ಮಂಗಳವಾರ, ಆಗಸ್ಟ್ 31, 2021

 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ; ಲಿಖಿತ ಪರೀಕ್ಷಾ ತರಬೇತಿಗೆ ಅರ್ಜಿ ಆಹ್ವಾನ

ಯಾದಗಿರಿ,ಆಗಸ್ಟ್ 31, (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ನಡೆಸಲಿರುವ ಪೊಲೀಸ್ ಇಲಾಖೆಯಲ್ಲಿನ ಸಾವಿರಕ್ಕೂ ಹೆಚ್ಚು ಸಿವಿಲ್ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ತರಬೇತಿ ನೀಡಲು ನಿರ್ಧರಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 

ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 7 ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತಗಂಗೋತ್ರಿ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿAದ ಸಂಜೆ 4 ಗಂಟೆಯೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2515944ಗೆ ಸಂಪರ್ಕಿಸುವAತೆ ಕರಾಮುವಿ ಕುಲಸಚಿವ ಪ್ರೊ.ಆರ್. ರಾಜಣ್ಣ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 


ಕಾರ್ಮಿಕ ಅದಾಲತ್‌ಆಟೋ ಪ್ರಚಾರಕ್ಕೆ ಚಾಲನೆ

ಯಾದಗಿರಿ,ಆಗಸ್ಟ್ 31, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ  ಮಂಗಳವಾರದAದು “ಕಾರ್ಮಿಕ ಅದಾಲತ್‌ನ ಕುರಿತಾದ ಆಟೋ ಪ್ರಚಾರಕ್ಕೆ” ಯಾದಗಿರಿಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ನ್ಯಾಯಾಧೀಶರಾದ ಸಾಹೀಲ್ ಎಸ್ ಕುನ್ನಿಭಾವಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. 

ನಂತರ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಿಂದ ಈಗಾಗಲೇ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಸಾಕಷ್ಟು ಯೊಜನೆಗಳು ಜಾರಿಯಲ್ಲಿದ್ದು, ಅವುಗಳ ಕುರಿತು ಕಾರ್ಮಿಕ ವರ್ಗದವರಲ್ಲಿ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಕೈಗೊಂಡು ಬಾಕಿ ಇರುವ ಅರ್ಜಿಗಳ ವಿಲೇವಾರಿ ಮಾಡುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.  ಈ ಕಾರ್ಮಿಕ ಅದಾಲತ


ಸೆ.16 ರವರೆಗೆ ಚಾಲ್ತಿಯಲ್ಲಿದ್ದು, ಸೂಕ್ತ ದಾಖಲೆಗಳನ್ನು ಇಲಾಖೆಗೆ ಸಲ್ಲಿಸುವ ಮೂಲಕ ಅದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಗಂಗಾಧರ, ಕಾರ್ಮಿಕ ನಿರೀಕ್ಷಕರಾದ ಸಾಬಿರಾ ಬೇಗಂ ಸೇರಿದಂತೆ ಇತರೆ ಸಿಬ್ಬಂದಿಗಳಿದ್ದರು.   

ಸೋಮವಾರ, ಆಗಸ್ಟ್ 30, 2021

 ಜಿಲ್ಲೆಯಲ್ಲಿ ಈ  ಸಾಲಿಗೆ ಶೇ 92.74 ರಷ್ಟು ಬಿತ್ತನೆ ಕಾರ್ಯ ಪೂರ್ಣ  

ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಭೂಮಿ ಬರುಡಾಗುವ ಸಾಧ್ಯತೆ ಹೆಚ್ಚು

: ಜಂಟಿ ಕೃಷಿ ನಿರ್ದೇಶಕ ಅಭೀದ್ ಎಸ್.ಎಸ್

ಯಾದಗಿರಿ,ಆಗಸ್ಟ್ 30, (ಕರ್ನಾಟಕ ವಾರ್ತೆ): ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಭೂಮಿ ಬರುಡಾಗುವ ಸಾಧ್ಯತೆ ಹೆಚ್ಚಿರುತ್ತದೆ ಹೀಗಾಗಿ ರೈತರು ಮಿತವಾಗಿ ರಸಗೊಬ್ಬರಗಳ ಬಳಕೆ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಅಭೀದ್ ಎಸ್.ಎಸ್ ಸಲಹೆ ನೀಡಿದರು.

ನಗರದ ಜಿ.ಪಂ ಸಂಕೀರ್ಣದಲ್ಲಿರುವ ಕೃಷಿ ಇಲಾಖೆ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

 ರೈತರು ರಸಗೊಬ್ಬರಗಳ ಬಳಕೆಯನ್ನು ಕಡಿಮೆಗೊಳಿಸಿ, ಸಾವಯುವ ಗೊಬ್ಬರಗಳ ಬಳಕೆಗೆ ಮುಂದಾಗಬೇಕು, ವಿಜ್ಞಾನಿಗಳ ಪ್ರಕಾರ ರಸಗೊಬ್ಬರ ಹೆಚ್ಚಾದ ಬಳಕೆಯಿಂದ ಭೂಮಿ ತನ್ನ ಫಲವತತ್ತೆಯನ್ನು ಕಳೆದುಕೊಳ್ಳುತ್ತದೆ ಎಂದರು. ರೈತರು ಡಿ.ಎ.ಪಿ. ಯೂರಿಯಾ ಬದಲಿಗೆ ಕಾಂಪ್ಲೇಕ್ಸ್ ನಂತಹ ಗೊಬ್ಬರವನ್ನು ಬಳಸಬೇಕು ಎಂದರು.

ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ 28ರವರಗೆ 292.0 ಮೀ.ಮೀನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈ  ಸಾಲಿಗೆ ಶೇ 92.74 ರಷ್ಟು ಬಿತ್ತನೆ ಕಾರ್ಯ ಪೂರ್ಣ :   ಜಿಲ್ಲೆಯಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 92.74 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಅದರಲ್ಲಿ 392799 ಹೇಕ್ಟರ್ ಬಿತ್ತನೆ ಗುರಿಯಲ್ಲಿ 364282 ಹೇಕ್ಟರ್ ನಷ್ಟು ಬಿತ್ತನೆಯಾಗಿದೆ ಎಂದವರು ತಿಳಿಸಿದರು.

ಈ ಬಾರಿ ಜಿಲ್ಲೆಯ ರೈತರು ಭತ್ತ, ಸಜ್ಜೆ, ತೊಗರಿ, ಹೆಸರು, ಶೇಂಗಾ, ಹತ್ತಿ ಬೆಳೆಗಳನ್ನು ಬೆಳೆದಿದ್ದು,ಇದರಲ್ಲಿ ಹೆಚ್ಚಿನ ರೈತರು ಹತ್ತಿ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ ಎಂದು ಹೇಳಿದರು. 

ಸುರಪುರ ಭಾಗದಲ್ಲಿ ಇನ್ನು ಹೆಚ್ಚಿನ ಬಿತ್ತನೆ ಕಾರ್ಯ ನಡೆದಿದ್ದು, ಈ ವಾರದಲ್ಲಿ ಬಿತ್ತನೆ ಕಾರ್ಯದಲ್ಲಿ ಶೇ100ರಷ್ಟು ಪ್ರಗತಿ ಸಾಧಿಸುವುದಾಗಿ ಅವರು ತಿಳಿಸಿದರು.

ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆಗೆ 3ನೇ ಸ್ಥಾನ ಅವರು ಬೆಳೆ ಸಮೀಕ್ಷೆಯಲ್ಲಿ 419869 ಪ್ಲಾಟುಗಳಲ್ಲಿ  34158ರಷ್ಟು ಕಾರ್ಯವನ್ನು ಈಗಾಗಲೇ ಪೂರ್ಣಗೊಂಡಿದ್ದು, ಶೇ 8.14ನಷ್ಟು ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಿಲ್ಲೆಗೆ 3ನೇ ಸ್ಥಾನ ಲಭಿಸಿದೆ ಎಂದವರು ಮಾಹಿತಿ ನೀಡಿದರು.

ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಡಿ.ಎ.ಪಿ ಗೊಬ್ಬರ ಹೊರತುಪಡಿಸಿ ಇನ್ಯಾವುದೇ ಗೊಬ್ಬರಗಳ ಕೊರತೆ ಜಿಲ್ಲೆಗೆಯಾಗಿರುವುದಿಲ್ಲ ಎಂದರು. ಡಿಎಪಿ 24559 ಮೆ.ಟನ್ ಬೇಡಿಕೆಯಲ್ಲಿ ಜಿಲ್ಲೆಗೆ 22907 ಮೆ.ಟನ್ ಪೂರೈಕೆಯಾಗಿದ್ದು,1651.2 ಮೆ.ಟನ್ ಕೊರತೆಯಾಗಿರುತ್ತದೆ. ಯೂರಿಯಾ ಗೊಬ್ಬರವು ಶೇ.139ರಷ್ಟು ಜಿಲ್ಲೆಗೆ ಸರಬರಾಜು ಮಾಡಿದ್ದು, ಬೇಡಿಕೆಗಿಂತ ಹೆಚ್ಚಿನ ಗೊಬ್ಬರ ಪೂರೈಸಿಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕರಾದ ಡಾ.ಬಾಲರಾಜ, ರಾಜಕುಮಾರ್ ಇದ್ದರು.

 ಪಡಿತರ ಚೀಟಿ:ಇ-ಕೆವೈಸಿ ಮಾಡಿಸಲು ಸೆ.10 ಕೊನೆಯ ದಿನ

ಯಾದಗಿರಿ,ಆಗಸ್ಟ್ 30, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳು ಹಾಗೂ ಆದ್ಯತೇತರ (ಎಪಿಎಲ್) ಪಡಿತರ ಚೀಟಿಗಳಲ್ಲಿರುವ ಸದಸ್ಯರು ಇಲ್ಲಿಯವರೆಗೂ ಇ-ಕೆವೈಸಿ (ಬಯೋಮೆಟ್ರಿಕ್ ದೃಢೀಕರಣ) ಮಾಡಲಾದ ಸದಸ್ಯರನ್ನು ಹೊರತುಪಡಿಸಿ ಉಳಿದ ಸದಸ್ಯರು ಸೆಪ್ಟೆಂಬರ್.1 ರಿಂದ 10 ರ ಒಳಗೆ ತಮ್ಮ ಪಡಿತರ ಚೀಟಿಯನ್ನು ನಿಯೋಜಿಸಲಾದ  ನ್ಯಾಯಬೆಲೆ ಅಂಗಡಿಗಳಲ್ಲಿಯೇ ಕಡ್ಡಾಯವಾಗಿ ಪಡಿತರ ಚೀಟಿಗಳ ಸದಸ್ಯರು ಉಚಿತವಾಗಿ ಇ-ಕೆವೈಸಿ (ಬಯೋಮೆಟ್ರಿಕ್ ದೃಢೀಕರಣ)  ಮಾಡಿಸಿಕೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.


 ಸೆಪ್ಟೆಂಬರ್ ತಿಂಗಳ ಪಡಿತರ ವಿತರಣೆಗೆ ಲಭ್ಯ

ಯಾದಗಿರಿ,ಆಗಸ್ಟ್ 30, (ಕರ್ನಾಟಕ ವಾರ್ತೆ): ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿಯಲ್ಲಿ ಸೆಪ್ಟೆಂಬರ್-2021 ರ ತಿಂಗಳಿಗೆ ಯಾದಗಿರಿ ಜಿಲ್ಲೆಯ ಎಎವೈ 29,527 ಪ್ರತಿ ಪಡಿತರ ಚೀಟಿಗಳಿಗೆ 35 ಕೆಜಿ ಅಕ್ಕಿ ಹಾಗೂ ಬಿಪಿಎಲ್ 8,48,467 ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ, ಮತ್ತು ಬಿಪಿಎಲ್ 2,33,804 ಪ್ರತಿ ಪಡಿತರ ಚೀಟಿಗಳಿಗೆ 2 ಕೆ.ಜಿ ಗೋಧಿ ಉಚಿತವಾಗಿ ವಿತರಿಸಲಾಗುವುದು ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಡಿಯಲ್ಲಿ ಸೆಪ್ಟೆಂಬರ್-2021 ರ ಮಾಹೆಗೆ ಎಎವೈ 1,19,663 ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ ಬಿಪಿಎಲ್ 8,48,467 ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಉಚಿತವಾಗಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್-2021 ರ ಮಾಹೆಗೆ ಆಹಾರಧಾನ್ಯ ಪಡೆಯಲು ಇಚ್ಛೆಯನ್ನು ವ್ಯಕ್ತಪಡಿಸಿದ ಆದ್ಯತೇತರ ಪಡಿತರ ಚೀಟಿ ಹೊಂದಿದವರಿಗೆ ಏಕ ಸದಸ್ಯರಿಗೆ ಅಕ್ಕಿ 5 ಕೆಜಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆಜಿ ಅಕ್ಕಿ ಯನ್ನು ಪ್ರತಿ ಕೆಜಿಗೆ ರೂ,15/- ರಂತೆ ನೀಡಿ ಆಹಾರಧಾನ್ಯವನ್ನು ಪಡೆಯಬಹುದಾಗಿದೆ.
ಜಿಲ್ಲೆಯ ಆಯ್ದ 399 ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರ ಓ.ಟಿ.ಪಿ. ಮುಖಾಂತರ ಅಥವಾ ಬೆರಳಚ್ಚನ್ನು/ಬಯೋಮೆಟ್ರಿಕ್ ಪಡೆದು ಪಡಿತರ ವಿತರಿಸಲು (Point of Sale – POS Shop Module) ವ್ಯವಸ್ಥೆ ಮಾಡಲಾಗಿದೆ. ಕುಟುಂಬದ ಸದಸ್ಯರಿಗೆ ಲಭ್ಯವಾಗಿರುವ ಅರ್ಹತಾ ಪ್ರಮಾಣವನ್ನು ತಿಳಿದುಕೊಂಡು ಆಹಾರ ಧಾನ್ಯ ಪಡೆದುಕೊಳ್ಳಲು ಸೂಚಿಸಿದೆ.
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಪಡೆದುಕೊಳ್ಳಲು ಯಾವುದೇ ದೂರು ಇದ್ದಲ್ಲಿ ಆಯಾ ತಾಲೂಕಿನ ತಹಸೀಲ್ದಾರ, ಜಿಲ್ಲೆಯ ಉಪ ನಿರ್ದೇಶಕರ ಕಚೇರಿU ದೂ.ಸಂ 08473-253707 ಅಥವಾ ಸಹಾಯವಾಣಿ 1967 ಸಂಖ್ಯೆಗೆ ದೂರನ್ನು ದಾಖಲಿಸಲು ಕೋರಿದೆ. ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ನ್ಯಾಯಬೆಲೆ ಅಂಗಡಿಯಿAದ ಆಹಾರಧಾನ್ಯವನ್ನು ಪಡೆದುಕೊಳ್ಳಲು ಪ್ರಕಟಣೆ ತಿಳಿಸಿದೆ.

ಮಂಗಳವಾರ, ಆಗಸ್ಟ್ 24, 2021

 ವಾಹನ ವಾರಸುದಾರರ ಪತ್ತೆಗೆ ಮನವಿ

ಯಾದಗಿರಿ:ಆಗಸ್ಟ್-24(ಕರ್ನಾಟಕ ವಾರ್ತೆ) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಆವರಣದಲ್ಲಿ ವಾರಸುದಾರರು ಇಲ್ಲದ 19 ವಾಹನಗಳಿದ್ದು, ಈ ವಾಹನಗಳಿಗೆ ಸಂಬAಧಿಸಿದ ವಾರಸುದಾರರು ತಮ್ಮ ವಾಹನಗಳ ದಾಖಲಾತಿ ಪ್ರತಿಯೊಂದಿಗೆ 48 ಗಂಟೆಗಳಲ್ಲಿ ಗ್ರಾಮೀಣ ಪೊಲೀಸ್ ಠಾಣೆಗೆ ಸಂಪರ್ಕಿಸಿ ಎಂದು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ (ಕಾ.ಸು) ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.
ವಾಹನಗಳ ಸಂಖ್ಯೆ:MH01AK1278 Passion pro, KA28R1518 HH Spelender, KA38E6320 HH CD 100, KA53K2518 HH Spelender, KA32L2575 Spelender NXG,
KA33L8285 TVS sports, KA04BJ6583 TVS victor, KA33K8098 Passion pro, KA05HD1855 HH Glamer, KA33W2249 Bajaj, KA21M363, KA05MF449, KA33A1384 TATA sumo, KA33A0405 TATA sumo.
ಚೆಸ್ಸಿ ನಂಬರ: passion pro MBLHA10DJFHD2496, HH CD Delux 07L02F17537, HH Passion pro 04F09C22707, HH Spelender MBIHA100FJA834752, Travels mahendra DLA2512K5250.
ಈ ಮೇಲಿನ ವಾಹನಗಳ ವಾರಸುದಾರರಿದಲ್ಲಿ ವಾಹನಗಳ ದಾಖಲಾತಿ ಪ್ರತಿಯೊಂದಿಗೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಸಂಪರ್ಕಿಸಬಹುದಾಗಿದ್ದು, ಒಂದು ವೇಳೆ ವಾಹನಗಳ ಮಾಲಿಕರು ಸಂಪರ್ಕಿಸದೆ ಇದಲ್ಲಿ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ವಾಹನಗಳನ್ನು ಹರಾಜು ಪ್ರಕ್ರಿಯೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08473-252303, 9480803576ಗೆ ಸಂಪರ್ಕಿಸಿ ಎಂದು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

   ಕಾಣೆಯಾದ ಮಹಿಳೆ ಪತ್ತೆಗೆ ಮನವಿ

ಯಾದಗಿರಿ:ಆಗಸ್ಟ್-24(ಕರ್ನಾಟಕ ವಾರ್ತೆ) ಯಾದಗಿರಿ ತಾಲೂಕಿನ ಮೈಲಾಪೂರ ನಿವಾಸಿ ಅನ್ನಪೂರ್ಣ ಗಂಡ ಶ್ರೀನಾಥ ಕಟ್ಟಿಮನಿ ವರ್ಷ (36) ಎಂಬ ಮಹಿಳೆಯು ಮನೆಯಿಂದ ಜೂನ್ 10 ರಂದು ಕಾಣೆಯಾಗಿರುತ್ತಾರೆ ಎಂದು ಪತಿ ನೀಡಿದ ದೂರಿನ್ವಯ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾಣೆಯಾದ ವ್ಯಕ್ತಿ ಕುರಿತು ಮಾಹಿತಿ ಅಥವಾ ಸುಳಿವು ಸಿಕ್ಕಲಿ ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ಅಥವಾ ಯಾದಗಿರಿ ಕಂಟ್ರೋಲ್ ರೂಂ  ದೂ.ಸಂ: 08473-253736, 08473-253255, 9480803639 ಗೆ ಕರೆ ಸಂಪರ್ಕಿಸಲು ಪ್ರಕಟಣೆ ಕೋರಿದೆ.


 ಕ್ರೀಡಾ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಯಾದಗಿರಿ:ಆಗಸ್ಟ್-24(ಕರ್ನಾಟಕ ವಾರ್ತೆ) 2020ನೇ ಸಾಲಿನ ಹಿರಿಯ ಕ್ರೀಡಾಪಟು/ತರಬೇತುದಾರರಾಗಿ ಸಾಧನೆ ಮಾಡಿರುವ ಹಿರಿಯ ಕ್ರೀಡಾಪಟುಗಳಿಂದ ಜೀವಮಾನ ಸಾಧನೆ ಹಾಗೂ ಗ್ರಾಮೀಣ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕ್ರೀಡಾಪಟುಗಳು ಅರ್ಜಿಯನ್ನು ಸೇವಾಸಿಂಧು ಆನ್‌ಲೈನ್ ವೆಬ್‌ಸೈಟ್ https://serviceonline.gov.in/karnataka ನ ಮೂಲಕ ಸೆಪ್ಟೆಂಬರ್ 15 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಯಾದಗಿರಿ:ಆಗಸ್ಟ್-24(ಕರ್ನಾಟಕ ವಾರ್ತೆ) 2021-22ನೇ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿಯಲ್ಲಿ 2020ನೇ ಕ್ಯಾಲೆಂಡರ್ ವರ್ಷದಲ್ಲಿ ಅಂತರಾಷ್ಟಿçÃಯ, ರಾಷ್ಟಿçÃಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಕ್ರೀಡಾಪಟುಗಳು ಅರ್ಜಿಯನ್ನು ಸೆಪ್ಟೆಂಬರ್ 15 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಗೆ ಸಂಪರ್ಕಿಸಲು ಪ್ರಕಟಣೆ ಕೋರಿದೆ.

ಗುರುವಾರ, ಆಗಸ್ಟ್ 19, 2021

 19 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಯಾದಗಿರಿ ಆಗಸ್ಟ್.18(ಕರ್ನಾಟಕ ವಾರ್ತೆ): ನಿರಂತರ ವಿದ್ಯುತ್ ಪೂರೈಸಲು ಹಾಗೂ ವಿದ್ಯುತ್ ಅವಘಡ ಆಗದಂತೆ ತಡೆಯಲು 110ಕೆವಿ ಶಹಾಪೂರ, ಶಹಾಬಾದ ವಿದ್ಯುತ್ ಮಾರ್ಗದ ವಿದ್ಯುತ್‌ತಂತಿ ಬದಲಾವಣೆ ಕೆಲಸ ನಿರ್ವಹಿಸುತ್ತಿರುವ ಪ್ರಯುಕ್ತ ಆಗಸ್ಟ್ 19 ರ ಗುರುವಾರ ದಂದು ಬೆಳಿಗ್ಗೆ 9 ರಿಂದ ಸಾಯಂಕಾಲ 5ಗಂಟೆಯ ವರೆಗೆ 11ಕೆವಿ ಬಿ.ಗುಡಿಫೀಡರ್, 11ಕೆವಿ ಮುಡಬೂಳ ಎನ್.ಜೆ.ವೈ ಫೀಡರ್, 11ಕೆವಿ ಮದ್ದರಕಿ ಐಪಿಸೆಟ್ ಫೀಢರ್‌ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಬಿ.ಗುಡಿ, ಎನ್.ಜಿ.ಓಕಾಲೋನಿ, ಬಾಪುಗೌಡ ನಗರ, ಮೂಡಬೂಳ, ಮದ್ದರಕಿ, ಕೊಡಮನಹಳ್ಳಿ, ಅರಳಹಳ್ಳಿ, ಸಾದ್ಯಪೂರ, ಹುಲಕಲ್, ಹೋತಪೇಠ, ಮಕ್ತಾಪೂರ, ಹಾಲಭಾವಿ, ಇಂಗಳಗಿ, ಸಲಾದಪೂರ, ಶಾಖಾಪೂರ, ದಿಗ್ಗಿ, ಸೈದಾಪೂರ, ಉಮರದೊಡ್ಡಿ, ನಾಗನಟಗಿ, ಬಾಣತಿಹಾಳ ಗ್ರಾಮಗಳಿಗೆ ಹಾಗೂ ಸುತ್ತಮುತ್ತಲಿನ ತಾಂಡಗಳಿಗೆ ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಜೆಸ್ಕಾಂಗೆ ಸಹಕರಿಸುವಂತೆ ಕಾರ್ಯನಿರ್ವಾಹಕ ಅಭಿಯಂತರರು (ವಿ), ಕಾ ಮತ್ತು ಪಾ ವಿಭಾಗ, ಗು.ವಿ.ಸ.ಕಂ.ನಿ, ಯಾದಗಿರಿ ಇವರು ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಸಂಗೀತ ಅಕಾಡೆಮಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಯಾದಗಿರಿ ಆಗಸ್ಟ್-18(ಕರ್ನಾಟಕ ವಾರ್ತೆ): ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು 2021-22ನೇ ಸಾಲಿನ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ.
ಅರ್ಜಿಯನ್ನು ಅಕಾಡೆಮಿಯ ವೆಬ್‌ಸೈಟ್ https://sangeetanrityaacademy.karnataka.gov.in ಮೂಲಕ ಪಡೆದು ಅಥವಾ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅರ್ಜಿಯನ್ನು ಪಡೆಯಬಹುದಾಗಿದೆ.
ಅಂಚೆ ಮೂಲಕ ಅರ್ಜಿ ಮತ್ತು ಪಠ್ಯಕ್ರಮ ಪಡೆಯಲಿಚ್ಛಿಸುವವರು ರೂ.10 ಸ್ಟಾಂಪ್ ಹಚ್ಚಿದ ಸ್ವ ವಿಳಾಸವುಳ್ಳ ಲಕೋಟೆಯನ್ನು ರಿಜಿಸ್ಟಾçರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ ಜೆ.ಸಿ.ರಸ್ತೆ ಬೆಂಗಳೂರು-560 002 ಇಲ್ಲಿಗೆ ಕಳುಹಿಸಿಕೊಡಬೇಕಾಗುವುದು.
ಭರ್ತಿ ಮಾಡಿದ ಅರ್ಜಿಗಳನ್ನು ಮೇಲ್ಕಂಡ ವಿಳಾಸಕ್ಕೆ ಕಳುಹಿಸಿಕೊಡಲು ಕೊನೆಯ ಸೆಪ್ಟಂಬರ್ 17 ಕೊನೆಯ ದಿನ ಎಂದು ಪ್ರಕಟಣೆ ತಿಳಿಸಿದೆ.

ಬುಧವಾರ, ಆಗಸ್ಟ್ 4, 2021

 ಕೋವಿಡ್-19 ಕುರಿತು ಇಂಟರ್ನ್ಶಿಪ್: ಅರ್ಜಿ ಆಹ್ವಾನ

ಯಾದಗಿರಿ: ಆಗಸ್ಟ್.4 (ಕರ್ನಾಟಕ ವಾರ್ತಾ): ಲಸಿಕೆ ಆಡಳಿತದಲ್ಲಿ ನೆರೆಯ ಕುಟುಂಬಗಳನ್ನು ಬೆಂಬಲಿಸುವ ಮೂಲಕ ಸಮುದಾಯಕ್ಕೆ ವ್ಯಾಕ್ಸಿನ್ ರಾಯಬಾರಿಯಾಗಿ ಕೆಲಸ ನಿರ್ವಹಿಸುವುದಕ್ಕಾಗಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕುಷ್ಠರೋಗಗಳ ನಿರ್ಮೂಲನೆ ಅಧಿಕಾರಿಗಳ ಕಚೇರಿ ವತಿಯಿಂದ ಇಂಟರ್ನ್ಶಿಪ್ (ಕಲಿಕೆ) ಹಮ್ಮಿಕೊಂಡಿದ್ದು, ಇದಕ್ಕಾಗಿ ಜಿಲ್ಲೆಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

       ಅರ್ಜಿಸಲ್ಲಿಸಲು ಆಸಕ್ತರು ಸೇವಾ ಮನೋಭಾವನೆ ಹೊಂದಿರುವ 12 ನೇ ತರಗತಿ ಉತ್ತೀರ್ಣರಾಗಿರುವ ಅಥವಾ  ಅದಕ್ಕಿಂತ ಹೆಚ್ಚಿನ ಶಿಕ್ಷಣ ಹೊಂದಿರುವ, ಕನ್ನಡ ಭಾಷೆ ಬಲ್ಲವರು ಹಾಗೂ ಜಿಲ್ಲೆಯ ನಿವಾಸಿಯಾಗಿರುವ ಅಭ್ಯರ್ಥಿಗಳು ಅರ್ಜಿಯನ್ನು ವೆಬ್‌ಸೈಟ್ ಥಿಚಿಜgiಡಿ.ಟಿiಛಿ.iಟಿ

ನ ಮೂಲಕ ಸಲ್ಲಿಸಬಹುದಾಗಿದೆ.

    ಈ ಇಂಟರ್ನ್ಶಿಪ್ ಅವಧಿ 6 ವಾರಗಳ ಕಾಲ ದಿನಕ್ಕೆ 2 ರಿಂದ 3ಗಂಟೆಗಳವರೆಗೆ ನಡೆಯಲಿದೆ. ಇಲ್ಲಿ ಇಂಟರ್ನ್ಶಿಪ್ ಪಡೆದವರು ಸರ್ಕಾರಿ ಅಧಿಕಾರಿಗಳ ನಾಯಕತ್ವದಲ್ಲಿ ಕೆಲಸ ಮಾಡಲು ವೃತ್ತಿಪರ ಮಾನ್ಯತೆ, ಅಭಿವೃದ್ಧಿ ಕ್ಷೇತ್ರದ ತಜ್ಞರಿಂದ ಕಲಿಯುವ ಅವಕಾಶ ಹಾಗೂ ಜಿಲ್ಲಾಡಳಿತದಿಂದ ಪ್ರಮಾಣಪತ್ರ ಸಹ ಪಡೆಯಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯಕ್ಕೆ  ಸಂಪಕಿಸಬಹುದಾಗಿದೆ ಎಂದು  ಪ್ರಕಟಣೆ ತಿಳಿಸಿದೆ.


ಕೃತಕ ಅಂಗಾಗಳ ಜೋಡಣೆಗೆ ಅರ್ಜಿ ಆಹ್ವಾನ

ಯಾದಗಿರಿ: ಆಗಸ್ಟ್.4 (ಕರ್ನಾಟಕ ವಾರ್ತಾ): ಯಾದಗಿರಿ ನಗರ ಸಭೆ ವ್ಯಾಪ್ತಿಯಲ್ಲಿ 2019-20ನೇ ಸಾಲಿನ ಶೇ.5% ಯೋಜನೆಯಡಿಯಲ್ಲಿ ಎಸ್.ಎಫ್.ಸಿ ಅನುದಾನದ ಅಡಿಯಲ್ಲಿ ವಿಕಲಚೇತನ ಹೊಂದಿರುವ ಫಲಾನುಭವಿಗಳಿಗೆ ಕೃತಕ ಅಂಗಾಗಳ ಜೋಡಣೆ ಸಲುವಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಸಲಾಗಿದೆ.

ಅರ್ಜಿ ಸಲ್ಲಿಸುವ ಫಲಾನುಭವಿಗಳು ಸ್ಥಳೀಯ ನಿವಾಸಿಯಾಗಿರಬೇಕು, ಅಂಗವಿಕಲರ ಪ್ರಮಾಣ ಪತ್ರ, ಜಾತಿ & ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಬಿ.ಪಿ.ಎಲ್ ಕಾರ್ಡ & ಐಡಿ ಕಾರ್ಡ,  2 ಫೋಟೋ ಅರ್ಜಿಯನ್ನು  ಆಗಸ್ಟ್ 2 ರಿಂದ ಆಗಸ್ಟ್ 16ರೊಳಗೆ ನಗರಸಭೆ ಕಾರ್ಯಲಯಕ್ಕೆ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಗರ ಸಭೆ ಕಾರ್ಯಾಲಯದ ದೂ.ಸಂ: 08473-252312 ಗೆ ಸಂಪರ್ಕಿಸಲು ಕೋರಿದಾರೆ. 


ಯಾದಗಿರಿ ನಗರಸಭೆ; ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ

ಯಾದಗಿರಿ: ಆಗಸ್ಟ್.4 (ಕರ್ನಾಟಕ ವಾರ್ತಾ): 2021-22ನೇ ಸಾಲಿನ ಡೇ-ನಲ್ಮ್ ಯೋಜನೆಯಡಿಯಲ್ಲಿ ವೈಯಕ್ತಿಕ ಬ್ಯಾಂಕ್ ಸಾಲಸೌಲಭ್ಯ, ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲಸೌಲಭ್ಯ, ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಲಿಂಕೆಜ್ ಸಾಲಸೌಲಭ್ಯ ಮತ್ತು ಸ್ವಸಹಾಯ ಸಂಘಗಳ ರಚನೆ ವಿವಿಧ ಕಾರ್ಯಕ್ರಮಗಳ ಸೌಲಭ್ಯಗಳನ್ನು ಯಾದಗಿರಿ ನಗರಸಭೆ ವತಿಯಿಂದ ಕಲ್ಪಿಸಿಕೊಡಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹರು ಮತ್ತು ಆಸ್ತಕಿ ಇರುವ ಅರ್ಜಿದಾರರು ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಕನಿಷ್ಟ ಮೂರು ವರ್ಷ ವಾಸವಾಗಿರಬೇಕು, ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು, ಅರ್ಜಿದಾರರು ವಿವಿಧ ಕಾರ್ಯಾಕ್ತಮಗಳಿಗೆ ಪ್ರತ್ಯೇಕ ಅರ್ಜಿಗಳು ಸಲ್ಲಿಸಬೇಕು, ಅರ್ಜಿದಾರರು ಇತರೆ ದಾಖಲೆಗಳೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಚುನಾವಣೆ ಗುರುತಿನ ಪತ್ರ ಹಾಗೂ ಆಧಾರ ಕಾರ್ಡ್ ಕಡ್ಡಾಯವಾಗಿ ಲಗತ್ತಿಸಬೇಕು ಇವೆಲ್ಲಾ ಷರತ್ತುಗಳಿಗೆ ಅರ್ಜಿದಾರರು ಬದ್ಧರಾಗಿ ಆಗಸ್ಟ್ 17 ರೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತ/ಸಮುದಾಯ ಸಂಘಟನಾಧಿಕಾರಿಗಳನ್ನು ಸಂಪರ್ಕಿಸಬಹುದು. 


ಆಗಸ್ಟ್ 12 ರಂದು ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿ,ಆಗಸ್ಟ್04,(ಕರ್ನಾಟಕ.ವಾರ್ತಾ): ಗುರುಮಿಠಕಲ್ ತಾಲೂಕ ಪಂಚಾಯತಿಯ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಶಾಸಕ ನಾಗನಗೌಡ ಕಂದಕೂರ ರವರ ಅಧ್ಯಕ್ಷತೆಯಲ್ಲಿ ಆಗಸ್ಟ್ 12 ರಂದು ಬೆಳಗ್ಗೆ 11.ಗಂಟೆಗೆ ಗುರುಮಿಠಕಲ್‌ನ ಪುರಸಭೆ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  ಈ ಸಭೆಯಲ್ಲಿ 2021 ಜುಲೈ 31 ರ ಅಂತ್ಯದವರೆಗಿನ ಪ್ರಗತಿ ಪರಿಶೀಲನಾ ಕುರಿತು ಚರ್ಚಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


 ವಿಷಯುಕ್ತ ತ್ಯಾಜ್ಯವನ್ನು ಹಳ್ಳ- ಕೊಳ್ಳಗಳಿಗೆ ಹರಿಬಿಡುವ ಕೆಮಿಕಲ್ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳಿ; ಜಿಲ್ಲಾಧಿಕಾರಿ*

*ಕೈಗಾರಿಕೆ ಅಭಿವೃದ್ಧಿಯಾದ್ರೆ ಜಿಲ್ಲೆಯೂ ಅಭಿವೃದ್ಧಿಯಾಗುತ್ತದೆ; ಜಿಲ್ಲಾಧಿಕಾರಿ*

ಯಾದಗಿರಿ : ಆಗಸ್ಟ್, 04 ( ಕರ್ನಾಟಕ ವಾರ್ತಾ);
ಕಡೆಚೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ .ಅವರ ಅಧ್ಯಕ್ಷತೆಯಲ್ಲಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ವಿಷಯುಕ್ತ ತ್ಯಾಜ್ಯವನ್ನು ಹಳ್ಳ- ಕೊಳ್ಳಗಳಿಗೆ ಹರಿಬಿಡುವ ಕೆಮಿಕಲ್ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳಿ ಎಂದರು.
ಮಾಲಿನ್ಯಕಾರಕ ತ್ಯಾಜ್ಯವನ್ನು ಕಾರ್ಖಾನೆಗಳ ಬೇಜವಾಬ್ದಾರಿಯಿಂದ ಕೈಗಾರಿಕಾ ಪ್ರದೇಶದ ಸುತ್ತಲಿನ ಜನತೆ ತೀವ್ರ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಕೈಗಾರಿಕಾ ಪ್ರದೇಶದಿಂದ ಹಳ್ಳ - ಕೊಳ್ಳಗಳಿಗೆ ಹರಿದ ಕಲುಷಿತ ರಾಸಾಯನಿಕ ದ್ರವದಿಂದ ಜಲಚರ, ಪಶು-ಪಕ್ಷಿಗಳು ಸೇವಿಸಿ ನಾಶವಾಗುತ್ತಿವೆ. ಹಾಗಾಗಿ ಮಾಲಿನ್ಯ ಎಸಗುತ್ತಿರುವ ಟೈರ್ ಘಟಕ ವಿರುದ್ಧ ಕೂಡಲೇ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು ಘಟಕವನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ನಿವೇಶನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿಯವರೆಗೆ 173 ಅರ್ಜಿಗಳು ಬಂದಿವೆ. ಮೀಸಲಾತಿಗೆ ಅನ್ವಯ ಶೇಕಡಾ 22.5 ರಷ್ಟು ಕಲ್ಪಿಸಬೇಕಾಗಿದೆ. ಸುಮಾರು 700 ಎಕರೆ ಭೂಮಿ ಹಂಚಿಕೆಗೆ ಲಭ್ಯವಿದೆ. ಅದರಲ್ಲಿ ಪರಿಶಿಷ್ಟ ಜಾತಿ/ ಪಂಗಡದವರಿಗೆ 161 ಎಕರೆ ಹಂಚುವ ಮೀಸಲಾತಿ ಇದೆ. ಇಲ್ಲಿಯವರೆಗೆ 11 ಎಕರೆ ಹಂಚಿಕೆ ಮಾಡಲಾಗಿದೆ. ಇನ್ನೂ ನಮಗೆ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹರಿಗೆ ಹಂಚಿ ಮಾಡಬೇಕಾಗಿದೆ ಎಂದು ಕೈಗಾರಿಕಾ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಇನ್ನೂ ಒಂದು ವಾರದೊಳಗೆ ಬಂದಿರುವ ಅರ್ಜಿಗಳಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ಎಂದು ಸಹಾಯಕ ಆಯುಕ್ತರಿಗೆ ಸೂಚಿಸಿದರು.
*ಕೈಗಾರಿಕಾ ಅಭಿವೃದ್ಧಿಯಾದರೆ ಜಿಲ್ಲೆಯೂ ಅಭಿವೃದ್ಧಿಯಾಗುತ್ತದೆ. ಕೈಗಾರಿಕಾ ಪ್ರದೇಶದ ನಿವೇಶನ ಸೌಲಭ್ಯವು ಅರ್ಹರಿಗೆ ಉಪಯೋಗವಾಗಬೇಕು. ನಿವೇಶನ ಪಡೆದ ನಂತರ ಕೈಗಾರಿಕೆಗಳು ಸಮರ್ಪಕವಾಗಿ ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು*
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕಿ ರೇಖಾ ಮ್ಯಾಗೇರಿ, ಯಾದಗಿರಿ ತಹಶೀಲ್ದಾರ ಚೆನ್ನಮಲ್ಲಪ್ಪ ಘಂಟಿ, ಇನ್ನಿತರರು ಉಪಸ್ಥಿತರಿದ್ದರು.
May be an image of 2 people and indoor
Like
Comment
Share

ಮಂಗಳವಾರ, ಆಗಸ್ಟ್ 3, 2021

 ಅಲ್ಪಸಂಖ್ಯಾತರಿAದ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಯಾದಗಿರಿ.ಆಗಸ್ಟ್.3(ಕ.ವಾ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2021-22ನೇ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ಬಿ.ಎಡ್ ಹಾಗೂ ಡಿ.ಎಡ್ ಓದುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿವೇತನದ ಅರ್ಜಿಗಳನ್ನು ಸಂಬAಧಪಟ್ಟ ಜಿಲ್ಲಾ/ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲತತ್ತಿಸಿ, ದ್ವೀಪತ್ರಿಗಳಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ವಿದ್ಯಾರ್ಥಿಗಳು ವಾರ್ಷಿಕ ರೂ.25,000 (ಗರಿಷ್ಠ 2 ವರ್ಷಗಳಿಗೆ ಶೈಕ್ಷಣಿಕ) ಅವಧಿಯಲ್ಲಿ ಪಡೆಯಬಹುದಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.dom.karnataka.gov.in ಅಥವಾ www.dom.karnataka.gov.in/yadagiri/public ನಿಂದ ಪಡೆದು ಕೊಳ್ಳಬಹುದಾಗಿದ್ದು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಇಲಾಖೆಯ ದೂ.ಸಂ:08473-253235, 9731090143 ಗೆ ಸಂಪರ್ಕಿಸಲು ಕೋರಿದಾರೆ.

 ವಿಕಲಚೇತನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ: ಅರ್ಜಿ ಆಹ್ವಾನ

ಯಾದಗಿರಿ.ಆಗಸ್ಟ್.3(ಕ.ವಾ): ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಸ್ಪರ್ಧಾಚೇತನ ಯೋಜನೆಯಡಿ ಪಿ.ಯು.ಸಿ ಮೇಲ್ಪಟ್ಟು ವ್ಯಾಸಂಗ ಮಾಡುವ ಅರ್ಹ ಎಲ್ಲ ವಿಕಲಚೇತನ ವಿದ್ಯಾರ್ಥಿಗಳು ಐ.ಎ.ಎಸ್. ಕೆ.ಎ.ಎಸ್, ಎಸ್.ಡಿ.ಎ, ಎಫ್.ಡಿ.ಎ, ಹಾಗೂ ಇನ್ನಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಎ1 ಕೆರಿಯರ್ ಅಕಾಡೆಮಿಯು ಉಚಿತ ತರಬೇತಿ ನೀಡುತ್ತಿದೆ. ಆಸ್ತಕ ಅರ್ಹ ಎಲ್ಲಾ ವಿಕಲಚೇತನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತರಬೇತಿ ಪಡೆಯಲು ಬೇಕಾಗಿರುವ ದಾಖಲಾತಿಗಳು ಅಂಗವಿಕಲತೆ ಗುರುತಿನ ಚೀಟಿ ಶೇ40% ಮೇಲ್ಪಟ್ಟು, ಆಧಾರ ಕಾರ್ಡ್, ವಾಸಸ್ಥಳ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿಕಲತೆ ತೋರುವ ಭಾವಚಿತ್ರ 2 ಮತ್ತು ವಿದ್ಯಾರ್ಹತೆಯ ಎಲ್ಲಾ ಅಂಕಪಟ್ಟಿಗಳು ಸೂಕ್ತ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಇಲಾಖೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 08473-253740 ಸಂಪರ್ಕಿಸಲು ಕೋರಿದೆ..

ತೋಟಗಾರಿಕೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ಯಾದಗಿರಿ.ಆಗಸ್ಟ್.3(ಕ.ವಾ): 2021-22ನೇ ಸಾಲಿನ ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ರಾಷ್ಟಿçÃಯ ತೋಟಗಾರಿಕೆ ಮೀಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಹೊಸ ಕೃಷಿ ಪ್ರದೇಶ ವಿಸ್ತರಣೆಯಲ್ಲಿ ಬರುವ ಬಾಳೆ, ದಾಳಿಂಬೆ, ನೇರಳೆ, ಅಂಜೂರ, ಡ್ರಾö್ಯಗನ್ ಫ್ರೊಟ್, ಸೀಬೆ ಹಾಗೂ ಕೀಟ ಮತ್ತು ರೋಗ ನಿಯಂತ್ರಣ, ನೀರು ಸಂಗ್ರಹಣಾ ಘಟಕ, ಯಾಂತ್ರೀಕರಣ, ಕೋಯ್ಲೋತ್ತರ ನಿರ್ವಹಣೆ ಘಟಕಗಳಿಗೆ ಸಹಾಯಧನವನ್ನು ತೋಟಗಾರಿಕೆ ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. 

ಆಸಕ್ತ ರೈತರು ಆಗಸ್ಟ 16 ರೊಳಗೆ ಅರ್ಜಿಯನ್ನು ದಾಖಲಾತಿಗಳೊಂದಿಗೆ ಸಂಬAಧಪಟ್ಟ ತಾಲ್ಲೂಕ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು. ಲಭ್ಯವಿರುವ ಅನುದಾನದ ಮೇರೆಗೆ, ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ಜೇಷ್ಠತಾವಾರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತೋಟಗಾರಿಕೆಯ ಉಪ ನಿರ್ದೇಶಕರು (ಜಿಪಂ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 ಉದ್ಯೋಗ ಖಾತ್ರಿ ಯೋಜನೆ: ರೈತ ಬಂಧು ಅಭಿಯಾನ 

ಯಾದಗಿರಿ.ಆಗಸ್ಟ್.3(ಕ.ವಾ): ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತ ಬಂಧು ಅಭಿಯಾನ ಅಂಗವಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಆಗಸ್ಟ್ 15 ರಿಂದ ಅಕ್ಟೋಬರ್ 15 ರವರೆಗೆ 2 ತಿಂಗಳ ಕಾಲ ರೈತರ ಎರೆಹುಳ ಗೊಬ್ಬರ ತಯಾರಿಕೆ ಮತ್ತು ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಠ25 ಎರೆಹುಳ ತೊಟ್ಟಿಗಳನ್ನು ನಿರ್ಮಿಸುವ ಗುರಿ ಹೊಂದಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಉದ್ದೇಶಗಳು: ಆರ್ಥಿಕ ಸ್ಥಿರತೆ,ತ್ಯಾಜ್ಯ ವಸ್ತುಗಳ ಸದ್ಭಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಗೊಳಿಸಿ ಸ್ವಚ್ಛ ಪರಿಸರ ಸೃಷ್ಠಿಸಲು ಅನುಕೂಲ,ರೈತರಲ್ಲಿ ಎರೆಹುಳ ಗೊಬ್ಬರ ಉತ್ಪಾದನೆ,ಅದರ ಉಪಯುಕ್ತತತೆ ಹಾಗೂ ಸಾವಯವ ಕೃಷಿ ಉತ್ತೇಜಿಸುವ ಬಗ್ಗೆ ಜಾಗೃತಿ,ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಹಾಗೂ ರೈತರಿಗೆ ಎರೆಹುಳ ಗೊಬ್ಬರದ ಉತ್ಪಾದನೆ ಹಾಗೂ ಉದ್ಯಮಶೀಲತೆ ಅವಕಾಶಗಳ ಬಗ್ಗೆ ಪೂರಕ ಮಾಹಿತಿ ನೀಡಿ ಪ್ರೋತ್ಸಾಹಿಸುವುದು.

ಫಲಾನುಭವಿಗಳ ವರ್ಗ: ವೈಯಕ್ತಿಕ ಫಲಾನುಭವಿಗಳು,ಸ್ವಸಹಾಯ ಗುಂಪು,ರೈತ ಉತ್ಪಾದಕ ಸಂಸ್ಥೆಗಳು,ಸಮುದಾಯ ಘಟಕ ನರೇಗಾ ಯೋಜನೆಯಡಿ ಜಾನುವಾರು ಶೆಡ್ ನಿರ್ಮಿಸಿಕೊಂಡಿರುವ ಹಾಗೂ ಬಯೋಗ್ಯಾಸ ಘಟಕಗಳ ಫಲಾನುಭವಿಗಳಿಗೆ ಕಡ್ಡಾಯವಾಗಿ ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು.. 

ಅರ್ಹ ಫಲಾನುಭವಿಗಳು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ,ಅಲೆಮಾರಿ ಜನಗಳು, ಬುಡಕಟ್ಟು ಜನಾಂಗ,ಬಡತನರೇಖೆ ಕೆಳಮಟ್ಟದಲ್ಲಿ ಇರುವ ಇತರೆ ಕುಟುಂಬಗಳು,ಸ್ರಿö್ತÃ ಪ್ರಧಾನ ಕುಟುಂಬಗಳು, ವಿಕಲಚೇತನ ಪ್ರಧಾನ ಕುಟುಂಬಗಳು, ಭೂಸುಧಾರಣಾ ಫಲಾನುಭವಿಗಳು, ಇಂದಿರಾ ಆವಾಜ್ ಯೋಜನೆಯ ಫಲಾನುಭವಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ 2006(2007 ರ2)ರಡಿಯ ಫಲಾನುಭವಿಗಳು

ಅನುಮೋದಿತ ಎರೆಹುಳು ಗೊಬ್ಬರ ತಯಾರಿಕೆ ಮಾದರಿಗಳು: ಎರೆಹುಳು ಗೊಬ್ಬರ ತಯಾರಿಕೆ ತೊಟ್ಟಿ ವಿಧಾನವು ಹೆಚ್ಚು ಬಳಕೆಯಲ್ಲಿರುವುದರಿಂದ,ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2 ಎರೆಹುಳು ಘಟಕದ ತೊಟ್ಟಿಯನ್ನು ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 


                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...