ಶಹಾಪುರ: ನಿರಾಶ್ರಿತರ ಸಮೀಕ್ಷೆಗೆ ಅರ್ಜಿ ಆಹ್ವಾನ
ಯಾದಗಿರಿ.ಸೆಪ್ಟೆಂಬರ್.೧೬(ಕರ್ನಾಟಕ ವಾರ್ತೆ): ೨೦೨೧-೨೨ನೇ ಸಾಲಿನ ಡೇ-ನಲ್ಮ್ ಅಭಿಯಾನದ ನಗರ ನಿರ್ಗತಿಕರ ವಸತಿ ರಹಿತ ಉಪ ಘಟಕದಡಿ ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ನಿರಾಶ್ರಿತರನ್ನು ಎನ್‌ಜಿಓ(ಟಿgo) ಮೂಲಕ ಸಮೀಕ್ಷೆ ಕೈಗೊಳ್ಳಬೇಕಾಗಿದೆ. ಸೆಪ್ಟೆಂಬರ್ ೩೧ರ ಒಳಗಾಗಿ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅರ್ಹತೆ ಹೊಂದಿದ ನೋಂದಾಯಿತ ಸರ್ಕಾರೇತರ ಸಂಸ್ಥೆ/ನಗರ ಪ್ರದೇಶದ ಒಕ್ಕೂಟಗಳು ಸೆಪ್ಟೆಂಬರ್೨೦ ರೊಳಗಾಗಿ ತಮ್ಮ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಶಹಾಪುರ ನಗರಸಭೆ ಪೌರಾಯುಕ್ತರು ಪ್ರಕಟಣೆಗೆ ತಿಳಿಸಿದ್ದಾರೆ.
ಸರ್ಕಾರದ ಸುತ್ತೋಲೆ ಪ್ರಕಾರ ಸಮೀಕ್ಷೆ ಕೈಗೊಳ್ಳುವುದು, ಸರ್ಕಾರ ನಿಗದಿ ಪಡಿಸಿದ ದರದಂತೆ ಸಮೀಕ್ಷೆ ಅನುದಾನ ಬಿಡುಗಡೆ ಮಾಡಲಾಗುತ್ತದೆ, ಸದರಿ ಸಂಸ್ಥೆಯವರು ಈಗಾಗಲೇ ಬೇರೆ ಬೇರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ವರದಿ ಲಗತ್ತಿಸಬೆಕು ಸಂಸ್ಥೆಯ ಪ್ರಸಕ್ತ ಸಾಲಿನ ನೊಂದಣಿ ಪತ್ರ ಲಗತ್ತಿಸತಕ್ಕದ್ದು.ಈ ಮೇಲಿನ ಎಲ್ಲಾ ಷರತ್ತುಗಳಿಗೆ ಅನುಗುಣವಾಗಿ ಅರ್ಜಿಗಳನ್ನು ಸಲ್ಲಿಸಬಹುದು.
************************************
ಡೆಂಗ್ಯೂ/ಚಿಕ್ಕನಗೂನ್ಯ ಜ್ವರ ತಡೆಯುವ ಸಲುವಾಗಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಅಳವಡಿಕೆಗೆ ಸೂಚನೆ
ಯಾದಗಿರಿ.ಸೆಪ್ಟೆಂಬರ್.೧೬(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಗಿರುವುದರಿAದ ಜಿಲ್ಲೆಯಾದ್ಯಂತ ಡೆಂಗ್ಯೂ/ಚಿಕ್ಕನಗೂನ್ಯ ಜ್ವರ ಬರದಂತೆ ಮುಂಜಾಗ್ರತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಪ್ರಕಟಣೆಗೆ ತಿಳಿಸಿದ್ದಾರೆ.
ಡೆಂಗ್ಯೂ ರೋಗವು ಏಡೀಸ್ ಈಜೀಪ್ಪಿ ಎಂಬ ಸೊಳ್ಳೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೂಳ್ಳೆಯು ದಿನದಲ್ಲಿ ಮಾತ್ರ ಕಚ್ಚುತ್ತದೆ. ಈ ಸೂಳ್ಳೆಯು ಸ್ವಚ್ಛವಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿಯನ್ನು ಬೆಳಸುತ್ತದೆ. ೭ ದಿನದಲ್ಲಿ ಮೊಟ್ಟೆಯಿಂದ ಮರಿ ಸೊಳ್ಳೆಯಾಗಿ ಪರಿವರ್ತನೆಗೊಳ್ಳುತ್ತದೆ.ಆದ ಕಾರಣ ಪ್ರತಿ ೩-೪ದಿನಗಳಿಗೊಮ್ಮೆ ನೀರನ್ನು ಸಂಗ್ರಹಿಸುವ ತೊಟ್ಟೆ, ಬ್ಯಾರಲ್ ಪಾತ್ರೆಗಳನ್ನು ಸ್ವಚ್ಛವಾಗಿ ತಿಕ್ಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ನೀರನ್ನು ತುಂಬಬೇಕು. ಏರ್‌ಕುಲರ್‌ನಲ್ಲಿ ಸಂಗ್ರಹವಾದ ನೀರು ಮತ್ತು ಹೂವಿನ ಕುಂಡಲಿಗಳಲ್ಲಿ ಸಂಗ್ರಹಿಸಿದ ನೀರನ್ನು ಕೂಡ ಪ್ರತಿ ೩-೪ ದಿನಗಳಿಗೊಮ್ಮೆ ಬದಲಾಯಿಸುವುದರ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ರೋಗದ ಲಕ್ಷಣ: ತೀವ್ರ ತಲೆ ನೋವು, ಕಣ್ಣು ನೋವು, ಕೀಲು ಮತ್ತು ಸ್ನಾಯು ನೋವು, ಹಸಿವಾಗದೇ ಇರುವುದು, ತುರಿಕೆ ಹಾಗೂ ತೀವ್ರ ಜ್ವರ ಬರುತ್ತವೆ.
ಅನುಸರಿಸಬೇಕಾದ ಕ್ರಮಗಳು: ಡೆಂಗ್ಯೂ ರೋಗದ ಕಲ್ಷಣ ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಬೇಕು, ಹೆಚ್ಚಿನ ವಿಶ್ರಾಂತಿಯಲ್ಲಿರಬೇಕು, ನೀರಿನ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನು ಸೇವಿಸಬೇಕು.
ಡೆಂಗ್ಯೂ ಜ್ವರ ಹರಡದಂತೆ ತಡೆಗಟ್ಟುವ ಕ್ರಮಗಳು: ಸೊಳ್ಳೆಯು ಕಚ್ಚದಂತೆ ಉದ್ದನೆಯ ತೋಳಿನ ಷರ್ಟ ಮತ್ತು ಪ್ಯಾಂಟ್‌ಗಳನ್ನು ಧರಿಸುವುದು ಹಾಗೂ ಸೊಳ್ಳೆ ಬತ್ತಿಯನ್ನು ಉಪಯೋಗಿಸಬೇಕು, ಮಲಗುವಾಗ ಸೊಳ್ಳೆ ಪರದೆಯನ್ನು ಹಾಕಿಕೊಳ್ಳುವುದು, ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡುವುದು ಹಾಗೂ ನಿರಿನ ಮೂಲಗಳ ಹತ್ತಿರ ಇರುವ ತಿಪ್ಪೆಗುಂಡಿಗಳನ್ನು ಸ್ಥಳಾಂತರಿಸುವುದು, ಟೈರ್ ಹಾಗೂ ತೆಂಗಿನ ಚಿಪ್ಪಿನಲ್ಲಿ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸುವುದು, ನೀರಿನ ಸರಬರಾಜು ಪೈಪ್‌ನಲ್ಲಿ ಸೋರಿಕೆ ಇದ್ದಲ್ಲಿ ತಕ್ಷಣವೇ ದುರಸ್ಥಿ ಅಥವಾ ಬದಲಾಯಿಸಬೇಕು, ಕುಡಿಯುವ ನೀರಿನ ಮೂಲಗಳಿಗೆ ಪ್ರತಿ ದಿನ ಹಾಗೂ ತೆರದ ಬಾವಿಗಳಲ್ಲಿ ವಾರಕೊಮ್ಮೆ ಕ್ಲೋರಿನೇಷನ್ ಮಾಡುವುದು, ಕ್ಲೋರಿನೇಷನ್ ಮಾಡಿದ ನೀರನ್ನೇ ಬಳಸುವುದು, ಜನರಿಗೆ ರೊಗದ ಬಗ್ಗೆ ಅರಿವು ಮೂಡಿಸಲು ಗ್ರಾಮದಲ್ಲಿ ಕರಪತ್ರಗಳನ್ನು ಮುದ್ರಿಸಿ ಹಂಚುವುದು ಹಾಗೂ ಜನಸಂದಣಿ ಪ್ರದೇಶದಲ್ಲಿ ಅಂಟಿಸುವುದರ ಮೂಲಕ ಸ್ವಚ್ಛತೆಯನ್ನು ಕೈಗೊಳ್ಳಲು ಸೂಚಿಸಲಾಗಿದೆ.
*******************************************
ಸಚಿವರ ಪ್ರವಾಸ
ಯಾದಗಿರಿ.ಸೆಪ್ಟೆಂಬರ್.೧೬(ಕರ್ನಾಟಕ ವಾರ್ತೆ): ಪ್ರಾಥಮಿಕ, ಪ್ರೌಢಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ ರವರು ಸೆಪ್ಟೆಂಬರ್ ೧೬ ರಂದು ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ೬ ಗಂಟೆಗೆ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಸಚಿವರು, ಬೆಳಗ್ಗೆ ೯ ಗಂಟೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಭಾಗವಹಿಸುವರು. ೧೧.೩೦ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ನಿರ್ಗಮಿಸುವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ