ಗುರುವಾರ, ಆಗಸ್ಟ್ 22, 2024

 


                                                             ವಾ.ವಿ.ಸಂ.119

ಪಡಿತರ ಚೀಟಿಯಲ್ಲಿನ ಕುಟುಂಬದ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಲು ಸೂಚನೆ


ಯಾದಗಿರಿ : ಆಗಸ್ಟ್ 22, (ಕ.ವಾ) : ಪಡಿತರ ಚೀಟಿದಾರರ ಗಮನಕ್ಕೆ ಪಡಿತರ ಚೀಟಿಯಲ್ಲಿನ ಕುಟುಂಬದ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.

     ಜಿಲ್ಲೆಯಲ್ಲಿ ಇ-ಕೆವೈಸಿ ಮಾಡಿಸದ ಪಡಿತರ ಚೀಟಿಗಳಲ್ಲಿನ ಸದಸ್ಯರು ಸಂಬAಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ಯಾವ ನ್ಯಾಯಬೆಲೆ ಅಂಗಡಿಯಿAದ ಆಹಾರ ಧಾನ್ಯಗಳನ್ನು ಪಡೆಯುತ್ತಿರುವಿರೊ ಅಂತಹ ನ್ಯಾಯಬೆಲೆ ಅಂಗಡಿಯಲ್ಲಿ ಈ ತಿಂಗಳ ಅಂತ್ಯದವರೆಗೆ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಲು ತಿಳಿಸಿದೆ. ಇ-ಕೆವೈಸಿ ಮಾಡಿಸುವ ಸಮಯದಲ್ಲ್ಲಿ ಎಸ್.ಸಿ, ಎಸ್.ಟಿ, ಇತರೆ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಸಂಖ್ಯೆಯನ್ನು, ಅನಿಲ ಸಂಪರ್ಕ ಹೊಂದಿದ್ದಲ್ಲಿ ಗ್ರಾಹಕರ ಸಂಖ್ಯೆಯನ್ನು ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಸಂಬAಧಪಟ್ಟ ನ್ಯಾಯಬೆಲೆ ಅಂಗಡಿ ವರ್ತಕರಿಗೆ ಸಲ್ಲಿಸಲು ತಿಳಿಸಲಾಗಿದೆ ಹಾಗೂ ಸದರಿ ಕಾರ್ಯಕ್ಕೆ ಪಡಿತರ ಚೀಟಿಯಲ್ಲಿನ ಸದಸ್ಯರು ಯಾವುದೇ ಹಣ ನೀಡುವಂತ್ತಿಲ್ಲ. ಇದು ಸಂಪೂರ್ಣ ಉಚಿತವಾಗಿದ್ದು, ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಹಣ ಕೇಳಿದ್ದಲ್ಲಿ ಮಾನ್ಯ ಆಯುಕ್ತರ ಕಛೇರಿಯ ಖಿoಟಟ ಈಡಿee ದೂರವಾಣಿ ಸಂಖ್ಯೆ 1967ಗೆ, ಉಪ ನಿರ್ದೇಶಕರ ಕಛೇರಿ, ಆಹಾರ ಇಲಾಖೆ, ಸಂಬAಧಪಟ್ಟ ತಾಲ್ಲೂಕು ಕಛೇರಿಯ ಆಹಾರ ಶಾಖೆಗೆ ದೂರು ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...