ವಾ.ವಿ.ಸಂ.148
“ಆರೋಗ್ಯ ಮೇಳ” ಕಾರ್ಯಕ್ರಮ
ಒಬ್ಬ ವ್ಯಕ್ತಿ ಅಂಗಾಗ ದಾನವು ಹಲವು ಜನರಿಗೆ ಜೀವವನ್ನು ಉಳಿಸಬಹುದು
ಯಾದಗಿರಿ : ಆಗಸ್ಟ್ 29, (ಕ.ವಾ) : ಹೆಚ್ಚು ಹೆಚ್ಚಾಗಿ ಸ್ವಯಂ ಪ್ರೇರಣೆಯಿಂದ ಅಂಗಾದ ದಾನ ಮಾಡುವುದು ಮತ್ತು ಕುಟುಂಬಸ್ಥರಿಗೆ ಪ್ರೇರೆಪಿಸುವುದು ಇದು ಒಬ್ಬ ವ್ಯಕ್ತಿ ಅಂಗಾAಗ ದಾನವು ಹಲವು ಜನರಿಗೆ ಜೀವವನ್ನು ಉಳಿಸ ಬಹುದು ಎಂದು ಮತ್ತು ವಿಶ್ವ ಸೊಳ್ಳೆ ದಿನದ ಪ್ರಯುಕ್ತ ಸೊಳ್ಳೆಗಳ ನಿಯಂತ್ರಣ ಸಮುದಾಯ ಜವಾಬ್ದಾರಿಯಾಗಿದ್ದು ಎಲ್ಲರ ಸಹಕಾರದಿಂದ ಸೊಳ್ಳೆಗಳಿಂದ ಹರಡುವ ರೋಗಗಳಿಂದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ನಿಯಂತ್ರಿಸಲು ಸಾರ್ವಜನಿಕರಿಗೆ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳಾದ ಡಾ.ಸಾಜೀದ್ ಕರೆ ನೀಡಿದರು.
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುರಕುಂದ ಪ್ರಾ.ಆ.ಕೇಂದ್ರ ಸಹಯೋಗದಲ್ಲಿ “ಆರೋಗ್ಯ ಮೇಳ” ನೇತ್ರದಾನ ಪಾಕ್ಷಿಕ ವiತ್ತು ಅಂಗಾAಗ ದಾನ ಕುರಿತು ಆರೋಗ್ಯದ ಅರಿವು ಆರೋಗ್ಯ ಮೇಳ ಇತ್ತೀಚಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಡಗೇರಾ ತಾಲೂಕಿನ ಕುರಕುಂದ ಗ್ರಾಮದಲ್ಲಿ ಗ್ರಾಮದ ಸಾರ್ವಜನಿಕರು ಅಂಗಾAಗದಾನದ ಮಹತ್ವದ ಕುರಿತು ತಿಳಿದುಕೊಂಡು ಹೆಚ್ಚು ಹೆಚ್ಚಾಗಿ ಸ್ವಯಂ ಪ್ರೇರಣೆಯಿಂದ ಅಂಗಾದ ದಾನ ಮಾಡುವುದು ಮತ್ತು ಕುಟುಂಬಸ್ಥರಿಗೆ ಪ್ರೇರೆಪಿಸುವುದು ಇದು ಒಬ್ಬ ವ್ಯಕ್ತಿ ಅಂಗಾAಗ ದಾನವು ಹಲವು ಜನರಿಗೆ ಜೀವವನ್ನು ಉಳಿಸ ಬಹುದು ಎಂದು ಮತ್ತು ವಿಶ್ವ ಸೊಳ್ಳೆ ದಿನದ ಪ್ರಯುಕ್ತ ಸೊಳ್ಳೆಗಳ ನಿಯಂತ್ರಣ ಸಮುದಾಯ ಜವಾಬ್ದಾರಿಯಾಗಿದ್ದು ಎಲ್ಲರ ಸಹಕಾರದಿಂದ ಸೊಳ್ಳೆಗಳಿಂದ ಹರಡುವ ರೋಗಗಳಿಂದ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಮಲ್ಲಪ್ಪ ಕಣಜಿಕರ್ ಅವರು ಮಾತನಾಡಿ, ರಾಷ್ಟಿçÃಯ 39ನೇ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಆಗಸ್ಟ್ 25 ರಿಂದ ಸೆಪ್ಟೆಂಬರ್ 8ರ ವರೆಗೆ ನಡೆಯಲಿದ್ದು, ಕಣ್ಣಿನ ಮಹತ್ವ ಕುರಿತು ವಿವರಿಸಿ ಎಲ್ಲರೂ ನೇತ್ರದಾನ ಮಾಡುವಂತೆ ಆನ್‌ಲೈನ್ ಪೋರ್ಟಲ್‌ನಲ್ಲಿ ಜೀವನ್ ಸಾರ್ಥಕತೆ ಆ್ಯಪ್ ಮೂಲಕ ನೋಂದಾಯಿಸಕೊಳ್ಳಬೇಕು ಇದರಿಂದ ಒಬ್ಬ ವ್ಯಕ್ತಿಯ ನೇತ್ರದಾನವು ಇಬ್ಬರು ಕಾರ್ನಿಯಾ ಅಂಧರಿಗೆ ವರವಾಗುವುದು, ನೇತ್ರದಾನ ಮರಣದ 6 ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದರು. ಶಾಲಾ ಮಕ್ಕಳನ್ನು ಉದ್ದೇಶಿಸಿ ರಕ್ತಹೀನತೆ ತಡೆಗಟ್ಟಲು ಪ್ರತಿವಾರದಲ್ಲಿ ಒಂದು ದಿನ ಕಬ್ಬಿಣಾಂಶ ಮಾತ್ರೆಯನ್ನು ಸೇವಿಸಬೇಕು ಎಂದು ಮತ್ತು ಹೆಣ್ಣುಮಕ್ಕಳು ಮುಟ್ಟಿನ ಶುಚಿತ್ವ ಕಡೆಗಮನ ಹರಿಸಲು ಮತ್ತು ಆರೋಗ್ಯ ಇಲಾಖೆಯಿಂದ ಶುಚಿ ನ್ಯಾಪಕಿನ್ ಉಚಿತವಾಗಿ ಪಡೆದುಕೊಳ್ಳುವಂತೆ ಹೇಳಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ರಮೇಶ ಗುತ್ತೇದಾರ ಅವರು ಮಾತನಾಡಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಯಾವುದಿಲ್ಲ ಆರೋಗ್ಯವೇ ಮಹಾಭಾಗ್ಯ ಪೌಷ್ಠಿಕ ಆಹಾರ ಸೇವಿಸಿ ಉತ್ತಮ ಆರೋಗ್ಯ ಪಡೆಯಬೇಕೆಂದು ತಿಳಿಸಿದರು.
ಕುರಕುಂದ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಮರಲಿಂಗಪ್ಪ ಅವರು ಮಾತನಾಡಿ, ಆರೋಗ್ಯ ಮೇಳದಲ್ಲಿ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸುವುದು ಉಚಿತ ಆರೋಗ್ಯ ತಪಾಸಣೆ ಮಾಡುವುದು ಹಾಗೂ ಚಿಕಿತ್ಸೆಯನ್ನು ನೀಡುವುದಾಗಿರುತ್ತದೆ, ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟಿçÃಯ 39ನೇ ನೇತ್ರಧಾನ ಪಾಕ್ಷೀಕ ಅಂಗವಾಗಿ ಕರಪತ್ರಗಳ ಬಿಡುಗಡೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ನಿರೂಪಣೆ ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ಚವ್ಹಾಣ ನೆರವೇರಿಸಿದರು, ಪ್ರಾರ್ಥನೆ ಗೀತೆ ವಿದ್ಯಾರ್ಥಿನಿ ಕು.ಅಯ್ಯಮ್ಮ ಕು.ಚಾಂದಬೀ, ಸ್ವಾಗತ ಸಿ.ಹೆಚ್.ಒ ಮಹಾದೇವಪ್ಪ, ವಂದನಾರ್ಪಣೆ ಹೆಚ್.ಎಸ್ ಶಾಂತಿಲಾಲ್ ಅವರು ನೇರವೆರಿಸಿದರು.
ಈ ಸಂದರ್ಭದಲ್ಲಿ ಕುರಕುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮುದ್ದಮ್ಮ ಗುಡುಸಾಬ ಶೇಕ್‌ಸಿಂದಿ, ಜಿಲ್ಲಾ ಆರ್.ಸಿ.ಹೆಚ್ ಆಯುಷ್ ವೈದ್ಯರು ಡಾ.ಶೃತಿ, ಶಂಕರಾನAದ, ಸುದರ್ಶನ, ಹಾಗೂ ಡಾ.ಅಮೀತ, ಮಾಳಪ್ಪ ಪುರ್ಲೇ, ಶ್ರೀಮತಿ ಶೀಭಾರಾಣಿ, ಮಹಿಬೂಬ್, ಬಿಹೆಚ್‌ಇಓ, ಬಸವರಾಜ ಎಸ್‌ಟಿಎಸ್ ಉಮೇಶ, ಹಿ.ಆ.ನೀರಿಕ್ಷಣಾಧಿಕಾರಿ ಸಂಗಣ್ಣ ನುಚ್ಚಿನ್, ಪ್ರಾ.ಆ.ಕೇಂದ್ರದ ರಾಜಶೇಖರ, ಹಿ.ಆ.ನಿ.ಅಧಿಕಾರಿಗಳು, ಹಣಂತ್ರಾಯಗೌಡ, ಪಿ.ಹೆಚ್.ಸಿ.ಒ ಶ್ರೀಮತಿ ಮರೇಮ್ಮ, ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ