ವಾ.ವಿ.ಸಂ.103
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಲವೀಶ್ ಒರಡಿಯಾ ಜಿ.ಪಂ.ಸಿಒ
2024 ಸ್ವಚ್ಛತಯಡಿಗೆ ದಿಟ್ಟ ಹೆಜ್ಜೆ ತಾಯಿಯ ಹೆಸರಲ್ಲಿ ಒಂದು ಗಿಡ ಅಭಿಯಾನ
ಯಾದಗಿರಿ : ಸೆಪ್ಟೆಂಬರ್ 21, (ಕ.ವಾ) : ವೈಯಕ್ತಿಕ ಸ್ವಚ್ಛತೆಯ ಜೊತೆ ಪರಿಸರ ಸ್ವಚ್ಛತೆ ಕಾಪಾಡುವುದು ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ ಅವರು ಹೇಳಿದರು.
ಸ್ವಚ್ಛ ಭಾರತ ಮಿಷನ್ (ಗ್ರಾ) ಮತ್ತು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸೆಪ್ಟೆಂಬರ್ 17 ರಿಂದ 2024ರ ಅಕ್ಟೋಬರ್ 2 ವರೆಗೆ ಹಮ್ಮಿಕೊಂಡಿರುವ 15 ದಿನಗಳ ವಿಶೇಷ ಆಂದೋಲನಗಳಾದ ಸ್ವಚ್ಛತೆಯೇ ಸೇವೆ-2024, ಸ್ವಚ್ಛತೆÀಯಡಿಗೆ ದಿಟ್ಟ ಹೆಜ್ಜೆ ಹಾಗೂ ತಾಯಿಯ ಹೆಸರಲ್ಲಿ ಒಂದು ಗಿಡ ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 21 ರಂದು ಜಿಲ್ಲಾ ಪಂಚಾಯತಿ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿ ಮಾತನಾಡಿದರು.
ಪರಿಸರ ಸ್ನೇಹಿ ಚಟುವಟಿಕೆ ಮೈಗೊಡಿಸಿಕೊಳ್ಳಬೇಕು ಮತ್ತು ಪರಿಸರ ಉಳಿಸ ಬೆಳಸಲು ಅವಶ್ಯವಿರುವ ಅಂಶಗಳನ್ನು, ಅಭ್ಯಾಸಗಳನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಹಾಗೂ ಪರಿಸರ ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದಿನ ಯುವ ಪೀಳಿಗೆಯಲ್ಲಿ, ಮಕ್ಕಳಲ್ಲಿ ಪರಿಸರದ ಕಾಳಜಿ ಹೆಚ್ಚಿಸಬೇಕಿದೆ. ತಾಯಿಯ ಹೆಸರಲ್ಲಿ ಒಂದು ಗಿಡ ಆಂದೋಲನದಲ್ಲಿ ಸಸಿ ನೆಟ್ಟು ಅದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂಬುವುದು ನಾವು ಮರೆಯಬಾರದು ಕಿವಿ ಮಾತು ಹೇಳಿದರು.
ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಯೇ ಸೇವೆ ಪಾಕ್ಷಿಕ ಆಂದೋಲನದ ಅಂಗವಾಗಿ ಗ್ರಾಮ ಪಂಚಾಯತಿ, ಅಂಗನವಾಡಿ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ಮಾಡುವುದು, ಬ್ಲಾಕ್ ಸ್ಪಾಟ್ ಕ್ಲೀನಿಂಗ್, ಚರಂಡಿ ಸ್ವಚ್ಚಗೊಳಿಸುವುದು ಮುಂತಾದ ಸ್ವಚ್ಛತೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಶಾಲೆಯಲ್ಲಿ ಮಕ್ಕಳಿಗೆ ಸ್ವಚ್ಛತೆಯ ಪ್ರತಿಜ್ಞಾ ವಿಧಿ ಭೋದಿಸುವುದು ಹಾಗೂ ಸ್ವಚ್ಛತೆಯೇ ಸೇವೆ ಆಂದೋಲನದ ಉದ್ದೇಶ ಪ್ರತಿಯೊಬ್ಬರಿಗೂ ತಲುಪಿಸಿ ಅವರ ಸ್ವಭಾವದಲ್ಲಿಯೇ ಸ್ವಚ್ಛತೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಅವರ ಸಂಸ್ಕಾರದಲ್ಲಿ ಸ್ವಚ್ಛತೆ ತರುವ ಉದ್ದೇಶವಾಗಿದೆ ಎಂದರು.
ಗ್ರಾಮದ ಸ್ವಚ್ಛತೆ ಕಾಪಾಡಲು ಕೆಲಸ ಮಾಡುತ್ತಿರುವ ಸಪಾಯಿಮಿತ್ರರಿಗೆ ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತಿದೆ. ಸ್ವಚ್ಛತೆಯ ಕೆಲಸ ಮಾಡುತ್ತಿರುವುದರಿಂದ ಅವರ ಆರೋಗದ್ಯ ಕಾಳಜಿ ಮುಖ್ಯ
ಈ ಸಂದರ್ಭದಲ್ಲಿ ಉಪಕಾರ್ಯದರ್ಶಿಗಳಾದ ವಿಜಯ ಕುಮಾರ ಮಡ್ಡೆ, ಯೋಜನಾ ನಿರ್ದೇಶಕರು ಹಾಗೂ ಸ್ವ.ಭಾ.ಮಿ & ನರೇಗಾ ಯೋಜನೆಯ ನೋಡಲ್ ಅಧಿಕಾರಿಗಲಾದ ಬಿ.ಎಸ್.ರಾಠೋಡ್, ಸಿಪಿಒ ಕೆ.ಕುಮಲಯ್ಯ, ಸಿಇಒ ವೆಂಕಟೇಶ ಚಟ್ನಳ್ಳಿ, ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ ಹಸದ್, ಅರಣ್ಯ ಇಲಾಖೆಯ ಅಧಿಕಾರಿಗಳು, ಅಧಿಕ್ಷರು, ಸ್ವ.ಭಾ.ಮಿ, ನರೇಗಾ, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ