ಸೋಮವಾರ, ಜುಲೈ 5, 2021

 ಕಾನೂನು ಪದವೀಧರರ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

ಯಾದಗಿರಿ;ಜುಲೈ-5(ಕ.ವಾ): 2021-22ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದೂಳಿದ ವರ್ಗಗಳ ಕಾನೂನು ಪದವೀಧರರಿಗೆ ಸರ್ಕಾರಿ ವಕೀಲರ  ಅಥವಾ 20 ವರ್ಷಗಳಿಗಿಂತ ಹೆಚ್ಚಿನ ಅನುಭವವುಳ್ಳ ವಕೀಲರಿಂದ ತರಬೇತಿ ನೀಡಲು  ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  

   

 ಕಾನೂನು ಪದವಿ ಪಡೆದ ಹಿಂದುಳಿದ ವರ್ಗಕ್ಕೆ ಸೇರಿರುವ ಅಭ್ಯರ್ಥಿಗಳು 30ವರ್ಷದೊಳಗಿನವಾರಗಿರಬೇಕು ಮತ್ತು ಅರ್ಜಿ ಸಲ್ಲಿಸಲು  ನಿಗದಿ ಪಡಿಸಿದ ಕಡೆಯ ದಿನಾಂಕಕ್ಕೆ ಅಭ್ಯರ್ಥಿಯು 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಬಾರ್ ಕೌನ್ಸಿಲ್‌ನಲ್ಲಿ ಹೆಸರು ನೋಂದಾಯಿಸಿರಬೇಕು. 

   

  ಹಿಂದುಳಿದ ವರ್ಗಗಳ ಪ್ರವರ್ಗ-1ರಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3.50ಲಕ್ಷರೂ ಮೀರಿರಬಾರದು, ಪ್ರವರ್ಗ-2ಎ, 3ಎ, 3ಬಿ ಅಭ್ಯರ್ಥಿಗಳಿಗೆ 2.50 ಲಕ್ಷ ರೂ ನಿಗದಿಪಡಿಸಲಾಗಿದ್ದು,ಅಭ್ಯರ್ಥಿಗಳು ನಿಗದಿತ ನಮೂನೆ  ಅರ್ಜಿಯನ್ನು ಭರ್ತಿಮಾಡಿ ಜುಲೈ 19ರೊಳಗೆಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. 

    

 ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ವರ್ಷಗಳ ಕಾಲ ತರಬೇತಿಯೊಂದಿಗೆ ಪ್ರತಿ ತಿಂಗಳಿಗೆ 4000ರೂ ತರಬೇತಿ ಭತ್ಯೆ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂಖ್ಯೆ: 08473-253742ಗೆ ಸಂಪರ್ಕಿಸಲು ಕೋರಿದೆ.


ಅಸಂಘಟಿತ ವಲಯದ ಕಾರ್ಮಿಕರ ಪರಿಹಾರ ಧನ ಪಡೆಯಲು ಅರ್ಜಿ ಆಹ್ವಾನ

ಯಾದಗಿರಿ;ಜುಲೈ-5(ಕ.ವಾ): ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ  ಬರುವ ಅಸಂಘಟಿತ ಕಾರ್ಮಿಕರಿಗೆ ಕೊವಿಡ್-19 ಪ್ರಯುಕ್ತ ಸರಕಾರ ಘೋಷಿಸಿರುವ ರೂ.2,000/-ಗಳ ಪರಿಹಾರ ಧನ ಪಡೆಯಲು ಜುಲೈ 31 ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಂತೆ ಯಾದಗಿರಿ ಉಪ ವಿಭಾಗದ ಕಾರ್ಮಿಕ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಅಸಂಘಟಿತ ವಲಯದ ಕಾರ್ಮಿಕರಾದ ಕ್ಷೌರಿಕರು, ಅಗಸರು, ಟೈಲರಗಳು, ಹಮಾಲರು,ಚಿಂದಿ ಆಯುವರು,ಕುಂಬಾರರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್ರು, ಕಮ್ಮಾರರು ಮತ್ತು ಗೃಹಕಾರ್ಮಿಕರು ಈ ವರ್ಗದ ಅರ್ಹ ಫಲಾನುಭವಿಗಳು ಪರಿಹಾರ ಧನ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. 

   

ಅರ್ಜಿಯೊಂದಿಗೆ ಸಲ್ಲಿಸಬೇಕಾದ ಉದ್ಯೊಗ ದೃಡೀಕರಣ ಪತ್ರದಲ್ಲಿ ಮನೆ ಕಾರ್ಮಿಕರಿಗೆ ಸಂಬAದಿಸಿದAತೆ ಮಾತ್ರ ನಿಗದಿಪಡಿಸಿದ ಅಧಿಕಾರಿಗಳಿಂದ ಅಥವಾ ಅವರು ಕಾರ್ಯನಿರ್ವಹಿಸುತ್ತಿರುವ ಮಾಲೀಕರಿಂದ ಸಹ ಸಹಿ ಮಾಡಿಸಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಇದಕ್ಕಾಗಿ ಪ್ರತ್ಯೇಕ ನಮೂನೆಯ ಉದ್ಯೋಗ ಪ್ರಮಾಣ ಪತ್ರವನ್ನು ಹೊರಡಿಸಲಾಗಿದ್ದು, ಮೊಬೈಲ್ ಸಂಖ್ಯೆ ನಮೂದಿಸುವುದನ್ನು ಐಚ್ಚಿಕಗೊಳಿಸಿಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ 155214ಗೆ ಅಥವಾ ಕಾರ್ಮಿಕ ಅಧಿಕಾರಿಯವರ ಕಚೇರಿ ಯಾದಗಿರಿ ದೂರವಾಣಿ: 08473-253727 ಸಂಪರ್ಕಿಸಲು ತಿಳಿಸಿದೆ.


ಶನಿವಾರ, ಜುಲೈ 3, 2021

 8ರಂದು ಯಾದಗಿರಿ ನಗರಸಭೆಯ ಸಾಮಾನ್ಯಸಭೆ

ಯಾದಗಿರಿ,ಜುಲೈ03(ಕ.ವಾ):-ಇಲ್ಲಿನ ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯು ಇದೇ ಜುಲೈ 8 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ವಿಲಾಸ ಪಾಟೀಲ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ ಅವರು ತಿಳಿಸಿದ್ದಾರೆ.


 ಯಾದಗಿರಿ ನಗರಸಭೆ ಸ್ಥಿರಾಸ್ತಿಗಳ ತೆರಿಗೆ ಪಾವತಿಸಲು ಸೂಚನೆ

ಯಾದಗಿರಿ,ಜುಲೈ03(ಕ.ವಾ):- ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿ ಮಾಲೀಕರು ಹಾಗೂ ಅನುಭೋಗದಾರರಿಗೆ 2021-22ನೇ ಸಾಲಿನ ಆರ್ಥಿಕ ವರ್ಷದ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇಕಡ 5ರ ರಿಯಾಯತಿಯ ಕಾಲಾವಧಿಯನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದ್ದು, ಆಗಸ್ಟ್ 1ರ ನಂತರ ಪಾವತಿಸಲಾಗುವ ಆಸ್ತಿ ತೆರಿಗೆಯ ಮೇಲೆ ಪ್ರತಿ ತಿಂಗಳಿಗೆ ಶೇಕಡ 2ರಂತೆ ದಂಡ ವಿಧಿಸಲಾಗುವುದದು ಎಂದು ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ ಅವರು ತಿಳಿಸಿದ್ದಾರೆ.


 ನಗರಸಭೆಗೆ ಬಾಕಿ ಇರುವ ಅಥವಾ ಚಾಲ್ತಿ ಸಾಲಿಗೆ ಪಾವತಿಸಬೇಕಾಗಿರುವ ಆಸ್ತಿ ತೆರಿಗೆ, ನೀರಿನ ಬಳಕೆದಾರರ ಶುಲ್ಕ, ಉದ್ದಿಮೆ ಪರವಾನಿಗೆ, ಮಳಿಗೆ ಬಾಡಿಗೆ, ಜಾಹೀರಾತು ಶುಲ್ಕ ಹಾಗೂ ಇತರ ಶುಲ್ಕಗಳನ್ನು ನಿಗಧಿತ ಅವಧಿಯ ಒಳಗಾಗಿ ಪಾವತಿಸಿ ಯಾದಗಿರಿ ನಗರದ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


 ರೈತರ ಅಂಗೈನಲ್ಲಿಯೇ ಬೆಳೆ ಸಮೀಕ್ಷೆ ಮಾಹಿತಿ 

ಯಾದಗಿರಿ,ಜುಲೈ03(ಕ.ವಾ):- 2021-22ನೇ  ರೈತರಿಗೆ ನೇರವಾಗಲೆಂದು ಅಭಿವೃದ್ದಿ ಪಡಿಸಿರುವ ಬೆಳೆ ಸಮೀಕ್ಷೆ ಆ್ಯಪ್ ರೈತರಿಗೆ ಸಾಕಷ್ಟು ಸಹಕಾರಿಯಾಗಿದ್ದು, ಕೃಷಿ ಇಲಾಖೆಯೂ ರೈತರಿಗೆ ಸಮಗ್ರ ಮಾಹಿತಿ ಒದಗಿಸಿದ ಪರಿಣಾಮ ಸಾಕಷ್ಟು ರೈತರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

ರೈತರೆ ಸ್ವತಃ ಬೆಳೆ ಸಮೀಕ್ಷೆ ನಡೆಸಿ ತಾವೇ ಪ್ರಮಾಣ ಪತ್ರ ನೀಡುವ ರೈತ ಬೆಳೆ ಸಮೀಕ್ಷೆ ಆ್ಯಪ್ ಇದಾಗಿದ್ದು,  ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಛಾಯ ಚಿತ್ರ ಸಹಿತ 2021ರ ಮುಂಗಾರು ಬೆಳೆ ಸಮೀಕ್ಷೆ ಮೋಬೈಲ್ ಆ್ಯಪ್ ಮೂಲಕ ಸ್ವತಃ, ರೈತರ ಬೆಳೆ ಸಮೀಕ್ಷೆಗಾಗಿ ಸಿದ್ದಪಡಿಸಿರುವ ಆ್ಯಪ್ ನಿಂದ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ನಿಖರವಾಗಿ ದಾಖಲಿಸಬಹುದು. ರೈತರೆ ತಮ್ಮಲ್ಲಿ ಇರುವ ಸ್ಮಾರ್ಟ್ ಮೋಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಾವು ಬೆಳೆದಿರುವ ಮಾಹಿತಿಯನ್ನು ಆಪ್‌ಲೋಡ್ ಮಾಡಬೇಕು.

ಬೆಳೆ ಸಮೀಕ್ಷೆಯ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ   ಯೋಜನೆಗಳಡಿ ವಿವಿಧ ಸವಲತ್ತುಗಳನ್ನು ಒದಗಿಸಲು ಮತ್ತು ಆರ್.ಟಿ.ಸಿ ಯಲ್ಲಿ ಅಳವಡಿಸಲು ಬಳಸಲಾಗುತ್ತದೆ.

2021 ಮುಂಗಾರು ರೈತರ ಬೆಳೆ ಸಮೀಕ್ಷೆ ಅಪ್ಲಿಕೇಷನ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು ಞhಚಿಡಿiಜಿ seಚಿsoಟಿ ಜಿಚಿಡಿmeಡಿ ಛಿಡಿoಠಿ suಡಿveಥಿ 2021-22 ಂಠಿಠಿಟiಛಿಚಿಣioಟಿ ಅನ್ನು ಠಿಟಚಿಥಿ sಣoಡಿe ನಿಂದ ಡೌನ್‌ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆಯನ್ನು ಮಾಡಬಹುದು.

ರೈತರ ಆಧಾರ ಸಂಖ್ಯೆ, ಪೂರ್ಣ ವಿಳಾಸ ಹಾಗೂ ಮೊಬೈಲ್ ನಂಬರ್ ವಿವರವನ್ನು ನಮೂದಿಸಿ ತಮ್ಮ ಜಮೀನಿನ ಸರ್ವೇ ನಂಬರ್ ನಲ್ಲಿ ಬಿತ್ತನೇ/ ನಾಟಿ ಮಾಡಿದ ಬೆಳೆಯ ವಿವರ ಹಾಗೂ ವಿಸ್ತಿರ್ಣವನ್ನು ಹಿಸ್ಸಾವಾರು ಮುಂಗಾರು ರೈತರ ಬೆಳೆ ಸಮೀಕ್ಷೆ 2021 ಆ್ಯಪ್ ನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕು.

ರೈತರ ಬೆಳೆ ಸಮೀಕ್ಷೆ ಅಪ್ಲಿಕೇಷನ್ ಬಳಸುವ ಬಗ್ಗೆ ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಲು (ಪಿ.ಆರ್) ಅಥವಾ ಗ್ರಾಮ ಲೇಕ್ಕಾಧಿಕಾರಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ಹೋಬಳಿ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಕೊರಿದ್ದಾರೆ.


 “ಕೌಶಲ್ಯ ಕಲಿಕೆ ಹಾಗೂ ಉಚಿತ ತರಬೇತಿ”

ಯಾದಗಿರಿ,ಜುಲೈ03(ಕ.ವಾ):- ಕೊರೋನಾ ಸಾಂಕ್ರಾಮಿಕ ರೋಗದಿಂದ ಬಹುತೇಕ ಕ್ಷೇತ್ರಗಳಲ್ಲಿ ಅದರಲ್ಲೂ ಹೆಚ್ಚಾಗಿ ಶಿಕ್ಷಣ, ಹೋಟೆಲ್, ಪ್ರವಾಸೋದ್ಯಮದಲ್ಲಿ ಉದ್ಯೋಗ ನಷ್ಟವಾಗಿವೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಶಿಕ್ಷಕರು, ಪ್ರವಾಸಿ ಮಾರ್ಗದರ್ಶಿಗಳು, ಹೋಟೆಲ್ ಉದ್ಯೋಗಿಗಳು ಸೇರಿದಂತೆ ಇನ್ನಿತರ ವಲಯಗಳಲ್ಲಿ ಉದ್ಯೋಗ ಕಳೆದುಕೊಂಡ ಆಸಕ್ತರಿಗೆ ಉದ್ಯೋಗದ ಕೌಶಲ್ಯಗಳನ್ನು ನವೀನ ಕಾರ್ಯಕ್ರಮದ ಮೂಲಕ “ಕೌಶಲ್ಯ ಕಲಿಕೆ ಹಾಗೂ ಉಚಿತ ತರಬೇತಿ”ಯನ್ನು ನೀಡಲಿದೆ. 

ಜಿಲ್ಲೆಯ ಆಸಕ್ತರು ತಮ್ಮ ವಿವರಗಳನ್ನು hಣಣಠಿs://ಛಿoviಜhoಠಿes.ಞಚಿushಚಿಟಞಚಿಡಿ.ಛಿom ಇಲ್ಲಿ ಭರ್ತಿ ಮಾಡಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9880072695 ವಿಠೋಬ ಮೊ,ಸಂ: 9986657432 ಸಂರ್ಪಕಿಸಬಹುದಾಗಿದೆ. ಹಾಗೂ ನೋಂದಣಿಗಾಗಿ ಸಹಾಯಕ ನಿರ್ದೇಶಕರು, ಕೌಶಲ್ಯಭಿವೃದ್ಧಿ ಅಧಿಕಾರಿ, ಬಸಪ್ಪ ತಳವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ, ಜುಲೈ 2, 2021

 ವಿದ್ಯಾರ್ಥಿ ವೇತನ:ಬ್ಯಾಂಕ್‌ನಲ್ಲಿ ಆಧಾರ ಜೋಡಣೆಗಾಗಿ ಮನವಿ

*****************************
ಯಾದಗಿರಿ: ಜುಲೈ 02(ಕ.ವಾ):2019-20 ಮತ್ತು 2020-21 ನೇ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಎನ್.ಪಿ.ಸಿ.ಐ ನಲ್ಲಿ ಆಧಾರ್ ಜೋಡಣೆ ಮಾಡಿಕೊಳ್ಳಲು ಯಾದಗಿರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಆಧಾರ್ ಜೋಡಣೆ ಆದರೆ ಮಾತ್ರ ಡಿ.ಬಿ.ಟಿ ಮುಖಾಂತರ ವಿದ್ಯಾರ್ಥಿವೇತನ ಮಂಜೂರು ಮಾಡಲು ಆಗುವುದು. ಮೆಟ್ರಿಕ್ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ತಮ್ಮ ಆಧಾರ್‌ನ್ನು ಸಂಬAಧಿಸಿದ ಬ್ಯಾಂಕ್ ಹೋಗಿ ಆಧಾರ ಜೋಡಣೆ ಮಾಡಲು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಂದ ಶಿಶಿಕ್ಷÄ ತರಬೇತಿಗಾಗಿ ಅರ್ಜಿ ಆಹ್ವಾನ
**********************
ಯಾದಗಿರಿ: ಜುಲೈ 02(ಕ.ವಾ): ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವ್ಯಾಪ್ತಿಯ ಟೆಕ್ನಿಕಲ್ ಟ್ರೆöÊನಿಂಗ್ ಇನ್‌ಸ್ಟಿಟ್ಯೂಟ್ ಕೆಳಕಂಡ ವಿವಿಧ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್‌ತರಬೇತಿಗಾಗಿ ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಂದ ಶಿಶಿಕ್ಷÄ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ.

ಟ್ರೇಡ್ ಹೆಸರು ಹಾಗೂ ಖಾಲಿ ಹುದ್ದೆಗಳ ವಿವರ: ಫಿಟ್ಟರ್,  ಟರ್ನರ್,  ಮಶಿನಿಸ್ಟ್, ಎಲೆಕ್ಟಿçÃಷನ್,  ವೆಲ್ಡರ್,  ಪಾಸಾ/ಕೊಪಾ,  ಫೌಂಡ್ರಿಮನ್, ಶೀಟ್ ಮೆಟಲ್ ವರ್ಕ್ಅರ್ಹ  ಆಸಕ್ತಿಯುಳ್ಳ  ಅಭ್ಯರ್ಥಿಗಳು  ಎಸ್.ಎಸ್.ಎಲ್.ಸಿ, ಐ.ಟಿ.ಐ  ಪಾಸಾದಅಂಕಪಟ್ಟಿ, ಅಧಾರಕಾರ್ಡ್ಜಾತಿ ಪ್ರಮಾಣ ಪತ್ರ  (ಮೀಸಲಾತಿ  ಬಯಸಿದ್ದಲ್ಲಿ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಂಗವಿಕಲ, ಪ್ರಮಾಣಪತ್ರಹೊಂದಿದ್ದಲ್ಲಿ ), NIC MIS portal Registration Number (www.apprenticeship.gov.in)     ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಇದೇ 2021 ಜುಲೈ 22 ರೊಳಗೆ  ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ  ವಿನಿಮಯ ಕಛೇರಿ, ಯಾದಗಿರಿ ಕಛೇರಿಗೆ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ  ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಗ್ರಂಥಾಲಯಗಳಿಗೆ ಪುಸ್ತಕಗಳ ಆಯ್ಕೆ: ಅರ್ಜಿ ಆಹ್ವಾನ

ಯಾದಗಿರಿ,ಜುಲೈ.02.(ಕ.ವಾ.)-ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ ಯೋಜನೆಯಡಿ 2021ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ವೃತ್ತಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆದಾಯ ಉತ್ಪಾದನಾ ಯೋಜನೆ, ಸ್ಪರ್ಧಾತ್ಮಕ, ಪಠ್ಯ ಪುಸ್ತಕ, ಸಾಂದರ್ಭಿಕ ಮತ್ತು ಪರಾಮರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ, ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ, ಇತರೆ ಭಾರತೀಯ ಭಾಷೆಗಳ ಗ್ರಂಥಗಳ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳಿAದ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ ಎಂದು ಯಾದಗಿರಿ ನಗರ  ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2021ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥ ಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ 2021ರ ಜುಲೈ 31ರೊಳಗೆ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಮಾತ್ರ ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಕಚೇರಿಗೆ 2021ರ ಜುಲೈ 31ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಯಾವುದೇ ಪುಸ್ತಕಗಳನ್ನು ಆಯ್ಕೆಗೆ ಸ್ವೀಕರಿಸಲಾಗುವುದಿಲ್ಲ. 

ಪುಸ್ತಕಗಳು 2021ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರಬೇಕು. ಮರು ಮುದ್ರಣವಾದಲ್ಲಿ ಹತ್ತು ವರ್ಷಗಳ ಅಂತರ ಇರಬೇಕು. ಈ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ನಿಗದಿತ ಅರ್ಜಿ ನಮೂನೆ, ಹಾಗೂ ನಿಬಂಧನೆ, ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆ  ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ತಿತಿತಿ.ಜಠಿಟ.ಞಚಿಡಿಟಿಚಿಣಚಿಞಚಿ.gov.iಟಿ  ವೆಬ್‌ಸೈಟ್  ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಯಾದಗಿರಿ ಜು.2.(ಕ.ವಾ)-ನಾಲವಾರ  ರೈಲ್ವೆ ನಿಲ್ದಾಣದ ಪ್ಲಾಟಫಾರಂ-2ರಲ್ಲಿ ಜೂನ್ 25ರಂದು ಸುಮಾರು 65 ವರ್ಷದ ಅಪರಿಚಿತ (ಪುರುಷ) ವ್ಯಕ್ತಿಯ ಮೃತ ದೇಹವು ಪತ್ತೆಯಾಗಿದ್ದು, ಈವರೆಗೆ ಮೃತನ ವಾರಸುದಾರರು ಯಾರೂ ಪತ್ತೆಯಾಗಿರುವುದಿಲ್ಲ.

ರಾಯಚೂರು ಪೊಲೀಸ್ ಠಾಣೆಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ್ದು, ಮೃತನು, ಉದ್ದನೆಯ ಮೂಗು,  ಗೋಧಿ ಮೈಬಣ್ಣ, ಸದೃಢ ಮೈಕಟ್ಟು ಮತ್ತು 5 ಅಡಿ 4 ಇಂಚು ಎತ್ತರ ಇದ್ದು, ತಲೆಯಲ್ಲಿ ಒಂದೂವರೆ ಇಂಚು ಉದ್ದದ ಕಪ್ಪು ಮಿಶ್ರಿತ ಬಿಳಿ ಕೂದಲು,ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ.

ಮೃತ ವ್ಯಕ್ತಿಯು ಒಂದು ನೀಲಿ ಮತ್ತು  ಬಿಳಿಯ ಗೆರುಗಳ್ಳುಳ ಹಾಫ್ ಟೀ ಶರ್ಟ್, ಒಂದು ನೀಲಿ ಬಣ್ಣದ ಲುಂಗಿ, ಕಾವಿ ಬಣ್ಣದ ಮೂರು ಲುಂಗಿ, ಒಂದು ಮಾಸಿದ ಕೆಂಪು ಮತ್ತು ನೀಲಿ ಮಿಶ್ರಿತ ಹಾಫ್ ಶರ್ಟ್, ಒಂದು ಸ್ಟೀಲ್ ಗ್ಲಾಸ್,ಒಂದು ಕಪ್ಪು ಬಣ್ಣದ ರಗ್ಗು ಹೊಂದಿರುತ್ತಾರೆ.

ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ರಾಯಚೂರು ಪೋಲಿಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಇವರನ್ನು ಅಥವಾ ಠಾಣೆಯ ದೂರವಾಣಿ ಸಂಖ್ಯೆ 08532-231716, ಮೊಬೈಲ್ ಸಂಖ್ಯೆ 948080211ಗೆ ಅಥವಾ ರೇಲ್ವೆ ಪೋಲಿಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ.080-22871291 ಸಂಪರ್ಕಿಸಲು ಕೋರಿದೆ.




                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...