿಭಾಗೀಯ ಮಟ್ಟದಲ್ಲಿ ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೋಮವಾರ, ಜನವರಿ 11, 2021

 ರಾಷ್ಟಿçÃಯ ಮತದಾರರ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಯಾದಗಿರಿ,ಜ 11 (ಕ.ವಾ);- ಯುವ ಮತದಾರರನ್ನು ಮತದಾರರ ಪಟ್ಟಿಗೆ ನೋಂದಾಯಿಸುವುದು ಹಾಗೂ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಯಾದ ಶಿಲ್ಪಾ ಶರ್ಮಾ ಅವರು ಹೇಳಿದರು.
ಜನವರಿ 25 ರಂದು ನಡೆಯುವ ರಾಷ್ಟಿçÃಯ ಮತದಾರರ ದಿನಾಚರಣೆ ಅಂಗವಾಗಿ ವಿವಿಧ ಶಾಲಾ – ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆಸಲಾಯಿತು.
ರಾಜ್ಯ ಮಟ್ಟದ ಸ್ಪರ್ಧಾ ಚಟವಟಿಕೆಗಳಾದ ಪ್ರಬಂಧ ಸ್ಪರ್ಧೆ (ಕನ್ನಡ ಹಾಗೂ ಇಂಗ್ಲೀಷ) ಮತ್ತು ಭಿತ್ತಿ ಪತ್ರ, ಕೊಲಾಜ್ ಮೇಕಿಂಗ್ ನಡೆಸಲು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪ್ರೌಢಶಾಲೆ ಸೇರಿದಂತೆ ಇತರ ಕಾಲೇಜಿನ ನಾಲ್ಕು ವಿಭಾಗಗಳ ವಿದ್ಯಾರ್ಥಿಗಳಿಂದ ರಾಜ್ಯ ಮಟ್ಟದ ಸ್ಪರ್ಧೆಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ವಿಡಿಯೋ ಕಾನ್ಪೆರೆನ್ಸ್ ಮುಖಾಂತರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯಾದ ಮುಕ್ಕಣ್ಣ ಕರಿಗಾರ, ಡಿ.ಡಿ.ಪಿ.ಯುರಾದ ಚಂದ್ರಕAತ ಹಳ್ಳಿ, ಡಿ.ಡಿ.ಪಿ.ಐರಾದ ಶ್ರೀನಿವಾಸ ರಡ್ಡಿ, ಜಿಲ್ಲಾ ಪಂಚಾಯಿತಿ ಎನ್.ಆರ್.ಡಿ.ಎಮ್.ಎಸ್.ರಾದ ಸಿದ್ದಾರಡ್ಡಿ, ಪ್ರಾಚಾರ್ಯರಾದ ವೆಂಕರಾಮನ ಕುಲಕರ್ಣಿ ಹಾಗೂ ಕಿರಣಸಿಂಗ್, ದೀಪಿಕಾ, ಭವಾನಿ, ಪ್ರಜ್ಞೆ ಲಕ್ಷಿö್ಮÃ ಸೇರಿದಂತೆ ಇತರರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
Image may contain: 2 people, table and indoor

 ಭಾರತ ಸ್ಟೇಜ್-4 ವಾಹನಗಳ ನೋಂದಣಿಗೆ 16 ರವರೆಗೆ ಕಾಲಾವಕಾಶ

ಯಾದಗಿರಿ,ಜ 11 (ಕ.ವಾ):- ಭಾರತ ಸ್ಟೇಜ್-4 ವಾಹನಗಳು ಇ-ಪೋರ್ಟಲ್‌ನಲ್ಲಿ ನಮೂದಿತವಾಗಿ 2020 ರ ಮಾರ್ಚ್ 31 ರೊಳಗಾಗಿ ತಾತ್ಕಾಲಿಕವಾಗಿ ನೋಂದಣಿ ಪಡೆದಿರುವ ವಾಹನಗಳು 2021ರ ಜನವರಿ 16 ರೊಳಗಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. 

ಜಿಲ್ಲೆಯ ಸಾರ್ವಜನಿಕರು ಹಾಗೂ ವಾಹನ ಅಧೀಕೃತ ಮಾರಾಟಗಾರರು ಭಾರತ್ ಸ್ಟೇಜ್-4 ವಾಹನಗಳನ್ನು ನೋಂದಣಿ ಮಾಡಿಕೊಂಡು, ಸದುಪಯೋಗ ಪಡೆಯಬೇಕೆಂದು ಯಾದಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಕರೆ ಮಾಡಿ ಯೋಜನೆ ಮಾಹಿತಿ ಪಡೆಯಲು ಕೋರಿಕೆ

ಯಾದಗಿರಿ,ಜ 11 (ಕ.ವಾ):- ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 

 ಸಾಧನ ಸಲಕರಣೆ, ಯಂತ್ರಚಾಲಿತ ತ್ರಿಚಕ್ರವಾಹನ, ಆಧಾರ ಯೋಜನೆ, ಟಾಕಿಂಗ್ ಲ್ಯಾಪ್‌ಟಾಪ್, ವಿವಾಹ ಪ್ರೋತ್ಸಾಹಧನ ಯೋಜನೆ, ಸ್ವಯಂ ಉದ್ಯೋಗದಡಿ ಹೊಲಿಗೆಯಂತ್ರ, ವೈದ್ಯಕೀಯ ಪರಿಹಾರ ನಿಧಿ, ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ಸ್ಪರ್ಧಾಚೇತನ ಯೋಜನೆಯ ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿಗೆ ದೂ: 08473-253531 ಸಂಪರ್ಕಿಸಲು ವಿಕಲಚೇತನರ ಸಹಾಯವಾಣಿ ಕೇಂದ್ರದ ಮಾಹಿತಿ ಸಲಹೆಗಾರರು ಪ್ರಕಟಣೆಯಲ್ಲಿ ಕೋರಿದ್ದಾರೆ.   


20 ರಂದು ಉದ್ಯೋಗ ಮೇಳ

ಯಾದಗಿರಿ,ಜ 11 (ಕ.ವಾ):-  ರಾಷ್ಟಿçÃಯ ವೃತ್ತಿ ಸೇವಾ ಅಡಿಯಲ್ಲಿ (ಓಅSP) ಒಂದು ದಿನದ ಉದ್ಯೋಗ ಮೇಳವನ್ನು ಇದೇ ಜನವರಿ 20ರ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ  ಆಯೋಜಿಸಲಾಗಿದೆ. 

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವಿ ಹಾಗೂ ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಹಾಗೂ ವಿಕಲಚೇತನ ಅಭ್ಯರ್ಥಿಗಳು ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ 9448250868, 08473-253718ಗೆ  ಕರೆ ಮಾಡಬಹುದು. 

ಅಲ್ಲದೆ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡುವುದಿಲ್ಲ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಚಿವ ಪ್ರಭು ಚವ್ಹಾಣ ಅವರ ಪ್ರವಾಸ

ಯಾದಗಿರಿ,ಜ 11 (ಕ.ವಾ):- ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು.ಬಿ.ಚವ್ಹಾಣ ಅವರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. 

ಅವರು ಜ.12ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಯಾದಗಿರಿ ನಗರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಜನಸೇವಕ ಕಾರ್ಯಕ್ರಮದಲ್ಲಿ ಭಾಗವಹಿಸುವರು ಹಾಗೂ ರಾತ್ರಿ ವಾಸ್ತವ್ಯ ಹೂಡುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


ಜಿಲ್ಲೆಯಲ್ಲಿಂದು 02 ಕೋವಿಡ್-19 ಪಾಸಿಟಿವ್ ಪ್ರಕರಣ 

ಯಾದಗಿರಿ,ಜ 11 (ಕ.ವಾ)- ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿAದ ಆಸ್ಪತ್ರೆಗೆ ದಾಖಲಾದವರಲ್ಲಿ ಜ.11 ರ ಸೋಮವಾರ 5 ಮಂದಿ ಸಂಪೂರ್ಣ ಚೇತರಿಸಿಕೊಂಡಿದ್ದು, ಒಟ್ಟಾರೆ ಇಲ್ಲಿಯವರೆಗೆ 10,529 ಮಂದಿ ಗುಣಮುಖರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ. ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 02 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,627 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ 37 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 




 


ಶುಕ್ರವಾರ, ಜನವರಿ 8, 2021

 ಕೋವಿಡ್ ಲಸಿಕೆ ಅಣಕು ಪ್ರಯೋಗಕ್ಕೆ ಜಿಲ್ಲಾಧಿಕಾರಿಯಿಂದ ಚಾಲನೆ

ಯಾದಗಿರಿ,ಜ 08 (ಕ.ವಾ);- ಕೋವಿಡ್-19 ಲಸಿಕೆ ಪ್ರಯೋಗದ ಅಣಕು ಪ್ರದರ್ಶನಕ್ಕೆ ಯಾದಗಿರಿ ಜಿಲ್ಲಾಧಿಕಾರಿಯಾದ ಡಾ.ರಾಗಪ್ರಿಯ ಆರ್. ಅವರು ಚಾಲನೆ ನೀಡಿದರು.
ನಗರದ ಹೊಸ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಸರಳ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ಲಸಿಕಾಕರಣದ ತಾಲೀಮು ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಲಸಿಕೆ ನೀಡಲು ಸ್ಥಾಪಿಸಲಾಗಿರುವ, ಪ್ರವೇಶ ಮತ್ತು ನೋಂದಣಿ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿಗಳನ್ನು ಪರಿಶೀಲಿಸಿದ ಅವರು, ಕೊವಿನ್ ಸಾಫ್ಟ್ವೇರ್ ನಲ್ಲಿ ನೋಂದಣಿ ಮಾಡುವ ಕ್ರಮ, ಲಸಿಕೆಯ ಸಂಗ್ರಹ, ಸಾಗಣೆ, ಡಿ-ಫ್ರೀಜ್ ಕಾರ್ಯಕ್ಕೆ ಮಾಡಿಕೊಂಡಿರುವ ಸಿದ್ಧತೆಗಳು ಹಾಗೂ ತಾಲೀಮು ಕಾರ್ಯವನ್ನು ವೀಕ್ಷಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಐದು ಸರ್ಕಾರಿ ಹಾಗೂ ಒಂದು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 06 ಲಸಿಕಾ ಪ್ರಯೋಗ ನಡೆಸಲಾಗುತ್ತಿದೆ. ಮುಂದೆ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಾರಿಯರ್ಸಗಳಿಗೆ ಲಸಿಕೆ ನೀಡಲು 53 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ ಅಲ್ಲಿನ ಎಲ್ಲಾ ಸಿಬ್ಬಂದಿ ವರ್ಗದ ಮಾಹಿತಿ ಸಂಗ್ರಹಿಸಲಾಗಿದೆ.ಇನ್ನೂ ಹೆಸರುಗಳಿದ್ದರೆ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಸ್ಪತ್ರೆಯ ಮುಖ್ಯಸ್ಥರಾದ ಡಾ.ಸಂಜೀವ್ ಕುಮಾರ್ ರಾಯಚೂರುಕಾರ್, ಆರ್.ಎಮ್.ಒ ವಿಭಾಗದ ಮುಖ್ಯಸ್ಥರಾದ ಡಾ.ನೀಲಮ್ಮ , ದಂತ ಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ ಪ್ರಸಾದ್, ಬಿ.ಎನ್.ಟಿ ವಿಭಾಗದ ಮುಖ್ಯಸ್ಥರಾದ ಡಾ.ರಾಮನಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಂಗಳವಾರ, ಜನವರಿ 5, 2021

 56 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ * ಗುಣಮಟ್ಟದ ಚಿಕಿತ್ಸೆ ಲಭ್ಯ  

300 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆ: ಸಕಲ ಸೌಕರ್ಯ!

ಯಾದಗಿರಿ,ಜ.5(ಕರ್ನಾಟಕ ವಾರ್ತೆ):- 56 ಕೋಟಿ ರೂ.ವೆಚ್ಚದಲ್ಲಿ ಯಾದಗಿರಿ ಸಮೀಪದ ಮುದ್ನಾಳ ಬಳಿ ನಿರ್ಮಾಣಗೊಂಡಿರುವ 300 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆಯಲ್ಲಿ ಸಕಲ ಸೌಕರ್ಯ ಒಳಗೊಂಡಿದ್ದು, ಜ.6ರಂದು ಮುಖ್ಯಮಂತ್ರಿಗಳಿAದ ನಾಡಿಗೆ ಲೋಕಾರ್ಪಣೆಗೊಳ್ಳಲಿದೆ.


ಇನ್ಮುಂದೆ ಗಿರಿನಾಡಿನ ಜನರು ಚಿಕಿತ್ಸೆಗಾಗಿ ಕಲಬುರಗಿ,ರಾಯಚೂರು,ಸೋಲಾಪುರ ಸೇರಿದಂತೆ ಇತರೆಡೆ ಮುಖಮಾಡದೇ ತಮ್ಮ ಜಿಲ್ಲಾಕೇಂದ್ರದಲ್ಲಿ ಸಕಲ ಸೌಕರ್ಯ ಒಳಗೊಂಡು ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ನೂತನ ಜಿಲ್ಲಾಸ್ಪತ್ರೆಯು ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಯಿಂದ 3 ಕಿ.ಮೀ ಅಂತರವಿದೆ.ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಯಲ್ಲಿ ನೆಲ ಮಹಡಿಯಲ್ಲಿ ಸ್ವಾಗತ ಕೌಂಟರ್, ಹೊರ ರೋಗಿ ವಿಭಾಗ (ಓ.ಪಿ.ಡಿ), ತಪಾಸಣೆ ಕೊಠಡಿ, ಮೈನರ್ ಶಸ್ತç ಕೊಠಡಿ ರೋಗ ತಪಾಸಣೆ ಹಾಗೂ ಇನ್ನೀತರ ಪ್ರಮುಖವುಗಳು ಇರಲಿವೆ.

ಜಿಲ್ಲಾಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಮೈನರ್ ಶಸ್ತç ಕೊಠಡಿ, ಐ.ಸಿ.ಯು, ಯುರೋಲಜಿ, ಡರ್ಮಾಟಾಲಾಜಿ, ಇ.ಎನ್.ಟಿ ಸೆೆಂಟರ್, ಡಯಾಲೈಸಿಸ್, ಸಭಾಂಗಣ ಇನ್ನೀತರ ಪ್ರಮುಖವುಗಳು ಒಳಗೊಂಡಿದೆ.

ಎರಡನೇ ಮಹಡಿಯಲ್ಲಿ ಮೇಜರ್ ಶಸ್ತç ಕೊಠಡಿ -2 , ಮಾಡುಲರ್ ಶಸ್ತç ಕೊಠಡಿ, ರಕ್ತ ನಿಧಿ, ಗ್ರಂಥಾಲಯ , ಸ್ಪೇಷಲ್ ವಾರ್ಡ್, ಮೂರನೇ ಮಹಡಿಯಲ್ಲಿ ಮೇಜರ್ ಓಟಿ , ಪುನರ್‌ವಸತಿ ಸೆಂಟರ್ ಲ್ಯಾಬ್, ಸ್ಪೆಷಲ್ ವಾರ್ಡಗಳು, ಪ್ಯಾಂಟಿ ಸ್ಟೋರ್ ಇವೆ.

ಟೆರಸ್ ಮಹಡಿಯಲ್ಲಿ ಎ.ಹೆಚ್.ಯು ಕೊಠಡಿ, ಲಿಫ್ಟ್ ಮಶೀನ್ ಕೋಣೆ,  ಸಿಂಟೆಕ್ಸ್ ಟ್ಯಾಂಕ್‌ಗಳು, ಸೋಲಾರ್ ವಾಟರ್ ಹೀಟರ್ಸ್ ಇವೆ.

ನೂತನ ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗಾಗಿಯೇ ವಸತಿ ಗೃಹಗಳನ್ನು ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿದ್ದು ನೆಲಮಹಡಿ ಹಾಗೂ ಮೊದಲ ಮಹಡಿ ಸೇರಿದಂತೆ 8 ಯೂನಿಟ್ ಹೊಂದಿದೆ. ಶುಶ್ರೂಕಿಯರಿಗಾಗಿ ಮೂರು ಮಹಡಿಯಲ್ಲಿ 12ಯೂನಿಟ್‌ಗಳಲ್ಲಿ ವಸತಿಗೃಹ ನಿರ್ಮಿಸಲಾಗಿದೆ. ಗ್ರೂಪ್ ಡಿ ಸಿಬ್ಬಂದಿಗಾಗಿ  8 ಯೂನಿಟ್‌ಗಳಲ್ಲಿ ವಸತಿಗೃಹ ನಿರ್ಮಿಸಲಾಗಿದೆ.

ವಿದ್ಯುತ್‌ಚ್ಛಕ್ತಿ ಕೊಣೆ,ಗ್ಯಾಸ್ ಮನಿಪೋಲ್ಡ್ ಕೋಣೆ, ಶವಗಾರ ಕೋಣೆ ಸೇರಿದಂತೆ ಜಿಲ್ಲಾಸ್ಪತ್ರೆಗೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಯಲ್ಲಿವೆ.



ಯೋಜನೆಯ ಅಂದಾಜು ವೆಚ್ಚ 325 ಕೋಟಿ ರೂ.*ಗಿರಿನಾಡಿನ ಬಹುದಿನಗಳ ಕನಸಿಗೆ ಸ್ಪಂದನೆ 

ಯಾದಗಿರಿಯಲ್ಲಿ ಸಿಎಂ ಅವರಿಂದ ಯಿಮ್ಸ್ಗೆ ಶಂಕುಸ್ಥಾಪನೆ ಜ.6ರಂದು

ಯಾದಗಿರಿ,ಜ.5(ಕರ್ನಾಟಕ ವಾರ್ತೆ):- ಕಲ್ಯಾಣ ಕರ್ನಾಟಕ ಭಾಗದ ಗಿರಿನಾಡು ಖ್ಯಾತಿಯ ಯಾದಗಿರಿ ಜಿಲ್ಲೆಯ ಜನರ ಬಹುದಿನಗಳ ಕನಸಿನ ಕೂಸಾದ ಯಿಮ್ಸ್ (ಯಾದಗಿರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್)ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಸ್ಪಂದಿಸಿದೆ. ಸಿಎಂ ಯಡಿಯೂರಪ್ಪ ಅವರು 325 ಕೋಟಿ ರೂ.ವೆಚ್ಚದಲ್ಲಿ ಯಾದಗಿರಿ ಸಮೀಪದ ಮುದ್ನಾಳ ಗ್ರಾಮದ ಹತ್ತಿರ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಕಾಮಗಾರಿಗೆ ಜ.6ರಂದು ಮಧ್ಯಾಹ್ನ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಯೋಜನೆಯ ಒಟ್ಟು ಅಂದಾಜು ಮೊತ್ತ 438.75 ಕೋಟಿ ರೂ.ಗಳಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಯಿಮ್ಸ್ ಸ್ಥಾಪನೆಯಾಗುವುದರಿಂದ ಜಿಲ್ಲೆ ಸೇರಿದಂತೆ ರಾಜ್ಯದ ಪ್ರತಿಭಾವಂತರಿಗೆ ವೈದ್ಯರಾಗುವ ಅವಕಾಶ ಕಲ್ಪಿಸಿಕೊಡುತ್ತಿದೆ ಮತ್ತು ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಇದರ ಜೊತೆಗೆ ಗುಣಮಟ್ಟದ ಚಿಕಿತ್ಸಯೂ ಈ ಭಾಗದ ಜನರಿಗೆ ಲಭ್ಯವಾಗುವ ಆಶಾವಾದ ಮೂಡಿದೆ.

ಈ ಯಿಮ್ಸ್ ಸಂಸ್ಥೆಯು 70 ಎಕರೆ ಜಾಗದಲ್ಲಿ ಸಾಕಾರಗೊಳ್ಳುತ್ತಿದೆ. ಶೈಕ್ಷಣಿಕ ವಿಭಾಗದ ನಾಲ್ಕು ಅಂತಸ್ತಿನ ಕಟ್ಟಡ, ಆರು ಅಂತಸ್ತಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳು, ಬೋಧಕ ಸಿಬ್ಬಂದಿಯ 5 ಅಂತಸ್ತಿನ ವಸತಿ ಕಟ್ಟಡ, ಬೋಧಕೇತರ ಸಿಬ್ಬಂದಿಯ 7 ಅಂತಸ್ತಿನ ಕಟ್ಟಡ, 7 ಅಂತಸ್ತಿನ ನರ್ಸ್ ವಸತಿ ಗೃಹ, ಡೀನ್ ಮತ್ತು ಪ್ರಾಂಶುಪಾಲರಿಗೆ ವಸತಿ ಗೃಹಗಳು ಈ ಆವರಣದಲ್ಲಿ ತಲೆ ಎತ್ತಲಿವೆ. 

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೆಸರಿನಲ್ಲಿ 150 ಎಂ.ಬಿ.ಬಿ.ಎಸ್. ಸೀಟುಗಳ ಹೊಸ ವೈದ್ಯಕೀಯ ಕಾಲೇಜ್‌ನ್ನು ಸ್ವಾಯತ್ತ ಸಂಸ್ಥೆಯ ಸ್ಥಾನಮಾನದೊಂದಿಗೆ ಸ್ಥಾಪಿತವಾಗಲಿದೆ. ಯಿಮ್ಸ್ ಕಟ್ಟಡದ ಕಾಮಗಾರಿಯನ್ನು 24 ತಿಂಗಳೊಳಗೆ ಮುಗಿಸಲು ಸರಕಾರವು ಗುತ್ತಿಗೆ ಪಡೆದಿರುವ ಹೈದರಾಬಾದ್‌ನ ಕೆಎಂವಿ ಪ್ರೆöÊವೆಟ್ ಪ್ರೊಜೆಕ್ಟ್ ಲಿಮಿಟೆಡ್‌ಗೆ ಸೂಚಿಸಿದೆ.

*ಯಿಮ್ಸ್ ಕಟ್ಟಡದಲ್ಲೇನಿರಲಿದೆ..?: ಯಿಮ್ಸ್ನಲ್ಲಿ  37117.50 ಚದರ ಮೀಟರ್ ವಿಸ್ತೀರ್ಣದಲ್ಲಿ ಅಕಾಡೆಮಿಕ್ ಬ್ಲಾಕ್ ನಿರ್ಮಾಣವಾಗಲಿದ್ದು, 4 ಅಂತಸ್ತಿನ ಕಟ್ಟಡ, ಆಡಳಿತ ಕಛೇರಿ, ಭೋಧಕ ಕೊಠಡಿಗಳು, ಕೇಂದ್ರ ಗ್ರಂಥಾಲಯ, ಪರೀಕ್ಷಾ ಕೊಠಡಿಗಳು, ಸೆಮಿನಾರ್ ಹಾಲ್, ಪ್ರಯೋಗಾಲಯಗಳು ಇನ್ನೀತರ ಪ್ರಮುಖವುಗಳು ಒಳಗೊಂಡಿರಲಿದೆ.

11571.00ಚದರ ಮೀಟರ್ ವಿಸ್ತೀರ್ಣದಲ್ಲಿ 6 ಅಂತಸ್ತಿನ ಕಟ್ಟಡ ಬಾಲಕರ ವಿದ್ಯಾರ್ಥಿನಿಲಯ ನಿರ್ಮಾಣವಾಗಲಿದ್ದು, 187 ಕೊಠಡಿಗಳಿರಲಿದ್ದು, 374 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. 

11571.00ಚದರ ಮೀಟರ್ ವಿಸ್ತೀರ್ಣದಲ್ಲಿ 6 ಅಂತಸ್ತಿನ ಕಟ್ಟಡ ಬಾಲಕೀಯರ ವಿದ್ಯಾರ್ಥಿನಿಲಯ ನಿರ್ಮಾಣವಾಗಲಿದ್ದು, 187 ಕೊಠಡಿಗಳಿರಲಿದ್ದು, 374 ವಿದ್ಯಾರ್ಥಿನಿಯರಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. 

9509.00 ಚದರ ಮೀಟರ್ ವಿಸ್ತೀರ್ಣದಲ್ಲಿ 5 ಅಂತಸ್ತಿನ ಬೋಧಕ ಸಿಬ್ಬಂದಿ ವಸತಿ ಗೃಹ ನಿರ್ಮಾಣವಾಗಲಿದ್ದು, 32 ವಸತಿಗೃಹಗಳಿರಲಿವೆ. 

ಬೋಧಕೇತರ ಸಿಬ್ಬಂದಿಗೂ 3422 ಚದರ ಮೀಟರ್ ವಿಸ್ತೀರ್ಣದಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದ್ದು, 24 ವಸತಿ ಗೃಹಗಳಿರಲಿವೆ.3422 ಚದರ್ ಮೀಟರ್ ವಿಸ್ತೀರ್ಣದಲ್ಲಿ ಶೂಶ್ರುಷಕರಿಗಾಗಿ 7 ಅಂತಸ್ತಿನ ಕಟ್ಟಡ ವಸತಿ ಗೃಹ ನಿರ್ಮಿಸಲಾಗುತ್ತಿದ್ದು, 24 ವಸತಿಗೃಹಗಳಿರಲಿವೆ. 

ಡೀನ್ ಹಾಗೂ ಪ್ರಾಂಶುಪಾಲರುಗಳಿಗೆ ವಸತಿ ಗೃಹ, 330.00 ಚ.ಮೀ ವಿಸ್ತೀರ್ಣದಲ್ಲಿ ವಾಣಿಜ್ಯ ಕಟ್ಟಡ, ಸರ್ವಿಸ್ ಬ್ಲಾಕ್ ಕಟ್ಟಡ ನಿರ್ಮಾಣ ಒಳಗೊಂಡಿರುತ್ತದೆ.

ಈ ಯಿಮ್ಸ್ ಆವರಣದಲ್ಲಿ  ನಿರ್ಮಿಸಲು ಉದ್ದೇಶಿಸಿರು ಕಟ್ಟಡಗಳ ಒಟ್ಟಾರೆ ವಿಸ್ತೀರ್ಣ: 78072.50 ಚದರ ಮೀಟರ್ (839935.18 ಚದರ ಅಡಿಗಳು) ಇರಲಿದೆ.


                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...