ವಾ.ವಿ.ಸಂ.131
ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ
ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ
ಯಾದಗಿರಿ : ಆಗಸ್ಟ್ 26, (ಕ.ವಾ) : ಯಾದಗಿರಿ ನಗರದ ಅಜೀಜ್ ಕಾಲೋನಿ ನಿವಾಸಿಯಾದ ಶೇಖ ಇರ್ಫಾನ್ 25 ವರ್ಷ ಪುರುಷ ಕಾಣೆಯಾಗಿದ್ದು, ಈ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ನಗರ ಠಾಣಾಧಿಕಾರಿ ತಿಳಿಸಿದ್ದಾರೆ.
ಕಾಣೆಯಾದ ಪುರುಷ 2024ರ ಆಗಸ್ಟ್ 20 ರಂದು ರಾತ್ರಿ ಸಮಯದಲ್ಲಿ ಅಂದಾಜು 2 ಗಂಟೆಗೆ ಸುಮಾರಿಗೆ ತನ್ನ ಮೊಬೈಲ್ ಮನೆಯಲ್ಲಿ ಬಿಟ್ಟು ಮನೆಯಿಂದ ಹೋಗಿದ್ದು, ಮರಳಿ ಮನೆಗೆ ಬಂದಿರುವುದಿಲ್ಲ. ಕುಟುಂಬದವರು ಪರಿಚಯವಿರುವ ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು, ಎಲ್ಲಿಯೂ ಕಂಡು ಬಂದಿರುವುದಿಲ್ಲ. ಪುರುಷ ಕಾಣೆಯಾದ ಬಗ್ಗೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುರುಷನ ಮಾಹಿತಿ ಸಿಕ್ಕರೆ ಯಾದಗಿರಿ ನಗರ ಪೊಲೀಸ್ ಠಾಣೆ ತಿಳಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ