ಶುಕ್ರವಾರ, ಮಾರ್ಚ್ 5, 2021

     




ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕುರಿತು ಕಾರ್ಯಾಗಾರ

ಕ್ಷಯರೋಗಕ್ಕೆ 6 ತಿಂಗಳ ಚಿಕಿತ್ಸಾ ವಿಧಾನ ಪೂರ್ಣಗೊಳಿಸಿದರೆ ಸಂಪೂರ್ಣ ಗುಣಮುಖ                                                            

ಯಾದಗಿರಿ,ಮಾ 05 (ಕ.ವಾ):- ಕ್ಷಯರೋಗಕ್ಕೆ 6ತಿಂಗಳ ಚಿಕಿತ್ಸಾ ವಿಧಾನ ಪೂರ್ಣಗೊಳಿಸಿದರೆ ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಲಕ್ಷಿö್ಮÃಕಾಂತ ಅವರು ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಕಚೇರಿಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ ಇವರ ಸಹಯೋಗದಲ್ಲಿ ಗುರುವಾರ ನಡೆದ ಖಾಸಗಿ ಔಷಧ ವಿತರಕರಿಗೆ ಕ್ಷಯರೋಗ ಕುರಿತು ಮಾತ್ರೆಗಳನ್ನು ವಿತರಿಸುವ, ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಬ್ಬ ಕ್ಷಯರೋಗಿಯು ಸಂಪೂರ್ಣವಾಗಿ ಗುಣಮುಖರಾಗಲು ನಿರಂತರ 6 ತಿಂಗಳು ಚಿಕಿತ್ಸೆ ಪಡೆದುಕೊಳ್ಳಬೇಕು, ಕ್ಷಯರೋಗವು ಒಂದು ಸಾಂಕ್ರಾಮಿಕ ರೋಗವಾಗಿರುವದರಿಂದ ಇದರ ಬಗ್ಗೆ ಎಲ್ಲರೂ ಜಾಗೃತರಾಗಿ ಕಾಳಜಿಯನ್ನು ವಹಿಸಬೇಕು ಎಂದು ಹೇಳಿದರು. 

ಕ್ಷಯರೋಗಕ್ಕೆ ಸಂಬAಧಪಟ್ಟAತೆ ಬಹಳಷ್ಟು ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪೆಡೆಯುತ್ತಿದ್ದು, ಅವರು ಖಾಸಗಿ ಔಷಧಿ ಅಂಗಡಿಗಳ ಮಾತ್ರೆಗಳನ್ನು ತೆಗೆದುಕೊಳ್ಳುವವರ ಮಾಹಿತಿ ಸಂಗ್ರಹಣೆ ಮಾಡಿಕೊಂಡು ಪ್ರತಿ ತಿಂಗಳು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕಕ್ಕೆ ನೀಡಬೇಕೆಂದು ವಿತರಕರಿಗೆ ತಿಳಿಸಿದರು.

ಒಬ್ಬ ಕ್ಷಯರೋಗಿಯನ್ನು ಕಂಡು ಹಿಡಿದು ಮಾಹಿತಿ ನೀಡಿದರೆ ಅಂತಹವರಿಗೆ ಸರ್ಕಾರದಿಂದ 500 ರೂ. ಮತ್ತು ಕ್ಷಯರೋಗಿಗೆ 6 ತಿಂಗಳ ಚಿಕಿತ್ಸೆ ನೀಡಿರುವಂತಹ ವ್ಯಕ್ತಿಗೆ 1000 ರೂ. ಸಹಾಯಧನವನ್ನು ನಿಕ್ಷಯ ಪೋಷಣ ಯೋಜನೆಯಡಿ ನೀಡಲಾಗುವುದು ಎಂದು ಅವರು ಘೋಷಿಸಿದರು.

ಕಾರ್ಯಾಗಾರವನ್ನು ಸಹಾಯಕ ಔಷಧ ನಿಯಂತ್ರಣಾಧಿಕಾರಿ ಪುಷ್ಪಪ್ರಿಯಾ ಉದ್ಘಾಟಿಸಿದರು, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಭಗವಂತ ಅನ್ವಾರ ಸೇರಿದಂತೆ ಇತರರು ಇದ್ದರು.





ಮೊಬೈಲ್ ಮೂಲಕ ಗುರುತಿನ ಚೀಟಿ ಡೋನ್‌ಲೋಡ್ ಮಾಡಿಕೊಳ್ಳಲು ಅವಕಾಶ

ಯಾದಗಿರಿ,ಮಾ 05 (ಕ.ವಾ):- ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (2020ರ ನವೆಂಬರ್ 18 ರಿಂದ ಡಿಸೆಂಬರ್ 17ರವರೆಗೆ) ಸಂದರ್ಭದಲ್ಲಿ ಹೊಸದಾಗಿ ಮತದಾರರ ಯಾದಿಯಲ್ಲಿ ನೋಂದಣಿಯಾದ 18-19 ವರ್ಷದ ಯುವ ಮತದಾರರಿಗೆ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಂಡ್ರಾಯ್ಡ್ ಮೊಬೈಲ್ (ಂಟಿಜಡಿoiಜ ಒobiಟe) ನಲ್ಲಿ ಡೌನ್‌ಲೋಡ್  ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಮತದಾರರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಇದಲ್ಲದೇ ತಿತಿತಿ.ಟಿvsಠಿ.iಟಿ ಸಹ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್  ಮಾಡಿಕೊಳ್ಳಬಹುದಾಗಿದೆ. 

 ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್  ಮಾಡುವ ಕುರಿತು ತಮ್ಮ ಮತಗಟ್ಟೆ ವ್ಯಾಪ್ತಿಯ ಯುವ ಮತದಾರರಿಗೆ ಮತಗಟ್ಟೆ ಹಂತದ ಅಧಿಕಾರಿಗಳು (ಃಐಔ) ಇದೇ ಮಾರ್ಚ್ 6 ಹಾಗೂ 7 ರಂದು ಎಲ್ಲಾ ಮತಗಟ್ಟೆಗಳಲ್ಲಿ   ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.  

      

ಸಾಲ ಮರುಪಾವತಿಗೆ ಸೂಚನೆ

ಯಾದಗಿರಿ,ಮಾ 05 (ಕ.ವಾ):- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಎನ್.ಎಮ್.ಡಿ.ಎಫ್.ಸಿ ನೇರಸಾಲ, ಶ್ರಮಶಕ್ತಿ, ಸ್ವಾವಲಂಬನಾ, ಪಶುಸಂಗೋಪನೆ, ಮಹಿಳಾ ಸ್ವ-ಸಹಾಯ ಸಂಘಗಳು, ಭೂ-ಖರೀದಿ ಯೋಜನೆ ಹಾಗೂ ಅರಿವು ವಿದ್ಯಾಭ್ಯಾಸ ಸಾಲದ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳು ಇದೇ ಮಾರ್ಚ್ 31ರೊಳಗಾಗಿ  ಮರುಪಾವತಿಸುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 4 ರಿಂದ 31ರ ವರೆಗೆ  ಸಾಲ ವಸೂಲಾತಿ/ಮರುಪಾವತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿವಿಧ ಯೋಜನಗಳಡಿಯಲ್ಲಿ ಸಾಲ ಪಡೆದ ಪಲಾನುಭವಿಗಳು ತಮ್ಮ ಸಾಲದ ಬಾಕಿ ಮೊತ್ತವನ್ನು ಜಿಲ್ಲಾ ಕಚೇರಿಯಲ್ಲಿ ಮರುಪಾವತಿಸಿ ಸಾಲ ವಸೂಲಾತಿ ಅಧಿಕಾರಿಗಳಿಂದ ರಸೀದಿಯನ್ನು ಪಡೆದುಕೊಳ್ಳಲು ಸೂಚಿಸಿದ್ದಾರೆ. 



ಬಸ್ ಪಾಸ್ ಪಡೆಯಲು ಮಾರ್ಚ್ 31 ಕಡೆಯ ದಿನ

ಯಾದಗಿರಿ,ಮಾ 05 (ಕ.ವಾ):-2021 ಸಾಲಿನಲ್ಲಿ ವಿದ್ಯಾರ್ಥಿ ಉಚಿತ ರಿಯಾಯಿತಿ ಬಸ್ ಪಾಸ್ ಪಡೆದುಕೊಳ್ಳವ ವಿದ್ಯಾರ್ಥಿಗಳು ಇದೇ ಮಾರ್ಚ್ 31ರಒಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಆನ್‌ಲೈನನಲ್ಲಿ ಸರ್ಕಾರ ನಿಗದಿಪಡಿಸಿರುವ ಸೇವಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಉಚಿತ ರಿಯಾಯಿತಿ ಬಸ್ ಪಾಸ್ ಪಡೆದುಕೊಳ್ಳುವ ವಿದ್ಯಾರ್ಥಿಗಳು ಆನ್‌ಲೈನ್ ಸೇವಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ 07 ದಿನಗಳೊಳಗಾಗಿ ಸಂಬAಧಪಟ್ಟ ಬಸ್ ನಿಲ್ದಾಣದ ಪಾಸ್ ಕೌಂಟರನಲ್ಲಿ ಖುದ್ದು ಹಾಜರಾಗಿ ಬಸ್ ಪಾಸ್‌ನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಸೇವಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ 07 ದಿನಗಳೊಳಗಾಗಿ ಬಸ್ ನಿಲ್ದಾಣದ ಪಾಸ್ ಕೌಂಟರನಲ್ಲಿ ಸಲ್ಲಿಸದ್ದಿದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದೆಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ನಾಳೆ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ

ಯಾದಗಿರಿ ಮಾ.05(ಕ.ವಾ): ಪಶುಸಂಗೋಪನೆ,ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ಇದೇ ಮಾರ್ಚ್ 6ರಂದು ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಸಂಬAಧಿಸಿದ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










ಗುರುವಾರ, ಮಾರ್ಚ್ 4, 2021

 ಮಾರ್ಚ್ 6 ರಂದು ನಮ್ಮ ನಡಿಗೆ -ತ್ಯಾಜ್ಯ ಮುಕ್ತ ಕಡೆಗೆ ಕಾರ್ಯಕ್ರಮ

 ಯಾದಗಿರಿ ಮಾ 04.(ಕ.ವಾ):- ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೊಜನೆಯಡಿಯಲ್ಲಿ ನಮ್ಮನಡಿಗೆ –ತ್ಯಾಜ್ಯ ಮುಕ್ತ ಕಡೆಗೆ ಎಂಬ ಜಿಲ್ಲಾ ಮಟ್ಟದ ಕಾರ್ಯಕ್ರರ್ಮವನ್ನು ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಯಾದಗಿರಿ, ಗ್ರಾಮ ಪಂಚಾಯತ ಮುದ್ನಾಳ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ಮಾರ್ಚ್ 6 ರಂದು ಬೆಳಿಗ್ಗೆ 10 ಗಂಟೆಗೆ ಮುದ್ನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ.

ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚವ್ಹಾಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಸ್ಥಳೀಯ ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯಡಿಯಾಪೂರ, ಸುರಪುರ ಶಾಸಕ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ), ಸಂಸದರಾದ ರಾಜಾ ಅಮರೇಶ್ವರ ನಾಯಕ್, ಉಮೇಶ್ ಜಾಧವ, ರಾಜ್ಯಸಭಾ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ, ಶಹಾಪೂರ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ, ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ.ಪಾಟೀಲ, ಡಾ.ಚಂದ್ರಶೇಖರ ಪಾಟೀಲ, ಕೃಷ್ಣಾ ಕಾಡಾದ ಅಧ್ಯಕ್ಷರಾದ ಶರಣಪ್ಪ ತಳವಾರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ರೋಟ್ನಡಗಿ ಹಾಗೂ ಇತರೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 





                


ಶಿಷ್ಯವೇತನ ಸೌಲಭ್ಯಕ್ಕೆ ಅರ್ಜಿ ಅವಧಿ ವಿಸ್ತರಣೆ

ಯಾದಗಿರಿ ಮಾ 04.(ಕ.ವಾ):- 2020-21ನೇ ಸಾಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಇದೇ ಮಾರ್ಚ್ 20 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ತಿತಿತಿ.ssಠಿ.ಠಿosಣmಚಿಣಡಿiಛಿ.ಞಚಿಡಿಟಿಚಿಣಚಿಞಚಿ.gov.iಟಿ ನ್ನು  ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಸಂಪರ್ಕಿಸುವAತೆ ಜಿಲ್ಲಾ ಹಿಂದುಳಿದ ವರ್ಗಗಳ  ಕಲ್ಯಾಣಾಧಿಕಾರಿ ಪ್ರಭುದೊರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತಾಂಡಾ ರೋಜ್‌ಗಾರ್ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

ಯಾದಗಿರಿ,ಮಾ 4 (ಕ.ವಾ):- ಯಾದಗಿರಿ ಹಾಗೂ ಗುರುಮಿಟಕಲ್ ತಾಲ್ಲೂಕಿನ ಆಯ್ದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ 14 ತಾಂಡಾಗಳಲ್ಲಿನ ಜನರಿಗೆ ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಹಾಗೂ ವೈಯಕ್ತಿಕ ಸೌಲಭ್ಯಗಳನ್ನು ಒದಗಿಸಲು ತಾಂಡಾ ರೋಜ್‌ಗಾರ್ ಮಿತ್ರ ಹುದ್ದೆಯ ಆರು ತಿಂಗಳ ಅವಧಿಗೆ  ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ತಾಂಡಾ ನಿವಾಸಿ ಆಗಿರುವ ಕನಿಷ್ಟ 10ನೇ ತರಗತಿ ಪಾಸಾಗಿದ್ದು, 45 ವರ್ಷದೊಳಗಿರಬೇಕು, ಕನ್ನಡ ಹಾಗೂ ಲಂಬಾಣಿ ಭಾಷೆ ತಿಳಿದಿರಬೇಕು, ಮಹಿಳೆಯರಿಗೆ, ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಿದವರಿಗೆ ಮೊದಲ ಆದ್ಯತೆ ನೀಡುವುದು, ಮಹಿಳೆಯರು ಲಭ್ಯವಿಲ್ಲದಿದ್ದರೆ ಪುರುಷರನ್ನು ಆಯ್ಕೆಗೆ ಪರಿಗಣಿಸಲಾಗುವುದು. ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣ ಹೊಂದಿರವವರು ತಾಂಡಾಗಳ ಸಂಬAಧಪಟ್ಟ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಸೂಕ್ತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಮಾರ್ಚ 15 ರೊಳಗೆ ಗ್ರಾಮ ಪಂಚಾಯತಿಗಳಿಗೆ ಸಲ್ಲಿಸಬೇಕು.

 ಈ ಹುದ್ದೆಗೆ ಆಯ್ಕೆಯಾದವರಿಗೆ ತಾಂಡಾ ಅಭಿವೃದ್ಧಿ ನಿಗಮದಿಂದ 3 ಸಾವಿರ ರೂ.ಗಳು ಹಾಗೂ ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 3 ಸಾವಿರ ರೂ.ಗಳು ವರೆಗೂ ಮಾಸಿಕ ಪ್ರೋತ್ಸಾಹ ಧನ ನೀಡಲಾಗುವುದು ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


  


     ಕರ್ತವ್ಯಕ್ಕೆ ಹಾಜರಾಗಲು ಶಿಕ್ಷಕಿಗೆ ಸೂಚನೆ

ಯಾದಗಿರಿ,ಮಾ.4 (ಕ.ವಾ):- ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಮದ್ದರಕಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ(ನೃತ್ಯ)ಯೊಬ್ಬರು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದು, ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಸೇವೆಯಿಂದ ವಜಾಗೊಳಿಸಲಾಗುತ್ತದೆ ಎಂದು ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು ತಿಳಿಸಿದ್ದಾರೆ.  

ಪ್ರೌಢಶಾಲೆಯ ನೃತ್ಯ ಶಿಕ್ಷಕಿ ಶೈಲಾ ಎನ್.ಕೆ  ಇವರು 2019 ರ ಸಪ್ಟೆಂಬರ್ 1 ರಿಂದ ಈ ವರೆಗೆ ಶಾಲಾ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ. ಈಗಾಗಲೇ ಕಚೇರಿಯಿಂದ 3 ನೋಟಿಸ್ ಪತ್ರ ನೀಡಿದರೂ ಸಹ ಕರ್ತವ್ಯಕ್ಕೆ ಹಾಜರಾಗದೇ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ. ಆದ್ದರಿಂದ   ಈ ಪತ್ರಿಕಾ ಪ್ರಕಟಣೆಗೊಂಡ 15 ದಿನದೊಳಗಾಗಿ ಕಚೇರಿಯಿಂದ ಅನುಮತಿ ಪಡೆದು ಕರ್ತವ್ಯಕ್ಕೆ ಹಾಜರಾಗಬೇಕು, ಒಂದು ವೇಳೆ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ವಯ (ವರ್ಗೀಕರಣ ನಿಯಂತ್ರಣ ಮತ್ತ ಮೇಲ್ಮನವಿ) 1957 ರ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುತ್ತದೆ ಎಂದು ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೆಡಿಪಿ ಸಭೆ ಮಾರ್ಚ್ 15ಕ್ಕೆ ಮುಂದೂಡಿಕೆ

ಯಾದಗಿರಿ ಮಾ.04 (ಕ.ವಾ):- ಪಶುಸಂಗೋಪನೆ,ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ಇದೇ ಮಾರ್ಚ್ 6ರಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಬೇಕಿದ್ದ  ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ) ಯನ್ನು  ಕಾರಣಾಂತರಗಳಿAದ ಮಾರ್ಚ್ 15ಕ್ಕೆ ಮುಂದೂಡಲಾಗಿದೆ. 

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾರ್ಚ್ 6 ರಂದು ಬೆಳಿಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ. ಸಭೆಯಲ್ಲಿ 2021ರ ಜನವರಿ ತಿಂಗಳ ಅಂತ್ಯದವರೆಗೆ ಇಲಾಖೆವಾರು ಸಾಧಿಸಿರುವ ಪ್ರಗತಿ ಸೇರಿದಂತೆ ಇನ್ನುಳಿದ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಇದಕ್ಕೆ ಸಂಬAಧಿಸಿದ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬುಧವಾರ, ಮಾರ್ಚ್ 3, 2021

 


ಸುರಪುರ ನಗರಸಭೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ

                                    :ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. 

ಯಾದಗಿರಿ, ಮಾ.03 (ಕ.ವಾ):- ಬೇಸಿಗೆ ಕಾಲ ಆರಂಭವಾಗುತ್ತಿದ್ದು, ನಗರದ ಯಾವುದೇ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಉಂಟಾಗದAತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.




ಜಿಲ್ಲೆಯ ಸುರಪುರ ನಗರಸಭೆ ಕಚೇರಿಯ ಸಭಾಂಗಣದಲ್ಲಿ ನಗರಸಭೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪಿ.ಎಮ್.ಸ್ವನಿಧಿ ಯೋಜನೆಯಡಿಯಲ್ಲಿ ಸುಮಾರು 655 ಸಾಲದ ಅರ್ಜಿಗಳು ಬಂದಿದ್ದು, ಈ ಪೈಕಿ ಇನ್ನೂ 27 ಅರ್ಜಿಗಳಿಗೆ ಸಾಲ ದೊರೆತ್ತಿಲ್ಲ. ಈ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಗಮನಹರಿಸಿ ಅರ್ಹ ಫಲಾನುಭವಿಗಳಿಗೆ ಸಾಲ ವಿತರಣೆ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು.


ನಗರೋತ್ಥಾನ ಯೋಜನೆ ಅಡಿಯಲ್ಲಿ ನಗರದಲ್ಲಿ ಒಟ್ಟು 13 ಕಾಮಗಾರಿಗಳು ಮಂಜೂರಾಗಿದ್ದು, 11 ಕಾಮಗಾರಿಗಳು  ಪೂರ್ಣಗೊಂಡಿವೆ. ಒಂದು ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ಕಾಮಗಾರಿ ಆದಷ್ಟು ಬೇಗನೆ ಪ್ರಾರಂಭಿಸಲಾಗುತ್ತದೆ ಎಂದು ನಗರಸಭೆಯ ಪೌರಯುಕ್ತರು ಸಭೆಗೆ ಮಾಹಿತಿ ನೀಡಿದರು.


14 ನೇ ಹಣಕಾಸಿನ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳು ಕೂಡಲೇ ಮುಗಿಸಬೇಕು ಹಾಗೂ 15 ನೇ ಹಣಕಾಸಿನಲ್ಲಿ ಪ್ರಾರಂಭಗೊAಡ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಗಳಾಗಿ ಮುಗಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. 

 

ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ. ಯೋಜನೆಯಲ್ಲಿ ಬಂದ ಅನುದಾನವನ್ನು ಸರಿಯಾಗಿ ಬಳಕೆ ಮಾಡಿ ಜನ ಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಹಾಗೂ ಸುರಪುರ ನಗರದ ಪ್ರತಿಯೊಂದು ಅಂಗಡಿ - ಮುಂಗಟ್ಟುಗಳಿAದ ತೆರಿಗೆಯನ್ನು ಕಡ್ಡಾಯವಾಗಿ ಶೇಕಡ 100% ರಷ್ಟು ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ  ಗಮನಹಿಸಬೇಕೆಂದು ಹೇಳಿದರು. 

ವಿವಿಧ ವಸತಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ವಿತರಣೆ ಮಾಡಬೇಕು.   


ರಸ್ತೆ ಸೇರಿದಂತೆ ವಿವಿಧ ಕಾಮಗಾರಿ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು

ಸುರಪುರ ನಗರದಲ್ಲಿ ನಗರೋತ್ಥಾನ ಯೋಜನೆ ಹಾಗೂ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ಕಾಮಗಾರಿಗಳನ್ನು ಮಂಗಳವಾರ ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರು ವೀಕ್ಷಿಸಿದರು.

ಮಂಡಲ ಬಟ್ಟಿ ಆಟೋ ಸ್ಟಾö್ಯಂಡ್‌ಯಿAದ ಮರಿಗೆಮ್ಮ ದೇವಸ್ಥಾನವರೆಗೆ ಹಾಗೂ ಮರಿಗೆಮ್ಮ ದೇವಸ್ಥಾನದಿಂದ ತಿಮ್ಮಾಪೂರ ಬಸ್ ನಿಲ್ದಾಣದವರಿಗೆ ನಡೆಯುತ್ತಿರುವ ರಸ್ತೆ  ಅಗಲೀಕರಣ ಕಾಮಗಾರಿ , ಕೆ.ಕೆ.ಆರ್.ಡಿ.ಬಿ ಯೋಜನೆಯಡಿಯಲ್ಲಿ ಸುಮಾರು 3ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ , ಪೈಪ್‌ಲೈನ್ ವಿಸ್ತೀರ್ಣ ಕಾಮಗಾರಿ ಹಾಗೂ ನಗರೋತ್ಥಾನ 3ನೇ ಹಂತದಡಿ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ತರಾಕಾರಿ ಮಳಿಗೆಗಳನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲಾ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿಗಳಾಗಿ ಮುಗಿಸಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. 


ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಪ್ರಭಾರಿ ಯೋಜನೆ ನಿರ್ದೇಶಕರಾದ ಪ್ರಕಾಶ ಜಿ.ರಜಪೂತ್, ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಕ್ಕಪ್ಪ, ಸುರಪುರ ನಗರಸಭೆಯ ಪೌರಯುಕ್ತ ಜೀವನ್ ಕುಮಾರ್ ಸೇರಿದಂತೆ ಇತರರು ಸಭೆಯಲ್ಲಿ ಭಾಗಿಯಾಗಿದ್ದರು.

 


 ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ

ಯಾದಗಿರಿ, ಮಾ.03 (ಕ.ವಾ):- ಯಾದಗಿರಿ ನಗರದ ಚಾಮಾ ಲೇಔಟ್ ನಿವಾಸಿಯೊಬ್ಬರು  ನಾಪತ್ತೆಯಾಗಿದ್ದಾರೆ.

 ಮಹ್ಮದ್ ಶಕೀಬ್ ಅಹ್ಮದ್ ಎಂಬಾತನು 2021 ರ ಫೆಬ್ರವರಿ 28 ರಂದು ರಾತ್ರಿ ಪ್ರಾರ್ಥನೆಗೆ ಹೋಗಿ ಬರುತ್ತೇನೆ ಎಂದು ಹೋದವರು ಇನ್ನೂ ವಾಪಸ್ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ. 

ಕಾಣೆಯಾದ ವ್ಯಕ್ತಿಯು ಶಕೀಬ್ ಅಹ್ಮದ್ 20 ವರ್ಷದವರಾಗಿದ್ದು, ಸಾದಾಗೆಂಪು ಬಣ್ಣ, ಕೋಲು ಮುಖ, ತೆಳುವಾದ ಮೈಕಟ್ಟು, 5 ಅಡಿ 4ಇಂಚು ಎತ್ತರವಾಗಿದ್ದಾರೆ.

 ತಿಳಿ ನೀಲಿ ಕಪ್ಪು ಬಣ್ಣದ ಜರ್ಕಿನ್ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್‌ನ್ನು ಧರಿಸಿದ್ದು,. ಹಿಂದಿ,ಇAಗ್ಲೀಷ್ ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈತನ ಸುಳಿವು ಸಿಕ್ಕಲ್ಲಿ ಯಾದಗಿರಿ ನಗರ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸೋಮವಾರ, ಮಾರ್ಚ್ 1, 2021




 ಕೋವಿಡ್ ಎರಡನೇ ಅಲೆ ಭೀತಿ ಅಗತ್ಯ ಕಟ್ಟೆಚ್ಚರ ವಹಿಸುವಂತೆ ಸೂಚನೆ

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

ಯಾದಗಿರಿ, ಮಾ.1 (ಕ.ವಾ):- ಮಹಾರಾಷ್ಟ್ರದಲ್ಲಿ ಕೋವಿಡ್-19 ಎರಡನೇ ಅಲೆ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ದಂದು ಜಿಲ್ಲಾ ಕೋವಿಡ್-19 ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರ ದಿಂದ ಜಿಲ್ಲೆಗೆ ಬರುವ ಪ್ರಯಾಣಿಕರು, ಸಾರ್ವಜನಿಕರು ಆಗಮಿಸುವವರಿಂದ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ಕೋವಿಡ್ 2ನೇ ಅಲೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸೂಚನೆಗಳನ್ನು ನೀಡಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್-19 ರ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಜಿಲ್ಲೆಯ ಪಕ್ಕದ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕೋವಿಡ್-19 ರ ಎರಡನೇಯ ಅಲೆ ಪ್ರಾರಂಭವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ತಿಳಿದು ಬಂದಿರುತ್ತದೆ.
ಜಿಲ್ಲೆಯ ಗಡಿಭಾಗದಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟ್ಗಳಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ 72 ಗಂಟೆಗಳ ಮುಂಚೆ ಪಡೆಯಲಾದ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ತೋರಿಸಬೇಕು. ಈ ಬಗ್ಗೆ ಬಸ್ಸುಗಳ ನಿರ್ವಾಹಕರು ಖಚಿತಪಡಿಸಿಕೊಂಡು ಪ್ರಯಾಣಿಸಲು ಅನುಮತಿ ನೀಡಬೇಕೆಂದರು.

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು, ದೈಹಿಕ ಅಂತರದ ಪಾಲನೆ ಮತ್ತು ಹ್ಯಾಂಡ್ ಸ್ಯಾನಿಟೈಜರ್‌ನ್ನು ಕಡ್ಡಾಯವಾಗಿ ಬಳಕೆ ಮಾಡಿ ಕೊರೋನಾ ದಿಂದ ಜಾಗೃತಿ ವಹಿಸಿಬೇಕೆಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಾಗವಾನ್ ಸೋನಾವಣೆ, ಐ.ಎ.ಎಸ್. ಪ್ರೊಬೇಷನರಿ ಆಶ್ವೀಜಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ಬಸವಸ್ವಾಮಿ ಹಿರೇಮಠ, ಆರ್.ಸಿ.ಹೆಚ್ ಅಧಿಕಾರಿ ಡಾ.ಸೂರ್ಯಪ್ರಕಾಶ್, ಡಿ.ಎಲ್.ಒ ಡಾ. ಭಗವಂತ ಅನವಾರ್, ಡಾ.ಸಾಜೀದ್, ಡಾ.ಅನೀಲ್ ತಾಳಿಕೋಟಿ, ಶಹಾಪುರ ಟಿ.ಹೆಚ್.ಒ ಡಾ.ರಮೇಶ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದರು.

ಮೂರನೇ ಹಂತದ ಕೋವಿಡ್ ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ
ಯಾದಗಿರಿ, ಮಾ.1 (ಕ.ವಾ):- ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮೂರನೇ ಹಂತದ ಕೋವಿಡ್ ಲಸಿಕಾ ಅಭಿಯಾನಕ್ಕೆ ಇಂದು ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ 45 ರಿಂದ 59 ವರ್ಷದೊಳಗಿನ ನಾಗರಿಕರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದು. ಖಾಸಗಿ ಆಸ್ಪತ್ರೆಯಲ್ಲಿ 250 ರೂ. ಪಾವತಿಸಿ ಲಸಿಕೆ ಪಡೆಯಬಹುದು ಎಂದು ತಿಳಿಸಿದರು.

ಲಸಿಕೆ ಪಡೆಯಲು ಆಸ್ಪತ್ರೆಗೆ ಬರುವ ವೇಳೆ ಗುರುತಿಗಾಗಿ ಆಧಾರ್ ಕಾರ್ಡ್ ಅಥವಾ ಚುನಾವಣಾ ಮತದಾರರ ಗುರುತಿನ ಚೀಟಿ ತರಬೇಕು. ಆನ್‌ಲೈನ್‌ನಲ್ಲಿ ನೋಂದಾಯಿಸುವಾಗ ಕೇಳಲಾದ ಗುರುತಿನ ಚೀಟಿ ತರಬೇಕು. 45 ರಿಂದ 59 ರ ವರ್ಷದೊಳಗಿನ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ವೈದ್ಯರಿಂದ ಆರೋಗ್ಯ ಸಮಸ್ಯೆ ಇರುವ ಕುರಿತು ದೃಢೀಕರಣ ಪತ್ರ ಹಾಜರುಪಡಿಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ಬಸವಸ್ವಾಮಿ ಹಿರೇಮಠ, ಆರ್.ಸಿ.ಹೆಚ್ ಅಧಿಕಾರಿ ಡಾ.ಸೂರ್ಯಪ್ರಕಾಶ್, ಆರ್.ಎಮ್.ಒ ಡಾ.ನೀಲಮ್ಮ, ಕೊರೋನಾ ಲಸಿಕೆ ಅಧಿಕಾರಿ ಡಾ.ಪ್ರೇಮ, ಸಿಸ್ಟರ್ ಶಾರದ ಸೇರಿದಂತೆ ಇತರರು ಇದ್ದರು.


 


ಮಿಷನ್ ಇಂದ್ರಧನುಷ್ 3.0 ಗೆ ಚಾಲನೆ


ರೋಗ ನಿರೋಧಕ ಲಸಿಕೆಗಳ ಬಗ್ಗೆ ಭಯಬೇಡ:

                                               ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

ಯಾದಗಿರಿ, ಮಾ.1 (ಕ.ವಾ):- ಪೋಲಿಯೋ ಸೇರಿದಂತೆ ಇತರ ರೋಗಗಳ ನಿಯಂತ್ರಣಕ್ಕೆ ನೀಡುವ ಲಸಿಕೆಗಳ ಬಗ್ಗೆ ಭಯಪಡದೇ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ಸಲಹೆ ನೀಡಿದರು.


ನಗರದ ಗಾಂಧಿ ಚೌಕ್‌ನಲ್ಲಿರುವ ಪಂಪ ಮಹಾಕವಿ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಯಾದಗಿರಿ ಹಾಗೂ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ತೀವ್ರಗೊಂಡ ಮಿಷನ್ ಇಂದ್ರಧನುಷ್ 3.0 ಉದ್ಘಾಟನಾ ಕಾರ್ಯಕ್ರಮವನ್ನು ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಮೂಲಕ ಚಾಲನೆ  ನೀಡಿ ಅವರು ಮಾತನಾಡಿದರು.


ಚಿಕ್ಕ ವಯಸ್ಸಿನಲ್ಲಿ ಪೋಲಿಯೋ ಮತ್ತು ಇನ್ನಿತರ ರೋಗಗಳಿಂದ ಬಳಲುವ ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಇಂದ್ರಧನುಷ್  ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಡಿ.ಪಿ.ಟಿ, ಟಿ.ಟಿ, ಪೋಲಿಯೋ ಲಸಿಕೆ ಸೇರಿದಂತೆ ಹತ್ತು ಲಸಿಕೆಗಳನ್ನು ನೀಡುವ ಉದ್ದೇಶ ಹೊಂದಿದೆ ಎಂದರು.

ಜನರು ಲಸಿಕೆಗಳನ್ನು ಪಡೆಯುವ ಮೂಲಕ ರೋಗಮುಕ್ತರಾಗಬೇಕು. ಹಳ್ಳಿಯಿಂದ ನಗರದವರೆಗೆ ಸರ್ವೇ ಮಾಡಿಸಿ ಲಸಿಕೆ ಪಡೆಯದವರನ್ನು ಗುರುತಿಸಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದರು.

 

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಶೇಕಡ 82 ರಷ್ಟು ಜನರಿಗೆ ಲಸಿಕೆ ನೀಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯವನ್ನು ಅವರು ಶ್ಲಾಘಿಸಿದರು.


ಮುಂಬರುವ ದಿನಗಳಲ್ಲಿ 100%ರಷ್ಟು ಪ್ರಗತಿ ಸಾಧಿಸುವಂತೆ ಅವರು ತಿಳಿಸಿದರು.

 ಲಸಿಕೆ ಹಾಕದಿದ್ದರೆ ಯಾವ ರೋಗಗಳು ಬರುತ್ತವೆ ಎಂಬುದರ ಕುರಿತು ಸರ್ವೇ ಕಾರ್ಯ ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದರು.


ವಿಶ್ವ ಆರೋಗ್ಯ ಸಂಸ್ಥೆಯ ಕಲಬುರಗಿಯ ವಿಭಾಗದ ಎಸ್.ಎಮ್.ಓ ಅನೀಲಕುಮಾರ್ ತಾಳಿಕೋಟಿ ಮಾತನಾಡಿ,  ಕಳೆದ ವರ್ಷ ಕೋವಿಡ್-19 ನಿಂದಾಗಿ ವಿವಿಧ ಲಸಿಕೆಗಳಿಂದ ವಂಚಿತರಾಗಿದ್ದ 2 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡುವುದು ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.


ಇAದ್ರಧನುಷ್ ಕಾರ್ಯಕ್ರಮ ಮಾ.1 ರಿಂದ 5 ರವರೆಗೆ ಒಟ್ಟು 5 ದಿನಗಳ ಕಾಲ ನಡೆಯಲಿದ್ದು, ಜಿಲ್ಲೆಯ 2 ವರ್ಷದೊಳಗಿನ 393 ಮಕ್ಕಳಿಗೆ ಹಾಗೂ 321 ಗರ್ಭಿಣಿಯರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು ಇದರ ಲಾಭ ಪಡೆದುಕೊಳ್ಳುವಂತೆ ಅವರು ತಿಳಿಸಿದರು.


ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸಯ್ಯಸ್ವಾಮಿ, ಆರ್.ಸಿ.ಎಚ್. ಅಧಿಕಾರಿ ಡಾ.ಸೂರ್ಯಪ್ರಕಾಶ ಕಂದಕೂರ,ಹಿರಿಯ ವೈದ್ಯಾಧಿಕಾರಿ ಡಾ.ಭಗವಂತ ಅನ್ವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

 ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನ

ಯಾದಗಿರಿ, ಮಾರ್ಚ್ 1 (ಕ.ವಾ):-ಸ್ಥಗಿತಗೊಂಡಿರುವ ಹೊಸ ಆನ್‌ಲೈನ್ ಪಡಿತರ ಚೀಟಿಗಳ ಸ್ವೀಕಾರ ಕಾರ್ಯವನ್ನು ಪುನರಾಂಭಿಸಿದ್ದು, ಆಹಾರ ಇಲಾಖೆ ತಂತ್ರಾAಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಹೊಸ ಆದ್ಯತಾ ( ಬಿ.ಪಿ.ಎಲ್ ) ಮತ್ತು ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿಗಳಿಗೆ ಆಹಾರ ಇಲಾಖೆಯ ತಂತ್ರಾAಶದಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಪ್ರಕಟಣೆಯಲ್ಲಿ ತಿಳಿಸಿದರು.

      

ಭತ್ತ ಮತ್ತು ಬಿಳಿ ಜೋಳ ಖರೀದಿ ಕೇಂದ್ರ ಆರಂಭ

ಯಾದಗಿರಿ.ಮಾರ್ಚ್ 1 (ಕ.ವಾ):- 2020-21ನೇ ಸಾಲಿನ ಮುಂಗಾರು  ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಹಾಗೂ ಬಿಳಿ ಜೋಳ ಖರೀದಿ ಮಾಡಲು ಯಾದಗಿರಿ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ತಿಳಿಸಿದ್ದಾರೆ.


ಈಗಾಗಲೇ ನೋಂದಣಿ ಮಾಡಿದ ರೈತರಿಂದ ಭತ್ತವನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್‌ನAತೆ ಗರಿಷ್ಠ 75 ಕ್ವಿಂಟಾಲ್ ಪ್ರಮಾಣದಲ್ಲಿ ಖರೀದಿಸಲಾಗುತ್ತಿತ್ತು ಹಾಗೂ ಬಿಳಿ ಜೋಳವನ್ನು ಪ್ರತಿ ಎಕರೆಗೆ 15 ಕ್ವಿಂಟಾಲ್‌ನAತೆ ಗರಿಷ್ಠ 75 ಕ್ವಿಂಟಾಲ್ ಪ್ರಮಾಣದಲ್ಲಿ ಖರೀದಿಸಲಾಗುತ್ತಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ರೈತರಿಂದ ಹೆಚ್ಚು ಆಹಾರ ಧಾನ್ಯಗಳನ್ನು ಖರೀದಿಸುವ ಉದ್ದೇಶದಿಂದ ಸಂಗ್ರಹಣಾ ಗರಿಷ್ಠ ಮಿತಿಯನ್ನು ಮುಂದುವರೆಸಿ ಗರಿಷ್ಠ ಮಿತಿಯನ್ನು ತೆರವುಗೊಳಿಸಲಾಗಿದೆ. ಹಾಗೂ ಈಗಾಗಲೇ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿರುವ ರೈತರಿಂದ ಕೂಡ ಗರಿಷ್ಠ ಮಿತಿಯನ್ನು ಸಡಿಲಿಸಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.


ಯಾದಗಿರಿ ಮತ್ತು ಸುರಪೂರ ತಾಲ್ಲೂಕುಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ, ಶಹಾಪೂರ ಹಾಗೂ ಹುಣಸಗಿ ತಾಲ್ಲೂಕುಗಳಲ್ಲಿ ತಾಲ್ಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ  (ಟಿ,ಎ,ಪಿ,ಸಿ,ಎಂ,ಎಸ್) ಆವರಣದಲ್ಲಿ ಮತ್ತು ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಾಕರ ಸಂಘ ನಿಯಮಿತದ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.


ರೈತರು  ಹೆಚ್ಚಿನ ಪ್ರಮಾಣದಲ್ಲಿ ಭತ್ತ ಹಾಗೂ ಬಿಳಿ ಜೋಳ ( ಹೈಬ್ರೀಡ್ ಹಾಗೂ ಮಾಲ್ದಂಡಿ ) ವನ್ನು ಮಾರಾಟ ಮಾಡಿ  ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...