ಬುಧವಾರ, ಜೂನ್ 30, 2021

 ಮೌಲನಾ ಆಜಾದ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಯಾದಗಿರಿ,ಜೂನ್30(ಕರ್ನಾಟಕ ವಾರ್ತಾ)- ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2021-22ನೇ ಸಾಲಿಗೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣ, ಸುರಪುರದ (ರಂಗAಪೇಠ), ಗುರುಮಠಕಲ್, ಯಾದಗಿರಿ ಮತ್ತು ಹುಣಸಗಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ ಮಾದರಿ (ವಸತಿ ರಹಿತ ಆಂಗ್ಲ ಮಾಧ್ಯಮ) ಶಾಲೆಗಳಿಗೆ ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ  6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

 ಈ ಶಾಲೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ. 75% ರಷ್ಟು ಸ್ಥಾನಗಳನ್ನು (ಮುಸ್ಲಿಂ-77%, ಕ್ರಿಶ್ಚಿಯನ್-14%, ಜೈನ್-6%, ಬೌದ್ಧ-2%, ಸಿಖ್-1%) ಕಲ್ಪಿಸಲಾಗಿರುತ್ತದೆ. ಶೇ. 25% ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿಯೊಂದಿಗೆ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿ,ಪುಸಕ್ತ, ಲೇಖನ ಸಾಮಾಗ್ರಿ, ಸಮವಸ್ತç, ಬ್ಯಾಗ್ ಸೇರಿದಂತೆ ಮತ್ತಿತರ ಸೌಲಭ್ಯ ನೀಡಲಾಗುವುದು.

ಪ್ರವೇಶ ಬಯಸುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ಆಯಾ ಶಾಲೆಗಳ, ಮುಖ್ಯೋಪಾಧ್ಯಾಯರಲ್ಲಿ ಅಥವಾ ಸಂಬAಧ ಪಟ್ಟ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ / ಜಿಲ್ಲಾ ಮತ್ತು ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಿAದ ಉಚಿತವಾಗಿ ಅರ್ಜಿ ನಮೂನೆಗಳನ್ನು ಪಡೆದುಕೊಂಡು, ಭರ್ತಿಮಾಡಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಜುಲೈ 10ರೊಳಗಾಗಿ ಅರ್ಜಿ ಪಡೆದ ಸ್ಥಳಗಳಲ್ಲಿಯೇ ಸಲ್ಲಿಸುವಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಕೃಷ್ಣಾ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಮುನ್ಸೂಚನೆ

ಯಾದಗಿರಿ,ಜೂನ್30(ಕರ್ನಾಟಕ ವಾರ್ತಾ)- 2021-22ನೇ ಸಾಲಿನ ಮುಂಗಾರು ಹಂಗಾಮಿನ ಪ್ರವಾಹ ನಿಯಂತ್ರಣ ಕಾರ್ಯಕ್ಕೆ ಸನ್ನದ್ಧತೆಯಲ್ಲಿ ಇದ್ದು, ನಾರಾಯಣಪುರ ಜಲಾಶಯಕ್ಕೆ ಬರುವ ನಿರೀಕ್ಷಿತ ಒಳಹರಿವಿನ ಮಾಹಿತಿಯನ್ನು ಕೇಂದ್ರ ಜಲ ಆಯೋಗದ ಮೂಲಕ ಪಡೆಯಲಾಗುತ್ತಿದೆ ಎಂದು ನಾರಾಯಣಾಪೂರ ಆಣೆಕಟ್ಟು ವಿಭಾಗದ  ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಸ್ತುತ ಕರ್ನಾಟಕ ಹಾಗೂ ಮಹಾರಾಷ್ಟç ರಾಜ್ಯಗಳ ಕೃಷ್ಣಾ ನದಿ ಪಾತ್ರದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿರುವದರಿಂದ, ಆಲಮಟ್ಟಿ ಜಲಾಶಯಕ್ಕೆ ಪ್ರವಾಹದ ಒಳಹರಿವು ಜೂನ್ 22ರಂದು ಸಾಯಂಕಾಲ 6 ಗಂಟೆಗೆ 1,30,000ಕ್ಯೂಸೆಕ್ ಇದ್ದು, ಆಲಮಟ್ಟಿ ಜಲಾಶಯವು ಬಹುತೇಕ ಭರ್ತಿಯಾಗಿದೆ, ಆಲಮಟ್ಟಿ ಜಲಾಶಯದಿಂದ ನಾರಾಯಣಪೂರ ಜಲಾಶಯಕ್ಕೆ 40000 ಕ್ಯೂಸೆಕ್ ನೀರು ಬಿಡುತ್ತಿರುವುದರಿಂದಾಗಿ 40000 ಕ್ಯೂಸೆಕ್‌ನಷ್ಟು ಒಳಹರಿವು ಬರುವ ಸಾಧ್ಯತೆಯಿದ್ದು, ಮುಖ್ಯ ಇಂಜಿನಿಯರರ ನಿರ್ದೇಶನದ ಮೇರೆಗೆ ನಾರಾಯಣಪೂರ ಆಣೆಕಟ್ಟೆಯಿಂದ ಕೃಷ್ಣಾನದಿಗೆ ಜುಲೈ 23ರಂದು ಅಪರಾಹ್ನದಿಂದ ಪ್ರವಾಹದ ನೀರನ್ನು ಹರಿಬಿಡುವ ಸಾಧ್ಯತೆ ಇದೆ. ಆದ್ದುದರಿಂದಾಗಿ ನಾರಾಯಣಪೂರ ಆಣೆಕಟ್ಟೆಯ ಕೆಳಭಾಗದ ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ, ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಜಾಗೃತಿಯಿಂದ ಇರಲು ಹಾಗೂ ಸುರಕ್ಷತೆಗಾಗಿ ನದಿ ಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಜಾಗೃತೆ ವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.





 ಜಿಲ್ಲೆಯಲಿ 35 ಗ್ರಾಮ ಪಂಚಾಯತ್‌ಗಳಲ್ಲಿ ಮರಳು ಬ್ಲಾಕ್    

                               :ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್                                                                               

ಯಾದಗಿರಿ;ಜೂನ್.30(ಕರ್ನಾಟಕ ವಾರ್ತಾ) ಯಾದಗಿರಿ ಜಿಲ್ಲೆಯಲ್ಲಿ 22 ಗ್ರಾಮ ಪಂಚಾಯತ್‌ಗಳಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಿ, ಅಧಿಸೂಚನೆ ಹೊರಡಿಸಲಾಗಿದೆ, ಹೆಚ್ಚುವರಿಯಾಗಿ ಇನ್ನೂ 13 ಗ್ರಾಮ ಪಂಚಾಯತಗಳಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್ ತಿಳಿಸಿದ್ದಾರೆ. 

ಅವರು ಬುಧವಾರ ಗಣಿ ಸಚಿವ ಮುರುಗೇಶ್ ನಿರಾಣಿ ಅವರು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.ಜಿಲ್ಲೆಯ 22 ಗ್ರಾಮ ಪಂಚಾಯತ್‌ಗಳಲ್ಲಿ ಅಧಿಸೂಚನೆ ಹೊರಡಿಸಲಾಗಿರುವ ಮರಳು ಬ್ಲಾಕ್‌ಗಳಿಗೆ ಕಾರ್ಯಾದೇಶ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. 13ಹೆಚ್ಚುವರಿ ಬ್ಲಾಕ್‌ಗಳಿಗೆ ಮುಂದಿನವಾರ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ಹೇಳಿದರು.

ಹಟ್ಟಿ ಚಿನ್ನದ ಗಣಿ ಸಂಸ್ಥೆಗೆ 6 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಹೆಚ್ಚುವರಿಯಾಗಿ 5 ಬ್ಲಾಕ್‌ಗಳನ್ನು ಗುರುತಿಸುವ  ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಜಿಲ್ಲೆಯಲ್ಲಿ ಮರಳು ಬ್ಲಾಕ್‌ಗಳಿಗೆ ಅರಣ್ಯ ಇಲಾಖೆಯ, ನಿರಾಕ್ಷೇಪಣೆ ಪತ್ರ ಯಾವುದೇ ಬಾಕಿ ಇಲ್ಲ ಜಿಲ್ಲೆಯಲ್ಲಿ ಮರಳು ಡ್ರೋನ್ ಸರ್ವೇ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಸರಕಾರದ ವಸತಿ ಯೋಜನೆಗಳಿಗೆ ಆದ್ಯತೆಯಲ್ಲಿ ಮರಳು ಒದಗಿಸಲಾಗುವುದು ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಮಂಗಳವಾರ, ಜೂನ್ 29, 2021

 *ವಿವಿಧ ಸಮುದಾಯಗಳ ಯೋಜನೆಗಳ ಫಲಾನುಭವಿಗಳ ಆಯ್ಕೆ*


ಯಾದಗಿರಿ: ಜೂನ್, 24 (ಕರ್ನಾಟಕ ವಾರ್ತಾ);

ಪ.ಜಾತಿ/ ಪ.ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದ ಜನಾಂಗದವರಿಗೆ ಸಾಲ ಸೌಲಭ್ಯ ಕೋರಿ ಬಂದಿರುವ ಅರ್ಜಿಗಳ ಆಯ್ಕೆಯು  ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರ ಅಧ್ಯಕ್ಷತೆಯಲ್ಲಿ ಕಚೇರಿಯ ಸಭಾಂಗಣದಲ್ಲಿ  ಜರುಗಿತು.

 2020-21ನೇ ಸಾಲಿನ ಪರಿಶಿಷ್ಟ ಜಾತಿಯ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ, ಭೂ ಒಡೆತನ ಯೋಜನೆ, ನೇರಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ನಿವೇಶನ ವಸತಿ ಯೋಜನೆ ಮತ್ತು ಉದ್ಯಮ ಶೀಲತಾ ಯೋಜನೆಗೆ  ಕೋರಿ ಬಂದ ಅರ್ಜಿಗಳ ಆಯ್ಕೆ  ನಡೆಯಿತು.

169 ಭೂ ಒಡೆತನ ಯೋಜನೆ ಬಂದ ಅರ್ಜಿ  ಅದರಲ್ಲಿ 40  ಫಲಾನುಭವಿಗಳ ಆಯ್ಕೆ ,  
 ನೇರ ಸಾಲ ಯೋಜನೆ 551 ಅರ್ಜಿಗಳಲ್ಲಿ  ಅದರಲ್ಲಿ 159 ಫಲಾನುಭವಿಗಳ ಆಯ್ಕೆ, ಗಂಗಾ ಕಲ್ಯಾಣ ಯೋಜನೆಯ 60 ಅರ್ಜಿಗಳಲ್ಲಿ 60 ಆಯ್ಕೆ, ವಸತಿ ಯೋಜನೆಯ 1060 ಅರ್ಜಿಗಳಲ್ಲಿ 1060 ಆಯ್ಕೆ,  ಸ್ವಯಂ ಉದ್ಯೋಗ ಯೋಜನೆಯ 70 ಅರ್ಜಿಗಳಲ್ಲಿ 70 ಆಯ್ಕೆ, ಉದ್ಯಮ ಶೀಲತಾ ಯೋಜನೆಯ 403 ಅರ್ಜಿಗಳಲ್ಲಿ 28 ಆಯ್ಕೆ, ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಯ 11 ಅರ್ಜಿಗಳಲ್ಲಿ 3 ಫಲಾನುಭವಿಗಳ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಜಿಲ್ಲಾ ವ್ಯವಸ್ಥಾಪಕ ಎಸ್.ಎಚ್.ಪೂಜಾರಿ ಹಾಗೂ ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.



 ಕೋವಿಡ್-19 ಲಸಿಕಾ ಮುಕ್ತ ಗ್ರಾಮ ಅಭಿಯಾನ, ಘೋಷಣ ಕಾರ್ಯಕ್ರಮ; 


* ಸರ್ಕಾರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪ್ರತಿ ಗ್ರಾಮಕ್ಕೆ ಲಸಿಕೆ ಕಳಿಸಿದ ಮೊದಲ ಅಧಿಕಾರಿ ಅಂದ್ರೆ ಯಾದಗಿರಿ ಜಿಲ್ಲಾಧಿಕಾರಿ ; ರಾಜುಗೌಡ ಶ್ಲಾಘನೆ

*ಲಸಿಕಾ ಮುಕ್ತ  ತಿಂಥಿಣಿ ಗ್ರಾಮ ಪಂಚಾಯತಿಗೆ  25 ಲಕ್ಷ ರೂಪಾಯಿ ವಿಶೇಷ ಅನುದಾನ ಘೋಷಣೆ : ಶಾಸಕ ರಾಜುಗೌಡ





ಯಾದಗಿರಿ: ಜೂನ್, 28, ( ಕರ್ನಾಟಕ ವಾರ್ತಾ);

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್ ಲಸಿಕೆ ಶೇಕಡಾ ನೂರರಷ್ಟು ಪ್ರತಿಶತ ಸಾಧನೆಗೈದು, ಜಿಲ್ಲೆಯಲ್ಲಿಯೇ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಿದ ತಿಂಥಣಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಗರಿಕರಿಗೆ ಅಭಿನಂದನಾ ಕಾರ್ಯಕ್ರಮವು  ತಿಂಥಣಿ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿ ,  ಯಾದಗಿರಿ ಜಿಲ್ಲೆಯಲ್ಲಿ ಈಡೀ ರಾಜ್ಯದಲ್ಲಿಯೇ ತಿಂಥಣಿ ಗ್ರಾಮ ಪಂಚಾಯತಿಯನ್ನು ಕೋವಿಡ್ ಲಸಿಕಾ ಮುಕ್ತ ಗ್ರಾಮ ಪಂಚಾಯತಿಯನ್ನಾಗಿ ಮಾಡಿದ್ದೇವೆ.
 ಕಳೆದ ಎರಡು ವಾರದ ಹಿಂದೆ ಶಾಸಕರು ಮತ್ತು ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಜಿಲ್ಲೆಯ ತಾಲೂಕಿನ ಗ್ರಾಮ ಪಂಚಾಯತಿಗಳನ್ನು ಆಯ್ಕೆಮಾಡಿ ಅಲ್ಲಿ ಶೇಕಡಾ ನೂರರಷ್ಟು ಲಸಿಕಾಕರಣ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಅದರಲ್ಲಿ ಸುರುಪುರ ತಾಲೂಕಿನ ತಿಂಥಣಿ ಗ್ರಾಮ ಪಂಚಾಯತಿ  ಆಯ್ಕೆ ಮಾಡಿ ಗುರಿ ತಲುಪಿದ್ದೇವೆ ಎಂದರು. ನಾಗರಿಕರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂದೆಯು ಹೀಗೆ ಸಹಕಾರ ನೀಡಬೇಕೆಂದರು. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯು ಶೇಕಡಾ ನೂರರಷ್ಟು ಸುರಕ್ಷಿತವಾಗಿದೆ. ನಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಜನ ಲಸಿಕೆ ಪಡೆದಿದ್ದಾರೆ. ಯಾರಿಗೂ ಕೂಡ ಅಡ್ಡ ಪರಿಣಾಮಗಳಾಗಿಲ್ಲ. ಜೂನ್ 21 ರಂದು ಲಸಿಕಾ ಮೇಳ ಆರಂಭಿಸಿ ಅವತ್ತಿನ ದಿನ 18 ಸಾವಿರ ಜನಕ್ಕೆ ಲಸಿಕೆ ನೀಡಿ ಗುರಿ ತಲುಪಿದ್ದೇವೆ ಎಂದರು. ನಮ್ಮ ಜಿಲ್ಲೆಯಲ್ಲಿ 8 ಲಕ್ಷದ 50 ಸಾವಿರ ಜನರು ಅರ್ಹ ಫಲಾನುಭವಿಗಳು ಇದ್ದಾರೆ‌. ಅವರೆಲ್ಲರಿಗೂ ಲಸಿಕೆ ನೀಡಲು ಪ್ರಯತ್ನಿಸೋಣ ಎಂದರು.

 ಸುರಪುರ ಶಾಸಕ ನರಸಿಂಹ ನಾಯಕ( ರಾಜುಗೌಡ) ಮಾತನಾಡಿ, ತಿಂಥಣಿ ಗ್ರಾಮ ಪಂಚಾಯತಿಯು ಭಾರತ ದೇಶವಿದ್ದಂತೆ. ನಮ್ಮ ದೇಶದ ಎಲ್ಲಾ ಕಡೆ ಎಲ್ಲಾ ಧರ್ಮ, ಜಾತಿ, ಪಂಗಡದವರು ಇದ್ದಾರೆ. ನಮ್ಮ ತಿಂಥಣಿಯಲ್ಲಿ ಅವರೆಲ್ಲರೂ ಇದ್ದು, ಜಾತಿ ಭೇದ ಮರೆತು ಎಲ್ಲಾರೂ ಒಂದಾಗಿ ಬಾಳುತ್ತಿದ್ದಾರೆ ಎಂದರು. ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಕೊರೋನಾ ಜಾಗೃತಿ ಮೂಡಿಸಿದ್ದಾರೆ. ತಿಂಥಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾದುದು ಎಂದರು. ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಆದೇಶವಾದ ತಕ್ಷಣದಲ್ಲಿಯೇ, ಜಿಲ್ಲೆಯಲ್ಲಿ ಕ್ವಾರಂಟೇನ್ ಮಾಡಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದ, ಲಸಿಕಾವನ್ನು ಪ್ರತಿಗ್ರಾಮಕ್ಕೆ ಕಳಿಸಿದ ಮೊದಲ  ಅಧಿಕಾರಿಗಳು ಅಂದ್ರೆ ಯಾದಗಿರಿ ಜಿಲ್ಲಾಧಿಕಾರಿಗಳು ಎಂದು ಶ್ಲಾಘಿಸಿದರು.  ಜಿಲ್ಲಾಡಳಿತದ ಪರಿಶ್ರಮದಿಂದ ಕೊರೋನಾ ಪಾಸಿಟಿವ್ ಪ್ರಮಾಣ ಕಡಿಮೆಯಾಗಿದೆ. ತಿಂಥಿಣಿ ಗ್ರಾಮ ಪಂಚಾಯಿತಿಯು ಲಸಿಕಾ ಮುಕ್ತ ಗ್ರಾಮ ಪಂಚಾಯನ್ನಾಗಿ ಮಾಡಿದ್ದರಿಂದ ಶಾಸಕರ ಅನುದಾನದಲ್ಲಿ 25 ಲಕ್ಷ ರೂಪಾಯಿಗಳನ್ನು ವಿಶೇಷ ಅನುದಾನ  ಕೊಡುವುದಾಗಿ ಶಾಸಕರು ಘೋಷಿಸಿದರು. ಇದು ಎಲ್ಲಾ ಗ್ರಾಮ ಪಂಚಾಯತಿಗಳು   ಲಸಿಕಾ ಮುಕ್ತ ಮಾಡಿದರೆ ಆ ಪಂಚಾಯತಿಗೂ, ನಗರಸಭೆಗೂ ಅನುದಾನ ಘೋಷಿಸಲಾಗುತ್ತದೆ ಎಂದರು. ಕೊರೊನಾ ಸಂಪೂರ್ಣ ನಾಶವಾಗುತನಕ ನಾವೇಲ್ಲರೂ ಮಾಸ್ಕ್ ಧರಿಸ, ಸಾಮಾಜಿಕ ಅಂತರ ಕಾಪಾಡಿಕೊಂಡು ಜಾಗೃತರಾಗಿರೋಣ ಎಂದರು.

":- ಅಲೆಮಾರಿ ಜನಾಂಗದವರ ಲಸಿಕಾಕರಣಕ್ಕೆ ಚಾಲನೆ; 
ಸುರಪುರ ತಾಲೂಕಿನ ಸತ್ಯಂ ಪೇಟ,  ವಣಕಿಹಾಳದಲ್ಲಿ ವಾರ್ಡ್ 31 ಮತ್ತು 32 ವಾರ್ಡಿನ  ಸುಮಾರು 600 ಅರ್ಹ ಫಲಾನುಭವಿ ಅಲೆಮಾರಿ ಜನಾಂಗದವರು ಕೋವಿಡ್ ಲಸಿಕೆಯನ್ನು ತಿರಸ್ಕರಿಸಿದ್ದರು. ಅಧಿಕಾರಿಗಳು ಕೊರೊನಾ ಜಾಗೃತಿ ಮೂಡಿಸಿ  ಮನವೊಲಿಸಿದ್ದಾರೆ. ಅವರಿಗೆ  ಲಸಿಕಾಕರಣಕ್ಕೆ ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಮತ್ತು ಸುರಪುರ ಶಾಸಕ ನರಸಿಂಹ ನಾಯಕ ( ರಾಜುಗೌಡ) ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಸುರಪುರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಸುರಪುರ ತಾಲೂಕು ವೈದ್ಯಾಧಿಕಾರಿ ರಾಜಾ ವೆಂಕಪ್ಪ ನಾಯಕ, ಆಯುಷ್ ವೈದ್ಯಾಧಿಕಾರಿ ವೀಣಾ ಇನ್ನಿತರರು ಉಪಸ್ಥಿತರಿದ್ದರು

ಗುರುವಾರ, ಜೂನ್ 24, 2021

 ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಯಾದಗಿರಿ,ಜೂನ್೨೫(ಕರ್ನಾಟಕ ವಾರ್ತಾ):- ಕೊಂಕಲ್ ೧೧೦ಕೆವಿ ಕೇಂದ್ರದಿAದ ಹೊರಹೋಗುವ ಎಲ್ಲಾ ೧೧ಕೆವಿ ಹಾಗೂ ೩೩ಕೆವಿ ಮಾರ್ಗಗಳಿಗೆ ನಿರಂತರ ವಿದ್ಯುತ್ ಪೂರೈಸಲು ಮತ್ತು ವಿದ್ಯುತ್ ಅವಘಡಯಾಗದಂತೆ ತಡೆಯಲು ೧೧೦ಕೆವಿ ವಿದ್ಯುತ್ ವಿತರಣಾ ಕೇಂದ್ರ ಕೊಂಕಲ್‌ನಲ್ಲಿ ಮುಂಜಾಗೃತ ಮಾನ್ಸೂನ್ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸಿತ್ತಿರುವ ಪ್ರಯುಕ್ತ ಶುಕ್ರವಾರ ಜೂನ್ ೨೫ರಂದು ಬೆಳಗ್ಗೆ ೧೦ ರಿಂದ ಸಾಯಂಕಾಲ ೪ ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಆದ್ದರಿAದ ಸಾರ್ವಜನಿಕರು ಜೆಸ್ಕಾಂಗೆ ಸಹಕರಿಸುವಂತೆ ಗು.ವಿ.ಸ.ಕಂ.ನಿ (ವಿ) ಕಾರ್ಯ ಮತ್ತು ಪಾಲನೆ ವಿಭಾಗ ಯಾದಗಿರಿಯ ಕಾರ್ಯನಿರ್ವಾಹಕ ಅಭಿಯಂತರರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

ಯಾದಗಿರಿ;ಜೂನ್.೨೪(ಕರ್ನಾಟಕ ವಾರ್ತಾ) ೨೦೨೧-೨೨ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ನ್ಯಾಯವಾದಿ ವೃತ್ತಿಯ ತರಬೇತಿಗಾಗಿ ಸಹಾಯಧನ ಮಂಜೂರಿಸಲು ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕಾನೂನು ಪದವಿ ಪಡೆದ ಪರಿಶಿಷ್ಟ ಜನಾಂಗಕ್ಕೆ ಸೇರಿರುವ, ೪೦ವರ್ಷದೊಳಗಿನ, ೨ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದ ಅರ್ಹ ಅಭ್ಯರ್ಥಿಗಳು ಜುಲೈ ೦೧ರಿಂದ ೧೪ರೊಳಗಾಗಿ ತಿತಿತಿ.sತಿ.ಞಚಿಡಿ.iಟಿಛಿ ವೈಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ ನಂತರ ಅರ್ಜಿ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ,ಶಹಾಪೂರ,ಸುರಪೂರ ಕಚೇರಿಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬುಧವಾರ, ಜೂನ್ 23, 2021

 ಯಾದಗಿರಿ ಜಿಲ್ಲೆ ಸಂಚಾರಿ ವ್ಯವಸ್ಥೆ; ಕರಡು ಅಧಿಸೂಚನೆ ಪ್ರಕಟ

ಯಾದಗಿರಿ;ಜೂನ್23 (ಕರ್ನಾಟಕ ವಾರ್ತಾ): ಜಿಲ್ಲೆಯ ಯಾದಗಿರಿ ನಗರ, ಶಹಾಪುರ ನಗರ, ಸುರಪುರ ನಗರ, ಗುರುಮಠಕಲ್ ಪಟ್ಟಣ, ಹುಣಸಗಿ ಪಟ್ಟಣ ಹಾಗೂ ಸೈದಾಪುರ ಪಟ್ಟಣಗಳಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಬಾರಿ ಸರಕು ವಾಹನ ಸಂಚಾರ ನಿಷೇಧ, ಏಕ ಮುಖ ಸಂಚಾರ ವ್ಯವಸ್ಥೆ, ಪಾರ್ಕಿಂಗ್ ಸ್ಥಳ ಕುರಿತು ಕರಡು ಅಧಿಸೂಚನೆ ಹೊರಡಿಸಲಾಗಿದೆ.

ಇತ್ತೀಚಿನ ಕೆಲ ದಿನಗಳಲ್ಲಿ ವಾಹನಗಳ ನಿಗಧಿತ ವೇಗಕ್ಕಿಂತ ಅತಿ ವೇಗದಿಂದ ಸಂಚರಿಸಿ ಮಾರಣಾಂತಿಕ ಅಪಘಾತಗಳು ಸಂಭವಿಸಿದ ಹಿನ್ನಲೆಯಲ್ಲಿ ಯಾದಗಿರಿ ನಗರ ವ್ಯಾಪ್ತಿಯಲ್ಲಿ ಮತ್ತು ರಿಂಗ್ ರಸ್ತೆಯ ವಾಹನಗಳ ನಿಗದಿತ ವೇಗಕ್ಕಿಂತ ಅತಿಹೆಚ್ಚು ವೇಗದಿಂದ ಸಂಚರಿಸಿ ಮಾರಣಾಂತಿಕ ಅಪಘಗಳು ಸಂಭವಿಸಿದ ಹಿನ್ನಲೆಯಲ್ಲಿ ಯಾದಗಿರಿ ನಗರ ವ್ಯಾಪ್ತಿಯಲ್ಲಿ ಮತ್ತು ರಿಂಗ್ ರಸ್ತೆಯ ವಾಹನಗಳ ವೇಗವನ್ನು 50ಕಿ,ಮೀ ಪ್ರತಿ ಗಂಟೆಗೆ ನಿರ್ಬಂಧಿಸಿ ಮೋಟಾರು ವಾಹನ ಕಾಯ್ದೆ 1988 ರ ನಿಯಮ 112, ಕರ್ನಾಟಕ ಮೋಟಾರು ವಾಹನ ಕಾಯ್ದೆ 1989 ನಿಯಮ 221(ಎ)ರ ಅನುಸಾರ ಅಧಿಕಾರ ಚಲಾಯಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿದೆ.

** ಕರಡು ಅಧಿಸೂಚನೆಯ ವಿವರ ಈ ರೀತಿ ಇದೆ **

ಯಾದಗಿರಿ ನಗರದ ಈ ಕೆಳಕಂಡ ಸ್ಥಳಗಳಲ್ಲಿ  ಬೆಳಗ್ಗೆ 8 ಗಂಟೆಯಿAದ 12 ಗಂಟೆಯ ವರೆಗೆ ಹಾಗೂ ಸಾಯಂಕಾಲ 4 ಗಂಟೆಯಿAದ ರಾತ್ರಿ 8 ಗಂಟೆಯ ವರೆಗೆ ಭಾರಿ ವಾಹನಗಳನ್ನು ಕಡ್ಡಾಯವಾಗಿ ಪ್ರವೇಶ ನಿರ್ಬಂಧಿಸಲಾಗಿದೆ.

1. ಹೈದ್ರಾಬಾದ್ ರಾಷ್ಟಿçÃಯ ರಸ್ತೆಯ ಂPಒಅ ಗಂಜ್ ವೃತ್ತದಿಂದ ಮೈಲಾಪೂರ ದಿಂದ ಬೇಸ್‌ದಿಂದ ಚಕ್ರಕಟ್ಟಾದಿಂದ ಗಾಂಧಿ ಚೌಕ್‌ದಿಂದ ಹತ್ತಿಕುಣಿ ರಸ್ತೆ, ಹಿಮ್ಮುಖವಾಗಿ ಅದೇ ಮಾರ್ಗ 

2. ಜಿಲ್ಲಾಧಿಕಾರಿಗಳ ಕಚೇರಿ ಮತ್ತು ರೇಲ್ವೆಸ್ಟೇಷನ್ ರಸ್ತೆಯ ವರ್ತುಲ ರಸ್ತೆ ದಿಂದ ಜಿಲ್ಲಾ ಪಂಚಾಯತ್, ಸಪ್ನಾ ಟಾಕೀಸ್ ಮತ್ತು ಗಾಂಧಿಚೌಕ್ ಹಿಮ್ಮುಖವಾಗಿ ಅದೇ ಮಾರ್ಗ

3. ಚಿತ್ತಾಪೂರ ವಾಡಿ ರಸ್ತೆಯ ಡಿಡಿಪಿಐ ಕಛೇರಿ ಯಿಂದ ಸಪ್ನಾಟಾಕೀಸ್ ಗಾಂಧಿ ಚೌಕ್ ಹಿಮ್ಮುಖವಾಗಿ ಅದೇ ಮಾರ್ಗ.


ಯಾದಗಿರಿಯಲ್ಲಿ ವಾಹನಗಳು ನಿಲುಗಡೆ ನಿಷೇಧ ಸ್ಥಳಗಳು 

ನತ್ತು ಹೊಟೇಲ್ ಮುಂದಿನ ರಸ್ತೆಯ ಬದಿಯಲ್ಲಿ ಹಾಗೂ ಯಾದಗಿರಿ ನಗರದ ಗಾಂಧಿ ಚೌಕ್ ಮೂರ್ತಿಯ ಹತ್ತಿರದ ಸುತ್ತಮುತ್ತಲಿನ ಸ್ಥಳ

ಶಹಾಪೂರದಲ್ಲಿ  ವಾಹನಗಳು ನಿಲುಗಡೆ ನಿಷೇಧ ಸ್ಥಳ 

ಶಹಾಪೂರ ನಗರದ ಹಳೆ ಬಸ್ ನಿಲ್ದಾಣ ಎರಡು ಬದಿಗೆ 50 ಮೀಟರ ಅಂತರದಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ.

ಬಸವೇಶ್ವರ ವೃತ್ತದಿಂದ ಯಾದಗಿರಿ ರಸ್ತೆಯಲ್ಲಿ 100 ಮೀಟರ್ ಅಂತರದಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ.

ಬಸವೇಶ್ವರ ವೃತ್ತದಿಂದ ಸುರಪುರ ರಸ್ತೆಯ 50 ಮೀಟರ್ ಅಂತರದವರೆಗೆ ಸ್ವಾಮಿ ಪೆಟ್ರೋಲ್ ಬಂಕ ವರೆಗೆ ನೋ ಪಾರ್ಕಿಂಗ್ ವ್ಯವಸ್ಥೆ.

ಸುರಪೂರ 

ಗಾಂಧಿ ವೃತ್ತದಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ


ಏಕ ಮುಖ ಸಂಚಾರ ವ್ಯವಸ್ಥೆ 

ಯಾದಗಿರಿ ಹಳೆ ಎಸ್,ಬಿ,ಐ,ಬ್ಯಾಂಕ್ ಯಿಂದ ಗಾಂಧಿ ಚೌಕ್‌ವರೆಗೆ  

ಗುರುಮಿಠಕಲ್ ಕಾಕಲವಾರ ಕ್ರಾಸ್ ಯಿಂದ ಕೆ.ಜಿ.ಬಿ.ಬ್ಯಾಂಕ್‌ವರೆಗೆ 

ಸೈದಾಪೂರ ಕನಕದಾಸ ವೃತ್ತದಿಂದ ಬಸವೇಶ್ವರ ವೃತ್ತವರೆಗೆ 



ಸಮ ಮತ್ತು ಬೆಸ್ ದಿನಗಳಂತೆ ವಾಹನ ನಿಲುಗಡೆ ಸ್ಥಳ 

ಯಾದಗಿರಿ ಸುಭಾಷ ಸರ್ಕಲ್ ಯಿಂದ ಸರ್ಕಾರಿ ಡಿಗ್ರಿ ಕಾಲೇಜ್

ಸುಭಾಷ ಸರ್ಕಲ್ ಯಿಂದ ಶಾಸ್ತಿç ಚೌಕ್ ಮತ್ತು ಸುಭಾಷ ಸರ್ಕಲ್ ಶಹಾಪೂರ ರಸ್ತೆ ಬ್ರಿಡ್ಜ್

ಗುರಮಿಠಕಲ್ ಬಸವೇಶ್ವರ ಸರ್ಕಲ್ ಯಿಂದ ನಗರೇಶ್ವರ ಮಂದಿರ ವರಿಗೆ

ಸೈದಾಪೂರ ಬಸವೇಶ್ವರ ಸರ್ಕಲ್ ಯಿಂದ ರೇಲ್ವೆ ಸ್ಟೇಷನ್‌ವರಿಗೆ 

ಶಹಾಪೂರ ಬಸವೇಶ್ವರ ಸರ್ಕಲ್ ಯಿಂದ ಮಾಚಗಾರಗಡ್ಡಿ ವರಿಗೆ 

ಸುರಪೂರ ಗಾಂಧಿ ಸರ್ಕಲ್ ಯಿಂದ ಮೂರ್ತಿಕಟ್ಟಾವರಿಗೆ 

ಹುಣಸಗಿ ಕರ್ನಾಟಕ ಬ್ಯಾಂಕ್ ಯಿಂದ ವಾಲ್ಮೀಕಿ ಸರ್ಕಲ್ ವರೆಗೆ 


ವಾಹನ ನಿಲುಗಡೆ ಸ್ಥಳಗಳು-:

ದ್ವಿಚಕ್ರ ವಾಹನ : ಯಾದಗಿರಿ ನಗರದ ಎಸ್.ಎಸ್. ಪ್ಯಾರಸಾಬಾದಿ ಅಂಗಡಿಯಿAದ ಚಕ್ರಕಟ್ಟಾ ಕ್ರಾಸ್ ವರಿಗೆ ಮತ್ತು ನಾಹರ ಬಟ್ಟೆ ಅಂಗಡಿಯಿAದ ಚಕ್ರಕಟ್ಟಾ ಕ್ರಾಸ್‌ವರಿಗೆ  ಮಾತ್ರ ದ್ವಿಚಕ್ರ ವಾಹನ ನಿಲುಗಡೆ ಸ್ಥಳವಾಗಿದೆ.

ಆಟೋ ನಿಲುಗಡೆ : ಯಾದಗಿರಿ ನಗರದ ನಗರ ಪೊಲೀಸ್ ಠಾಣೆಯ ಪಂಪ ಮಹಾಕವಿಯ ಮುಂದಿನ ಸ್ಥಳದಲ್ಲಿ ಹಾಗೂ ಗಂಜ್ ವೃತ್ತದಿಂದ ಮೈಲಾಪೂರ ಬೇಸ್‌ಗೆ ಹೋಗುವ ರಸ್ತೆಯ ಎಡ ಭಾಗಕ್ಕೆ ಆಟೋ ನಿಲುಗಡೆ ಸ್ಥಳ ಗುರುತಿಸಲಾಗಿದೆ.

     ಈ ಕರಡು ಅಧಿಸೂಚನೆಯ ಕುರಿತು ಆಕ್ಷೇಪಣೆ, ಸಲಹೆ ಮತ್ತು ಸೂಚನೆಗಳು ಏನಾದರೂ ಇದ್ದಲ್ಲಿ ಸದಸ್ಯ ಕಾರ್ಯದರ್ಶಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಯಾದಗಿರಿ ಇವರಿಗೆ ಸಲ್ಲಸಬಹುದಾಗಿದೆ. ಎಂದು ಯಾದಗಿರಿ ಆರ್‌ಟಿಓ ಪ್ರಕಟಣೆ ತಿಳಿಸಿದೆ.


  


 ಬಿತ್ತುವ ಮುನ್ನ ಬೀಜೋಪಚಾರ ಮಾಡಬೇಕು 

                                                        ಡಾ. ವೈ.ಎಸ್,ಅಮರೇಶ 

ಯಾದಗಿರಿ,ಜೂ.23(ಕ.ವಾ): ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ರೋಗಗಳಿಗೆ ಕಾರಣವಾದ ರೋಗಾಣುಗಳು ಬೀಜ, ಮಣ್ಣು, ಕೀಟ, ನೀರು ಮತ್ತು ಗಾಳಿಯ ಮೂಲಕ ಪಸರಿಸುವದರಿಂದ ರೈತರು ಬಿತ್ತುವ ಮುನ್ನ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕೆಂದು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ, ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ. ವೈ.ಎಸ್  ಅಮರೇಶ ಅವರು ತಿಳಿಸಿದರು.

ಸುರುಪುರ ತಾಲೂಕಿನ ಕವಡಿಮಟ್ಟಿಯಲ್ಲಿರುವ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಂತರಜಾಲದ ಮೂಲಕ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳೆರೋಗಗಳನ್ನು ನಿಯಂತ್ರಿಸಲು ಅನೇಕ ರಸಾಯನಿಕ, ಜೈವಿಕ ಹಾಗೂ ಇತರೆ ರೋಗನಾಶಕ ವಸ್ತುಗಳನ್ನು ಬಳಸುವದು ಸರ್ವೆ ಸಾಮಾನ್ಯ, ಆದರೆ ರೈತರು ಅತಿಯಾದ ಮತ್ತು ಅಸಮರ್ಪಕವಾದ ರಸಾಯನಿಕ ರೋಗನಾಶಕಗಳನ್ನು ಬಳಸುವುದರಿಂದ ಪರಿಸರ, ಜಲ ಮತ್ತು ವಾಯು ಮಾಲಿನ್ಯ ಹೆಚ್ಚಾಗಿ ತಿನ್ನುವ ಆಹಾರವು ಸಹ ವಿಷವಾಗುವುದು, ಇದಲ್ಲದೇ ಶಿಲೀಂದ್ರಗಳಲ್ಲಿ ಶಿಲೀಂದ್ರನಾಶಕ ನಿರೋಧಕ ಶಕ್ತಿ ಕಂಡುಬರುವುದು ಇಂತಹ ದುಷ್ಟಪರಿಣಾಮದಿಂದ ಜೈವಿಕನಾಶಕಗಳ ಬಳಕೆ ಹೆಚ್ಚಾಗುತ್ತದೆ ಎಂದರು.


 

ಜೈವಿಕ ನಿಯಂತ್ರಣ ವಿಭಾಗದ ಮುಖ್ಯಸ್ಥರು ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅರುಣಕುಮಾರ ಹೊಸಮನಿ ಮಾತನಾಡಿ, ಕೀಟ ಮತ್ತು ರೋಗಗಳನ್ನು ನಿಯಂತ್ರಿಸುವಲ್ಲಿ ಜೈವಿಕ ವಿಧಾನಗಳ ಅಳವಡಿಕೆಯು ಶತಮಾನಗಳ ಇತಿಹಾಸವನ್ನು ಹೊಂದಿದೆ ಎಂದು ಹೇಳಿದರು. 

ಜಾಗತಿಕ ಮಟ್ಟದಲ್ಲಿ ಇಂದು ನೈಸರ್ಗಿಕವಾಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ತೀವ್ರವಾಗಿ ಏರುತ್ತಿರುವ ಹಿನ್ನಲೆಯಲ್ಲಿ, ಜೈವಿಕ ವಿಧಾನಗಳನ್ನು ಕ್ರಮಬದ್ದವಾಗಿ ಅಳವಡಿಸಿ, ಕೀಟ ನಿರ್ವಹಿಸಿ ಬೆಳೆಯುವುದರಿಂದ ಉತ್ತಮ ಫಸಲನ್ನು ಪಡೆಯಬಹುದು ಮತ್ತು ರೋಗಕಾರದ ಶಿಲೀಂದ್ರಗಳಾವು ಎಂದರೆ, ಬೆವೆರಿಯಾ, ಮೆಟಾರೈಜಿಯಂ, ನೊಮುರಿಯಾ, ವರ್ಟಿಸಿಲಿಯೊ, ಹಿರ್ಸುಟಿಲ್ಲಾ ಮತ್ತು ಪೆಸಿಲೋಮೈಸಿಸ್ ಪ್ರಚಲಿತಿಯಲ್ಲಿ ಇರುವ ಜೈವಿಕ ಶಿಲೀಂದ್ರನಾಶಕಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತರಬೇತಿಯ ಆಯೋಜಕರಾದ. ಡಾ. ಗುರುಪ್ರಸಾದ ಅವರು ನಿರೂಪಿಸಿ,ವಂದಿಸಿದರು ಕಾರ್ಯಕ್ರಮದಲ್ಲಿ ಜಿಲ್ಲೆ ಸುಮಾರು 29ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.





ಸೋಮವಾರ, ಜೂನ್ 21, 2021

 ಶಾಸಕರಿಂದ ಯಂತ್ರಚಾಲಿತ ತ್ರಿಚಕ್ರವಾಹನ ವಿತರಣೆ

ಸರಿಯಾದ ಮಾರ್ಗದರ್ಶನವಿದ್ದರೇ ವಿಕಲಚೇತನರು ಸಾಧನೆ ಮಾಡಬಲ್ಲರು

                                : ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ

ಯಾದಗಿರಿ;ಜೂನ್.21(ಕರ್ನಾಟಕ ವಾರ್ತಾ) ಅಂಗವೈಕಲ್ಯ ಶರೀರಕ್ಕೆ ಹೊರತು ಮನಸ್ಸಿಗಲ್ಲ, ಎಲ್ಲರಂತೆ ಅಂಗವಿಕಲರು ಸರಿಸಮಾನರು, ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದರೆ ಅಂಗವಿಕಲರು ಉತ್ತಮ ಸಾಧನೆ ಮಾಡಬಲ್ಲರು ಎಂದು ಯಾದಗಿರಿ ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ ಅಭಿಪ್ರಾಯಪಟ್ಟರು.


ನಗರದ ಶಾಸಕರ ಕಚೇರಿಯಲ್ಲಿ ಸೋಮವಾರ ಅಂಗವಿಕಲರಿಗೆ ಸ್ಥಳಿಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ 53 ಯಂತ್ರಚಾಲಿತ ತ್ರಿಚಕ್ರವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.


ತ್ರಿಚಕ್ರವಾಹನ ಸರಿಯಾಗಿ ಸದ್ಬಳಕೆಯಾಗಲಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ  ಪಾಲಿಸುವಂತೆ ವಿಕಲಚೇತನರ ಫಲಾನುಭವಿಗಳಿಗೆ ಅವರು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬಿ.ವಿ ದೀಪಿಕಾ  ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು.

 ಬೀಜ,ಗೊಬ್ಬರ ಬೇರೆ ಜಿಲ್ಲೆಗೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು

ಯಾದಗಿರಿ;ಜೂನ್.21(ಕರ್ನಾಟಕ ವಾರ್ತಾ) ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದು, ಜಿಲ್ಲೆಗೆ ನಿಗದಿಪಡಿಸಿದ ಬಿ.ಟಿ ಹತ್ತಿ ಮತ್ತು ರಸಗೊಬ್ಬರ ಕೀಟನಾಶಕಗಳನ್ನು ಜಿಲ್ಲೆಯ ರೈತರಿಗೆ ಮಾತ್ರ ಮಾರಾಟ ಮಾಡಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲೆಯ ಗಡಿ ಭಾಗದ ತಾಲ್ಲೂಕಗಳಿಂದ ಬೇರೆ ಜಿಲ್ಲೆಯ ರೈತರಿಗೆ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ಜಿಲ್ಲೆಗೆ ನಿಗದಿಪಡಿಸಿದ ಬಿ.ಟಿ ಹತ್ತಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬೇರೆ ಜಿಲ್ಲೆಯ ರೈತರಿಗೆ ನೀಡುವ, ಪರಿಕರ ಮಾರಾಟಗಾರರ ವಿರುದ್ದ ಸೂಕ್ತ ಕ್ರಮಕೈಗೊಂಡು ಅವರಿಗೆ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ, ಜೂನ್ 15, 2021

 ಅಸಂಘಟಿತ ವಲಯದ ಕಾರ್ಮಿಕರ ಪರಿಹಾರ ಧನ ಪಡೆಯಲು ಅರ್ಜಿ ಆಹ್ವಾನ

ಯಾದಗಿರಿ ಜೂನ್15(ಕ.ವಾ): ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ  ಬರುವ ಅಸಂಘಟಿತ ಕಾರ್ಮಿಕರಿಗೆ ಕೊವಿಡ್-19 ಪ್ರಯುಕ್ತ ಸರಕಾರ ಘೋಷಿಸಿರುವ ರೂ.2000/-ಗಳ ಪರಿಹಾರ ಧನ ಪಡೆಯಲು ಜುಲೈ 20ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಂತೆ ಯಾದಗಿರಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಸಂಘಟಿತ ವಲಯದ ಕಾರ್ಮಿಕರಾದ ಕ್ಷೌರಿಕರು, ಅಗಸರು, ಟೈಲರಗಳು, ಹಮಾಲರು, ಚಿಂದಿ ಆಯುವರು, ಕುಂಬಾರರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್‌ರು, ಕಮ್ಮಾರರು ಮತ್ತು ಗೃಹಕಾರ್ಮಿಕರು ಈ ವರ್ಗದ ಅರ್ಹ ಫಲಾನುಭವಿಗಳು ಪರಿಹಾರ ಧನ ಪಡೆಯಲು  ಸೇವಾ ಸಿಂಧು ಪೋರ್ಟಲ್(ಛಿsಛಿ) ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. 


ಬಿ.ಪಿ.ಎಲ್ ಕಾರ್ಡ ಹೊಂದಿರುವ ಒಂದು ಕುಟುಂಬಕ್ಕೆ ಒಬ್ಬರೆ ಅರ್ಜಿ ಸಲ್ಲಿಸಬೇಕು.

ಬೇರೆ ರಾಜ್ಯದವರು ಈ ವೃತ್ತಿಗಳು ನಿರ್ವಹಿಸುತ್ತಿದ್ದರೆ, ಸಂಭAದಪಟ್ಟ ಅಧಿಕಾರಿಗಳಿಂದ ದೃಡೀಕರಣ ಪ್ರಮಾಣ ಪತ್ರ ಪಡೆದಿರಬೇಕು,ಆಧಾರ ಕಾರ್ಡ ಜೋಡಣೆಯಾಗಿರುವ ಬ್ಯಾಂಕ ಖಾತೆ ಹೊಂದಿರುವುದು ಕಡ್ಡಾಯವಾಗಿದೆ. 


ಹೆಚ್ಚಿನ ಮಾಹಿತಿಗಾಗಿ ನೇರವಾಗಿ ಕಾರ್ಮಿಕ ಸಹಾಯವಾಣಿ 155214 ಗೆ ಅಥವಾ ಮತ್ತು ಕಾರ್ಮಿಕ ಅಧಿಕಾರಿಯವರ ಕಚೇರಿ ಯಾದಗಿರಿ ಜಿಲ್ಲೆ ಯಾದಗಿರಿ ಸಂಪರ್ಕಿಸಿಲು ಅವರು ಕೋರಿದ್ದಾರೆ.



ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಉತ್ಪಾದಿಸಿದ ಕಸಿ/ಸಸಿಗಳು ಮಾರಾಟಕ್ಕೆ ಲಭ್ಯ

ಯಾದಗಿರಿ ಜೂನ್15(ಕ.ವಾ): ಜಿಲ್ಲೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಉತ್ಪಾದಿಸಿದ ಕಸಿ/ಸಸಿಗಳು ಮಾರಾಟಕ್ಕೆ ಲಭ್ಯವಿದ್ದು ತೋಟಗಾರಿಕಾ ಬೆಳೆ ಬೆಳೆಯುವ ರೈತಬಾಂಧವರಿಗಾಗಿ, ಸಾರ್ವಜನಿಕರಿಗೆ ಇಲಾಖೆ ನಿಗಧಿಪಡಿಸಿದ, ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಸಕ್ತ ರೈತಬಾಂಧವರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು  ಪ್ರಕಟಣೆಯಲ್ಲಿ ಕೋರಿದ್ದಾರೆ


ನಾರಾಯಣಪೂರ ತೋಟಗಾರಿಕೆ ಕ್ಷೇತ್ರದಲ್ಲಿಈ ಕೆಳಗಿನಂತೆ ಕಸಿ/ಸಸಿಗಳ ಲಭ್ಯತೆ ಇರುತ್ತದೆ, ಮಾವು, ನಿಂಬೆ, ಕರಿಬೇವು, ಮತ್ತು ತೆಂಗು. ಸಂಪರ್ಕಿಸಬೇಕಾದ ಅಧಿಕಾರಿಗಳು : ಶ್ರೀ. ಬಸನಗೌಡ ಪಾಟೀಲ್, ಸಹಾಯಕ ತೋಟಗಾರಿಕೆ ನಿರ್ದೇಶಕರು 9620578551, ಶ್ರೀ. ಶ್ರೀಧರ್, ಸಹಾಯಕ ತೋಟಗಾರಿಕೆ ಅಧಿಕಾರಿ 9611001067, ಶಿವರಾಮ್, ತೋಟಗಾರಿಕೆ ಸಹಾಯಕರು 9880139467.

ಹತ್ತಿಕುಣಿ ತೋಟಗಾರಿಕೆ ಕ್ಷೇತ್ರದಲ್ಲಿ ಈ ಕೆಳಗಿನಂತೆ ಕಸಿ/ಸಸಿಗಳ ಲಭ್ಯತೆ ಇರುತ್ತದೆ, ಮಾವು, ನಿಂಬೆ, ಕರಿಬೇವು ಮತ್ತು ತೆಂಗು. ಸಂಪರ್ಕಿಸಬೇಕಾದ ಅಧಿಕಾರಿಗಳು .ಎಂ.ಡಿ. ಸಮಿಯೂದ್ದೀನ್ ಸಹಾಯಕ ತೋಟಗಾರಿಕೆ ನಿರ್ದೇಶಕರು, 9986516251, ನಿಸಾರ್ ಅಹ್ಮದ್ ಸಹಾಯಕ ತೋಟಗಾರಿಕೆ ಅಧಿಕಾರಿ, 9738416930, ಗೀತಾ ತೋಟಗಾರಿಕೆ ಸಹಾಯಕರು 9110484899.


ಯಾದಗಿರಿ ಜಿಲ್ಲಾ ನರ್ಸರಿಯಲ್ಲಿ ಈ ಕೆಳಗಿನಂತೆ ಕಸಿ/ಸಸಿಗಳ ಲಭ್ಯತೆ ಇರುತ್ತದೆ, ನಿಂಬೆ, ಕರಿಬೇವು ಮತ್ತು ಅಲಂಕಾರಿಕ ಸಸಿಗಳು ಮತ್ತು ಅಲಂಕಾರಿಕ ಕುಂಡಗಳು ಸಂಪರ್ಕಿಸಬೇಕಾದದ್ದು : ಕುಮಾರಿ.ಕುಶಲತಾ ತೋಟಗಾರಿಕೆ ಸಹಾಯಕರು, 9731625405.


ಸುರಪುರ ಕಛೇರಿ ನರ್ಸರಿಯಲ್ಲಿ ಈ ಕೆಳಗಿನಂತೆ ಕಸಿ/ಸಸಿಗಳ ಲಭ್ಯತೆ ಇರುತ್ತದೆ, ನಿಂಬೆ, ಕರಿಬೇವು ಮತ್ತು ಅಲಂಕಾರಿಕ ಸಸಿಗಳು, ಸಂಪರ್ಕಿಸಬೇಕಾದದ್ದು : ಕುಮಾರಿ.ಬಸ್ಸಮ್ಮ ತೋಟಗಾರಿಕೆ ಸಹಾಯಕರು, 9900393447.


  ಈ ಮೇಲಿನ ಸಂಖ್ಯೆಗಳಿಗೆ ಕರೆ ಮಾಡಿ ಸಸಿ/ಕಸಿಗಳನ್ನು ಪಡೆದುಕೊಳ್ಳಬಹುದಾಗಿದೆ.



ಪ್ರಧಾನಮಂತ್ರಿ ಮತ್ಸö್ಯಸಂಪದ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಯಾದಗಿರಿ ಜೂನ್15(ಕ.ವಾ):ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನಿಂದ 2024-25ನೇ ಸಾಲಿನವರಗೆ ಪ್ರಧಾನಮಂತ್ರಿ ಮತ್ಸö್ಯಸಂಪದ ಯೋಜನೆಯಡಿಯಲ್ಲಿ  2021-22ನೇ ಸಾಲಿಗೆ  ಒಳನಾಡು ಮೀನುಗಾರಿಕೆಗೆ ಸಂಬAದಿಸಿದ ಯೋಜನೆಗಳಾದ ಮೀನುಕೃಷಿ ಕೊಳಗಳ ನಿರ್ಮಾಣ, ಬಯೋಫ್ಲಾಕ್ ಕೊಳ ನಿರ್ಮಾಣ, ಮೀನುಮರಿ ಉತ್ಪಾದನೆ ಹಾಗೂ ಪಾಲನಾ ಕೇಂದ್ರಗಳ ಸ್ಥಾಪನೆ, ಶೈತೀಕರಿಸಿದ ಶಾಖ ನಿರೋಧಕ ವಾಹನ ಖರೀದಿ, ಶೈತ್ಯಾಗಾರ/ಮಂಜುಗಡೆ ಸ್ಥಾವರ ನಿರ್ಮಾಣ ಮತ್ತು ಇತರೆ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 40ರಷ್ಟು ಸಹಾಯಧನ ಮತ್ತು ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 60ರಷ್ಟು ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.


ಪ್ರಧಾನ ಮಂತ್ರಿ ಮತ್ಸö್ಯ ಸಂಪದ ಯೋಜನೆಯಲ್ಲಿ ಮೇಲಿನ ಯೋಜನೆಗಳ ಪ್ರಯೋಜನ ಪಡೆಯಲಿಚ್ಚಿಸುವ ಅರ್ಹರು 2021ರ ಜುಲೈ  15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.


ಅಲ್ಲದೇ ಮೀನುಗಾರಿಕೆ ಇಲಾಖೆಯ ಕೇಂದ್ರವಲಯ/ರಾಜ್ಯವಲಯ/ಜಿಲ್ಲಾ ವಲಯದ ವಿವಿಧ ಯೋಜನೆಗಳಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ಖರೀದಿ, ಮೀನುಮರಿ ಖರೀದಿಗೆ ಸಹಾಯ ಹಾಗೂ ಇತ್ಯಾದಿ ಯೋಜನೆಗಳಿಗೆ ಸಹಾಯಧನ ಪಡೆಯಲು ಆಸಕ್ತ ಮೀನುಗಾರರು, ಮೀನುಕೃಷಿಕ ಫಲಾನುಭವಿಗಳು ಸಂಬAದಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಅರ್ಜಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬAದಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು  ಸಂಪರ್ಕಿಸಬಹುದಾಗಿದೆ.



                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...