ಮಂಗಳವಾರ, ಆಗಸ್ಟ್ 3, 2021

 ವಿಕಲಚೇತನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ: ಅರ್ಜಿ ಆಹ್ವಾನ

ಯಾದಗಿರಿ.ಆಗಸ್ಟ್.3(ಕ.ವಾ): ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಸ್ಪರ್ಧಾಚೇತನ ಯೋಜನೆಯಡಿ ಪಿ.ಯು.ಸಿ ಮೇಲ್ಪಟ್ಟು ವ್ಯಾಸಂಗ ಮಾಡುವ ಅರ್ಹ ಎಲ್ಲ ವಿಕಲಚೇತನ ವಿದ್ಯಾರ್ಥಿಗಳು ಐ.ಎ.ಎಸ್. ಕೆ.ಎ.ಎಸ್, ಎಸ್.ಡಿ.ಎ, ಎಫ್.ಡಿ.ಎ, ಹಾಗೂ ಇನ್ನಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಎ1 ಕೆರಿಯರ್ ಅಕಾಡೆಮಿಯು ಉಚಿತ ತರಬೇತಿ ನೀಡುತ್ತಿದೆ. ಆಸ್ತಕ ಅರ್ಹ ಎಲ್ಲಾ ವಿಕಲಚೇತನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತರಬೇತಿ ಪಡೆಯಲು ಬೇಕಾಗಿರುವ ದಾಖಲಾತಿಗಳು ಅಂಗವಿಕಲತೆ ಗುರುತಿನ ಚೀಟಿ ಶೇ40% ಮೇಲ್ಪಟ್ಟು, ಆಧಾರ ಕಾರ್ಡ್, ವಾಸಸ್ಥಳ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿಕಲತೆ ತೋರುವ ಭಾವಚಿತ್ರ 2 ಮತ್ತು ವಿದ್ಯಾರ್ಹತೆಯ ಎಲ್ಲಾ ಅಂಕಪಟ್ಟಿಗಳು ಸೂಕ್ತ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಇಲಾಖೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 08473-253740 ಸಂಪರ್ಕಿಸಲು ಕೋರಿದೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...