2022 ರೊಳಗಾಗಿ ಗರ್ಭಿಣಿಯರಲ್ಲಿ ಪೌಷ್ಠಿಕತೆ ಹೆಚ್ಚಿಸಬೇಕು : ಶಂಕರಗೌಡ ಸೋಮನಾಳ
ಯಾದಗಿರಿ ಏಪ್ರಿಲ್;08(ಕ.ವಾ) 2022ರೊಳಗಾಗಿ 6 ವರ್ಷದ ಮಕ್ಕಳು, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ನಿರ್ಧಿಷ್ಠ ಅವಧಿಗೆ ಪೌಷ್ಠಿಕತೆಯನ್ನು ಸುಧಾರಿಸುವ ನಿಟ್ಟಿನಲಿ ಪೋಷಣ ಅಭಿಯಾನ ಯೋಜನೆಯ ಅನುಷ್ಠಾನ ಗೊಳಿಸುವ ಕಾರ್ಯ ನಿರ್ವಹಿಸಬೇಕು ಎಂದು ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ ಅಧಿಕಾರಿಗಳಿಗೆ ತಿಳಿಸಿದರು.
ಗುರುವಾರ ಜಿಲ್ಲಾಡಳಿತ ಭವನದ ಸಹಾಯಕ ಆಯಕ್ತ ಕಚೇರಿಯಲ್ಲಿ ನಡೆದ ಪೋಷಣ್ ಅಭಿಯಾನ ಯೋಜನೆಯ ತ್ರೆöÊಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಯೋಜನೆಯ ಮುಖ್ಯ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತಂದಿದೆ.
ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ 5 ವರ್ಷದ ಒಳಗಿನ ಎಲ್ಲಾ ಮಕ್ಕಳ ಮನೆ ಮನೆಗೆ ಹೋಗಿ ತೂಕ ಎತ್ತರ ಮಾಪನ ಮಾಡಿ ಬೆಳವಣಿಗೆ ಪರಿಶೀಲಿಸಿ, ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಮೇಲ್ವಿಚಾರಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪೋಷಣ ಅಭಿಯಾನ ಸಿಬ್ಬಂದಿಯವರು ಭೇಟಿ ನೀಡಿ ಪೋಷಕರಿಗೆ ಮಾರ್ಗದರ್ಶನ ನೀಡಿ ಆರೋಗ್ಯ ಸೇವೆ ಒದಗಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಮುಖ್ಯವಾಗಿ ರಕ್ತಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರನ್ನು ಆರೋಗ್ಯ ಇಲಾಖೆಯ ಸಹಕಾರದಿಂದ ಗುರುತಿಸಿ ಅಂತಹ ಗರ್ಭಿಣಿಯರಿಗೆ ಪೌಷ್ಠಿಕ ಮಟ್ಟ ಹೆಚ್ಚಿಸಿಕೊಳ್ಳುವಲ್ಲಿ ತಿಳುವಳಿಕೆ ನೀಡಿದ್ದಲ್ಲದೆ ಅವರಲ್ಲಿ ಹೆಚ್.ಬಿ. ಪ್ರಮಾಣ 7ರಿಂದ 10ಕ್ಕಿಂತ ಕಡಿಮೆ ಇದ್ದುದರಿಂದ ಆಯ್ದ ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಬೆಳೆದ ಸೊಪ್ಪು ತರಕಾರಿಗಳನ್ನು ನಿಯಮಿತವಾಗಿ ಪೂರೈಸಿ ಸುಧಾರಣೆಯ ಮಹತ್ವವನ್ನು ಗಮನಿಸಲಾಗಿರುತ್ತದೆ ಎಂದರು.
ಕೇAದ್ರ ಸರಕಾರದ ಯೋಜನೆಯಾದ ಪೋಷಣೆ ಮಹಾ 2021ಕ್ಕೆ ನಿಗದಿಪಡಿಸಿದ ಕ್ರಿಯಾ ಯೋಜನೆಯಮತೆ ಪ್ರತಿನಿತ್ಯ ಎಲ್ಲಾ ಅಂಗನವಾಡಿ ಕೇಂದ್ರಗಳ ಮುಖಾಂತರ ನಿಗದಿತ ಕಾರ್ಯಕ್ರಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಪೋಷಣ ಅಭಿಯಾನ ಬಹುನಿರೀಕ್ಷಿತ ಯೋಜನೆಗಳಲ್ಲೊಂದಾದ ಸಮುದಾಯ ಆಧಾರಿತ ಚಟುವಟಿಕೆಗಳ ಮುಖಾಂತರ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಬಾಣಂತಿ ಗರ್ಭಿಣಿ ಮತ್ತು ಮಕ್ಕಳ ಸಮಗ್ರ ಬೆಳವಣಿಗೆಯನ್ನು ಮೂಡಿಸುವ ನಿಟ್ಟಿನಲ್ಲಿ ಪೋಷಣ ಅಭಿಯಾನ ಯೋಜನೆ ಅಡಿಯಲ್ಲಿ ಸಮುದಾಯ ಆಧಾರಿತ ಚಟುವಟಿಕೆಗಳನ್ನು ನಡೆಸಲು ಪ್ರಾರಂಭಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗುರುಮಟಕಲ್ ತಾ.ಪಂ ಕಾರ್ಯನಿರ್ವಾಹಕಾಧಿಕಾರಿ,ಯಾದಗಿರಿ ತಾಲೂಕ ವೈದ್ಯಾಧಿಕಾರಿಗಳು,ಯಾದಗಿರಿ ಕ್ಷೇತ್ರ ಶಿಕ್ಷಾಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಇತರರಿದ್ದರು
ಫ್ರೂಟ್ಸ್ ಐಡಿ ಪಡೆಯಲು ಮನವಿ
ಯಾದಗಿರಿ ಏಪ್ರಿಲ್-08(ಕ.ವಾ) ರೈತರು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅಲೆದಾಡುವದನ್ನು ತಪ್ಪಿಸಲು ಆಯೋಜಿತ ಮತ್ತು ಪರೀಕ್ಷಿತ ರೈತರ ದತ್ತಾಂಶ ಸಂಗ್ರಹಣೆಗೆ (ಫ್ರೂಟ್ಸ್) ತಂತ್ರಾAಶ ಅಭಿವೃದ್ಧಿಪಡಿಸಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ಫ್ರೂಟ್ಸ್ ತಂತ್ರಾAಶದಲ್ಲಿ ನೋಂದಾಯಿಸಿ ಫ್ರೂಟ್ಸ್ ಐಡಿ ಯನ್ನು ಪಡೆಯಲು ತಮ್ಮ ಆಧಾರ ಗುರುತಿಸಿ ಚೀಟಿ, ಭೂದಾಖಲಾತಿ ಪಹಣಿ ಬ್ಯಾಂಕ್ ಖಾತೆ ಮೀಸಲಾತಿಗೆ ಸಂಬAಧಿಸಿದ ಜಾತಿ ಪ್ರಮಾಣ ಪತ್ರ ಮತ್ತು 2 ಭಾವಚಿತ್ರಗಳೊಂದಿಗೆ ತಮ್ಮ ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ ನಾಡಕಛೇರಿ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ದಾಖಲಾತಿಗಳನ್ನು ಸಲ್ಲಿಸಿ ಫ್ರೂಟ್ಸ್ ತಂತ್ರಾAಶದಲ್ಲಿ ನೋಂದಾಯಿಸಿಕೊಳ್ಳಲು ಅವರು ಕೋರಿದ್ದಾರೆ.
ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ, ಕಂದಾಯ, ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಂದ ರೈತರು ಯಾವುದೇ ಸೌಲಭ್ಯಗಳನ್ನು ಪಡೆಯಲು ಫ್ರೂಟ್ಸ್ ಐಡಿ ಸಹಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಯಾದಗಿರಿ ಏಪ್ರಿಲ್-08(ಕ.ವಾ)110 ಕೆವಿ ವಿದ್ಯುತ್ ಉಪಕೇಂದ್ರ ಸುರಪುರ ದಲ್ಲಿ 1x10mvಚಿ ಪವರ್ ಟ್ರಾನ್ಸಫಾರಮರ್ ಅನ್ನು ತೆಗೆದು ಹೊಸ 20 mvಚಿ ಪವರ್ ಟ್ರಾನ್ಸಫಾರಮರ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವ ಪ್ರಯುಕ್ತ ಈ ಕೆಳಕಂಡ ಗ್ರಾಮಗಳಲ್ಲಿ ಇದೇ ಏಪ್ರಿಲ್ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸುರಪುರ ತಾಲೂಕಿನ ಗ್ರಾಮಗಳಾದ ಸತ್ಯಂಪೇಠ, ದೇವಿಕೇರಿ, ಲಕ್ಷಿö್ಮÃಪುರ, ಬಿಜಸಪೂರ,ರತ್ತಾಳ,ಹಾಲಗೇರಾ, ಶಾಖಾಪೂರ, ಯಮನೂರ,ಕವಡಿಮಟ್ಟಿ, ಹಾವಿನಾಳ,ಆಲ್ದಾಳ,ನಾಗರಾಳ ಹಾಗೂ ದೇವಿನಾಳ ಗ್ರಾಮದಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಜೆಸ್ಕಾಂಗೆ ಸಹಕಾರ ನೀಡುವಂತೆ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಯಾದಗಿರಿಯ ಕಾರ್ಯ ಮತ್ತು ಪಾಲನ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮರಣ ಪತ್ರದೊಂದಿಗೆ ಕುಟುಂಬ ಗುರುತಿನ ಸಂಖ್ಯೆ ಜೋಡಣೆ ಕಡ್ಡಾಯ
ಯಾದಗಿರಿ ಏಪ್ರಿಲ್-08(ಕ.ವಾ) ಮರಣ ಪತ್ರದೊಂದಿಗೆ ಕುಟುಂಬ ಗುರುತಿನ ಸಂಖ್ಯೆ ಜೋಡಣೆ ಕಾರ್ಯವು ಪ್ರಗತಿಯಲ್ಲಿದ್ದು, ಮರಣ ಪ್ರಮಾಣ ಪತ್ರಗಳ ಜೋಡಣೆಗಾಗಿ ಮೃತ ವ್ಯಕ್ತಿಯ ಹೆಸರು ಹೊಂದಿರುವ ಸಂಬAಧಿಕರ ಪಡಿತರ ಚೀಟಿ ಹಾಗೂ ಆಧಾರ ಕಾರ್ಡ ಅತ್ಯವಶ್ಯಕವಾಗಿರುವದರಿಂದ ಕಂದಾಯ ಇಲಾಖೆ/ನಗರ ಸ್ಥಳಿಯ ಸಂಸ್ಥೆಯ ಸಿಬ್ಬಂದಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿದಾಗ ಸಂಬAಧಪಟ್ಟ ದಾಖಲೆಗಳನ್ನು ನೀಡುವುದು ಅಥವಾ ಹತ್ತಿರದ ನಾಡ ಕಚೇರಿ/ತಹಸೀಲ್ದಾರ ಕಚೇರಿ/ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡುವಂತೆ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*******************************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ