ಸೋಮವಾರ, ಆಗಸ್ಟ್ 26, 2024

                                                              ವಾ.ವಿ.ಸಂ.130

ಶ್ರೀ ಕೃಷ್ಣನ ದಿವ್ಯ ಸಂದೇಶಗಳು ಎಲ್ಲರಿಗೆ ದಾರಿ ದೀಪ : ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ




ಯಾದಗಿರಿ : ಆಗಸ್ಟ್ 26, (ಕ.ವಾ) : ಶ್ರೀಕೃಷ್ಣನ ದಿವ್ಯ ಸಂದೇಶಗಳು ಉತ್ತಮ ಜೀವನಕ್ಕೆ ದಾರಿ ದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಅಭಿಪ್ರಾಯಪಟ್ಟರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಾದಗಿರಿ ನಗರಸಭೆ, ಸಹಯೋಗದಲ್ಲಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಸೋಮವಾರದಂದು

 ಹಮ್ಮಿಕೊಂಡಿದ್ದ, ಶ್ರೀ ಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಪುಷ್ಪಾರ್ಚನೆಗೈದು ಅವರು ಮಾತನಾಡಿದರು.

     ಜಯಂತಿಗಳು ಜಾತಿ ಮತ್ತು ಸಮುದಾಯಗಳಿಗೆ ಸೀಮಿತ ಆಗಬಾರದು ಎಂದು ಮಹಾನ್ ಪುರುಷರ ಸಂದೇಶಗಳನ್ನು ಜನಮನಕ್ಕೆ ತಲುಪಿ ಸದೃಢ ಸಮಾಜದ ನಿರ್ಮಾಣ ಮಾಡುವುದಕ್ಕಾಗಿ ಸರ್ಕಾರದ ವತಿಯಿಂದ ಜಯಂತಿ ಆಚರಿಸುವ ಉದ್ದೇಶವಾಗಿದೆ. ಶ್ರೀಕೃಷ್ಣ ಪರಮಾತ್ಮನಾದನು ಮತ್ತು ಇಡೀ ಪ್ರಪಂಚದ ಸೃಷ್ಟಿಕರ್ತನೆಂದು ಪರಿಗಣಿಸಲ್ಪಟ್ಟಿದ್ದಾನೆ ಎಂದರೆ ತಪ್ಪಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

     ಶಿಕ್ಷಕರಾದ ಬಸವರಾಜ ಎಸ್ ಯಾದವ್ ಹೊಸಳ್ಳಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ,  ಶ್ರೀ ಕೃಷ್ಣನು ಭಗವದ್ಗೀತೆ ಮೂಲಕ ಧರ್ಮ ಪರಿಪಾಲನೆ, ಅನೈತಿಕತೆ ವಿರುದ್ಧ ಹೋರಾಟ, ಸತ್ಯ, ಪ್ರೀತಿ, ವಾತ್ಸಲ್ಯ, ಒಳ್ಳೆಯ ಜೀವನದ ಬಗ್ಗೆ ಆದರ್ಶ ಸಂದೇಶಗಳು ಸಮಾಜಕ್ಕೆ ಹಾಗೂ ವಿಶ್ವಕ್ಕೆ ಮಾದರಿಯಾಗಿವೆ ಎಂದು ಹೇಳಿದರು.

     ಶ್ರೀಕೃಷ್ಣನು ಯುದ್ಧ ಹಾಗೂ ಶಾಂತಿಯಲ್ಲಿ ಘನತೆ ಹಾಗೂ ಗೌರವವನ್ನು ಕಾಪಾಡಿಕೊಂಡಿದ್ದ. ಕಂಸ, ಜರಾಸಂಧ, ನರಕಾಸುರ ಹಾಗೂ ಕೌರವರ ಸಂವಹಾರಕ್ಕೆ ಕಾರಣಿಕರ್ತನು ಹಾಗೂ ಭಾರತಿಯರ ಪಾಲಿಗೆ ದೈವಿಸ್ವರೂಪಿಯಾಗಿದ್ದಾನೆ. ಶಿಷ್ಠರ ರಕ್ಷಕ ದೃಷ್ಠರ ಸಂವಹಾರಕನಾಗಿ ಜನ ಮಾನಸದಲ್ಲಿ ಉಳಿದಿದ್ದು, ಪಾಂಡವರಿಗೆ ಯುದ್ಧದಲ್ಲಿ ನೀಡಿದ ನೆರವು ಗೆಲವುಗೆ ಕಾರಣವಾಯಿತು. ಶ್ರೀಕೃಷ್ಣನ ಜೀವನವು ಎಲ್ಲರಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಸಮಾಜದ ಹಾಗೂ ಜಯಂತಿ ಸಮಿತಿಯ ಜಿಲ್ಲಾಧ್ಯಕ್ಷ ತಾಯಪ್ಪ ಯಾದವ್ ಕಾಳೆಬೆಳಗುಂದಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ  ಉತ್ತರದೇವಿ ಮಠಪತಿ, ಮಾಳಪ್ಪ ಯಾದವ ಕಾಡಂಗೇರಾ, ನಾರಾಯಣ ಬದ್ದೆಪಲ್ಲಿ, ನರಸಿಂಹಲು,ನಾಗಪ್ಪ ಯಾದವ್ ಹೊನಗೇರಾ, ಯಲ್ಲಪ್ಪ ಯಾದವ್ ಮೋಟನಹಳ್ಳಿ, ವೆಂಕಟೇಶ ಯಾದವ್ ಬದ್ದೆಪಲ್ಲಿ, ಲಕ್ಷö್ಮಣ ಹೊನಗೇರಾ, ನಿಂಗಪ್ಪ ಗಜ್ಜಿ ಹೊನಗೇರಾ, ಗುರುನಾಥ ಬದ್ದೆಪಲ್ಲಿ, ಮಹೇಶ ಪುಟಪಾಕ, ಭೀಮಣ್ಣ ಖಾಡಂಗೇರಾ, ಶರಣ್ಮುಖ ಪುರಲೆ, ನಾಗರಾಜ ಖಾಡಂಗೇರಾ, ಹೊನ್ನಪ್ಪ ಹೊನಗೇರಾ, ಶೇಖರ ಹೊನಗೇರಾ,ಸಣ್ಣೆಪ್ಪ ಮುಖಂಡರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...