ಏಪ್ರಿಲ್ 12 ರಿಂದ 19ರ ವರೆಗೆ ಮಾವು ಫಸಲಿನ ಇ-ಹರಾಜು
ಯಾದಗಿರಿ,ಏಪ್ರಿಲ್12(ಕ.ವಾ):- 2020-21 ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯ ಹತ್ತಿಕುಣಿ ತೋಟಗಾರಿಕೆ ಕ್ಷೇತ್ರದ ಮಾವು ಫಸಲಿನ ಇ-ಹರಾಜು ಮೂಲಕ ವಿಲೇವಾರಿ ಮಾಡಲು ಏಪ್ರಿಲ್ 12 ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ, ಏಪ್ರಿಲ್ 19 ರಂದು ಬೆಳಿಗ್ಗೆ 11 ಗಂಟೆಗೆ ಮುಕ್ತಾಯಗೊಳ್ಳುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹತ್ತಿಕುಣಿ ತೋಟಗಾರಿಕೆ ಕ್ಷೇತ್ರದ ಮಾವು ಫಸಲಿನ ಠೇವಣಿ ಮೊತ್ತ 8,500 ರೂ ಅಗಿದ್ದು, ಇ-ಹರಾಜು ಮೊತ್ತವು ಇಲಾಖಾ ಅಂದಾಜು ಮೊತ್ತಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಬಿಡ್ಡು ಆಗದಿದ್ದಲ್ಲಿ ಮರು ಇ-ಹರಾಜು ಏಪ್ರಿಲ್ 19 ರ ಸಂಜೆ 5 ಗಂಟೆಗೆ ಪ್ರಾರಂಭವಾಗಿ 22 ರ ಬೆಳಿಗ್ಗೆ 11 ಗಂಟೆಗೆ ಮುಕ್ತಾಯಗೊಳ್ಳುವುದು.
ಬಿಡ್ಡಿನ ಡೆಲ್ಟಾ ಟೈಂ 5 ನಿಮಿಷ ಇರುತ್ತದೆ. ಇ-ಹರಾಜು ನಲ್ಲಿ ಭಾಗವಹಿಸುವವರು ಮೇಲೆ ನಮೂದಿಸಿರುವ ತೋಟಗಾರಿಕೆ ಕ್ಷೇತ್ರಕ್ಕೆ ಇ-ಪೋರ್ಟಲ್ ಖಾತೆಯಲ್ಲಿ ಠೇವಣಿ ಮೊತ್ತವನ್ನು ಆನ್‌ಲೈನ್ ಮೂಲಕ ಅಥವಾ ಚಲನ್ ತೆಗೆದುಕೊಂಡು ತುಂಬಬೇಕು.
ಹೆಚ್ಚಿನ ಮಾಹಿತಿಗೆ ದೂ.9986516251 ಮತ್ತು 9110484899 ಹಾಗೂ ವೆಬ್‌ಸೈಟ್ ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ಅನ್ನು ಸಂಪರ್ಕಿಸಿ ಎಂದು ಅವರು ತಿಳಿಸಿದ್ದಾರೆ.
.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ