ಮಂಗಳವಾರ, ನವೆಂಬರ್ 26, 2019

ಇಂದು ಅಡಿಗಲ್ಲು ಸಮಾರಂಭ
ಯಾದಗಿರಿ, ನವೆಂಬರ್ ೨೬ (ಕರ್ನಾಟಕ ವಾರ್ತೆ): ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ೨೦೧೯-೨೦ನೇ ಸಾಲಿನ ೫೦೫೪ ಅಪೆಂಡಿಕ್ಸ್-ಇ ಯೋಜನೆಯಡಿಯಲ್ಲಿ ಗುರುಮಠಕಲ್ ತಾಲ್ಲೂಕಿನ ಅರಕೇರಾ- ಮೋಟ್ನಳ್ಳಿ ರಸ್ತೆ ಕಿ.ಮೀ. ೬.೫೦ರಿಂದ ೧೧.೭೦ರ ವರೆಗೆ ೫ ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಯ ಅಡಿಗಲ್ಲು ಸಮಾರಂಭವನ್ನು ನವೆಂಬರ್ ೨೭ರಂದು ಬೆಳಿಗ್ಗೆ ೧೧ ಗಂಟೆಗೆ ಯಂಪಾಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಶುಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಶಿಲಾನ್ಯಾಸ ನೆರವೇರಿಸುವರು. ಶಾಸಕರಾದ ನಾಗನಗೌಡ ಕಂದಕೂರ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಬಿ.ಪಾಟೀಲ್ ವಜ್ಜಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಬಿ.ಪಾಟೀಲ್, ಶರಣಪ್ಪ ಮಟ್ಟೂರ, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲಾ, ಯಂಪಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುಂಜುಬಾಯಿ ಜೈಯಿಂದ್ರ ಚವ್ಹಾಣ್, ಜಿಲ್ಲಾ ಪಂಚಾಯಿತಿ ಕಂದಕೂರ ಕ್ಷೇತ್ರದ ಸದಸ್ಯರಾದ ಸರಸ್ವತಿ ಸುಭಾಷಚಂದ್ರ ಕಟಕಟಿ, ತಾಲ್ಲೂಕು ಪಂಚಾಯಿತಿ ಕಂದಕೂರ ಕ್ಷೇತ್ರದ ಸದಸ್ಯರಾದ ಈಶ್ವರ ಕೆ.ನಾಯ್ಕ್ ರಾಠೋಡ ಅವರು ಅತಿಥಿಗಳಾಗಿ ಭಾಗವಹಿಸುವರು.

ಡಿ.೭ಕ್ಕೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಸಭೆ
ಯಾದಗಿರಿ, ನವೆಂಬರ್ ೨೬ (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯಿತಿ ಮೂರನೇಯ ಅವಧಿಗೆ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ ಸಭೆಯನ್ನು ಡಿಸೆಂಬರ್ ೭ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯುಷ್ಮಾನ್ ಕಾರ್ಡ್ ಪಡೆಯಲು ಮನವಿ
ಯಾದಗಿರಿ, ನವೆಂಬರ್ ೨೬ (ಕರ್ನಾಟಕ ವಾರ್ತೆ): ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಒಂದು ವರ್ಷಕ್ಕೆ ೫ ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಸಾರ್ವಜನಿಕರು ಈ ಯೋಜನೆಯಡಿ ನೋಂದಾಯಿಸಿ ಲಾಭ ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ಮನವಿ ಮಾಡಿದ್ದಾರೆ.
ಎಪಿಎಲ್ ಕುಟುಂಬಗಳಿಗೆ ಸರ್ಕಾರಿ ಪ್ಯಾಕೇಜ್ ದರದ ಶೇ.೩೦ರಷ್ಟು ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ೧.೫೦ ಲಕ್ಷ ರೂಪಾಯಿ ಇರುತ್ತದೆ. ಈ ಯೋಜನೆಯಲ್ಲಿ ೧೬೫೦ ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯವಿದೆ. ಹತ್ತಿರದÀ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಹಾಜರುಪಡಿಸಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಕಾರ್ಡ್ನ್ನು ಪಡೆಯಬಹುದು. ಈ ಕಾರ್ಡ್ನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆ, ಶಹಾಪೂರ ಮತ್ತು ಸುರಪೂರ ತಾಲ್ಲೂಕು ಆಸ್ಪತ್ರೆಗಳು ಹಾಗೂ ವಡಿಗೇರಾ, ಸೈದಾಪೂರ, ಗುರುಮಠಕಲ್, ಅರಕೇರಾ ಬಿ., ಹುಣಸಗಿ, ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಯಾದಗಿರಿ, ಶಹಾಪೂರ, ಸುರಪೂರ ನಗರ ಆರೋಗ್ಯ ಕೇಂದ್ರಗಳಲ್ಲಿ ೧೦ ರೂಪಾಯಿ ಶುಲ್ಕ ನೀಡಿ ಪಡೆಯಬಹುದು.
ಅಲ್ಲದೆ, ನಿಮ್ಮ ಹತ್ತಿರದಲ್ಲಿರುವ ಸೇವಾಸಿಂಧು ಕೇಂದ್ರಗಳಲ್ಲಿ ಕಾಗದದ ಕಾರ್ಡ್ಗೆ ೧೦ ರೂಪಾಯಿ ಹಾಗೂ ಪ್ಲಾಸ್ಟಿಕ್ ಕಾರ್ಡ್ಗೆ ೩೫ ರೂಪಾಯಿ ನೀಡಿ ಪಡೆದುಕೊಳ್ಳಬಹುದು. ಯಾದಗಿರಿ ತಹಸೀಲ್ ಕಚೇರಿ ಆವರಣದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಕೂಡ ಆರೋಗ್ಯ ಕಾರ್ಡ್ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಡಿ.೧ರಿಂದ ಚಾಲು- ಬಂದ್ ಪದ್ಧತಿಯಂತೆ ಕಾಲುವೆಗೆ ನೀರು
ಯಾದಗಿರಿ, ನವೆಂಬರ್ ೨೬ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ನಾರಾಯಣಪುರ ಎಡದಂಡೆ ಕಾಲುವೆಯ ವಿತರಣಾ ಕಾಲುವೆ ೧ರಿಂದ ೨೫ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆ ೧ರಿಂದ ೧೪ರ ವರೆಗೆ ಮತ್ತು ರಾಂಪೂರ ಏತ ನೀರಾವರಿ ಕಾಲುವೆಗಳಲ್ಲಿ ಚಾಲು- ಬಂದ್ ಪದ್ಧತಿಯಂತೆ ನೀರು ಹರಿಸಲಾಗುವುದು ಎಂದು ಕೃಷ್ಣ ಭಾಗ್ಯ ಜಲನಿಗಮ ನಿಯಮಿತ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಲಮಟ್ಟಿಯಲ್ಲಿ ನವೆಂಬರ್ ೧೭ರಂದು ಜರುಗಿದ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಿದಂತೆ, ನಾರಾಯಣಪುರ ಎಡದಂಡೆ ಕಾಲುವೆ ಕಿ.ಮೀ. ೦.೦೦ ರಿಂದ ೭೭.೦೦ ವರೆಗೆ, ವಿತರಣಾ ಕಾಲುವೆ ಸಂ. ೧ರಿಂದ ೨೫ರ ವರೆಗೆ, ನಾರಾಯಣಪುರ ಬಲದಂಡೆ ಕಾಲುವೆ ಕಿ.ಮೀ.೦.೦೦ ರಿಂದ ೮೨.೦೦ ವರೆಗೆ, ವಿತರಣಾ ಕಾಲುವೆ ಸಂಖ್ಯೆ: ೧ರಿಂದ ೧೪ರ ವರೆಗೆ ಮತ್ತು ರಾಂಪೂರ ಏತ ನೀರಾವರಿಯ ಕಾಲುವೆಗಳಿಗೆ ನವೆಂಬರ್ ೨೧ರಿಂದ ನವೆಂಬರ್ ೩೦ರವರೆಗೆ ಕಾಲುವೆ ಜಾಲದಲ್ಲಿ ನೀರನ್ನು ನಿಲ್ಲಿಸಿ, ಡಿಸೆಂಬರ್ ೧ರಿಂದ ಹರಿಸಲಾಗುತ್ತದೆ. ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಈ ಕೆಳಕಂಡAತೆ ಚಾಲು/ಬಂದ್ ಪದ್ಧತಿಯಂತೆ ನೀರನ್ನು ಹರಿಸಲಾಗುವುದು.
ನೀರು ನಿಲ್ಲಿಸುವ ದಿನಾಂಕಗಳು: ನವೆಂಬರ್ ೨೧ರಿಂದ ನ.೩೦ರವರೆಗೆ, ಡಿಸೆಂಬರ್ ೧೫ರಿಂದ ಡಿ.೨೨ರವರೆಗೆ, ೨೦೨೦ರ ಜನವರಿ ೬ರಿಂದ ಜ.೧೩ರವರೆಗೆ, ಜನವರಿ ೨೮ರಿಂದ ಫೆಬ್ರುವರಿ ೪ರ ವರೆಗೆ, ಫೆಬ್ರುವರಿ ೧೯ರಿಂದ ಫೆ.೨೬ರವರೆಗೆ, ಮಾರ್ಚ್ ೧೨ರಿಂದ ಮಾ.೧೯ರವರೆಗೆ ಸೇರಿದಂತೆ ಒಟ್ಟು ೪೦ ದಿನ ನೀರು ನಿಲ್ಲಿಸಲಾಗುವುದು.
ನೀರು ಬಿಡುವ ದಿನಾಂಕಗಳು: ಡಿಸೆಂಬರ್ ೧ರಿಂದ ಡಿ.೧೪ರ ವರೆಗೆ, ಡಿಸೆಂಬರ್ ೨೩ರಿಂದ ೨೦೨೦ರ ಜನವರಿ ೫ರ ವರೆಗೆ, ಜನವರಿ ೧೪ರಿಂದ ಜ.೨೭ರವರೆಗೆ, ಫೆಬ್ರುವರಿ ೫ರಿಂದ ಫೆ.೧೮ರ ವರೆಗೆ, ಫೆಬ್ರುವರಿ ೨೭ರಿಂದ ಮಾರ್ಚ್ ೧೧ರ ವರೆಗೆ ಸೇರಿದಂತೆ ಒಟ್ಟು ೭೦ ದಿನ ನೀರು ಬಿಡಲಾಗುವುದು. ಮುಂದಿನ ದಿನಾಂಕವನ್ನು ಜಲಾಶಯದ ನೀರಿನ ಲಭ್ಯತೆಗೆ ಅನುಗುಣವಾಗಿ ಫೆಬ್ರುವರಿ ತಿಂಗಳಲ್ಲಿ ಜರುಗುವ ಸಭೆಯಲ್ಲಿ ನಿರ್ಧರಿಸಲಾಗುವುದು.
ನೀರು ಪೂರೈಕೆಯ ಯಾವುದೇ ಸಮಸ್ಯೆಗಳಿಗೆ ತಮ್ಮ ಅಚ್ಚುಕಟ್ಟು ಪ್ರದೇಶಕ್ಕೆ ಸಂಬAಧಿಸಿದAತೆ ಕೆಳಕಂಡ ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕಿಸಬಹುದು. ಕೃಭಾಜನಿ(ನಿ) ನಾರಾಯಣಪೂರ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಚ್.ನಾಯಕೋಡಿ ಮೊ:೯೩೮೦೫೮೧೦೬೦, ಎಡದಂಡೆ ಕಾಲುವೆ ವಿಭಾಗ ರೋಡಲಬಂಡಾ ಇಇ ಸುರೇಂದ್ರಬಾಬು ಮೊ:೯೪೪೯೪೦೪೯೨೧, ಬಲದಂಡೆ ಕಾಲುವೆ ವಿಭಾಗ ನಂ.೫ ರೋಡಲಬಂಡಾ ಇಇ ವೆಂಕಟೇಶಲು ಮೊ:೭೩೪೯೬೭೭೧೨೬, ಎಡದಂಡೆ ಕಾಲುವೆ ವಿಭಾಗ ಹುಣಸಗಿ ಇಇ ಎಸ್.ಎಚ್.ನಾಯಕೋಡಿ ಮೊ:೯೩೮೦೫೮೧೦೬೦, ನಿಮಪೋ ವೃತ್ತ-೧ ನಾರಾಯಣಪೂರ ಅಧೀಕ್ಷಕ ಇಂಜಿನಿಯರ್ ಎಸ್.ರಂಗರಾಮ್ ಮೊ:೯೪೮೩೫೪೫೬೬೯ ಅವರನ್ನು ಸಂಪರ್ಕಿಸಬಹುದು.
ಭತ್ತ, ಕಬ್ಬು, ಬಾಳೆ ನಿಷೇಧ: ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಅಚ್ಚುಕಟ್ಟು ಕ್ಷೇತ್ರದಲ್ಲಿ ಭತ್ತ, ಕಬ್ಬು ಹಾಗೂ ಬಾಳೆಯ ಬೆಳೆಗಳನ್ನು ನಿಷೇಧಿಸಿ, ಲಘು ನೀರಾವರಿ ಹಾಗೂ ಅಲ್ಪಾವಧಿ ಬೆಳೆಗಳು ಮಾತ್ರ ಬೆಳೆಯುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರನ್ವಯ ಅಚ್ಚುಕಟ್ಟು ಪ್ರದೇಶದ ರೈತಬಾಂಧವರು ಸಹಕರಿಸಿ, ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಮಿತವಾಗಿ ನೀರನ್ನು ಬಳಸಲು ವಿನಂತಿಸಲಾಗಿದೆ. ಕಾಲುವೆ ಜಾಲದ ನೀರು ನಿರ್ವಹಣೆ ಸಮಯದಲ್ಲಿ ತೂಬಿನ ಗೇಟುಗಳನ್ನು ಕಾಲುವೆ ಕಟ್ಟಡಗಳನ್ನು ರಕ್ಷಿಸುವುದು ಎಲ್ಲಾ ರೈತ ಬಾಂಧವರ ಕರ್ತವ್ಯವಾಗಿರುತ್ತದೆ ಹಾಗೂ ಕಾಲುವೆ ಮೇಲೆ ಸೈಫನ್ ಪೈಪ್‌ಗಳು ಮತ್ತು ಅನಧಿಕೃತ ಪಂಪುಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತಬಾಂಧವರು ಚಾಲು/ಬಂದ್ ಪದ್ಧತಿಯನ್ನು ಅನುಸರಿಸುವ ಮೂಲಕ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಅವರು ಕೋರಿದ್ದಾರೆ.

ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಅಪ್ರೆಂಟಿಶಿಪ್ ತರಬೇತಿಗೆ ಅರ್ಜಿ ಆಹ್ವಾನ
ಯಾದಗಿರಿ, ನವೆಂಬರ್ ೨೫ (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಯಾದಗಿರಿ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಿಂದ ೨೦೧೯-೨೦ನೇ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಜಿಲ್ಲಾ ಕಚೇರಿಯಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮ ಹಾಗೂ ಮಾಧ್ಯಮ ಚಟುವಟಿಕೆಗಳ ನಿರ್ವಹಣೆ ಕುರಿತು ತರಬೇತಿ ನೀಡಲು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಯು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರಾಗಿರಬೇಕು. ಕನ್ನಡ, ಇಂಗ್ಲೀಷ್ ಭಾಷೆಯ ಓದು ಮತ್ತು ಬರಹ ಬಲ್ಲವರಾಗಿದ್ದು, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ತರಬೇತಿಯ ಅವಧಿಯಲ್ಲಿ ಬೇರೆ ಯಾವುದೇ ಉದ್ಯೋಗ ಮಾಡಬಾರದು. ೧೦ ತಿಂಗಳ ತರಬೇತಿ ಇದಾಗಿದ್ದು, ಆಯ್ಕೆಯಾದ ಇಬ್ಬರು ಅಭ್ಯರ್ಥಿಗಳಿಗೆ ಮಾಸಿಕವಾಗಿ ತಲಾ ೧೫,೦೦೦ ರೂ.ಗಳ ಶಿಷ್ಯವೇತನ ನೀಡಲಾಗುವುದು.
ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಯವರಾಗಿರಬೇಕು. ಒಂದು ವೇಳೆ ಜಿಲ್ಲೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ನೆರೆಯ ಜಿಲ್ಲೆಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಅರ್ಹರು ತಮ್ಮ ಸ್ವವಿವರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಡಿಸೆಂಬರ್ ೫ರೊಳಗಾಗಿ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ (ಮಿನಿ ವಿಧಾನಸೌಧ), “ಬಿ” ಬ್ಲಾಕ್, ಮೊದಲನೇ ಮಹಡಿ, ಕೊಠಡಿ ಸಂಖ್ಯೆ: ಬಿ೨ಎ, ಬಿ೨ಬಿ ಹಾಗೂ ಬಿ೩, ಚಿತ್ತಾಪುರ ರಸ್ತೆ, ಯಾದಗಿರಿ-೫೮೫೨೦೨, ದೂ:೦೮೪೭೩-೨೫೩೭೨೨, ಇಮೇಲ್: varthabhavanyadagiri@gmail.com ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರ ಕ್ರೀಡಾಕೂಟ
ಯಾದಗಿರಿ, ನವೆಂಬರ್ ೨೫ (ಕರ್ನಾಟಕ ವಾರ್ತೆ): ವಿಕಲಚೇತನರು ಕೂಡ ಎಲ್ಲರಂತೆ ಸ್ಪರ್ಧೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ವಿಕಲಚೇತನರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಸಹ ಆತ್ಮಸ್ಥೆöÊರ್ಯ ಬರುತ್ತದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶರಣಪ್ಪ ಪಾಟೀಲ್ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇತನರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚುಟುವಟಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವು ಸಹ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಡಿಸೆಂಬರ್ ೩ರಂದು ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ದಿನಾಚರಣೆ ಪ್ರಯುಕ್ತ ವಿಕಲಚೇತನರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಅಜೀತ್ ದೋಖಾ, ಸುಭಾಸ ವಕೀಲ, ತಾಲ್ಲೂಕು ಮಟ್ಟದ ಅಂಗವಿಕಲರ ಹೋರಾಟ ಅಧ್ಯಕ್ಷರಾದ ಸಾಹೇಬ ಜಾನಿ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇಲಾಖೆ ಸಿಬ್ಬಂದಿಗಳಾದ ನಾಗಮ್ಮ ಜಕಾತಿ, ರಾಧಾ ಜಿ, ಶರಣಪ್ಪ, ಅಬ್ದುಲ್, ಮಲ್ಲಯ್ಯ, ತಿಪ್ಪಣ್ಣ ಹಾಗೂ ವಿ.ಆರ್.ಡಬ್ಲೂö್ಯ ಮತ್ತು ಎಮ್.ಆರ್.ಡಬ್ಲೂö್ಯ ರವರು ಉಪಸ್ಥಿತರಿದ್ದರು.

ಸೋಮವಾರ, ನವೆಂಬರ್ 25, 2019

ರೋಗ ಪತ್ತೆಗೆ ಮನೆಮನೆಗೆ ಭೇಟಿ ನೀಡಲಿರುವ ಆಶಾ ಮತ್ತು ಪುರುಷ ವಾಲೆಂಟೀರ್
ಕುಷ್ಠ, ಕ್ಷಯರೋಗ ಪತ್ತೆಗೆ ಸಾರ್ವಜನಿಕರ ಸಹಕಾರ ಅಗತ್ಯ
-ಸಿಇಓ ಶಿಲ್ಪಾ ಶರ್ಮಾ
ಯಾದಗಿರಿ, ನವೆಂಬರ್ ೨೫ (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಕುಷ್ಠರೋಗ ಮತ್ತು ಕ್ಷಯರೋಗ ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ಆಂದೋಲನವನ್ನು ನವೆಂಬರ್ ೨೫ರಿಂದ ಡಿಸೆಂಬರ್ ೧೦ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಆಂದೋಲನದಲ್ಲಿ ಆಶಾ ಕಾರ್ಯಕರ್ತೆ ಮತ್ತು ಪುರುಷ ವಾಲೆಂಟೀರ್ ಮನೆಮನೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ರೋಗ ಪತ್ತೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮನವಿ ಮಾಡಿದರು.
ನಗರದ ಮೈಲಾಪುರ ಅಗಸಿ ಹತ್ತಿರದ ಸವಿತಾ ಸಮಾಜ ಸಮುದಾಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಸಂಘ (ಕುಷ್ಠ ಮತ್ತು ಕ್ಷಯರೋಗ) ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಕುಷ್ಠರೋಗ ಮತ್ತು ಕ್ಷಯರೋಗ ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ಆಂದೋಲನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಕುಷ್ಠರೋಗ ಒಂದು ಶಾಪವಲ್ಲ. ಜನರು ಈ ಮೂಢನಂಬಿಕೆಯಿAದ ಹೊರಬರಬೇಕು. ಕುಷ್ಠ ಮತ್ತು ಕ್ಷಯರೋಗ ಪತ್ತೆಗೆ ಒಟ್ಟು ೮೪೭ ತಂಡಗಳನ್ನು ರಚಿಸಲಾಗಿದೆ. ಒಂದು ತಂಡದಲ್ಲಿ ಓರ್ವ ಆಶಾ ಕಾರ್ಯಕರ್ತೆ ಮತ್ತು ಒಬ್ಬ ಪುರುಷ ವಾಲೆಂಟೀರ್ ಇರುತ್ತಾರೆ. ಐದು ತಂಡಗಳಿಗೆ ಒಬ್ಬರಂತೆ ೧೬೮ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ತಂಡ ದಿನಕ್ಕೆ ೨೦ ಮನೆಗಳಿಗೆ ಭೇಟಿ ನೀಡಲಿದೆ. ಆಂದೋಲನ ಯಶಸ್ವಿಗೆ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಅವರು ಕೋರಿದರು.
ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, ಕುಷ್ಠರೋಗವು ನೋವು ರಹಿತವಾಗಿರುವ ಕಾಯಿಲೆಯಾಗಿದ್ದು “ಮೈಕೊಬ್ಯಾಕ್ಟೀರಿಯಂ ಲೆಪ್ರೆ” ಎಂಬ ರೋಗಾಣುವಿನಿಂದ ಬರುತ್ತದೆ. ಈ ರೋಗ ಕಾಣಿಸಿಕೊಳ್ಳಲು ೨ ವಾರದಿಂದ ೨೫ ವರ್ಷ ಬೇಕು. ವಂಶಪಾರAಪರಿಕವಾಗಿ ಹರಡುವುದಿಲ್ಲ. ಆದರೆ, ಚಿಕಿತ್ಸೆ ಹೊಂದದ ಕುಷ್ಠರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಬ್ಯಾಕ್ಟೀರಿಯಾದಿಂದ ಕುಟುಂಬದಲ್ಲಿ ಅಥವಾ ಯಾರಿಗೆ ಬೇಕಾದರೂ ಈ ರೋಗ ಹರಡಬಹುದು ಎಂದು ತಿಳಿಸಿದರು.
ಯಾವುದೇ ವ್ಯಕ್ತಿಯ ಚರ್ಮದ ಬಣ್ಣ ಬದಲಾಗುವುದು, ದಪ್ಪವಾಗುವುದು, ಮಿಂಚುವುದು, ಎಣ್ಣೆ ಚರ್ಮ, ಗಂಟುಗಳಾಗುವುದು, ಕಣ್ಣುಗಳನ್ನು ಮುಚ್ಚಲು ಸಾಧ್ಯವಾಗದಿರುವುದು, ಕೈಯಲ್ಲಿ ಹುಣ್ಣು, ಪಾದ ಮತ್ತು ಕೈಬೆರಳುಗಳು ಮಡಿಚಿರುವುದು, ಕೈಗಳಲ್ಲಿ ಮತ್ತು ಪಾದಗಳಲ್ಲಿ ಸಂವೇದನೆಯ ನಷ್ಟ ಕುಷ್ಠರೋಗದ ಲಕ್ಷಣಗಳಾಗಿವೆ. ಆಂದೋಲನದಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ದೇಹದ ಯಾವುದೇ ಭಾಗದಲ್ಲಿ ಮಚ್ಚೆ ಇದೆ ಅಥವಾ ಇಲ್ಲ ಎಂಬುದನ್ನು ಆಶಾ ಕಾರ್ಯಕರ್ತೆ ಮತ್ತು ಪುರುಷ ವಾಲೆಂಟೀರ್ ಪರೀಕ್ಷೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
ಶೇ.೧೦೦ರಷ್ಟು ಗುಣಮುಖ: ಕುಷ್ಠರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದ್ದು, ಭಯ ಪಡುವ ಅಗತ್ಯವಿಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ದೊರೆಯುತ್ತದೆ. ಚಿಕಿತ್ಸೆಯ ಅವಧಿ ೬ರಿಂದ ೧೨ ತಿಂಗಳು ಇದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. ಕಾಯಿಲೆ ಹೊಂದಿದವರನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೇ.೧೦೦ರಷ್ಟು ಗುಣಮುಖವಾಗುತ್ತಾರೆ. ಆದರೆ, ಮೈಕೊಬ್ಯಾಕ್ಟೀರಿಯಂ ಲೆಪ್ರೆ ರೋಗಾಣು ಹರಡಿದ ವ್ಯಕ್ತಿಯು ಪ್ರಾರಂಭಿಕ ಹಂತ (ಪಿಬಿ-ಪಾಸಿಬೆಸಿಲ್ಲರಿ ಹಂತ)ದಲ್ಲಿ ಚಿಕಿತ್ಸೆ ಪಡೆಯದಿದ್ದರೆ ೧೮ ತಿಂಗಳ ನಂತರ ಅದು ಕುಷ್ಠರೋಗ (ಎಂಬಿ-ಮಲ್ಟಿಬೆಸಿಲ್ಲರಿ)ವಾಗಿ ಪರಿವರ್ತನೆಗೊಳ್ಳುತ್ತದೆ. ತದನಂತರ ವ್ಯಕ್ತಿಯಲ್ಲಿ ೧೫ ದಿನದಿಂದ ೧ ತಿಂಗಳಲ್ಲಿ ಅಂಗವಿಕಲತೆ ಉಂಟಾಗಬಹುದು ಎಂದು ಡಾ.ಭಗವಂತ ಅನವಾರ ಅವರು ವಿವರಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಗುರುರಾಜ ಹಿರೇಗೌಡ್ರು ಅವರು ಮಾತನಾಡಿ, ಕ್ಷಯರೋಗ (ಟಿ.ಬಿ)ವು ಗಾಳಿ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದನ್ನು ಬೇಗ ಪತ್ತೆ ಮಾಡಿದರೆ ಶೇ.೧೦೦ರಷ್ಟು ಗುಣಪಡಿಸಬಹುದು. ಕ್ಷಯ ರೋಗಿಗಳು ವೈದ್ಯರು ಸಲಹೆ ನೀಡಿದಂತೆ ಅವಧಿ (೬ ತಿಂಗಳು, ೮ ತಿಂಗಳು, ೨ ವರ್ಷ ಕೋರ್ಸ್) ಪೂರ್ಣ ಕಡ್ಡಾಯವಾಗಿ ಔಷಧಿ ತೆಗೆದುಕೊಳ್ಳಬೇಕು. ಈ ಕೋರ್ಸ್ ಮಧ್ಯದಲ್ಲಿ ಆರೋಗ್ಯ ಸುಧಾರಣೆ ಕಂಡುಬAದರೂ ಯಾವುದೇ ಕಾರಣಕ್ಕೂ ಔಷಧಿ ತೆಗೆದುಕೊಳ್ಳುವುದನ್ನು ಬಿಡಬಾರದು ಎಂದು ಸಲಹೆ ನೀಡಿದರು.
ಎರಡು ವಾರ ಕೆಮ್ಮಿದರೆ ಆಸ್ಪತ್ರೆಗೆ ಭೇಟಿ ನೀಡಿ: ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕೆಲವು ವೇಳೆ ಕಫದ ಜೊತೆಗೆ ರಕ್ತ ಕಾಣಿಸುವುದು, ಜ್ವರ ವಿಶೇಷವಾಗಿ ರಾತ್ರಿ ವೇಳೆ ಬರುವುದು, ತೂಕ ಇಳಿಕೆ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಆಂದೋಲನದಲ್ಲಿ ಈ ಲಕ್ಷಣಗಳಿರುವ ಜನರ ಕಫ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲಾಗುವುದು. ಕ್ಷಯರೋಗ ಶ್ವಾಸಕೋಶಗಳಿಗಷ್ಟೇ ಅಲ್ಲದೆ, ದೇಹದ ಇತರೆ ಭಾಗಗಳಿಗೂ ಹರಡಬಹುದು. ಎರಡು ವಾರಕ್ಕಿಂತ ಹೆಚ್ಚು ಕೆಮ್ಮಿದರೆ ಸಾರ್ವಜನಿಕರು ನಿರ್ಲಕ್ಷö್ಯ ವಹಿಸದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದರು.
ಪ್ರತಿ ಕ್ಷಯರೋಗಿಗೆ ಪೌಷ್ಟಿಕ ಆಹಾರದ ಸಲುವಾಗಿ ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಮಾಸಿಕ ೫೦೦ ರೂ. ಗೌರವಧನವನ್ನು ಪೂರ್ಣ ಚಿಕಿತ್ಸೆ ಆಗುವವರೆಗೂ ನೀಡಲಾಗುವುದು. ಕ್ಷಯರೋಗಿಯ ಅಧಿಸೂಚನೆ ಮಾಡಿದ ಮಾಹಿತಿದಾರರಿಗೆ ೫೦೦ ರೂ. ಗೌರವಧನ ನೀಡಲಾಗುವುದು ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಿರಿಯ ಆರೋಗ್ಯ ಸಹಾಯಕ ಮಹಿಪಾಲರೆಡ್ಡಿ ಅವರು ನಿರೂಪಿಸಿದರು. ಹಿರಿಯ ಆರೋಗ್ಯ ಸಹಾಯಕ ಶರಣಬಸಪ್ಪ ಹೊಸಮನಿ ವಂದಿಸಿದರು.

ಶುಕ್ರವಾರ, ನವೆಂಬರ್ 22, 2019

ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಮುಂದೂಡಿಕೆ
ಯಾದಗಿರಿ, ನವೆಂಬರ್ ೨೨ (ಕರ್ನಾಟಕ ವಾರ್ತೆ): ಯಾದಗಿರಿ ಜಿಲ್ಲಾ ಪಂಚಾಯಿತಿಯ ಮೂರನೇಯ ಅವಧಿಗೆ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರನ್ನು ಆಯ್ಕೆ ಮಾಡಲು ನವೆಂಬರ್ ೨೫ರಂದು ನಿಗದಿಪಡಿಸಿದ್ದ ಚುನಾವಣೆ ಸಭೆಯನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಯಚೂರು ಮತ್ತು ಕಲಬುರಗಿ ಲೋಕಸಭಾ ಸದಸ್ಯರು ತಾವು ಲೋಕಸಭಾ ಅಧಿವೇಶನಕ್ಕೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನ ಇಲ್ಲದ ದಿನಾಂಕದAದು ಸದರಿ ಚುನಾವಣೆಯನ್ನು ನಿಗದಿಪಡಿಸಲು ಪತ್ರ ಸಲ್ಲಿಸಿರುತ್ತಾರೆ. ಆದ್ದರಿಂದ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಚುನಾವಣೆಯ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು  ಅವರು ತಿಳಿಸಿದ್ದಾರೆ.
ನ.೨೫ರಂದು ವಿಕಲಚೇತನರ ಕ್ರೀಡಾಕೂಟ
ಯಾದಗಿರಿ, ನವೆಂಬರ್ ೨೨ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನ ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ನವೆಂಬರ್ ೨೫ರಂದು ಬೆಳಿಗ್ಗೆ ೧೧ ಗಂಟೆಗೆ ವಿಕಲಚೇತನರಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತಿವುಳ್ಳ ವಿಕಲಚೇತನರು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚುಟುವಟಿಕೆಯಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ದೂ:೦೮೪೭೩-೨೫೩೫೩೧ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಗೋಶಾಲೆಗೆ ಬಿಡಾಡಿದನಗಳ ಸಾಗಣೆ
ಯಾದಗಿರಿ, ನವೆಂಬರ್ ೨೨ (ಕರ್ನಾಟಕ ವಾರ್ತೆ): ಯಾದಗಿರಿ ನಗರಸಭೆ ವ್ಯಾಪ್ತಿಯ ರಸ್ತೆಗಳ ಮೇಲೆ ಬಿಡಾಡಿ ದನಗಳು ಎಲ್ಲೆಂದರಲ್ಲಿ ಮಲಗುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಬಹಳಷ್ಟು ದೂರು ಬಂದಿರುವ ಕಾರಣ ನ.೧೭ರಂದು ರಾತ್ರಿ ವೇಳೆಯಲ್ಲಿ ಕಾರ್ಯಾಚರಣೆ ನಡೆಸಿ, ರಸ್ತೆ ಮೇಲೆ ಕಂಡುಬAದ ಬಿಡಾಡಿ ದನಗಳನ್ನು ಗೋಶಾಲೆಗೆ ಸಾಗಿಸಲಾಗಿದೆ ಎಂದು ಪೌರಾಯುಕ್ತರಾದ ರಮೇಶ ಸುಣಗಾರ ಅವರು ತಿಳಿಸಿದ್ದಾರೆ.
ಬಿಡಾಡಿ ದನಗಳ ಮಾಲೀಕರು ತಮ್ಮ ದನಗಳನ್ನು ರಸ್ತೆಯ ಮೇಲೆ ಬಿಡಬಾರದು. ಇಲ್ಲವಾದಲ್ಲಿ ಯಾವುದೇ ಮುನ್ಸೂಚನೆಯನ್ನು ನೀಡದೆ ಬಿಡಾಡಿ ದನಗಳಗಳನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
೪೮ ಸಹಕಾರ ಸಂಘ ಸಮಾಪನೆ: ಆಕ್ಷೇಪಣೆ ಆಹ್ವಾನ
ಯಾದಗಿರಿ, ನವೆಂಬರ್ ೨೨ (ಕರ್ನಾಟಕ ವಾರ್ತೆ): ಸುರಪುರ ಹಾಗೂ ಹುಣಸಗಿ ತಾಲ್ಲೂಕಿನ ವಿವಿಧ ಪ್ರಕಾರದ ಒಟ್ಟು ೪೮ ಸಹಕಾರ ಸಂಘಗಳು ಕಾರ್ಯನಿರತವಾಗಿರದೆ ಸುಮಾರು ವರ್ಷಗಳಿಂದ ಸ್ಥಗಿತಗೊಂಡಿವೆ. ಸಹಕಾರ ಅಭಿವೃದ್ಧಿ ಅಧಿಕಾರಿ ಕಾರ್ಯಾಲಯಕ್ಕೆ ಯಾವುದೇ ವರದಿ ಹಾಗೂ ಶಾಸನಬದ್ಧ ಲೆಕ್ಕ ಪರಿಶೋಧನಾ ವರದಿಗಳನ್ನು ಸಲ್ಲಿಸದೇ ಇರುವುದರಿಂದ ಸದರಿ ೪೮ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲು ತೀರ್ಮಾನಿಸಲಾಗಿದೆ.
ಈ ಸಂಬ0ಧ ಆಕ್ಷೇಪಣೆ ಸಲ್ಲಿಸಬಯಸುವವರು ಪ್ರಕಟಣೆ ಹೊರಡಿಸಿದ ೭ ದಿನಗಳೊಳಗಾಗಿ ಸಹಕಾರ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ದಾಖಲಾತಿಗಳೊಂದಿಗೆ ಆಕ್ಷೇಪಣೆಯನ್ನು ಸಲ್ಲಿಸಬಹುದು. ಒಂದು ವೇಳೆ ನಿಗದಿತ ಅವಧಿಯೊಳಗಾಗಿ ಆಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ ಯಾವುದೇ ಆಕ್ಷೇಪಣೆಗಳಿರುವುದಿಲ್ಲ ಎಂದು ಪರಿಗಣಿಸಿ ಸಮಾಪನೆಗೆ ಕ್ರಮವಿಡಲಾಗುವುದು. ೪೮ ಸಹಕಾರ ಸಂಘಗಳ ವಿವಿರವಾದ ಪಟ್ಟಿಯನ್ನು ಹುಣಸಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ ಹಾಗೂ ಯಾದಗಿರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮತ್ತು ಯಾದಗಿರಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಸೂಚನಾ ಫಲಕಗಳಲ್ಲಿ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಹುಣಸಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...