ಶನಿವಾರ, ಜುಲೈ 3, 2021

 “ಕೌಶಲ್ಯ ಕಲಿಕೆ ಹಾಗೂ ಉಚಿತ ತರಬೇತಿ”

ಯಾದಗಿರಿ,ಜುಲೈ03(ಕ.ವಾ):- ಕೊರೋನಾ ಸಾಂಕ್ರಾಮಿಕ ರೋಗದಿಂದ ಬಹುತೇಕ ಕ್ಷೇತ್ರಗಳಲ್ಲಿ ಅದರಲ್ಲೂ ಹೆಚ್ಚಾಗಿ ಶಿಕ್ಷಣ, ಹೋಟೆಲ್, ಪ್ರವಾಸೋದ್ಯಮದಲ್ಲಿ ಉದ್ಯೋಗ ನಷ್ಟವಾಗಿವೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಶಿಕ್ಷಕರು, ಪ್ರವಾಸಿ ಮಾರ್ಗದರ್ಶಿಗಳು, ಹೋಟೆಲ್ ಉದ್ಯೋಗಿಗಳು ಸೇರಿದಂತೆ ಇನ್ನಿತರ ವಲಯಗಳಲ್ಲಿ ಉದ್ಯೋಗ ಕಳೆದುಕೊಂಡ ಆಸಕ್ತರಿಗೆ ಉದ್ಯೋಗದ ಕೌಶಲ್ಯಗಳನ್ನು ನವೀನ ಕಾರ್ಯಕ್ರಮದ ಮೂಲಕ “ಕೌಶಲ್ಯ ಕಲಿಕೆ ಹಾಗೂ ಉಚಿತ ತರಬೇತಿ”ಯನ್ನು ನೀಡಲಿದೆ. 

ಜಿಲ್ಲೆಯ ಆಸಕ್ತರು ತಮ್ಮ ವಿವರಗಳನ್ನು hಣಣಠಿs://ಛಿoviಜhoಠಿes.ಞಚಿushಚಿಟಞಚಿಡಿ.ಛಿom ಇಲ್ಲಿ ಭರ್ತಿ ಮಾಡಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9880072695 ವಿಠೋಬ ಮೊ,ಸಂ: 9986657432 ಸಂರ್ಪಕಿಸಬಹುದಾಗಿದೆ. ಹಾಗೂ ನೋಂದಣಿಗಾಗಿ ಸಹಾಯಕ ನಿರ್ದೇಶಕರು, ಕೌಶಲ್ಯಭಿವೃದ್ಧಿ ಅಧಿಕಾರಿ, ಬಸಪ್ಪ ತಳವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ, ಜುಲೈ 2, 2021

 ವಿದ್ಯಾರ್ಥಿ ವೇತನ:ಬ್ಯಾಂಕ್‌ನಲ್ಲಿ ಆಧಾರ ಜೋಡಣೆಗಾಗಿ ಮನವಿ

*****************************
ಯಾದಗಿರಿ: ಜುಲೈ 02(ಕ.ವಾ):2019-20 ಮತ್ತು 2020-21 ನೇ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಎನ್.ಪಿ.ಸಿ.ಐ ನಲ್ಲಿ ಆಧಾರ್ ಜೋಡಣೆ ಮಾಡಿಕೊಳ್ಳಲು ಯಾದಗಿರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಆಧಾರ್ ಜೋಡಣೆ ಆದರೆ ಮಾತ್ರ ಡಿ.ಬಿ.ಟಿ ಮುಖಾಂತರ ವಿದ್ಯಾರ್ಥಿವೇತನ ಮಂಜೂರು ಮಾಡಲು ಆಗುವುದು. ಮೆಟ್ರಿಕ್ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ತಮ್ಮ ಆಧಾರ್‌ನ್ನು ಸಂಬAಧಿಸಿದ ಬ್ಯಾಂಕ್ ಹೋಗಿ ಆಧಾರ ಜೋಡಣೆ ಮಾಡಲು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಂದ ಶಿಶಿಕ್ಷÄ ತರಬೇತಿಗಾಗಿ ಅರ್ಜಿ ಆಹ್ವಾನ
**********************
ಯಾದಗಿರಿ: ಜುಲೈ 02(ಕ.ವಾ): ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವ್ಯಾಪ್ತಿಯ ಟೆಕ್ನಿಕಲ್ ಟ್ರೆöÊನಿಂಗ್ ಇನ್‌ಸ್ಟಿಟ್ಯೂಟ್ ಕೆಳಕಂಡ ವಿವಿಧ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್‌ತರಬೇತಿಗಾಗಿ ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಂದ ಶಿಶಿಕ್ಷÄ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ.

ಟ್ರೇಡ್ ಹೆಸರು ಹಾಗೂ ಖಾಲಿ ಹುದ್ದೆಗಳ ವಿವರ: ಫಿಟ್ಟರ್,  ಟರ್ನರ್,  ಮಶಿನಿಸ್ಟ್, ಎಲೆಕ್ಟಿçÃಷನ್,  ವೆಲ್ಡರ್,  ಪಾಸಾ/ಕೊಪಾ,  ಫೌಂಡ್ರಿಮನ್, ಶೀಟ್ ಮೆಟಲ್ ವರ್ಕ್ಅರ್ಹ  ಆಸಕ್ತಿಯುಳ್ಳ  ಅಭ್ಯರ್ಥಿಗಳು  ಎಸ್.ಎಸ್.ಎಲ್.ಸಿ, ಐ.ಟಿ.ಐ  ಪಾಸಾದಅಂಕಪಟ್ಟಿ, ಅಧಾರಕಾರ್ಡ್ಜಾತಿ ಪ್ರಮಾಣ ಪತ್ರ  (ಮೀಸಲಾತಿ  ಬಯಸಿದ್ದಲ್ಲಿ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಂಗವಿಕಲ, ಪ್ರಮಾಣಪತ್ರಹೊಂದಿದ್ದಲ್ಲಿ ), NIC MIS portal Registration Number (www.apprenticeship.gov.in)     ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಇದೇ 2021 ಜುಲೈ 22 ರೊಳಗೆ  ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ  ವಿನಿಮಯ ಕಛೇರಿ, ಯಾದಗಿರಿ ಕಛೇರಿಗೆ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ  ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಗ್ರಂಥಾಲಯಗಳಿಗೆ ಪುಸ್ತಕಗಳ ಆಯ್ಕೆ: ಅರ್ಜಿ ಆಹ್ವಾನ

ಯಾದಗಿರಿ,ಜುಲೈ.02.(ಕ.ವಾ.)-ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ ಯೋಜನೆಯಡಿ 2021ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ವೃತ್ತಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆದಾಯ ಉತ್ಪಾದನಾ ಯೋಜನೆ, ಸ್ಪರ್ಧಾತ್ಮಕ, ಪಠ್ಯ ಪುಸ್ತಕ, ಸಾಂದರ್ಭಿಕ ಮತ್ತು ಪರಾಮರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ, ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ, ಇತರೆ ಭಾರತೀಯ ಭಾಷೆಗಳ ಗ್ರಂಥಗಳ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳಿAದ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ ಎಂದು ಯಾದಗಿರಿ ನಗರ  ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2021ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥ ಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ 2021ರ ಜುಲೈ 31ರೊಳಗೆ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಮಾತ್ರ ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಕಚೇರಿಗೆ 2021ರ ಜುಲೈ 31ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಯಾವುದೇ ಪುಸ್ತಕಗಳನ್ನು ಆಯ್ಕೆಗೆ ಸ್ವೀಕರಿಸಲಾಗುವುದಿಲ್ಲ. 

ಪುಸ್ತಕಗಳು 2021ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರಬೇಕು. ಮರು ಮುದ್ರಣವಾದಲ್ಲಿ ಹತ್ತು ವರ್ಷಗಳ ಅಂತರ ಇರಬೇಕು. ಈ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ನಿಗದಿತ ಅರ್ಜಿ ನಮೂನೆ, ಹಾಗೂ ನಿಬಂಧನೆ, ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆ  ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ತಿತಿತಿ.ಜಠಿಟ.ಞಚಿಡಿಟಿಚಿಣಚಿಞಚಿ.gov.iಟಿ  ವೆಬ್‌ಸೈಟ್  ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಯಾದಗಿರಿ ಜು.2.(ಕ.ವಾ)-ನಾಲವಾರ  ರೈಲ್ವೆ ನಿಲ್ದಾಣದ ಪ್ಲಾಟಫಾರಂ-2ರಲ್ಲಿ ಜೂನ್ 25ರಂದು ಸುಮಾರು 65 ವರ್ಷದ ಅಪರಿಚಿತ (ಪುರುಷ) ವ್ಯಕ್ತಿಯ ಮೃತ ದೇಹವು ಪತ್ತೆಯಾಗಿದ್ದು, ಈವರೆಗೆ ಮೃತನ ವಾರಸುದಾರರು ಯಾರೂ ಪತ್ತೆಯಾಗಿರುವುದಿಲ್ಲ.

ರಾಯಚೂರು ಪೊಲೀಸ್ ಠಾಣೆಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ್ದು, ಮೃತನು, ಉದ್ದನೆಯ ಮೂಗು,  ಗೋಧಿ ಮೈಬಣ್ಣ, ಸದೃಢ ಮೈಕಟ್ಟು ಮತ್ತು 5 ಅಡಿ 4 ಇಂಚು ಎತ್ತರ ಇದ್ದು, ತಲೆಯಲ್ಲಿ ಒಂದೂವರೆ ಇಂಚು ಉದ್ದದ ಕಪ್ಪು ಮಿಶ್ರಿತ ಬಿಳಿ ಕೂದಲು,ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ.

ಮೃತ ವ್ಯಕ್ತಿಯು ಒಂದು ನೀಲಿ ಮತ್ತು  ಬಿಳಿಯ ಗೆರುಗಳ್ಳುಳ ಹಾಫ್ ಟೀ ಶರ್ಟ್, ಒಂದು ನೀಲಿ ಬಣ್ಣದ ಲುಂಗಿ, ಕಾವಿ ಬಣ್ಣದ ಮೂರು ಲುಂಗಿ, ಒಂದು ಮಾಸಿದ ಕೆಂಪು ಮತ್ತು ನೀಲಿ ಮಿಶ್ರಿತ ಹಾಫ್ ಶರ್ಟ್, ಒಂದು ಸ್ಟೀಲ್ ಗ್ಲಾಸ್,ಒಂದು ಕಪ್ಪು ಬಣ್ಣದ ರಗ್ಗು ಹೊಂದಿರುತ್ತಾರೆ.

ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ರಾಯಚೂರು ಪೋಲಿಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಇವರನ್ನು ಅಥವಾ ಠಾಣೆಯ ದೂರವಾಣಿ ಸಂಖ್ಯೆ 08532-231716, ಮೊಬೈಲ್ ಸಂಖ್ಯೆ 948080211ಗೆ ಅಥವಾ ರೇಲ್ವೆ ಪೋಲಿಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ.080-22871291 ಸಂಪರ್ಕಿಸಲು ಕೋರಿದೆ.




ಬುಧವಾರ, ಜೂನ್ 30, 2021

 ಮೌಲನಾ ಆಜಾದ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಯಾದಗಿರಿ,ಜೂನ್30(ಕರ್ನಾಟಕ ವಾರ್ತಾ)- ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2021-22ನೇ ಸಾಲಿಗೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣ, ಸುರಪುರದ (ರಂಗAಪೇಠ), ಗುರುಮಠಕಲ್, ಯಾದಗಿರಿ ಮತ್ತು ಹುಣಸಗಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ ಮಾದರಿ (ವಸತಿ ರಹಿತ ಆಂಗ್ಲ ಮಾಧ್ಯಮ) ಶಾಲೆಗಳಿಗೆ ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ  6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

 ಈ ಶಾಲೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ. 75% ರಷ್ಟು ಸ್ಥಾನಗಳನ್ನು (ಮುಸ್ಲಿಂ-77%, ಕ್ರಿಶ್ಚಿಯನ್-14%, ಜೈನ್-6%, ಬೌದ್ಧ-2%, ಸಿಖ್-1%) ಕಲ್ಪಿಸಲಾಗಿರುತ್ತದೆ. ಶೇ. 25% ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿಯೊಂದಿಗೆ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿ,ಪುಸಕ್ತ, ಲೇಖನ ಸಾಮಾಗ್ರಿ, ಸಮವಸ್ತç, ಬ್ಯಾಗ್ ಸೇರಿದಂತೆ ಮತ್ತಿತರ ಸೌಲಭ್ಯ ನೀಡಲಾಗುವುದು.

ಪ್ರವೇಶ ಬಯಸುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ಆಯಾ ಶಾಲೆಗಳ, ಮುಖ್ಯೋಪಾಧ್ಯಾಯರಲ್ಲಿ ಅಥವಾ ಸಂಬAಧ ಪಟ್ಟ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ / ಜಿಲ್ಲಾ ಮತ್ತು ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಿAದ ಉಚಿತವಾಗಿ ಅರ್ಜಿ ನಮೂನೆಗಳನ್ನು ಪಡೆದುಕೊಂಡು, ಭರ್ತಿಮಾಡಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಜುಲೈ 10ರೊಳಗಾಗಿ ಅರ್ಜಿ ಪಡೆದ ಸ್ಥಳಗಳಲ್ಲಿಯೇ ಸಲ್ಲಿಸುವಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಕೃಷ್ಣಾ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಮುನ್ಸೂಚನೆ

ಯಾದಗಿರಿ,ಜೂನ್30(ಕರ್ನಾಟಕ ವಾರ್ತಾ)- 2021-22ನೇ ಸಾಲಿನ ಮುಂಗಾರು ಹಂಗಾಮಿನ ಪ್ರವಾಹ ನಿಯಂತ್ರಣ ಕಾರ್ಯಕ್ಕೆ ಸನ್ನದ್ಧತೆಯಲ್ಲಿ ಇದ್ದು, ನಾರಾಯಣಪುರ ಜಲಾಶಯಕ್ಕೆ ಬರುವ ನಿರೀಕ್ಷಿತ ಒಳಹರಿವಿನ ಮಾಹಿತಿಯನ್ನು ಕೇಂದ್ರ ಜಲ ಆಯೋಗದ ಮೂಲಕ ಪಡೆಯಲಾಗುತ್ತಿದೆ ಎಂದು ನಾರಾಯಣಾಪೂರ ಆಣೆಕಟ್ಟು ವಿಭಾಗದ  ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಸ್ತುತ ಕರ್ನಾಟಕ ಹಾಗೂ ಮಹಾರಾಷ್ಟç ರಾಜ್ಯಗಳ ಕೃಷ್ಣಾ ನದಿ ಪಾತ್ರದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿರುವದರಿಂದ, ಆಲಮಟ್ಟಿ ಜಲಾಶಯಕ್ಕೆ ಪ್ರವಾಹದ ಒಳಹರಿವು ಜೂನ್ 22ರಂದು ಸಾಯಂಕಾಲ 6 ಗಂಟೆಗೆ 1,30,000ಕ್ಯೂಸೆಕ್ ಇದ್ದು, ಆಲಮಟ್ಟಿ ಜಲಾಶಯವು ಬಹುತೇಕ ಭರ್ತಿಯಾಗಿದೆ, ಆಲಮಟ್ಟಿ ಜಲಾಶಯದಿಂದ ನಾರಾಯಣಪೂರ ಜಲಾಶಯಕ್ಕೆ 40000 ಕ್ಯೂಸೆಕ್ ನೀರು ಬಿಡುತ್ತಿರುವುದರಿಂದಾಗಿ 40000 ಕ್ಯೂಸೆಕ್‌ನಷ್ಟು ಒಳಹರಿವು ಬರುವ ಸಾಧ್ಯತೆಯಿದ್ದು, ಮುಖ್ಯ ಇಂಜಿನಿಯರರ ನಿರ್ದೇಶನದ ಮೇರೆಗೆ ನಾರಾಯಣಪೂರ ಆಣೆಕಟ್ಟೆಯಿಂದ ಕೃಷ್ಣಾನದಿಗೆ ಜುಲೈ 23ರಂದು ಅಪರಾಹ್ನದಿಂದ ಪ್ರವಾಹದ ನೀರನ್ನು ಹರಿಬಿಡುವ ಸಾಧ್ಯತೆ ಇದೆ. ಆದ್ದುದರಿಂದಾಗಿ ನಾರಾಯಣಪೂರ ಆಣೆಕಟ್ಟೆಯ ಕೆಳಭಾಗದ ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ, ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಜಾಗೃತಿಯಿಂದ ಇರಲು ಹಾಗೂ ಸುರಕ್ಷತೆಗಾಗಿ ನದಿ ಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಜಾಗೃತೆ ವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.





 ಜಿಲ್ಲೆಯಲಿ 35 ಗ್ರಾಮ ಪಂಚಾಯತ್‌ಗಳಲ್ಲಿ ಮರಳು ಬ್ಲಾಕ್    

                               :ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್                                                                               

ಯಾದಗಿರಿ;ಜೂನ್.30(ಕರ್ನಾಟಕ ವಾರ್ತಾ) ಯಾದಗಿರಿ ಜಿಲ್ಲೆಯಲ್ಲಿ 22 ಗ್ರಾಮ ಪಂಚಾಯತ್‌ಗಳಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಿ, ಅಧಿಸೂಚನೆ ಹೊರಡಿಸಲಾಗಿದೆ, ಹೆಚ್ಚುವರಿಯಾಗಿ ಇನ್ನೂ 13 ಗ್ರಾಮ ಪಂಚಾಯತಗಳಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್ ತಿಳಿಸಿದ್ದಾರೆ. 

ಅವರು ಬುಧವಾರ ಗಣಿ ಸಚಿವ ಮುರುಗೇಶ್ ನಿರಾಣಿ ಅವರು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.ಜಿಲ್ಲೆಯ 22 ಗ್ರಾಮ ಪಂಚಾಯತ್‌ಗಳಲ್ಲಿ ಅಧಿಸೂಚನೆ ಹೊರಡಿಸಲಾಗಿರುವ ಮರಳು ಬ್ಲಾಕ್‌ಗಳಿಗೆ ಕಾರ್ಯಾದೇಶ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. 13ಹೆಚ್ಚುವರಿ ಬ್ಲಾಕ್‌ಗಳಿಗೆ ಮುಂದಿನವಾರ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ಹೇಳಿದರು.

ಹಟ್ಟಿ ಚಿನ್ನದ ಗಣಿ ಸಂಸ್ಥೆಗೆ 6 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಹೆಚ್ಚುವರಿಯಾಗಿ 5 ಬ್ಲಾಕ್‌ಗಳನ್ನು ಗುರುತಿಸುವ  ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಜಿಲ್ಲೆಯಲ್ಲಿ ಮರಳು ಬ್ಲಾಕ್‌ಗಳಿಗೆ ಅರಣ್ಯ ಇಲಾಖೆಯ, ನಿರಾಕ್ಷೇಪಣೆ ಪತ್ರ ಯಾವುದೇ ಬಾಕಿ ಇಲ್ಲ ಜಿಲ್ಲೆಯಲ್ಲಿ ಮರಳು ಡ್ರೋನ್ ಸರ್ವೇ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಸರಕಾರದ ವಸತಿ ಯೋಜನೆಗಳಿಗೆ ಆದ್ಯತೆಯಲ್ಲಿ ಮರಳು ಒದಗಿಸಲಾಗುವುದು ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಮಂಗಳವಾರ, ಜೂನ್ 29, 2021

 *ವಿವಿಧ ಸಮುದಾಯಗಳ ಯೋಜನೆಗಳ ಫಲಾನುಭವಿಗಳ ಆಯ್ಕೆ*


ಯಾದಗಿರಿ: ಜೂನ್, 24 (ಕರ್ನಾಟಕ ವಾರ್ತಾ);

ಪ.ಜಾತಿ/ ಪ.ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದ ಜನಾಂಗದವರಿಗೆ ಸಾಲ ಸೌಲಭ್ಯ ಕೋರಿ ಬಂದಿರುವ ಅರ್ಜಿಗಳ ಆಯ್ಕೆಯು  ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರ ಅಧ್ಯಕ್ಷತೆಯಲ್ಲಿ ಕಚೇರಿಯ ಸಭಾಂಗಣದಲ್ಲಿ  ಜರುಗಿತು.

 2020-21ನೇ ಸಾಲಿನ ಪರಿಶಿಷ್ಟ ಜಾತಿಯ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ, ಭೂ ಒಡೆತನ ಯೋಜನೆ, ನೇರಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ನಿವೇಶನ ವಸತಿ ಯೋಜನೆ ಮತ್ತು ಉದ್ಯಮ ಶೀಲತಾ ಯೋಜನೆಗೆ  ಕೋರಿ ಬಂದ ಅರ್ಜಿಗಳ ಆಯ್ಕೆ  ನಡೆಯಿತು.

169 ಭೂ ಒಡೆತನ ಯೋಜನೆ ಬಂದ ಅರ್ಜಿ  ಅದರಲ್ಲಿ 40  ಫಲಾನುಭವಿಗಳ ಆಯ್ಕೆ ,  
 ನೇರ ಸಾಲ ಯೋಜನೆ 551 ಅರ್ಜಿಗಳಲ್ಲಿ  ಅದರಲ್ಲಿ 159 ಫಲಾನುಭವಿಗಳ ಆಯ್ಕೆ, ಗಂಗಾ ಕಲ್ಯಾಣ ಯೋಜನೆಯ 60 ಅರ್ಜಿಗಳಲ್ಲಿ 60 ಆಯ್ಕೆ, ವಸತಿ ಯೋಜನೆಯ 1060 ಅರ್ಜಿಗಳಲ್ಲಿ 1060 ಆಯ್ಕೆ,  ಸ್ವಯಂ ಉದ್ಯೋಗ ಯೋಜನೆಯ 70 ಅರ್ಜಿಗಳಲ್ಲಿ 70 ಆಯ್ಕೆ, ಉದ್ಯಮ ಶೀಲತಾ ಯೋಜನೆಯ 403 ಅರ್ಜಿಗಳಲ್ಲಿ 28 ಆಯ್ಕೆ, ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಯ 11 ಅರ್ಜಿಗಳಲ್ಲಿ 3 ಫಲಾನುಭವಿಗಳ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಜಿಲ್ಲಾ ವ್ಯವಸ್ಥಾಪಕ ಎಸ್.ಎಚ್.ಪೂಜಾರಿ ಹಾಗೂ ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.



 ಕೋವಿಡ್-19 ಲಸಿಕಾ ಮುಕ್ತ ಗ್ರಾಮ ಅಭಿಯಾನ, ಘೋಷಣ ಕಾರ್ಯಕ್ರಮ; 


* ಸರ್ಕಾರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪ್ರತಿ ಗ್ರಾಮಕ್ಕೆ ಲಸಿಕೆ ಕಳಿಸಿದ ಮೊದಲ ಅಧಿಕಾರಿ ಅಂದ್ರೆ ಯಾದಗಿರಿ ಜಿಲ್ಲಾಧಿಕಾರಿ ; ರಾಜುಗೌಡ ಶ್ಲಾಘನೆ

*ಲಸಿಕಾ ಮುಕ್ತ  ತಿಂಥಿಣಿ ಗ್ರಾಮ ಪಂಚಾಯತಿಗೆ  25 ಲಕ್ಷ ರೂಪಾಯಿ ವಿಶೇಷ ಅನುದಾನ ಘೋಷಣೆ : ಶಾಸಕ ರಾಜುಗೌಡ





ಯಾದಗಿರಿ: ಜೂನ್, 28, ( ಕರ್ನಾಟಕ ವಾರ್ತಾ);

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್ ಲಸಿಕೆ ಶೇಕಡಾ ನೂರರಷ್ಟು ಪ್ರತಿಶತ ಸಾಧನೆಗೈದು, ಜಿಲ್ಲೆಯಲ್ಲಿಯೇ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಿದ ತಿಂಥಣಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಗರಿಕರಿಗೆ ಅಭಿನಂದನಾ ಕಾರ್ಯಕ್ರಮವು  ತಿಂಥಣಿ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿ ,  ಯಾದಗಿರಿ ಜಿಲ್ಲೆಯಲ್ಲಿ ಈಡೀ ರಾಜ್ಯದಲ್ಲಿಯೇ ತಿಂಥಣಿ ಗ್ರಾಮ ಪಂಚಾಯತಿಯನ್ನು ಕೋವಿಡ್ ಲಸಿಕಾ ಮುಕ್ತ ಗ್ರಾಮ ಪಂಚಾಯತಿಯನ್ನಾಗಿ ಮಾಡಿದ್ದೇವೆ.
 ಕಳೆದ ಎರಡು ವಾರದ ಹಿಂದೆ ಶಾಸಕರು ಮತ್ತು ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಜಿಲ್ಲೆಯ ತಾಲೂಕಿನ ಗ್ರಾಮ ಪಂಚಾಯತಿಗಳನ್ನು ಆಯ್ಕೆಮಾಡಿ ಅಲ್ಲಿ ಶೇಕಡಾ ನೂರರಷ್ಟು ಲಸಿಕಾಕರಣ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಅದರಲ್ಲಿ ಸುರುಪುರ ತಾಲೂಕಿನ ತಿಂಥಣಿ ಗ್ರಾಮ ಪಂಚಾಯತಿ  ಆಯ್ಕೆ ಮಾಡಿ ಗುರಿ ತಲುಪಿದ್ದೇವೆ ಎಂದರು. ನಾಗರಿಕರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂದೆಯು ಹೀಗೆ ಸಹಕಾರ ನೀಡಬೇಕೆಂದರು. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯು ಶೇಕಡಾ ನೂರರಷ್ಟು ಸುರಕ್ಷಿತವಾಗಿದೆ. ನಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಜನ ಲಸಿಕೆ ಪಡೆದಿದ್ದಾರೆ. ಯಾರಿಗೂ ಕೂಡ ಅಡ್ಡ ಪರಿಣಾಮಗಳಾಗಿಲ್ಲ. ಜೂನ್ 21 ರಂದು ಲಸಿಕಾ ಮೇಳ ಆರಂಭಿಸಿ ಅವತ್ತಿನ ದಿನ 18 ಸಾವಿರ ಜನಕ್ಕೆ ಲಸಿಕೆ ನೀಡಿ ಗುರಿ ತಲುಪಿದ್ದೇವೆ ಎಂದರು. ನಮ್ಮ ಜಿಲ್ಲೆಯಲ್ಲಿ 8 ಲಕ್ಷದ 50 ಸಾವಿರ ಜನರು ಅರ್ಹ ಫಲಾನುಭವಿಗಳು ಇದ್ದಾರೆ‌. ಅವರೆಲ್ಲರಿಗೂ ಲಸಿಕೆ ನೀಡಲು ಪ್ರಯತ್ನಿಸೋಣ ಎಂದರು.

 ಸುರಪುರ ಶಾಸಕ ನರಸಿಂಹ ನಾಯಕ( ರಾಜುಗೌಡ) ಮಾತನಾಡಿ, ತಿಂಥಣಿ ಗ್ರಾಮ ಪಂಚಾಯತಿಯು ಭಾರತ ದೇಶವಿದ್ದಂತೆ. ನಮ್ಮ ದೇಶದ ಎಲ್ಲಾ ಕಡೆ ಎಲ್ಲಾ ಧರ್ಮ, ಜಾತಿ, ಪಂಗಡದವರು ಇದ್ದಾರೆ. ನಮ್ಮ ತಿಂಥಣಿಯಲ್ಲಿ ಅವರೆಲ್ಲರೂ ಇದ್ದು, ಜಾತಿ ಭೇದ ಮರೆತು ಎಲ್ಲಾರೂ ಒಂದಾಗಿ ಬಾಳುತ್ತಿದ್ದಾರೆ ಎಂದರು. ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಕೊರೋನಾ ಜಾಗೃತಿ ಮೂಡಿಸಿದ್ದಾರೆ. ತಿಂಥಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾದುದು ಎಂದರು. ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಆದೇಶವಾದ ತಕ್ಷಣದಲ್ಲಿಯೇ, ಜಿಲ್ಲೆಯಲ್ಲಿ ಕ್ವಾರಂಟೇನ್ ಮಾಡಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದ, ಲಸಿಕಾವನ್ನು ಪ್ರತಿಗ್ರಾಮಕ್ಕೆ ಕಳಿಸಿದ ಮೊದಲ  ಅಧಿಕಾರಿಗಳು ಅಂದ್ರೆ ಯಾದಗಿರಿ ಜಿಲ್ಲಾಧಿಕಾರಿಗಳು ಎಂದು ಶ್ಲಾಘಿಸಿದರು.  ಜಿಲ್ಲಾಡಳಿತದ ಪರಿಶ್ರಮದಿಂದ ಕೊರೋನಾ ಪಾಸಿಟಿವ್ ಪ್ರಮಾಣ ಕಡಿಮೆಯಾಗಿದೆ. ತಿಂಥಿಣಿ ಗ್ರಾಮ ಪಂಚಾಯಿತಿಯು ಲಸಿಕಾ ಮುಕ್ತ ಗ್ರಾಮ ಪಂಚಾಯನ್ನಾಗಿ ಮಾಡಿದ್ದರಿಂದ ಶಾಸಕರ ಅನುದಾನದಲ್ಲಿ 25 ಲಕ್ಷ ರೂಪಾಯಿಗಳನ್ನು ವಿಶೇಷ ಅನುದಾನ  ಕೊಡುವುದಾಗಿ ಶಾಸಕರು ಘೋಷಿಸಿದರು. ಇದು ಎಲ್ಲಾ ಗ್ರಾಮ ಪಂಚಾಯತಿಗಳು   ಲಸಿಕಾ ಮುಕ್ತ ಮಾಡಿದರೆ ಆ ಪಂಚಾಯತಿಗೂ, ನಗರಸಭೆಗೂ ಅನುದಾನ ಘೋಷಿಸಲಾಗುತ್ತದೆ ಎಂದರು. ಕೊರೊನಾ ಸಂಪೂರ್ಣ ನಾಶವಾಗುತನಕ ನಾವೇಲ್ಲರೂ ಮಾಸ್ಕ್ ಧರಿಸ, ಸಾಮಾಜಿಕ ಅಂತರ ಕಾಪಾಡಿಕೊಂಡು ಜಾಗೃತರಾಗಿರೋಣ ಎಂದರು.

":- ಅಲೆಮಾರಿ ಜನಾಂಗದವರ ಲಸಿಕಾಕರಣಕ್ಕೆ ಚಾಲನೆ; 
ಸುರಪುರ ತಾಲೂಕಿನ ಸತ್ಯಂ ಪೇಟ,  ವಣಕಿಹಾಳದಲ್ಲಿ ವಾರ್ಡ್ 31 ಮತ್ತು 32 ವಾರ್ಡಿನ  ಸುಮಾರು 600 ಅರ್ಹ ಫಲಾನುಭವಿ ಅಲೆಮಾರಿ ಜನಾಂಗದವರು ಕೋವಿಡ್ ಲಸಿಕೆಯನ್ನು ತಿರಸ್ಕರಿಸಿದ್ದರು. ಅಧಿಕಾರಿಗಳು ಕೊರೊನಾ ಜಾಗೃತಿ ಮೂಡಿಸಿ  ಮನವೊಲಿಸಿದ್ದಾರೆ. ಅವರಿಗೆ  ಲಸಿಕಾಕರಣಕ್ಕೆ ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಮತ್ತು ಸುರಪುರ ಶಾಸಕ ನರಸಿಂಹ ನಾಯಕ ( ರಾಜುಗೌಡ) ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಸುರಪುರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಸುರಪುರ ತಾಲೂಕು ವೈದ್ಯಾಧಿಕಾರಿ ರಾಜಾ ವೆಂಕಪ್ಪ ನಾಯಕ, ಆಯುಷ್ ವೈದ್ಯಾಧಿಕಾರಿ ವೀಣಾ ಇನ್ನಿತರರು ಉಪಸ್ಥಿತರಿದ್ದರು

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...