ಗುರುವಾರ, ಮಾರ್ಚ್ 5, 2020

ವಿದ್ಯಾರ್ಥಿಗಳಿಂದ ಸ್ವಚ್ಛ ಭಾರತ ಅಭಿಯಾನದ ಜಾಗೃತಿ

ಯಾದಗಿರಿ, ಮಾರ್ಚ್ 05 (ಕರ್ನಾಟಕ ವಾರ್ತೆ): ಜಿಲ್ಲೆಯ ಗುರುಮಠಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಎನ್‍ಎಸ್‍ಎಸ್ ವಿದ್ಯಾರ್ಥಿಗಳೊಂದಿಗೆ ಹರಿಜನವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ  ನಿಗಮ ಮಹಿಳಾ ಶಕ್ತಿ ಕೇಂದ್ರ ಯಾದಗಿರಿ ವತಿಯಿಂದ ಈ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಜಾಥ ಜಾಗೃತಿ ಕಾರ್ಯಕ್ರಮವನ್ನ ಸಸಿಗೆ ನೀರು ಹಾಕುವುದರ ಮೂಲಕ ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಟಿ.ಪಿ ದೊಡ್ಡಮನಿ ಅವರು ಉದ್ಘಾಟಿಸಿದರು. 

ನಂತರ ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಸಂಯೋಜಕರಾದ ಆಶಾ ಬೇಗಂ ರವರು ಸ್ವಚ್ಛ ಭಾರತ ಅಭಿಯಾನ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಭೊಧಿಸಿದರು.
ಬಳಿಕ ವಿದ್ಯಾರ್ಥಿಗಳು ಹರಿಜನವಾವಾಡದ ವಾರ್ಡ್‍ಗಳಲ್ಲಿ ಸ್ವಚ್ಛ ಭಾರತ ಬಗ್ಗೆ ಘೊಷಣೆ ಕೂಗಿ ಜಾಗೃತಿ  ಮೂಡಿಸದರು. ಇದಲ್ಲದೇ ಶ್ರಮಧಾನ ಕಾರ್ಯಕ್ರಮ ಸಮುದಾಯ ಜನರಿಗೆ ಆರೋಗ್ಯ ಮತ್ತು ನೈರ್ಮಲ್ಯ, ಕುಡಿಯುವ ನೀರು, ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. 
ಇನ್ನು ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಅಶೋಕ ಮಟ್ಟಿ, ಎನ್‍ಎಸ್‍ಎಸ್ ಅಧಿಕಾರಿಂಯಾದ ಶರಣಪ್ಪ ಪಾಟಿಲ್ ಗುಂಡಗುರ್ತಿ, ಉಪನ್ಯಾಸಕರಾದ ಹಣಮಂತ ದಾಸನ, ಡಾ. ಮಿನಾ ಪರವಿನ , ಮಾಣಿಕಪ್ಪ, ಕೃಷ್ಣ, ವೆಂಕಟೇಶ, ಅಚಿಜಪ್ಪ ಹುಸೇನಪ್ಪ, ಬಾಲಪ್ಪ, ಭೀಮರಾಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾದ್ಯಾಯರಾದ ಭೀಮಣ್ಣ ಗೌಡ ಪಾಟಿಲ್, ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ಶಾಲೆಯ ಮಕ್ಕಳು ಎಂಎಸ್‍ಕೆ ಸಿಬ್ಬಂದಿ ಭಾಗಿಯಾಗಿದ್ದರು. 
ಅಗ್ನಿ ದುರಂತಗಳ ಬಗ್ಗೆ ಉಚಿತ ಮಾಹಿತಿ 
ಯಾದಗಿರಿ, ಮಾರ್ಚ್ 05 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬೇಸಿಗೆ ಕಾಲ ಪ್ರಾರಂಭ ಆಗಿರುವುದರಿಂದ ಮಾರ್ಚ್ 2020 ರಿಂದ ಜೂನ್ ತಿಂಗಳವರೆಗೆ ಅತೀ ಹೆಚ್ಚು ಅಗ್ನಿ ಅವಘಡಗಳು ಸಂಭವಿಸುವುದರಿಂದ, ಅಗ್ನಿ ದುರಂತಗಳಾಗುವುದರಿಂದ ಸಾರ್ವಜನಿಕರ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ತುಂಬಾ ಜಾಗೃತದಿಂದ ಇರಬೇಕು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್ ಅವರು ತಿಳಿಸಿದರು. 
ಜಿಲ್ಲೆಯಾದ್ಯಂತ ಬರುವ ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳಗಳಾದ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಘಟಕಗಳು ಮತ್ತು ಟೈರ್ ಕಾರ್ಖಾನೆಗಳು, ಪಿಠೋಪಕರಣಗಳ ಮಳಿಗೆಗಳು, ಗೋದಾಮುಗಳು, ತೈಲ ಸಂಗ್ರಹಗಾರಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಬಹುಮಹಡಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಇತ್ಯಾದಿ ಆವರಣಗಳಲ್ಲಿ ಅಗ್ನಿ ಅನಾಹುತಗಳನ್ನು ತಡೆಯಲು ಅಗ್ನಿಶಾಮಕ ಉಪಕರಣಗಳನ್ನು ಹಾಗೂ  ಸಾಕಷ್ಟು ನೀರಿನ ಸಂಗ್ರಹಗಾರಗಳನ್ನು ಹೊಂದಲು ತುಂಬಾ ಅವಶ್ಯಕವಾಗಿರುತ್ತದೆ ಎಂದರು.
ಈ ಬಗ್ಗೆ ಸಾರ್ವಜನಿಕರಿಗೆ ಅಗ್ನಿ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಉಪನ್ಯಾಸ, ಅಣಕು ಪ್ರದರ್ಶನ ಹಾಗೂ ಅರಿವು ಮೂಡಿಸುವ  ಕುರಿತು ಉಚಿತವಾಗಿ ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಗ್ನಿಶಾಮಕ ಠಾಣೆಗಳ ವತಿಯಿಂದ ಮಾಹಿತಿ ನೀಡಲಾಗುವುದು ಎಂದರು.
ಅಗ್ನಿಶಾಮಕ ಠಾಣೆಗಳ ದೂರವಾಣಿ ಸಂಖ್ಯೆಗಳಾದ ಯಾದಗಿರಿ ಅಗ್ನಿಶಾಮಕ ಠಾಣೆ 08473-252101/ 9480823687,  ಶಹಾಪುರ ಅಗ್ನಿಶಾಮಕ ಠಾಣೆ 9481032101 / 9480823911 ಹಾಗೂ ಸುರಪುರ ಅಗ್ನಿಶಾಮಕ ಠಾಣೆ 9481744101 / 9480823912 ಮೊ. ನಂಬರ್‍ಗಳಿಗೆ ಆಯಾ ತಾಲೂಕಿನ ಜನರು ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದಾರೆ. 
ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ 
ಯಾದಗಿರಿ, ಮಾರ್ಚ್ 05 (ಕರ್ನಾಟಕ ವಾರ್ತೆ): ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಭಾರತೀಯ ಸ್ಟೇಟ್ ಬ್ಯಾಂಕ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತವಾಗಿ ಕುರಿ ಸಾಕಾಣಿಕೆ ತರಬೇತಿಯನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
ಜಿಲ್ಲೆಯ 18 ರಿಂದ 45 ವರ್ಷ ವಯಸ್ಸಿನ ನಿರುದ್ಯೋಗ ಯುವಕ/ಯುವತಿಯರು ಹಾಗೂ ಮಹಿಳೆಯರು ಕನಿಷ್ಠ 7ನೇ ತರಗತಿ ವ್ಯಾಸಂಗ ಹೊಂದಿರಬೇಕು, ಕನ್ನಡ ಓದಲು, ಬರೆಯಲು ಬಲ್ಲವರಾಗಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶದವರಿಗೆ ಆದ್ಯತೆ ನೀಡಲಾಗುವುದರಿಂದ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. 
ಇನ್ನು ಮಾರ್ಚ್ 16ರಿಂದ 25ರವರೆಗೆ ಕುರಿ ಸಾಕಾಣಿಹೆ ತರಬೇತಿ ನಡೆಯಲಿದ್ದು, ಆಸಕ್ತರು ಸಂಸ್ಥೆಯ ಕಚೇರಿಗೆ ಅಂಕಪಟ್ಟಿ ಅಥವಾ ವರ್ಗಾವಣೆ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಇತ್ತೀಚಿನ ನಾಲ್ಕು ಪಾಸ್ ಪೊರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಈ ತರಬೇತಿ ಪಡೆಯುವವರಿಗೆ ತರಬೇತಿ ಅವಧಿಯಲ್ಲಿ ಉಚಿತವಾಗಿ ವಸತಿ, ಊಟ ಹಾಗೂ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ತರಬೇತಿ ನಂತರ ಪ್ರಮಾಣ ಪತ್ರ ನೀಡಲಾಗುವುದು ಎಂದು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ಎಸ್.ಆರ್. ನಾಡಗೇರಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-0847-3253178, ಸಂಸ್ಥೆ ನಿರ್ದೇಶಕರಾದ ಎಸ್.ಆರ್ ನಾಡಿಗೇರಿ ಮೊ.9448994164, ಕಚೇರಿ ಸಹಾಯಕರಾದ ಭೀಮಬಾಯಿ ಮೊ. 9513183651 ಹಾಗೂ ಉಪನ್ಯಾಸಕರಾದ ಎಲ್ ಎನ್.ರೆಡ್ಡಿ ಮೊ. 9113643030 ಸಂಪರ್ಕಿಸಬಹುದು. 

ಅಕ್ರಮ ಪಡಿತರ ಚೀಟಿ ಹಿಂದಿರುಗಿಸಲು ಅವಕಾಶ
ಯಾದಗಿರಿ, ಮಾರ್ಚ್ 05 (ಕರ್ನಾಟಕ ವಾರ್ತೆ): ಗುರುಮಠಕಲ್ ತಾಲ್ಲೂಕಿನಲ್ಲಿ ತಪ್ಪು ಮಾಹಿತಿ ನೀಡಿ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವುದು ಕಂಡು ಬಂದಿದ್ದು, ಇಂಥÀ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಹಶೀಲ್ದಾದರಾದ ಸಂಗಮೇಶ ಜಿಡಗೆÀ ಅವರು ತಿಳಿಸಿದ್ದಾರೆ. 
ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿ ಪಡಿತರ ಚೀಟಿಗಳನ್ನು ಪಡೆದಿದ್ದಲ್ಲಿ ಅಂತಹ ಪಡಿತರ ಚೀಟಿದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಆರ್ಥಿಕವಾಗಿ ಸದೃಢರು ಪಡೆದಿರುವ ಬಿ.ಪಿ.ಎಲ್. ಕಾರ್ಡನ್ನು ಸರ್ಕಾರ ಕ್ರಮ ತೆಗೆದುಕೊಳ್ಳುವ ಮೊದಲು ಹಿಂದಿರುಗಿಸಬೇಕು. ಅಲ್ಲದೇ ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದವರಿಗೆ ಇದು ಎಚ್ಚರಿಕೆಯ ಸಂದೇಶ ಎಂದರು. ಮಾನದಂಡಗಳು : ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲಾ ಖಾಯಂ ನೌಕರರು ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತÀ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು. ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು,  ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ, ಇತ್ಯಾದಿಗಳನ್ನು ಹೊಂದಿರುವ ಕುಟುಂಬಗಳನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಎಲ್ಲಾ ಕುಟುಂಬಗಳು. ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲು ಹೆಚ್ಚು ಇರುವ ಕುಟುಂಬಗಳು, ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವಂತಹ ಕುಟುಂಬಗಳು ಅನರ್ಹರರು ಇರುತ್ತಾರೆ. ಇವರೆಲ್ಲಾ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವುದು ಕಾನೂನು ಬಾಹಿರ ಕ್ರಮವಾಗಿರುತ್ತದೆ ಎಂದು ಹೇಳಿದರು. 
ಸರ್ಕಾರ ಬಡ ಕುಟುಂಬಗಳಿಗೆ ನೀಡುತ್ತಿರುವ ಬಿಪಿಎಲ್ ಕಾರ್ಡ್‍ನ್ನು ಕೆಲವರು ಸುಳ್ಳು ಮಾಹಿತಿ ನೀಡಿ ಪಡೆದಿರುವುದು ವಿಷಾದನಿಯ, ಈ ರೀತಿಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡುತ್ತಿದೆ ಅಕ್ರಮವಾಗಿ ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಏಪ್ರಿಲ್ 2020ರ ಅಂತ್ಯದವರೆಗೆ ಮತ್ತೊಂದು ಅವಕಾಶವನ್ನು  ನೀಡಿರುತ್ತದೆಅನರ್ಹರು ನಿಗಧಿತ ದಿನಾಂಕದೊಳಗೆ ತಾವು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಹಶೀಲ್ದಾರರ ಕಾರ್ಯಲಯ ಹಾಗೂ ಆಹಾರ ಇಲಾಖೆಗೆ ಹಿಂದಿರುಗಿಸಿ ಎಂದು ತಿಳಿಸಿದ್ದಾರೆ.
ಇನ್ನು ತಾವೇ ಸ್ವತಃ ಪಡಿತರ ಚೀಟಿಗಳನ್ನು ಹಿಂತಿರುಗಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಅವಧಿ ಮುಗಿದ ನಂತರ ಸರ್ಕಾರವೇ ಕಾರ್ಯಚರಣೆ ನಡೆಸಿ ಅನರ್ಹರು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿದಾಗ ಅಂತಹ ಕುಟುಂಬಗಳು ತಾವು ಪಡಿತರ ಚೀಟಿಗಳನ್ನು ಹೊಂದಿದ ದಿನಾಂಕದಿಂದ ಪತ್ತೆ ಹಚ್ಚಿದ ದಿನಾಂಕದವರೆಗೆ ತಾವು ಪಡೆದ ಪಡಿತರ ಪದಾರ್ಥಗಳವಾರು ಪ್ರತಿ ಕೆಜಿಗೆ ಮುಕ್ತ ಮಾರುಕಟ್ಟೆಯ ಬೆಲೆಯ ಅನುಸಾರ ಹಣವನ್ನು ವಸೂಲಿ ಮಾಡಲಾಗುವುದು ಜೊತೆಗೆ (The Karnataka (Previntion Of  Unauthorized Possession Of Ration Cards) Order-1977)ರ ರಿತ್ಯ ಕ್ರಮ ವಹಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಆದ್ದರಿಂದ ಅನರ್ಹರು ತಾವು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಿ ಕಾನೂನು ಕ್ರಮದಿಂದ ವಿಮುಕ್ತಿ ಹೊಂದಬೇಕು ಎಂದು ತಿಳಿಸಿದ್ದಾರೆ. 

ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ
ಯಾದಗಿರಿ, ಮಾರ್ಚ್ 05 (ಕರ್ನಾಟಕ ವಾರ್ತೆ): ಗುರುಮಠಕಲ್ ತಾಲ್ಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬರುವ ಮೂಲ ಆಸ್ತಿ ಮಾಲೀಕರು ನವೆಂಬರ್ 27, 2019ರ ಪ್ರಕಾರ ಮೂಲ ಆಸ್ತಿ ತೆರಿಗೆ ಮೇಲೆ ಶೇ.15ರಿಂದ 30 ರಷ್ಟು ದರ ಹೆಚ್ಚಳ ಮಾಡಬೇಕಾಗಿರುವುದರಿಂದ, ದರಪರಿಷ್ಕರಣೆ ಸಂಬಂಧಿಸಿದಂತೆ ಯಾವುದಾದರೂ ತಕರಾರು ಇದ್ದಲ್ಲಿ ಮಾರ್ಚ್ 20ರೊಳಗಾಗಿ ಆಕ್ಷೇಪಣೆಗಳನ್ನು ಪುರಸಭೆ ಕಾರ್ಯಾಲಯದ ಕಂದಾಯ ಶಾಖೆಯಲ್ಲಿ ಸಲ್ಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. ಅಲದೇ ಕೊನೆಯ ದಿನಾಂಕದ ನಂತರ ಬರುವ ಯಾವುದೇ ಆಕ್ಷೇಪಣೆಗಳು ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬುಧವಾರ, ಮಾರ್ಚ್ 4, 2020

 ಕರೋನಾ ವೈರಸ್ ಅರಿವು ಮೂಡಿಸುವ ಕಾರ್ಯಕ್ರಮ
‘ಕರೋನಾ ವೈರಸ್ ಬಗ್ಗೆ ಗಾಬರಿ ಪಡುವ ಅಗತ್ಯವಿಲ್ಲ’
-ಜಿಲ್ಲಾಧಿಕಾರಿಗಳು ಎಂ. ಕೂರ್ಮಾರಾವ್
ಯಾದಗಿರಿ, ಮಾರ್ಚ್ 04 (ಕರ್ನಾಟಕ ವಾರ್ತೆ):  ಕರೋನಾ ವೈರಸ್ ಬಗ್ಗೆ ಯಾರು ಗಾಬರಿಪಡಬಾರದು, ಮುಂಜಾಗ್ರತಾ ಕ್ರಮವಾಗಿ ಎಚ್ಚರಿಂದ ಇರಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾರಾವ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಕರೋನಾ ವೈರಸ್ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನೆರೆ ರಾಜ್ಯ ತೆಲಾಂಗಣದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕರೋನಾ ವೈರಸ್ ಸೋಂಕು ಬಗ್ಗೆ ಸುಳಿವೇ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಯಾರು ಗಾಬರಿಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಕರೋನಾ ವೈರಸ್ ಪ್ರಕರಣಗಳನ್ನು ಸಾಂಕ್ರಮಿಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚಿರಿಕಾ ಕ್ರಮಗಳು ಅನುಸರಿಬೇಕೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಸ್ಯರು, ಸಂಬಂಧಪಟ್ಟ ಮೆಡಿಕಲ್ ಕಾಳೇಜುಗಳ ಡೀನ್ ಹಾಗೂ ಸದಸ್ಯರು, ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ಜಿಲ್ಲಾ ಪ್ರತಿನಿಧಿಗಳು, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಕರು ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಕೆಳಹಂತದ ಅಧಿಕಾರಿಗಳ ತಂಡ ರಚಿಸಿ ಕರೋನಾ ವೈರಸ್ ಬಗ್ಗೆ ಭಯ ಭೀತರಾಗದಂತೆ ಅರಿವು ಮೂಡಿಸಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಬೇರೆ ಕಡೆಯಿಂದ ಬಂದ ಪ್ರಯಾಣಿಕರಿಗೆ ಯಾವುದೇ ರೀತಿಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತುರ್ತಾಗಿ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಬಳಿ ಕರೆದುಕೊಂಡು ಹೋಗಿ ಪರಿಶೀಲಿಸಿ ಚಿಕಿತ್ಸೆ ನೀಡಬೇಕು. ಜೊತೆಗೆ ಜಿಲ್ಲೆಯ ಹೊರಹೊಲಯದಲ್ಲಿ ಕರೋನಾ ವೈರಸ್ ಬಗ್ಗೆ ಅರಿವು ಮೂಡಿಸುವ ಬ್ಯಾನರ್‍ಗಳು ಹಾಕಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾಗಳಾದ ಡಾ. ಎಂ.ಎಸ್ ಪಾಟೀಲ್ ಅವರಿಗೆ ಹೇಳಿದರು. 
ರೋಗದ ಲಕ್ಷಣಗಳು: ಜ್ವರ, ತಲೆ ನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಭೇದಿ ಇವು ಕರೋನಾ ವೈರಸ್ ಲಕ್ಷಣಗಳಾಗಿವೆ ಎಂದು ಹೇಳಿದರು. 
ಇನ್ನು ಸಾರ್ವಜನಿಕರು ಮುಂಜಾಗ್ರತ ಕ್ರಮವಾಗಿ ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಬೇಕು, ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು, ಟ್ರಿಪಲ್ ಲೇಯರ್ ಮಾಸ್ಕ್ ಬಳಸಬೇಕು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಆಗಾಗೆ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು, ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್/ ಕೈ ವಸ್ತ್ರ ಉಪಯೋಗಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಘಳಬಾರದು, ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.  
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಡಾ. ನಾರಾಯಣಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. 
ಆದಾಯ ತೆರಿಗೆ ಮತ್ತು ಮುಂಗಡ ಆದಾಯ ತೆರಿಗೆ ಪಾವತಿಸುವ ವಿಚಾರಗೋಷ್ಠಿ
ನಿಗಧಿತ ಸಮಯದಲ್ಲಿ ಆದಾಯ ತೆರಿಗೆ ಪಾವತಿಸಿ
                                 ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನಾಗರಾಜ
ಯಾದಗಿರಿ, ಮಾರ್ಚ್ 04 (ಕರ್ನಾಟಕ ವಾರ್ತೆ): ಜಿಲ್ಲೆಯ ಸಾರ್ವಜನಿಕರು, ವ್ಯಾಪಾರಸ್ಥರು, ಆದಾಯ ತೆರಿಗೆ ಪಾವತಿದಾರರು ನಿಗಧಿತ ಕಾಲಮಿತಿಯೊಳಗೆ ಆದಾಯ ತೆರಿಗೆಯನ್ನು ಪಾವತಿಸುವ ಮೂಲಕ ಹೆಚ್ಚನ ದಂಡ ಪಾವತಿಸುವದು ತಪ್ಪುತ್ತದೆ ಎಂದು ಕಲಬುರಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನಾಗರಾಜ ಅವರು ಹೇಳಿದರು.
ಯಾದಗಿರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ಚೇಂಬರ್ ಕಚೇರಿಯಲ್ಲಿ ಬುಧವಾರ ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಆದಾಯ ತೆರಿಗೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆದಾಯ ತೆರಿಗೆ ಮತ್ತು ಮುಂಗಡ ಆದಾಯ ತೆರಿಗೆ ಪಾವತಿಸುವ ಕುರಿತು ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಆದಾಯ ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು. ಪಾವತಿಸದೆ ಇರುವವರಿಗೆ  ನೋಟಿಸ್ ನೀಡುವ ಮೂಲಕ ಕಾನೂನು ಕ್ರಮ ಜರುಗಿಸಲಾಗುತ್ತದೆ. ಹೀಗಾಗಿ ಯಾರೂ ದಂಡ ಕಟ್ಟುವ ಮಟ್ಟಕ್ಕೆ  ಹೋಗದೆ ಅವಧಿ ಪೂರ್ವದಲ್ಲೇ ಆದಾಯ ತೆರಿಗೆಯನ್ನು ಪಾವತಿಸಬೇಕು. ಈ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದವರು ಬೇರೆಯವರಿಗೂ ಸಹಿತ ಆದಾಯ ತೆರಿಗೆ  ಪಾವತಿಸುವ ಕುರಿತು ತಿಳುವಳಿಕೆ ನೀಡಬೇಕು ಎಂದು ಅವರು ಹೇಳಿದರು.
ಯಾದಗಿರಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ದೇಬಸುಂದರ ಗೋರೆ ಅವರು ಮಾತನಾಡಿ, ಪ್ರಸ್ತುತ ಬಜೆಟ್‍ನಲ್ಲಿ ‘ವಿವಾದ್ ಸೇ ವಿಶ್ವಾಸ’ ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದ್ದು. ಕಲಂ 139ರ ಪ್ರಕಾರ ನಿಗಧಿತ ಅವಧಿಯಲ್ಲಿ ಇನ್‍ಕಮ್ ಟ್ಯಾಕ್ಸ್ ರಿಟನ್‍ಫೈಲ್ ಮಾಡಬೇಕು. ಕಲಂ 208 ರ ಪ್ರಕಾರ ಮುಂಗಡ ಆದಾಯ ತೆರಿಗೆ ಪಾವತಿಸಬೇಕು. ಕಲಂ 234(ಬಿ) ರ ಪ್ರಕಾರ ಇನ್‍ಟ್ರಸ್ಟ್ ಫಾರ್ ಲೆಸ್ ಪೇಮೆಂಟ್ ಆಫ್ ಅಡ್ವಾನ್ಸ್ ಟ್ಯಾಕ್ಸ್, ಕಲಂ ಪ್ರಕಾರ 234(ಇ) ಪ್ರಕಾರ ಇನ್‍ಟ್ರಸ್ಟ್ ಫಾರ್ ಲೆಸ್ ಪೇಮೆಂಟ್ ಆಫ್ ಅಡ್ವಾನ್ಸ್ ಟ್ಯಾಕ್ಸ್ ಇನ್‍ಸ್ಟಾಲ್‍ಮೆಂಟ್ ಇರುತ್ತದೆ ಎಂದು ಆದಾಯ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಕಾನೂನು ಕುರಿತು ಮಾಹಿತಿ ನೀಡಿ, ತೆರಿಗೆ ಪಾವತಿದಾರರು ಆಗಾಗ ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದ ವೆಬ್‍ಸೈಟ್‍ಗೆ ಬೇಟಿ ನೀಡುವ ಮೂಲಕ ಮಾಹಿತಿ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು. 
ಇದೆ ಸಂದರ್ಭದಲ್ಲಿ ಶಶಿಧರ ಪಾಟೀಲ್ ಅವರು ಮಾತನಾಡಿ, ಆದಾಯ ತೆರಿಗೆ ಪಾವತಿದಾರರು ಇದೇ ಮಾಚ್ 31ರವರೆಗೆ ಆದಾಯ ತೆರಿಗೆ ಪಾವತಿಸಲು ಕಾಲಾವಕಾಶವಿದ್ದು ಸಮಯದ ಸದುಪಯೋಗ ಪಡೆದು ಸ್ವಯಂ ಪ್ರೇರಿತರಾಗಿ ಆದಾಯ ತೆರಿಗೆ ಪಾವತಿಸಬೇಕು. ಮುಂದಿನ ವರ್ಷದಿಂದ ಆದಾಯ ತೆರಿಗೆ ಪಾವತಿಸುವ ಕುರಿತು ಹೊಸ ಯೋಜನೆಗಳು ಜಾರಿಯಾಗುತ್ತಿದ್ದು ಅವುಗಳ ಕುರಿತು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ವ್ಯಾಪಾರಸ್ಥರು, ಲೆಕ್ಕಪರಿಶೋಧಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಅಕ್ಕಿ ನಿರೂಪಿಸಿದರು, ಹನುಮಾನದಾಸ ಮುದಂಡಾ ಸ್ವಾಗತಿಸಿದರು. ತೆರಿಗೆ ಕಮಿಟಿ ಅಧ್ಯಕ್ಷರಾದ ಗಾಂಧಿ ರಾಜೇಂದ್ರ ಜೈನ್ ವಂದಿಸಿದರು.
ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಪಾಲನೆ ಪೂರ್ವಭಾವಿ ಸಭೆ
‘ಶಾಂತಿಯುತವಾಗಿ ಹೋಳಿ ಹಬ್ಬ ಆಚರಣೆ ಮಾಡಿ’
                                                -ಜಿಲ್ಲಾಧಿಕಾರಿಗಳು ಎಂ.ಕೂರ್ಮಾರಾವ್
ಯಾದಗಿರಿ, ಮಾರ್ಚ್ 04 (ಕರ್ನಾಟಕ ವಾರ್ತೆ): ಹೋಳಿ ಹಬ್ಬವನ್ನು ಕಳೆದ ವರ್ಷಕ್ಕಿಂತ ಈ ವರ್ಷ ತುಂಬಾ ಶಾಂತಿಯುತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ ಕೂರ್ಮಾರಾವ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಂಭಾಂಗಣದಲ್ಲಿ ಬುಧವಾರ ನಡೆದ ಹೋಳಿ ಹಬ್ಬ ಆಚರಣೆಯ ಪ್ರಯುಕ್ತ, ಶಾಂತಿ ಪಾಲನೆ ಪೂರ್ವಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಾರ್ಚ್ 9 ಹಾಗೂ 10ರಂದು ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ಹಬ್ಬದ ಪ್ರಯುಕ್ತ ಶಾಂತ ರೀತಿಯಿಂದ ಆಚರಿಸಬೇಕು, ಅಲ್ಲದೇ ರಾಸಾಯನಿಕ ಬಣ್ಣಗಳ ಬಳಸಬಾರದು ಜೊತೆಗೆ ಕರೋನಾ ವೈರಸ್ ಭೀತಿ ಇರುವುದರಿಂದ ಹಬ್ಬದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆಗೆ ತುಂಬಾ ಆದ್ಯತೆ ನೀಡಬೇಕು ಎಂದರು. ಮಾರ್ಚ್ 9ರಂದು ಕಾಮದಹನ ಮಾಡಲಾಗುವುದು, 10ರಂದು ಬೇಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಬಣ್ಣದ ಆಟ ಆಡಲು ಅವಕಾಶವಿರುತ್ತದೆ. ಅಲ್ಲದೇ ಪಿಯುಸಿ ಪರೀಕ್ಷೆ ನಡೆದಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಅವರು ಸೂಚಿಸಿದರು. ಅಲ್ಲದೇ ಆರೋಗ್ಯಕರವಾದ ಬಣ್ಣವನ್ನು ಬಳಸಿ ಹಬ್ಬವನ್ನು ಆಚರಣೆ ಮಾಡಬೇಕು. ಒತ್ತಾಯವಾಗಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಬಣ್ಣವನ್ನು ಎರಚಬಾರದು. ಎಲ್ಲರೂ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ತಿಳಿಸಿದರು.  
ಕಾಮದಹನ ಮಾಡುವ ವೇಳೆ ಯಾವುದೇ ಅಗ್ನಿ ದುರಂತ ನಡೆಯದಂತೆ ನೋಡಿಕೊಂಡು ಹೋಗಲು ಅಗ್ನಿ ಶಾಮಕ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಸಾರ್ವಜನಿಕರಿಗೆ ಮರಳು ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಶಾಂತಿ ಪಾಲನಾ ಸಮಿತಿಯ ಸದಸ್ಯರು ಸಭೆಯ ಗಮನಕ್ಕೆ ತಂದರು. 
ಜಿಲ್ಲೆಯಾದ್ಯಂತ ಕಾನೂನು ಸುವವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕ ಹಿತದೃಷ್ಟಿಯಿಂದ  ಮಾರ್ಚ್ 9ರ ಸಂಜೆ 6ಗಂಟೆಯಿಂದ ಮಾರ್ಚ್ 10ರ ಬೆಳಗ್ಗೆ 6 ಗಂಟೆಯವರೆಗೆ  ಮದ್ಯ ಮಾರಾಟ ನಿಷೇಧಿಸಲಾಗಿಸುವುದು ಎಂದು ಅವರು ಹೇಳಿದರು. 
ಇನ್ನು ಬಣ್ಣದ ಹಬ್ಬದಂದು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಲವಂತವಾಗಿ ಬಣ್ಣ ಹಚ್ಚಬಾರದು, ಮೊಟ್ಟೆ, ಟೊಮ್ಯಾಟೋ, ಕಪ್ಪು ಮಸಿಯನ್ನು ಜನರ ಮೇಲೆ ಎರಚಬಾರದು. ಒಂದು ವೇಳೆ ಇಂತಹ ಘಟನೆ ಕಂಡು ಬಂದಲ್ಲಿ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ ಅವರಿಗೆ ಹೇಳಿದರು. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಾಳಾದ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಜಿಲ್ಲೆಯಲ್ಲಿ ಕೆಮಿಕಲ್ ಮಿಶ್ರಿತ ಇರದ ಬಣ್ಣ ಮಾರಾಟ ಮಾಡುವ ಮಳಿಗೆಗಳನ್ನು  ಸ್ಥಾಪಿಸಬೇಕು. ಜೊತೆಗೆ ಬಣ್ಣ ಆಡುವ ಸಮಯದಲ್ಲಿ ಆಯಿಲ್ ಪೇಂಟ್, ವಾರ್ನಿಸ್ ಹಾಗೂ ಇನ್ನಿತರ ಬಣ್ಣಗಳನ್ನು ಬಳಸಬಾರದು. ಒಂದು ವೇಳೆ ಇಂಥ ಯಾವುದೇ ದೂರುಗಳು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಹೋಳಿ ಹಬ್ಬದ ಪ್ರಯುಕ್ತ, ಶಾಂತಿ ಪಾಲನೆ ಪೂರ್ವಭಾವಿ ಸಭೆಯ ನಡಾವಳಿಗಳನ್ನು ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ರಘುವೀರ್ ಸಿಂಗ್  ಠಾಕೂರ್ ಅವರು ನಡಾವಳಿಗಳು ಓದಿದರು. 
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ. ರಜಪೂತ, ಶಾಂತಿ ಪಾಲನೆ ಸಮಿತಿಯ ಪದಾಧಿಕಾರಿಗಳಾದ ವೀರಶೈವ ಲಿಂಗಾಯತ  ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷರಾದ ಅಯ್ಯಣ್ಣ ಹುಂಡೇಕಾರ್, ಮುಸ್ಲಿಂ ಸಮುದಾಯದ ಲಾಯಕ್ ಹುಸೇನ್ ಬಾದಲ್, ಗುಲಾಮ್ ಸಮುದಾನಿ, ವೈಹೀದ್‍ಮೀಯಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ, ವಿಶ್ವನಾಥ ಸಿರವಾರ, ಜೈನ್ ಸಮುದಾಯದ ಮುಖಂಡರಾದ ಬಾಬು ದೋಖಾ ಹಾಗೂ ದಲಿತ ಮುಖಂಡರಾದ ಮರೆಪ್ಪ ಚಟ್ಟರ್‍ಕರ್ ಉಪಸ್ಥಿತರಿದ್ದರು.  

ಅಕ್ರಮ ಪಡಿತರ ಚೀಟಿ ಹಿಂದಿರುಗಿಸಲು ಕೊನೆ ಅವಕಾಶ
ಯಾದಗಿರಿ, ಮಾರ್ಚ್ 04 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ತಪ್ಪು ಮಾಹಿತಿ ನೀಡಿ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವುದು ಕಂಡು ಬಂದಿದ್ದು, ಇಂಥ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿ ಪಡಿತರ ಚೀಟಿಗಳನ್ನು ಪಡೆದಿದ್ದಲ್ಲಿ ಅಂತಹ ಪಡಿತರ ಚೀಟಿದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಪಡಿತರ ಚೀಟಿದಾರರು ಸ್ವಯಂ ಪ್ರೇರಿತವಾಗಿ ಮಾಹಿತಿಯನ್ನು ತಮ್ಮ ತಾಲ್ಲೂಕಿನ ತಹಸೀಲ್ದಾರ ಕಾರ್ಯಾಲಯದಲ್ಲಿ ಅಥವಾ ಉಪ ನಿರ್ದೇೀಶಕರ ಕಾರ್ಯಾಲಯದಲ್ಲಿ ನೀಡಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ. ಮಾನದಂಡಗಳು : ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲಾ ಖಾಯಂ ನೌಕರರು ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು. ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು,  ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ, ಇತ್ಯಾದಿಗಳನ್ನು ಹೊಂದಿರುವ ಕುಟುಂಬಗಳನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಎಲ್ಲಾ ಕುಟುಂಬಗಳು. ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲು ಹೆಚ್ಚು ಇರುವ ಕುಟುಂಬಗಳು, ಈ ಎಲ್ಲಾ ಮಾನದಂಡಗಳನ್ನು ಹೊಂದಿರುವ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವುದು ಕಾನೂನು ಬಾಹಿರ ಕ್ರಮವಾಗಿರುತ್ತದೆ ಎಂದು ಹೇಳಿದರು. ಅಕ್ರಮವಾಗಿ ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸುವುದು ಸರ್ಕಾರವು ಏಪ್ರಿಲ್-2020ರ ಅಂತ್ಯದವರೆಗೆ ಮತ್ತೊಂದು ಅವಕಾಶವನ್ನು ನೀಡಿರುತ್ತದೆ. ಅನರ್ಹರು ನಿಗಧಿತ ದಿನಾಂಕದೊಳಗೆ ತಾವು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾಲ್ಲೂಕು ಕಚೇರಿಯಲ್ಲಿರುವ ತಹಶೀಲ್ದಾರರು, ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ತಾವು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಹಿಂತಿರುಗಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ತಾವೇ ಸ್ವತಃ ಪಡಿತರ ಚೀಟಿಗಳನ್ನು ಹಿಂತಿರುಗಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. 
ಈ ಅವಧಿ ಮುಗಿದ ನಂತರ ಇಲಾಖೆಯೇ ಕಾರ್ಯಚರಣೆ ನಡೆಸಿ ಅನರ್ಹರು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿದಾಗ ಅಂತಹ ಕುಟುಂಬಗಳು ತಾವು ಪಡಿತರ ಚೀಟಿಗಳನ್ನು ಹೊಂದಿದ ದಿನಾಂಕದಿಂದ ಪತ್ತೆ ಹಚ್ಚಿದ ದಿನಾಂಕದವರೆಗೆ ತಾವು ಪಡೆದ ಪಡಿತರ ಪದಾರ್ಥಗಳವಾರು ಪ್ರತಿ ಕೆಜಿಗೆ ಮುಕ್ತ ಮಾರುಕಟ್ಟೆಯ ಬೆಲೆಯ ಅನುಸಾರ ಹಣವನ್ನು ವಸೂಲಿ ಮಾಡಲಾಗುವುದು ಜೊತೆಗೆ (The Karnataka (Previntion Of  Unauthorized Possession Of Ration Cards) Order-1977ರ ರಿತ್ಯ ಕ್ರಮ ವಹಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಆದ್ದರಿಂದ ಅನರ್ಹರು ತಾವು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಿ ಕಾನೂನು ಕ್ರಮದಿಂದ ವಿಮುಕ್ತಿ ಹೊಂದಬೇಕು ಎಂದು ತಿಳಿಸಿದ್ದಾರೆ. 

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...