‘ಸ್ವಾತಂತ್ರö್ಯ ಸಮರ ಕರುನಾಡು ಅಮರ” ನಾಟಕ ಪ್ರದರ್ಶನ
ಯಾದಗಿರಿ.ಸೆಪ್ಟೆಂಬರ್.16(ಕರ್ನಾಟಕ ವಾರ್ತೆ): ಭಾರತ ಸ್ವಾತಂತ್ರö್ಯ ಹೋರಾಟದ ಕುರಿತು ರಂಗವಿಜಯ ತಂಡ ಅಭಿನಯದ “ಸ್ವಾತಂತ್ರö್ಯ ಸಮರ ಕರುನಾಡು ಅಮರ” ನಾಟಕ ಪ್ರರ್ದಶನ ಸೆ.14 ರಂದು ನಗರದ ಹಿಂದಿ ಪ್ರಚಾರ ಸಭಾಂಗಣದಲ್ಲಿ ನಡೆಯಿತು.
ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ನಗರಸಭೆ ಇವರ ಸಂಯುಕ್ತಾರ್ಶರಯದಲ್ಲಿ ನಡೆದ ಕಾರ್ಯಕ್ರಮವನ್ನು ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಕಿ ಉದ್ಘಾಟಿಸಿದರು. ದೇಶದ ಸ್ವಾತಂತ್ರö್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಇಂತಹ ನಾಟಕ ಪ್ರರ್ದಶನ ಶ್ಲಾಘನೀಯ, ಸ್ವಾತಂತ್ರö್ಯದ ಚರಿತ್ರೆ ಈಗಿನ ತಲೆ ಮಾರಿಗೆ ತಿಳಿಯಲು ಇದು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚನ್ನಬಸವ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ನಗರಸಭೆ ಆಯುಕ್ತ ಬಿ.ಟಿ. ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಹಳ್ಳಿ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಹಿಪಾಲ ರೆಡ್ಡಿ, ಎ. ವೇಣುಗೋಪಾಲ, ಅನಿಲ ಗುರೂಜಿ, ನಾಗೇಶ್ ಕುಮಾರ, ವೈಜನಾಥ ಹಿರೇಮಠ, ಪಲ್ಲವಿ ಮಣಿ ಮತ್ತಿತರರು ಉಪಸ್ಥಿತರಿದ್ದರು.
ರಂಗವಿಜಯ ನಾಟಕ ತಂಡದ ನಿರ್ದೇಶಕ ಮಾಲೂರು ವಿಜಿ ಅವರು ನಾಟಕದ ಕುರಿತು ವಿವರ ನೀಡಿದರು. ಬಳಿಕ ಸ್ವಾತಂತ್ರö್ಯ ಸಮರ ಕರುನಾಡ ಅಮರ ನಾಟಕ ಪ್ರದರ್ಶನಗೊಂಡಿತು.
ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ
ಯಾದಗಿರಿ,ಸೆಪ್ಟೆಂಬರ್16(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಿತಿ ಹಾಗೂ ಭಾವೈಕ್ಯತಾ ಸಮಿತಿ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಕಾರ್ಯಕ್ರಮವನ್ನು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಯಾದಗಿರಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಆವರಣದಲ್ಲಿ ಜರುಗಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ರಾಷ್ಟç ಧ್ವಜಾರೋಹಣವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ನೇರವೇರಿಸಲಿದ್ದಾರೆ. ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಧಾನಸಭಾ ಸದಸ್ಯ ನರಸಿಂಹ ನಾಯಕ(ರಾಜುಗೌಡ) ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಯಚೂರ ಲೋಕಸಭಾ ಸದಸ್ಯರು ರಾಜಾ ಅಮರೇಶ್ವರ ನಾಯಕ, ಕಲಬುರಗಿ ಲೋಕಸಭಾ ಸದಸ್ಯರು ಉಮೇಶ ಜಾಧವ್ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕಡ್ಡಾಯವಾಗಿ ಮುಖಗವಸು ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳವುದು ಅಗತ್ಯ ವೆಂದು ಪ್ರಕಟಣೆ ತಿಳಿಸಿದೆ.
ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ 10ನೇ ತರಗತಿ ಪ್ರವೇಶ: ಅರ್ಜಿ ಆಹ್ವಾನ
ಯಾದಗಿರಿ,ಸೆಪ್ಟೆಂಬರ್16(ಕರ್ನಾಟಕ ವಾರ್ತೆ): 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ (ನವೋದಯ), ಬಾಲಚೇಡ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಹಾಪೂರ ಈ ಶಾಲೆಗಳಲ್ಲಿ 10ನೇ ತರಗತಿ ಪ್ರವೇಶಕ್ಕಾಗಿ ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸಸಿರುವ ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯಾದಗಿರಿ ಬಾಲಚೇಡದ ವಸತಿ ಶಾಲೆಯಲ್ಲಿ 40 ವಿದ್ಯಾರ್ಥಿಗಳ ಮತ್ತು ಶಹಾಪೂರದ ವಸತಿ ಶಾಲೆಯಲ್ಲಿ 13 ವಿದ್ಯಾರ್ಥಿಗಳ ಖಾಲಿಯಿರುವ ಸ್ಥಾನಗಳನ್ನು ಉಚಿತವಾಗಿ ಭರ್ತಿ ಮಾಡಿಕೊಳ್ಳವ ಸಲುವಾಗಿ ಅರ್ಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಕಲ್ಯಾಣ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 22 ರವರೆಗೂ ಅರ್ಜಿಗಳನ್ನು ಸಲ್ಲಿಸಬೇಕು. ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ಬಾಲಕಿಯರುಯ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿ ದೂ.ಸಂ: 08473-253235 ಅಥವಾ hಣಣಠಿs://ಜom.ಞಚಿಡಿಟಿಚಿಣಚಿಞಚಿ.gov.iಟಿ/ಥಿಚಿಜಚಿgiಡಿi/ಠಿubಟiಛಿ ವೆಬ್‌ಸೈಟ್‌ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಪ್ರಕಟಣೆ ಕೋರಿದೆ.
ಅಲ್ಪಸಂಖ್ಯಾತರ ಮೌಲಾನ ಆಜಾದ ಮಾದರಿ ಶಾಲೆಗೆ 6 ಮತ್ತು 7ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಯಾದಗಿರಿ,ಸೆಪ್ಟೆಂಬರ್16(ಕರ್ನಾಟಕ ವಾರ್ತೆ): 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಯಾದಗಿರಿ ನಗರದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನ ಆಜಾದ ಮಾದರಿ ಶಾಲೆಗೆ 6ನೇ ತರಗತಿಯಲ್ಲಿ 32 ವಿದ್ಯಾರ್ಥಿಗಳು ಮತ್ತು 7ನೇ ತರಗತಿಯಲ್ಲಿ 19 ವಿದ್ಯಾರ್ಥಿಗಳ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ
ಆಸಕ್ತ ವಿದ್ಯಾರ್ಥಿಗಳು ಮೌಲಾನಾ ಆಜಾದ ಮಾದರಿ ಶಾಲೆ ವಿಶ್ವರಾಧ್ಯ ನಗರ, ಯಾದಗಿರಿ ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 23 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ (ಮಿನಿವಿಧಾನ ಸೌಧ) ಯಾದಗಿರಿ ಕಛೇರಿ ದೂರವಾಣಿ ಸಂಖ್ಯೆ: 08473-253235ಗೆ ಸಂಪರ್ಕಿಸಬಹುದಾಗಿದೆ.
ಸಂಘ/ಸAಸ್ಥೆಗಳ ನೋದಣಿ ನವೀಕರಣ ಮಾಡಿಕೊಳ್ಳಲು ಸೂಚನೆ
ಯಾದಗಿರಿ.ಸೆಪ್ಟೆಂಬರ್.16(ಕರ್ನಾಟಕ ವಾರ್ತೆ): ಜಿಲ್ಲೆಯ ನೊದಾಯಿಸಲ್ಪಟ್ಟ ಸಂಘಗಳು ಪೈಲಿಂಗ ಅರ್ಜಿ ಸಲ್ಲಿಸದೆ ಇರುವದು ಸರಕಾರದ ಗಮನಕ್ಕೆ ಬಂದಿದ್ದು, ಕಾರ್ಯನಿರತ ಸಂಘಗಳ ಹಿತದೃಷ್ಟಿಯಿಂದ 5 ವರ್ಷಗಳಿಗೆ ಮೇಲ್ಪಟ್ಟು ಪೈಲಿಂಗ ಮಾಡಿಕೊಳ್ಳದೆ ಬಾಕಿ ಇರುವ ಸಂಘ/ ಸಂಸ್ಥೆಗಳು ಪ್ರತಿ ವರ್ಷಕ್ಕೆ ರೂ. 2 ಸಾವಿರ ದಂತೆ ಹೆಚ್ಚುವರಿ ದಂಡ ಪಾವತಿಸಿ ಪೈಲಿಂಗ ಮಾಡಿಕೊಳ್ಳಲಾಗುವುದು.
ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಸಂಘಗಳ ನೊಂದಾಯಿಸಲ್ಪಟ್ಟ ಸಂಘವು ಪ್ರತಿ ವರ್ಷ ಪೈಲಿಂಗ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. 2021 ಮಾರ್ಚ್ 31 ರ ಅಂತ್ಯಕ್ಕೆ ಇದ್ದಂತೆ ಜಿಲ್ಲೆಯ ಒಟ್ಟು 9217 ಸಂಘವು ನೋದಣಿಯಾಗಿದ್ದು, ಇವುಗಳ ಪೈಕಿ 2021-22ನೇ ಸಾಲಿನಲ್ಲಿ ಕೇವಲ 387 ಸಂಘಗಳು ಮಾತ್ರ ನವೀಕರಣ ಅರ್ಜಿ ಸಲ್ಲಿಸಿರುವುದನ್ನು ಪರೀಶಿಲಿಸಿ ಬಾಕಿ ಉಳಿದ 8830 ಸಂಘಗಳು ನವೀಕರಣಕ್ಕೆ ಅರ್ಜಿ ಸಲ್ಲಸದೆ ಬಾಕಿ ಉಳಿದಿರುತ್ತದೆ.
ಪೈಲಿಂಗ ಅರ್ಜಿ ಸಲ್ಲಿಸಲು ಡಿಸೆಂಬರ್ 31 ರ ರೊಳಗೆ ಸಲ್ಲಿಸಬೇಕು.ಇಲ್ಲದಿದ್ದಲ್ಲಿ ಅಂತಹ ಸಂಘಗಳ ನೊಂದಣಿ ತನ್ನಿಂತಾನೆ ರದ್ದಾಗಿದೆ ಎಂದು ಸಂಬAಧಪಟ್ಟ ಸಂಘ/ಸAಸ್ಥೆಗಳು ಭಾವಿಸತಕ್ಕದ್ದು ಎಂದು ಯಾದಗಿರಿ ಸಹಕಾರ ಸಂಘಗಳ ಉಪ ನಿಂಧಕರು ಹಾಗೂ ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಿಶ್ವಕರ್ಮ ಜಯಂತಿ
ಯಾದಗಿರಿ,ಸೆಪ್ಟೆಂಬರ್16(ಕರ್ನಾಟಕ ವಾರ್ತೆ): ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿಯನ್ನು ಸರಳವಾಗಿ, ಸಾಂಕೇತಿವಾಗಿ ಆಚರಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ. ಕೋವಿಡ್-19ರ ಹಿನ್ನಲೆ ತಮ್ಮ ಕಾರ್ಯಾಲಯ ಹಾಗೂ ಅಧೀನ ಕಚೇರಿಗಳಲ್ಲಿ ಕಡ್ಡಾಯವಾಗಿ, ಕೋವಿಡ್-19ರ ನಿಯಮಗಳನ್ನು ಪಾಲಿಸುವುದರ ಜೊತೆಗೆ ವಿಶ್ವಕರ್ಮ ಜಯಂತಿಯನ್ನು ಆಚರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಯಾದಗಿರಿ,ಸೆಪ್ಟೆಂಬರ್16(ಕರ್ನಾಟಕ ವಾರ್ತೆ): 2021-22ನೇ ಸಾಲಿನ ಯಾದಗಿರಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿ ಪೋಷಕರ ವಾರ್ಷಿಕ ಆದಾಯದ ಮಿತಿ ಪ್ರವರ್ಗ-1, ಎಸ್.ಸಿ ಮತ್ತು ಎಸ್.ಟಿ ರೂ. 2.50 ಲಕ್ಷ, ಪ್ರವರ್ಗ-2ಎ,2ಬಿ,3ಎ,3ಬಿ, ವರ್ಗ ಹಾಗೂ ಇತರೆ ರೂ.1.00 ಲಕ್ಷ ಒಳಗಿನ ವಿದ್ಯಾರ್ಥಿಗಳು ಆನ್‌ಲೈನ್ ವೆಬ್‌ಸೈಟ್ ತಿತಿತಿ.bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ನ ಮೂಲಕ ಅರ್ಜಿಯನ್ನು ಅಕ್ಟೋಬರ್ 22 ರೊಳಗೆ ಸಲ್ಲಿಸಬೇಕು. ತಾಂತ್ರಿಕ ತೊಂದರೆಗಳಿದ್ದಲ್ಲಿ bಛಿತಿಜ.hosಣeಟs@ಞಚಿಡಿಟಿಚಿಣಚಿಞಚಿ.gov.iಟಿ ಇ-ಮೇಲ್ ಮುಖಾಂತರ ಅಥವಾ ಯಾದಗಿರಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದೂ.ಸಂ: 9743310896 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತೃಣಧಾನ್ಯಗಳ ಸಂಸ್ಕರಣಾ ಘಟಕ ಸ್ಥಾಪನೆ ಮತ್ತು ನಿರ್ವಹಣೆಗೆ ಅರ್ಜಿ ಆಹ್ವಾನ
ಯಾದಗಿರಿ,ಸೆಪ್ಟೆಂಬರ್16(ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಕಾಂಕ್ಷಿ ಜಿಲ್ಲೆ ಯಾದಗಿರಿಗೆ ಆಯೋಗದಿಂದ ಕೃಷಿ ಇಲಾಖೆಗೆ ನೀಡಿದ ಯುನೈಟೆಡ್ ಅನುದಾನದಡಿ ಜಿಲ್ಲೆಯಲ್ಲಿ ತೃಣಧಾನ್ಯಗಳ ಸಂಸ್ಕರಣ ಘಟಕ ಸ್ಥಾಪನೆ ಹಾಗೂ ನಿರ್ವಹಣೆಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಯಲ್ಲಿ ಎಲ್ಲಾ ದಾಖಲಾತಿಗಳನ್ನು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ನೇರ ಸಂದರ್ಶನ ಕೈಗೊಂಡು ಅರ್ಹ ವ್ಯಕ್ತಿ/ಸಂಸ್ಥೆಯನ್ನು ಆಯ್ಕೆ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ